ನಾಡಿಗೆ ಪುಟ್ಟರಾಜರ ಕೊಡುಗೆ ಅಪಾರ

ಪುಟ್ಟರಾಜ ಗವಾಯಿಗಳು ಅಂಧ-ಅನಾಥ ಮಕ್ಕಳ ಜೀವನಕ್ಕೆ ಬೆಳಕಾದ ಚೇತನ: ಕಲಿಕೇರಿ

Team Udayavani, Aug 31, 2019, 3:14 PM IST

31-Agust-29

ಸಿರುಗುಪ್ಪ: ಉಪನ್ಯಾಸಕ ಪಂಡಿತ ರಾಜಗುರು ಗುರುಸ್ವಾಮಿ ಉಪನ್ಯಾಸ ನೀಡಿದರು.

ಸಿರುಗುಪ್ಪ: ಪ್ರವಚನ ರಂಗಭೂಮಿ, ಸಂಗೀತ, ಧಾರ್ಮಿಕ ಕ್ಷೇತ್ರ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ರಂಗದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಉಪನ್ಯಾಸಕ ಪಂಡಿತ ರಾಜಗುರು ಗುರುಸ್ವಾಮಿ ಕಲಿಕೇರಿ ಗವಾಯಿ ತಿಳಿಸಿದರು.

ತಾಲೂಕಿನ ಸಿರಿಗೇರಿ ಸ.ಸಂ.ಪ.ಪೂ.ಕಾಲೇಜಿನಲ್ಲಿ ಕ.ಸಾ.ಪ ತಾ.ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಂಡಿತ ಪುಟ್ಟರಾಜ ಗವಾಯಿಗಳು ಹಾನಗಲ್ ಕುಮಾರ ಶಿವಯೋಗಿಗಳ ಮತ್ತು ಲಿಂಗೈಕ್ಯ ಪಂಡಿತ ಪಂಚಾಕ್ಷರಿ ಗವಾಯಿಗಳ ಗರಡಿಯಲ್ಲಿ ಬೆಳೆದ ಶಿಷ್ಯರಾಗಿದ್ದು, 1944ರಲ್ಲಿ ಪಂಡಿತ ಪಂಚಾಕ್ಷರಿ ಗವಾಯಿಗಳು ಲಿಂಗೈಕ್ಯರಾದ ನಂತರ ವೀರೇಶ್ವರ ಪುಣ್ಯಾಶ್ರಮಕ್ಕೆ ಪೀಠಾಧ್ಯಕ್ಷರಾದರು.

ಯಾವುದೇ ಜಾತಿಬೇಧವಿಲ್ಲದೆ ಅಂಧ, ಅನಾಥ ಮಕ್ಕಳಿಗೆ ತಮ್ಮ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿಸುವ ಮೂಲಕ ಅಂಧ, ಅನಾಥರು ಸ್ವತಂತ್ರವಾಗಿ ಬದುಕಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ನವ ಸಮಾಜ ನಿರ್ಮಿಸಿದ ಸಂಗೀತ ಶಿಲ್ಪಿ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ನಾಡಿನ ಅನೇಕ ಹೆಸರಾಂತ ಕಲಾವಿದರು ಪಳಗಿದ್ದಾರೆ.

ಆಶ್ರಮದ ಮಕ್ಕಳನ್ನು ಸಲುಹಲು ಪುಟ್ಟರಾಜ ಅಜ್ಜನವರು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಭಿಕ್ಷಾಟನೆ ಮಾಡುವ ಮೂಲಕ ಅಂಧರಿಗೆ ಶಿಕ್ಷಣ ಮತ್ತು ಅನ್ನದಾಸೋಹ ಒದಗಿಸುತ್ತಾ ಸಾಮಾಜಿಕ ಕಳಕಳಿ ಹೊಂದಿದ್ದರು. ತ್ರಿಭಾಷಾ ಪಂಡಿತರಾಗಿರುವ ಅಜ್ಜನವರು ಮೂರು ಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಶರಣಬಸವೇಶ್ವರ ಪುರಾಣ, ಚನ್ನಬಸವ ಸ್ವಾಮೀಜಿ ಪುರಾಣ, ಅಕ್ಕಮಹಾದೇವಿ ಪುರಾಣ, ಗವಿಸಿದ್ಧೇಶ್ವರ ಪುರಾಣ, ವೀರಭದ್ರೇಶ್ವರ ಪುರಾಣ, ಹೇಮರೆಡ್ಡಿ ಮಲ್ಲಮ್ಮ ಪುರಾಣ, ದಾನಮ್ಮದೇವಿ ಪುರಾಣ, ಚಿಕೇನುಕೊಪ್ಪದ ಚನ್ನವೀರ ಶರಣರ ಪುರಾಣ, ನಾಲತ್ತವಾಡ ವೀರೇಶ್ವರ ಪುರಾಣ ಮುಂತಾದವುಗಳಾಗಿವೆ ಎಂದರು.

ತಮ್ಮ ಸಾಧನೆಯ ಬಲದಿಂದ ಅಂಧರ ಬಾಳಿಗೆ ಬೆಳಕಾಗಿ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಪುಟ್ಟಯ್ಯಜ್ಜನವರು ಹಾರ್ಮೋನಿಯಂ, ತಬಲ, ವಯಲಿನ್‌, ಸಾರಂಗ, ಮುಂತಾದ ವಾದ್ಯಗಳನ್ನು ಲೀಲಾ ಜಾಲವಾಗಿ ನುಡಿಸುತ್ತಿದ್ದರು. ಇವರ ಸಾಧನೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳು ಅರಸಿ ಬಂದಿದ್ದು, ನಾದ ಬ್ರಹ್ಮರೆಂದೇ ಖ್ಯಾತರಾದ ನಡೆದಾಡುವ ದೇವರೆಂದೇ ಜನರಿಂದ ಕರೆಯಲ್ಪಟ್ಟವರು. ಇವರ ಸಾಧನೆ ಇಂದಿಗೂ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದು ಹೇಳಿದರು.

ಕ.ಸಾ.ಪ ತಾ.ಅಧ್ಯಕ್ಷ ಎಸ್‌.ಎಂ.ನಾಗರಾಜಸ್ವಾಮಿ, ಪ್ರಾಂಶುಪಾಲ ಎಚ್.ಬಿ.ವಿಶ್ವನಾಥಗೌಡ ಮಾತನಾಡಿದರು. ಜಿ.ಪಂ ಸದಸ್ಯೆ ಎಂ.ಎಸ್‌. ರತ್ನಮ್ಮ, ತಾ.ಪಂ ಸದಸ್ಯ ರೇಣುಕಪ್ಪ, ಎಪಿಎಂಸಿ ಸದಸ್ಯ ಎಚ್.ಮಲ್ಲನಗೌಡ, ವಿ.ಎಸ್‌.ಎಸ್‌.ಎನ್‌ ಅಧ್ಯಕ್ಷ ಬಿ.ನಾಗೇಂದ್ರ, ಮುಖಂಡರಾದ ಸಿ.ಎಂ.ನಾಗರಾಜ, ಬಿ.ಅಮರೇಗೌಡ, ಎಸ್‌.ಎಂ.ಅಡಿವೆಯ್ಯಸ್ವಾಮಿ ಇದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.