ಅಂಗಡಿಗಳ ಮೇಲೆ ದಾಳಿ; ಪ್ಲಾಸ್ಟಿಕ್‌ ಚೀಲ ವಶ

Team Udayavani, Jul 6, 2019, 12:13 PM IST

ಸೊರಬ: ಪಪಂ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡರು.

ಸೊರಬ: ಪಟ್ಟಣದ ವಿವಿಧ ಅಂಗಡಿ ಮುಂಗಟ್ಟುಗಳ ಮೇಲೆ ಪಪಂ ಅಧಿಕಾರಿಗಳು ದಾಳಿ ನಡೆಸಿ 150 ಅಂಗಡಿಗಳಿಂದ 1.36 ಕ್ವಿಂಟಾಲ್ ಪ್ಲಾಸ್ಟಿಕ್‌ ಕೈಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ಘನತ್ಯಾಜ್ಯ ವಸ್ತುಗಳ ನಿರ್ವಹಣೆ, ಪ್ಲಾಸ್ಟಿಕ್‌ ವಸ್ತುಗಳ ನಿರ್ವಹಣೆ ಮತ್ತು ನಿಬಂಧನೆ ನಿಯಮ 2016 ರ ಕಾಯ್ದೆಯಡಿ ಪ್ಲಾಸ್ಟಿಕ್‌ ಕೈಚೀಲಗಳನ್ನು ನಿಷೇಧಿಸಿದ್ದರೂ ಕೆಲವು ಅಂಗಡಿಗಳ ಮಾಲೀಕರು ಎಗ್ಗಿಲ್ಲದೇ ಪ್ಲಾಸ್ಟಿಕ್‌ ಕವರ್‌ಗಳನ್ನು ಮಾರಾಟ ಮಾಡುವುದು, ಗ್ರಾಹಕರಿಗೆ ಸಾಮಗ್ರಿಗಳನ್ನು ಕೊಂಡೊಯ್ಯಲು ನೀಡುತ್ತಿದ್ದರು. ಪಟ್ಟಣದ ಅಂಗಡಿಗಳ ಮಾಲೀಕರಿಗೆ ಹಲವಾರು ಬಾರಿ ತಿಳುವಳಿಕೆ ನೀಡಿ, ಈ ಹಿಂದೆ ಮೂರ್‍ನಾಲ್ಕು ಬಾರಿ ದಾಳಿ ನಡೆಸಿದ್ದರೂ ಕೂಡ ಮತ್ತೆ ಪ್ಲಾಸ್ಟಿಕ್‌ ಚೀಲಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ಮುಂದೆ ಇಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸಿ ಕೇಸು ದಾಖಲಿಸಿಕೊಳ್ಳಲಾಗುವುದು. ಅಲ್ಲದೆ ಸಾರ್ವಜನಿಕರು ಕೂಡಾ ಪ್ಲಾಸ್ಟಿಕ್‌ ಕೈ ಚೀಲಗಳಲ್ಲಿ ಸಾಮಾನುಗಳನ್ನು ತೆಗೆದುಕೊಂಡು ಹೋದಲ್ಲಿ ಅಂತಹವರ ವಿರುದ್ಧವೂ ಕೇಸು ದಾಖಲು ಮಾಡಲಾಗುವುದು. ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ತಿಳುವಳಿಕೆ ಹೊಂದಬೇಕು ಎಂದು ಮುಖ್ಯಾಧಿಕಾರಿ ಜಗದೀಶ ನಾಯ್ಕ ತಿಳಿಸಿದ್ದಾರೆ.

ಎಂಜಿನಿಯರ್‌ ಶೆಲ್ಜಾ, ಪ್ರಭಾರ ಆರೋಗ್ಯ ಪರಿವೀಕ್ಷಕ ಭಾಸ್ಕರ್‌ರಾಜ್‌, ಲಾಜರ್‌ ಹಾಗೂ ಪಪಂ ಸಿಬ್ಬಂದಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ