ಗಿಡ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಲು ಹುರಕಡ್ಲಿ ಸಲಹೆ

ಪರಿಸರ ರಕ್ಷಿಸಿ ಮನುಕುಲ ಉಳಿಸಲು ಮುಂದಾಗಿ

Team Udayavani, Jun 28, 2019, 4:54 PM IST

ಸಿಂದಗಿ: ಜೆ.ಎಚ್. ಪಟೇಲ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಬಿ.ಎಂ. ಹುರಕಡ್ಲಿ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಿಂದಗಿ: ಮನೆಗೊಂದು ಮರ, ಊರಿಗೊಂದು ವನ ಎನ್ನುವ ತತ್ವದಡಿಯಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಅರಣ್ಯ ಬೆಳೆಸಬೇಕು ಎಂದು ಸ್ಥಳಿಯ ಜೆ.ಎಚ್. ಪಟೇಲ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಿ.ಎಂ. ಹುರಕಡ್ಲಿ ಹೇಳಿದರು.

ಗುರುವಾರ ಪಟ್ಟಣದ ವಿದ್ಯಾನಗರದ 4ನೇ ಕ್ರಾಸ್‌ನಲ್ಲಿನ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾರತೀಯ ರೆಡ್‌ ಕ್ರಾಸ್‌ ತಾಲೂಕು ಸಂಸ್ಥೆ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯಲ್ಲಿ ಶೇ. 0.17 ಅರಣ್ಯ ಪ್ರದೇಶ ಇರುವುದರಿಂದ ಸತತ ಬರಗಗಾಲಕ್ಕೆ ತುತ್ತಾಗುತ್ತಿದೆ. ಈ ಬವಣೆಯಿಂದ ತಪ್ಪಿಸಿಕೊಳ್ಳಲು ನಾವು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ಪರಿಸರ ರಕ್ಷಣೆ ಕೇವಲ ಕಾರ್ಯಕ್ರಮದಿಂದ ಈಡೇರಿಸಲು ಸಾಧ್ಯವಿಲ್ಲ. ನಿಮ್ಮ ಮನೆ, ಅಕ್ಕ ಪಕ್ಕದವರ ಮನೆ, ಶಾಲೆ ಆವರಣ, ಸರಕಾರಿ ಕಚೇರಿಗಳ ಆವರಣದಲ್ಲಿ ಹೀಗೆ ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲೆಲ್ಲ ಸಸಿ ನೆಡಬೇಕು. ನೆಟ್ಟ ಸಸಿ ಹೆಮ್ಮರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ ಸಂಸ್ಥಾಪಕ ಅಧ್ಯಕ್ಷ ಹ.ಮ. ಪೂಜಾರ ಮಾತನಾಡಿ, ಪರಿಸರ ದಿನಾಚರಣೆ ಕೆವಲ ಹೆಸರಿಗೆ ಮಾತ್ರ ನಡೆಯಬಾರದು. ಪ್ರತಿ ದಿನ ಪರಿಸರ ದಿನ ಆಚರಿಸಬೇಕು. ಪರಿಸರ ರಕ್ಷಣೆಗೆ ಮಹತ್ವ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲೆಯಲ್ಲಿ ನೆಡಸಿದ ಗಿಡಗಳನ್ನು ವಿದ್ಯಾರ್ಥಿಗಳು ದತ್ತು ತೆಗೆದುಕೊಂಡು ನೀವು ಅಲ್ಲಿರುವಷ್ಟು ದಿನವೂ ಅವುಗಳನ್ನು ಪೋಷಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ ಕ್ರಾಸ್‌ ತಾಲೂಕು ಸಂಸ್ಥೆ ಚೇರಮನ್‌ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅತ್ಯವಶ್ಯಕ. ಶಿಕ್ಷಕರು ಪಾಠ ಬೋಧನೆ ಮಾಡುವ ಸಂದರ್ಭದಲ್ಲಿ ಅವಕಾಶ ಸಿಕ್ಕ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ತಿಳಿ ಹೇಳಬೇಕು. ಮಕ್ಕಳು ಗಿಡಗಳನ್ನು ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಿಸರ ರಕ್ಷಣೆ ಮಾಡುವ ಮೂಲಕ ಮನುಕುಲವನ್ನು ಉಳಿಸೋಣ ಎಂದು ಹೇಳಿದರು.

ಭಾರತೀಯ ರೆಡ್‌ ಕ್ರಾಸ್‌ ತಾಲೂಕು ಸಂಸ್ಥೆ ವೈಸ್‌ ಚೇರಮನ್‌ ಎಸ್‌.ಎಂ. ಕುಂಬಾರ ಮಾತನಾಡಿದರು. ಮುಖ್ಯ ಗುರುಮಾತೆ ಜ್ಯೋತಿ ಪೂಜಾರ, ಶಿಕ್ಷಕರಾದ ಮೇರಿ ಮಿಸ್‌, ಜಾರ್ಜ್‌ ಡಿಸೋಜಾ, ದಾನಮ್ಮ ಗಣಾಚಾರಿ, ರಾಜು ಹಿರೇಕುರುಬರ, ವಿಜಯಲಕ್ಷ್ಮೀ ಶಹಾಪುರ, ಅಕ್ಷತಾ ಅರ್ಜುಣಗಿ, ಸೌಮ್ಯಾ, ಆಶ್ವಿ‌ನಿ ಲೋಣಿ, ಸಾಧನಾ ಇಮಡೆ, ಮಂಗಳಾ ಬಮ್ಮಣ್ಣಿ, ವಿಜಯಲಕ್ಷ್ಮೀ ಮಠಪತಿ, ಗೌರಿ ಪಾಟೀಲ, ಶರಣು ಗೋರ್ಜಿ, ಅಂಬಿಕಾ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು. ಭಾರತೀಯ ರೆಡ್‌ ಕ್ರಾಸ್‌ ತಾಲೂಕು ಸಂಸ್ಥೆ ನಿರ್ದೇಶಕ ರಮೇಶ ಪೂಜಾರ ಸ್ವಾಗತಿಸಿದರು. ಯುವರಾಜ ಚಂಡ್ರೆಪ್ಪಗೋಳ ನಿರೂಪಿಸಿದರು. ಸ್ಪೂರ್ತಿ ಹರ್ನಾಳ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಬ್ಯಾಡಗಿ: ಅರಿಯದೇ ಮಾಡಿದ ತಪ್ಪನ್ನು ಜವಾಬ್ದಾರಿಯುತ ನಾಗರಿಕ ಸಮಾಜ ಮನ್ನಿಸುತ್ತಿಲ್ಲ, ಹೀಗಾಗಿ ಎಚ್‌ಐವಿ(ಏಡ್ಸ್‌) ಸೋಂಕಿತರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ....

  • ದಾವಣಗೆರೆ: ಗ್ರಾಮ ಮಟ್ಟದಲ್ಲೂ ವೃದ್ಧಾಪ್ಯ, ವಿಧವಾ ವೇತನದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ ಎಂಬ ಆರೋಪ ಗುರುವಾರ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ...

  • ಕಲಬುರಗಿ: ಕೇಬಲ್‌, ಸೆಟಲೈಟ್‌ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್‌ ನ್ಯೂಸ್‌ ಮತ್ತು ಮನರಂಜನೆ ಟಿವಿ ಚಾನೆಲ್‌ಗ‌ಳಲ್ಲಿ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ...

  • ರೋಣ: ಪಟ್ಟಣದ ಗೌಡರ ಓಣಿ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಶಿ (ಹುಳ), ಕಲ್ಲು ಇರುವ ಕಳಪೆ ಮಟ್ಟದ ಬಿಸಿಯೂಟ ಪೂರೈಸುತ್ತಿರುವುದರಿಂದ ಮಕ್ಕಳು...

  • ಗಜೇಂದ್ರಗಡ: ಧಾರ್ಮಿಕವಾಗಿ ನಾಡಿನಾದ್ಯಂತ ಪ್ರಸಿದ್ಧಿಯಾದ ಇಟಗಿ ಗ್ರಾಮದ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದ್ದು, ಮೂಲ ಸೌಲಭ್ಯಗಳ ಕೊರತೆ ಜೊತೆ ಮೂಲೆ ಸೇರಿದ...

ಹೊಸ ಸೇರ್ಪಡೆ