ಸ್ವಾತಂತ್ರ್ಯ ಚಳವಳಿಗೆ ಪತ್ರಿಕೆಗಳ ಕೊಡುಗೆ ಅನನ್ಯ

ಸಾಹಿತ್ಯ ಒಲವು ಬೆಳೆಸಿಕೊಳ್ಳಲು ಪತ್ರಕರ್ತರಿಗೆ ತಳವಾರ ಸಲಹೆ

Team Udayavani, Jul 15, 2019, 3:09 PM IST

ಸಿಂದಗಿ: ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಉದ್ಘಾಟಿಸಿದರು.

ಸಿಂದಗಿ: ಪತ್ರಿಕಾ ರಂಗ ಈ ದೇಶದ ಅತ್ಯಂತ ಪವಿತ್ರವಾಗಿರುವ ರಂಗ. ಸ್ವಾತಂತ್ರ್ಯ ಚಳವಳಿಗೆ ಪತ್ರಿಕಾ ಕ್ಷೇತ್ರದ ಕೊಡುಗೆ ಮರೆಯುವಂತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು.

ರವಿವಾರ ಪಟ್ಟಣದ ರಾಜ ರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆ ದಿ| ರೇ.ಚ. ರೇವಡಿಗಾರ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಡಳಿತ ಪಕ್ಷಗಳನ್ನು ಹಾಗೂ ವಿರೋಧ ಪಕ್ಷಗಳಿಗೆ ಪ್ರತಿ ಕ್ಷಣಕ್ಕೂ ಎಚ್ಚರಿಕೆಯನ್ನು ನೀಡುತ್ತಲೆ ಇರುತ್ತದೆ. ಸಿಂದಗಿಯ ಹಿರಿಯ ವರದಿಗಾರ ದಿ| ರೇ.ಚ. ರೇವಡಿಗಾರ ಅವರು ಪತ್ರಿಕಾ ಭೀಷ್ಮರೆಂದೆ ಖ್ಯಾತಿಯಾದವರು. ಅವರ ಹೆಸರನ್ನು ಅಜರಾಮರವಾಗಿಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಿಂದಗಿ ಮತ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ನಾವು ಜಂಟಿಯಾಗಿ ರೇ.ಚ. ರೇವಡಿಗಾರ ಅವರ ಹೆಸರಿನ ಪತ್ರಿಕಾ ಭವನ ನಿರ್ಮಾಣ ಮಾಡುವ ಭರವಸೆ ನೀಡಿದರು.

ಪತ್ರಿಕಾ ದಿನಾಚಾರಣೆ ಮಾಡುವುದ ಜೊತೆಗೆ ಪತ್ರಕರ್ತರು ಸೇರಿದಂತೆ ಸುಮಾರು 44 ಜನರು ರಕ್ತದಾನ ಮಾಡಿ ಸಾಮಾಜಿಕ ಕಳಿಕಳಿಯನ್ನು ಮೆರೆಯುವ ಮೂಲಕ ಅತ್ಯಂತ ವಿಶಿಷ್ಟವಾಗಿ ಆಚರಣೆ ಮಾಡಿರುವ ಕಾರ್ಯ ಶ್ಲಾಘನಿಯ ಎಂದರು.

ಜೆಡಿಎಸ್‌ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಮನಗೂಳಿ ಅವರು ಎರಡು ಬಾರಿ ಸಚಿವರಾಗಲು ಪತ್ರಿಕಾ ರಂಗದ ಕೊಡುಗೆ ಅಪಾರ. ಸಮಾಜದ ನ್ಯೂನ್ಯತೆಗಳನ್ನು ಎತ್ತಿ ತೊರಿಸುವ ಕಾರ್ಯ ಈ ಕ್ಷೇತ್ರ ಮಾಡುತ್ತಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾದ ಹಾಗೆ ಈ ಕ್ಷೇತ್ರ ತಾಂತ್ರಿಕವಾಗಿ ಇನ್ನೂ ಮುಂದೆ ಬರಬೇಕು. ಸಿಂದಗಿಯಲ್ಲಿ ಆದಷ್ಟು ಬೇಗನೆ ಪತ್ರಿಕಾ ಭವನ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಯುವ ಸಾಹಿತಿ ನಾಗೇಶ ತಳವಾರ ಅತಿಥಿ ಉಪನ್ಯಾಸ ನೀಡಿ, ಪತ್ರಿಕಾ ರಂಗಕ್ಕೂ ಸಾಹಿತ್ಯ ಕ್ಷೇತ್ರಕ್ಕೂ ಅವಿನಾಭಾವ ಸಂಭಂದವಿದೆ. ಪತ್ರಕರ್ತರಾಗುವವರು ಸಾಹಿತ್ಯದ ಒಲವನ್ನು ಬೆಳೆಸಿಕೊಳ್ಳಬೇಕು. ವಿನೂತನ ಬರವಣಿಗೆಯನ್ನು ವ್ಯಕ್ತ ಪಡಿಸುವ ಮೂಲಕ ಹದಗೆಟ್ಟ ವ್ಯವಸ್ಥೆ ಸುಧಾರಿಸುವ ಪ್ರಯತ್ನ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವರದಿಗಾರ ಶಾಂತು ಹಿರೇಮಠ ಮಾತನಾಡಿ, ಸಮಾಜದ ಓರೆ ಕೋರೆಗಳನ್ನು ಎತ್ತಿ ತೋರಿಸುವುದಷ್ಟೇ ಕಾರ್ಯ ವಿನಃ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡುವುದಲ್ಲ. ಪತ್ರಕರ್ತರಲ್ಲಿ ಪ್ರಾಮಾಣಿಕತೆ, ವೃತ್ತಿ ಗೌರವ ಹೆಚ್ಚಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿದರು.

ಪತ್ರಿಕಾ ದಿನಾಚಾರಣೆ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಪತ್ರಕರ್ತರು, ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 44 ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಕಾನಿಪದ ಜಿಲ್ಲಾಧ್ಯಕ್ಷ ಶರಣು ಮಸಳಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಇಂದುಶೇಖರ ಮಣೂರ, ಮಲ್ಲಿಕಾರ್ಜುನ ಕೆಂಭಾವಿ, ಆಸ್ಪಾಕ ಕರ್ಜಗಿ, ಶಶಿಕಾಂತ ಮೆಂಡೆಗಾರ, ಗುರುರಾಜ ಗದ್ದನಕೇರಿ, ಡಾ| ಶಿವಾನಂದ ಗುಂಡಳ್ಳಿ, ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅಲ್ಲಾಪುರ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ಪತ್ರಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಸಿಂದಗಿಯ ರಾಗರಂಜನಿಯ ಡಾ| ಪ್ರಕಾಶ ಪ್ರಾರ್ಥಿಸಿದರು. ತಾಲೂಕಾಧ್ಯಕ್ಷ ಆನಂದ ಶಾಬಾದಿ ಸ್ವಾಗತಿಸಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಪಂಡಿತ ಯಂಪುರೆ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ