Udayavni Special

ಅನ್ನದ ಭಾಷೆಯಾಗಲಿ ಕನ್ನಡ: ನಾಯಕ

ಉತ್ತಮ ಸಮಾಜ ರೂಪಿಸುತ್ತದೆ ಸಾಹಿತ್ಯಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ-ಸಾಂಸ್ಕೃತಿಕ ಸಂಪತ್ತು ಅಗತ್ಯ

Team Udayavani, Dec 29, 2019, 3:55 PM IST

29-December-23

ಸಿಂದಗಿ: ಜಾಗತಿಕ ಮಟ್ಟದಲ್ಲಿ ಪ್ರಾದೇಶಿಕ ಭಾಷೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಪ್ರಾದೇಶಕ ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ ಉಳಿಸಬೇಕಾದರೆ ಪ್ರಾದೇಶಿಕ ಭಾಷೆ ಕಟ್ಟಬೇಕು ಎಂದು ಕರ್ನಾಟಕ ಜಾನಪದ ವಿವಿ ಕುಲಪತಿ ಡಾ| ಡಿ.ಬಿ. ನಾಯಕ ಹೇಳಿದರು.

ಶನಿವಾರ ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಲಮೇಲ ತಾಲೂಕು ಘಟಕ ಹಮ್ಮಿಕೊಂಡಿದ್ದ ಆಲಮೇಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಆಂಗ್ಲ ಭಾಷೆ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿವೆ. ಕನ್ನಡ ಭಾಷೆ ಅನ್ನ ಭಾಷೆಯಾದಾಗ ಕನ್ನಡ ಭಾಷೆ ಉಳಿಸಲು ಸಾಧ್ಯ ಎಂದು ಹೇಳಿದರು. ಸಾಹಿತ್ಯ ಕೇವಲ ಒಂದು ಮಾಧ್ಯಮವಾಗಿರದೇ ಅದು ಒಂದು ಸಂಸ್ಕೃತಿಯಾಗಿದೆ. ವ್ಯಕ್ತಿತ್ವ, ಸಮಾಜ ರೂಪಿಸುವ ಕೆಲಸ ಸಾಹಿತ್ಯ ಮಾಡುತ್ತದೆ. ಅಭಿವೃದ್ಧಿಯಲ್ಲಿ ಆರ್ಥಿಕ ಸಂಪತ್ತು ಎಷ್ಟು ಮುಖ್ಯವೋ ಅಷ್ಟೇ ಸಾಹಿತ್ಯ, ಸಂಸ್ಕೃತಿ ಸಂಪತ್ತು ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಎಂ.ಸಿ. ಮನಗೂಳಿ, ಆಲಮೇಲ ತಾಲೂಕು ಕಸಾಪ ಅಧ್ಯಕ್ಷ ಡಾ|ರಮೇಶ ಕತ್ತಿ, ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರು ಆಶಯ ನುಡಿ ನುಡಿದರು.

ಸಾನ್ನಿಧ್ಯ ವಹಿಸಿದ್ದ ಆಲಮೇಲದ ಗುರುಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಸಮ್ಮುಖ ವಹಿಸಿದ್ದ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಮಾಜಿ ಶಾಸಕ ರಮೇಶ ಭೂಸನೂರ, ಜಿಪಂ ಬಿ.ಆರ್‌. ಯಂಟಮನ, ಬಿಂದುರಾಯಗೌಡ ಪಾಟೀಲ, ಶ್ರೀಮಂತ ನಾಗೂರ, ತಾಪಂ ಅಧ್ಯಕ್ಷ ಪ್ರಭಾವತಿ ಶಿರಸಗಿ, ಉಪಾಧ್ಯಕ್ಷೆ ಲಲಿತಾಬಾಯಿ ದೊಡಮನಿ, ಬಿ.ಎಚ್‌. ಬಿರಾದಾರ, ಸದಸ್ಯ ಡಾ| ಸಂಜೀವಕುಮಾರ ಯಂಟಮನ, ಗ್ರಾಪಂ ಅಧ್ಯಕ್ಷ ಭೋಗಣ್ಣ ಲಾಳಸಂಗಿ, ಉಪಾಧ್ಯಕ್ಷೆ ಶಾಂತಾಬಾಯಿ ಮೇಲಿನಮನಿ ವೇದಿಕೆಯಲ್ಲಿದ್ದರು.

„ರಮೇಶ ಪೂಜಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಇಂದಿನಿಂದ ದೇಶೀಯ ವಿಮಾನಯಾನ

ಇಂದಿನಿಂದ ದೇಶೀಯ ವಿಮಾನಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

28days seal

ಹಾಸನದ 2 ಪ್ರದೇಶಗಳು 28 ದಿನ ಸೀಲ್‌ಡೌನ್‌

ಜೂ.1ರಿಂದ ಖಾಸಗಿ ಬಸ್‌ ಆರಂಭಕ್ಕೆ ನಿರ್ಧಾರ

ಜೂ.1ರಿಂದ ಖಾಸಗಿ ಬಸ್‌ ಆರಂಭಕ್ಕೆ ನಿರ್ಧಾರ

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

hasasvi

ರಾಮನಗರ: ಭಾನುವಾರದ ಕರ್ಫ್ಯೂ ಯಶಸ್ವಿ!

narega-rmn

ನರೇಗಾ ಯೋಜನೆ ನಿಯಮ ಉಲ್ಲಂಘನೆ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

28days seal

ಹಾಸನದ 2 ಪ್ರದೇಶಗಳು 28 ದಿನ ಸೀಲ್‌ಡೌನ್‌

ಜೂ.1ರಿಂದ ಖಾಸಗಿ ಬಸ್‌ ಆರಂಭಕ್ಕೆ ನಿರ್ಧಾರ

ಜೂ.1ರಿಂದ ಖಾಸಗಿ ಬಸ್‌ ಆರಂಭಕ್ಕೆ ನಿರ್ಧಾರ

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

ಲಾಕ್‌ಡೌನ್‌ಗೆ ಭಾರೀ ಜನ ಬೆಂಬಲ

hasasvi

ರಾಮನಗರ: ಭಾನುವಾರದ ಕರ್ಫ್ಯೂ ಯಶಸ್ವಿ!

narega-rmn

ನರೇಗಾ ಯೋಜನೆ ನಿಯಮ ಉಲ್ಲಂಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.