ಸಂವಿಧಾನ ಗೌರವಿಸಿ: ಮನಗೂಳಿ

200ಕ್ಕೂ ಹೆಚ್ಚು ಜನರಿಗೆ ಬೌದ್ಧ ಧರ್ಮ ದೀಕ್ಷೆ•ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸಿ

Team Udayavani, Jul 12, 2019, 4:01 PM IST

ಸಿಂದಗಿ: ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಮಾತನಾಡಿದರು

ಸಿಂದಗಿ: ಭಾರತ ಜಾತ್ಯತೀತ ರಾಷ್ಟ್ರ, ಸಂವಿಧಾನ ನಮ್ಮ ಗ್ರಂಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಬೌದ್ಧ ಧರ್ಮದ ದಿಕ್ಷಾ ಕಾರ್ಯಕ್ರಮ, ಮೌಡ್ಯ ವಿರೋಧಿ ಹಾಗೂ ಸಸಿ ನಡೆಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಅಂಬೇಡ್ಕರ್‌ ಅವರ ಅವಿರತ ಪ್ರಯತ್ನದಿಂದ ಭಾರತಕ್ಕೆ ಸಿಕ್ಕ ವåಹಾನ್‌ ಗ್ರಂಥ ಸಂವಿಧಾನವಾಗಿದೆ. ನಾವೆಲ್ಲರೂ ಸಂವಿಧಾನವನ್ನು ಅರಿತು ಗೌರವಿಸೋಣ ಎಂದರು.

ದಲಿತ ಚಳವಳಿ ಮುಖಂಡ ಎಚ್.ಎಂ. ರುದ್ರಸ್ವಾಮಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ| ಡಿ.ಜಿ. ಸಾಗರ ಮಾತನಾಡಿ, ಭಾರತದಲ್ಲಿ ಜಾತಿರಹಿತ, ವರ್ಗರಹಿತ, ಅಸಮಾನತೆ ರಹಿತ, ಹಸಿವು ಮತ್ತು ಬಡತನ ಮುಕ್ತ ಭಾರತ ನಿರ್ಮಾಣ ಆಗಬೇಕಿರುವುದು ಸಂವಿಧಾನದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಪ್ರಗತಿಪರ ವಿಚಾರವಾದಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕಾಗಿದೆ. ಯಾರು ತುಳಿತಕ್ಕೆ ಶೋಷಣೆಗೆ ಒಳಗಾಗಿದ್ದಾರೆಯೋ, ಅಂತರವರ ಒಳಿತಿಗೆ ದುಡಿಯುತ್ತಿರುವ ರಾಜ್ಯದ ಏಕೈಕ ಸಂಘಟನೆ ಕರ್ನಾಟಕ ರಾಜ್ಯ ಸಂಘರ್ಷ ಸಮಿತಿ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ ಅವರಿಗೆ ರಮಾಬಾಯಿ ಅಂಬೇಡ್ಕರ್‌ ಮಹಿಳಾ ಸಂಘ ಪಡಗಾನೂರ ವತಿಯಿಂದ ಆಧುನಿಕ ಸಿದ್ದನಾಕ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಸಂಘಪಾಲ ಬಂತೇಜಿ ಆಶೀರ್ವಚನ ನೀಡಿದರು. ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಿಠ್ಠಲ ಕೋಳ್ಳೂರ, ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಪಪಂ ಸದಸ್ಯ ಶಿವಾನಂದ ಜಗತಿ, ಕೂಲಿ ಕಬ್ಬಲಿಗ ಯುವ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ, ಅಂಬಣ್ಣ ಜಿವಣಗಿ, ಬಿ.ಸಿ. ವಾಲಿ, ಎಸ್‌.ಪಿ. ಸುಳ್ಳದ, ಡಾ| ದಸ್ತಗೀರ್‌ ಮುಲ್ಲಾ, ಶರಣು ಶಿಂಧೆ, ಸಿದ್ದು ರಾಯಣ್ಣನವರ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ತಾಪಂ ಸದಸ್ಯ ಎಂ.ಎನ್‌. ಕಿರಣರಾಜ, ಕಂದಾಯ ನಿರೀಕ್ಷಕ ಸುರೇಶ ಮ್ಯಾಗೇರಿ, ಚಂದ್ರಕಾಂತ ಸಿಂಗೆ, ಪ್ರದೀಪ ಗೌರ, ರಮೇಶ ಧರಣಾಕರ, ಎನ್‌.ಜಿ. ದೊಡಮನಿ, ಎಚ್.ಎ. ತಳ್ಳೋಳ್ಳಿ, ಕಾಶೀನಾಥ ತಳಕೇರಿ, ಭಾಸ್ಕರ ಪೂಜಾರಿ, ಚಂದ್ರಶೇಖರ ಕಡಕೋಳಕರ, ಶ್ರೀಕಾಂತ ಸೋವåಜಾಳ, ಗಾಲೀಬ ಯಂಟಮಾನ ಇದ್ದರು.

ಈ ವೇಳೆ ತಾಲೂಕಿನ ವಿವಿಧ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಜನ ಬೌದ್ಧ ಧರ್ಮದ ದೀಕ್ಷೆ ಪಡೆದರು. ಕಾರ್ಯಕ್ರಮದ ನಂತರ ವಿವಿಧೆಡೆ 500ಕ್ಕೂ ಹೆಚ್ಚು ಸಸಿ ನೆಡಲಾಯಿತು.

ವಿನಾಯಕ ಗುಣಸಾಗರ ಸ್ವಾಗತಿಸಿದರು. ಪ್ರಕಾಶ ಗುಡಿಮನಿ ನಿರೂಪಿಸಿದರು. ಅಶೋಕ ಚಲವಾದಿ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ