ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ದಾಸ್ತಾನು
ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ಶೇಖರಣೆ
Team Udayavani, Jul 13, 2019, 3:38 PM IST
ಸಿರುಗುಪ್ಪ: ನಗರದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿರುವ ಬೀಜದ ದಾಸ್ತಾನು.
ಸಿರುಗುಪ್ಪ: ಪ್ರಸಕ್ತ 2019-20ನೇ ಸಾಲಿನ ಮುಂಗಾರು ಮಳೆ ಕೊರತೆ ನಡುವೆಯೂ ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡು ತಾಲೂಕಿನ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹಿಸಿಟ್ಟಿದೆ.
ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ 31ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಮತ್ತು 24ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, ಮೆಣಸಿನಕಾಯಿ, ಸೂರ್ಯಕಾಂತಿ, ಜೋಳ, ಸಜ್ಜೆ, ನವಣೆ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ತಾಲೂಕಿನ ಹಚ್ಚೊಳ್ಳಿ ಮತ್ತು ಸಿರುಗುಪ್ಪ, ತೆಕ್ಕಲಕೋಟೆ ಹೋಬಳಿಯ ಕೆಲವು ಗ್ರಾಮಗಳ ಮಳೆಯಾಶ್ರಿತ ಜಮೀನುಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಇಲ್ಲಿಯವರೆಗೆ ಸುಮಾರು 3ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, ಸೂರ್ಯಕಾಂತಿ ಬೆಳೆಯನ್ನು ಬೆಳೆಯಲಾಗಿದೆ.
ಆದರೂ ಮುಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಬೀಜಗಳನ್ನು ದಾಸ್ತಾನು ಮಾಡಿಕೊಂಡಿರುವ ಕೃಷಿ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಸಿರುಗುಪ್ಪ ಹೋಬಳಿಯಲ್ಲಿ 94 ಕ್ವಿಂಟಾಲ್ ಭತ್ತ, ಒಂದೂವರೆ ಕ್ವಿಂಟಾಲ್ ಮುಸುಕಿನ ಜೋಳ, ಮೂರು ಕ್ವಿಂಟಾಲ್ ತೊಗರಿ, 4.80 ಕ್ವಿಂಟಾಲ್ ಸೂರ್ಯಕಾಂತಿ, 0.60 ಕ್ವಿಂಟಾಲ್ ನವಣೆ, ಹಚ್ಚೊಳ್ಳಿ ಹೋಬಳಿಯಲ್ಲಿ ಭತ್ತ 50 ಕ್ವಿಂಟಾಲ್, ಮುಸುಕಿನ ಜೋಳ 1.50 ಕ್ವಿಂಟಾಲ್, ತೊಗರಿ 0.60 ಕ್ವಿಂಟಾಲ್, ಸೂರ್ಯಕಾಂತಿ 3.00 ಕ್ವಿಂಟಾಲ್, ನವಣೆ 55.10 ಕ್ವಿಂಟಾಲ್, ಕರೂರು ಹೋಬಳಿಯಲ್ಲಿ ಭತ್ತ 50 ಕ್ವಿಂಟಾಲ್, ತೊಗರಿ 3.00 ಕ್ವಿಂಟಾಲ್, ಸೂರ್ಯಕಾಂತಿ 3.00 ಕ್ವಿಂಟಾಲ್, ನವಣೆ 1.20 ಕ್ವಿಂಟಾಲ್. ತೆಕ್ಕಲಕೋಟೆ ಹೋಬಳಿಯಲ್ಲಿ ಭತ್ತ 50 ಕ್ವಿಂಟಾಲ್, ಸಜ್ಜೆ 0.60 ಕ್ವಿಂಟಾಲ್, ತೊಗರಿ 1.20 ಕ್ವಿಂಟಾಲ್, ಸೂರ್ಯಕಾಂತಿ 1.80 ಕ್ವಿಂಟಾಲ್, ನವಣೆ 1.20 ಕ್ವಿಂಟಾಲ್ ಬಿತ್ತನೆ ಬೀಜ ಸಂಗ್ರಹ ಮಾಡಲಾಗಿದೆ.
ಜುಲೈನಲ್ಲಿ 21 ಎಂ.ಎಂ. ಸಾಮಾನ್ಯ ಮಳೆ ಬರಬೇಕಾಗಿತ್ತು ಆದರೆ 14 ಮಿ.ಮೀ. ಮಳೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 94.09 ಮಿ.ಮೀ. ಮಳೆ ಸುರಿಯಬೇಕಾಗಿತ್ತು ಆದರೆ 19.09ಮಿ.ಮೀ. ಮಳೆ ಸುರಿದ್ದಿದ್ದು, ಶೇ.33ರಷ್ಟು ಮಳೆ ಕೊರತೆ ಉಂಟಾಗಿದೆ. ಮಳೆ ಕೊರತೆ ನಡುವೆಯೂ ತಾಲೂಕಿನಲ್ಲಿ 3 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, ಸೂರ್ಯಕಾಂತಿ ಬಿತ್ತನೆಯಾಗಿದೆ ಎಂದು ಕೃಷಿ ಅಧಿಕಾರಿ ಗರ್ಜೆಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ
ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’
ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ
ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ
ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..