ಅವ್ಯವಸ್ಥೆ ಆಗರವಾದ ತಾಲೂಕು ಕಚೇರಿ!

ತಾಲೂಕು ಆಡಳಿತ ವೈಖರಿಗೆ ಜನರ ಹಿಡಿಶಾಪ •ಮಿತಿ ಮೀರಿದ ಮಧ್ಯವರ್ತಿಗಳ ಹಾವಳಿ

Team Udayavani, Jul 3, 2019, 12:41 PM IST

3-July-18

ಸೊರಬ: ಪಟ್ಟಣದ ತಾಲೂಕು ಕಚೇರಿಯ ಹೊರ ನೋಟ.

ಎಚ್.ಕೆ.ಬಿ. ಸ್ವಾಮಿ
ಸೊರಬ:
ಕುಡಿಯಲು ನೀರಿಲ್ಲ, ಶೌಚಗೃಹ ವ್ಯವಸ್ಥೆ ಇಲ್ಲ. ಕಟ್ಟಡದ ಸುತ್ತ ಪೊದೆಗಳು ಬೆಳೆದಿದ್ದು ಹಲವು ಅವ್ಯವಸ್ಥೆಗಳ ಆಗರವಾಗಿ ಪಟ್ಟಣದ ತಾಲೂಕು ಕಚೇರಿಯ ಆವರಣ ಮಾರ್ಪಟ್ಟಿದೆ.

ಹೌದು, ಸುಮಾರು 300 ಹಳ್ಳಿಗಳ ಕೇಂದ್ರ ಪ್ರದೇಶವಾದ ಇಲ್ಲಿನ ತಾಲೂಕು ಕಚೇರಿಗೆ ನಿತ್ಯ ಸಾವಿರಾರು ಮಂದಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಮತ್ತು ದಾಖಲೆಗಳ ಕ್ರೋಢೀಕರಣಕ್ಕಾಗಿ ಆಗಮಿಸುತ್ತಾರೆ. ಆದರೆ, ಇಲ್ಲಿಗೆ ಆಗಮಿಸಿದ ಸಾರ್ವಜನಿಕರು ಹಲವು ಅವ್ಯವಸ್ಥೆಗಳ ನಡುವೆ ಪರದಾಡುತ್ತ ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ: ನಿತ್ಯ ಹಲವು ಕಾರ್ಯ ನಿಮಿತ್ತ ಆಗಮಿಸುವ ಸಾರ್ವಜನಿಕರಿಗೆ ಶೌಚಗೃಹ ವ್ಯವಸ್ಥೆ ಇಲ್ಲದೆ, ಕಟ್ಟಡದ ಕಾಂಪೌಂಡ್‌ ಮತ್ತು ಗೋಡೆಗಳೇ ಶೌಚಗೃಹಗಳಾಗಿ ಮಾರ್ಪಾಡಾಗಿವೆ. ಕಚೇರಿಯಲ್ಲಿ ಕೆಳ ಹಂತದಲ್ಲಿ ಒಂದು ಶೌಚಗೃಹವಿದ್ದು ಬಳಕೆಯಿಂದ ದೂರ ಸರಿದು ದಶಕಗಳೇ ಸರಿದಿವೆ. ಉಳಿದಂತೆ ಮೇಲ್ಮಹಡಿಯಲ್ಲಿರುವ ಶೌಚಗೃಹ ಕಚೇರಿ ಸಿಬ್ಬಂದಿಗೆ ಮಾತ್ರ ಬಳಕೆಯಲ್ಲದೆ. ಇತ್ತೀಚೆಗೆ ಕಟ್ಟಡದ ಹಿಂಭಾಗದಲ್ಲಿ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶೌಚಗೃಹವೂ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆಗೂ ಪರದಾಡುವಂತಾಗಿದೆ. ಇನ್ನು ಮಹಿಳೆಯರ ಸ್ಥಿತಿಯಂತೂ ಹೇಳತೀರದು. ಉಳಿದಂತೆ ಕಟ್ಟಡದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ತಾಲೂಕು ಕಚೇರಿಯ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಮಧ್ಯವರ್ತಿಗಳಿದ್ದರೆ ಮಾತ್ರ ಕಾರ್ಯ: ತಾಲೂಕು ಕಚೇರಿಯಲ್ಲಿ ಉಪನೋಂದಣಾಧಿಕಾರಿ ಕಚೇರಿ, ಸರ್ವೆ ವಿಭಾಗ, ಭೂ ದಾಖಲೆಗಳ ವಿಭಾಗ ಸೇರಿ ಹಲವು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಉಪನೋಂದಣಾಧಿಕಾರಿ ಕಚೇರಿಯಂತೂ ಭ್ರಷ್ಟಾಚಾರಗಳ ಸರಮಾಲೆಯನ್ನೇ ಹೊತ್ತಿದ್ದು, ಹಣವಿದ್ದರೆ ಮಾತ್ರ ಕೆಲಸವಾಗುತ್ತದೆ ಎಂಬ ಆರೋಪ ಕೇಳಿಬರುತ್ತಿದೆ. ಸರ್ಕಾರದ ಸೌಲಭ್ಯಗಳಾದ ಇಸಿ, ನಕಲು ಮಾರಾಟ ಪತ್ರ, ಮದುವೆ ನೋಂದಣಿ, ನಿವೇಶನ ನೋಂದಣಿ ಸೇರಿ ಒಂದೊಂದು ಕಾರ್ಯಕ್ಕೂ ದರ ನಿಗದಿ ಪಡಿಸಲಾಗಿದೆ. ಇವೆಲ್ಲವೂ ಸರ್ಕಾರಿ ಶುಲ್ಕದ ಹೊರತಾಗಿ ಎಂಬುದು ಗಮನಾರ್ಹ. ಉಪನೋಂದಣಿ ಕಚೇರಿಯಲ್ಲಿ ಮದ್ಯವರ್ತಿಗಳ ಸಹಾಯವಿಲ್ಲದೇ ಯಾವುದೇ ಕಾರ್ಯಗಳು ನಡೆಯುವುದಿಲ್ಲ ಎನ್ನುವ ಗಂಭೀರ ಆರೋಪ ಸಾರ್ವಜನಿಕರದ್ದಾಗಿದೆ. ಉಳಿದಂತೆ ಸರ್ವೆ ವಿಭಾಗ, ಭೂ ದಾಖಲೆಗಳ ವಿಭಾಗ ಹಲವು ವಿಭಾಗಗಳ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಾರೆ. ರೈತರು ಹಾಗೂ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡುವುದಿಲ್ಲ ಎನ್ನಲಾಗುತ್ತಿದೆ.

ತುಕ್ಕು ಹಿಡಿಯುತ್ತಿವೆ ಉಪಕರಣಗಳು: ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಅಭಿಯಾನದ ಕಲ್ಪನೆಯೇ ಇಲ್ಲಿನ ತಾಲೂಕು ಕಚೇರಿಯಲ್ಲಿ ಇಲ್ಲ ಎಂಬಂತಾಗಿದೆ. ಕಟ್ಟಡದ ಸುತ್ತ ಪೊದೆಗಳು ಬೆಳೆದು ನಿಂತಿವೆ. ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ವಿವಿಧ ವಿಭಾಗಗಳ ತ್ಯಾಜ್ಯಗಳು ಹಾಗೂ ಕಸ ಮತ್ತಿತರ ವಸ್ತುಗಳನ್ನು ಕಟ್ಟಡದ ಸುತ್ತ ಎಲ್ಲೆಂದರಲ್ಲಿ ಎಸೆಯಲಾಗಿದೆ. ಇದು ಕಟ್ಟಡದ ಒಳ ಆವರಣವನ್ನೂ ಬಿಟ್ಟಿಲ್ಲ. ಕಟ್ಟಡ ಬಲಭಾಗದಲ್ಲಿರುವ ಜನರೇಟರ್‌ ಪೊದೆಗಳ ನಡುವೆ ಹುದುಗಿ ಹೋಗಿದೆ. ಯಂತ್ರದ ಬಹುಪಾಲು ಭಾಗಗಳು ತುಕ್ಕು ಹಿಡಿದಿರುವ ಸ್ಥಿತಿಯಲ್ಲಿ ಗೋಚರಿಸುತ್ತಿದೆ. ಹವಾ ನಿಯಂತ್ರಿತ ಯಂತ್ರಗಳು ಸಹ ಹಾಳಾಗುವ ಸ್ಥಿತಿಯಲ್ಲಿವೆ. ಮತ್ತೂಂದಡೆ ಕಚೇರಿಯಲ್ಲಿ ಈ ಹಿಂದೆ ಬಳಕೆಯಲ್ಲಿದ್ದ ತಹಶೀಲ್ದಾರರ ವಾಹನವು ಸಹ ತುಕ್ಕು ಹಿಡಿಯುತ್ತಿರುವ ಸ್ಥಿತಿಯಲ್ಲಿದ್ದರೂ ಯಾರೋಬ್ಬರೂ ಇತ್ತ ಕಡೆ ಗಮನ ಹರಿಸಿಲ್ಲ.

ಟಾಪ್ ನ್ಯೂಸ್

rwytju11111111111

ಮಂಗಳವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಗಾಬರಿ ಬೇಡ; ಎಚ್ಚರವಿರಲಿ; ಒಮಿಕ್ರಾನ್‌ ಬಗ್ಗೆ ರಾಜ್ಯ ಸರಕಾರ ಅಭಯ

ಗಾಬರಿ ಬೇಡ; ಎಚ್ಚರವಿರಲಿ; ಒಮಿಕ್ರಾನ್‌ ಬಗ್ಗೆ ರಾಜ್ಯ ಸರಕಾರ ಅಭಯ

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ನೇತ್ರದಾನ ಬಹಳ ಸುಲಭ; ಬರೇ ಇಪ್ಪತ್ತು ನಿಮಿಷ ಸಾಕು…

ನೇತ್ರದಾನ ಬಹಳ ಸುಲಭ; ಬರೇ ಇಪ್ಪತ್ತು ನಿಮಿಷ ಸಾಕು…

ಲಸಿಕೆ ಅಭಿಯಾನ: ಬಿಜೆಪಿ ರಾಜ್ಯಗಳೇ ಬೆಸ್ಟ್‌; ವ್ಯಾಕ್ಸಿನ್‌ ವಿತರಣೆಯಲ್ಲಿ ಕರ್ನಾಟಕ ನಂ.5

ಲಸಿಕೆ ಅಭಿಯಾನ: ಬಿಜೆಪಿ ರಾಜ್ಯಗಳೇ ಬೆಸ್ಟ್‌; ವ್ಯಾಕ್ಸಿನ್‌ ವಿತರಣೆಯಲ್ಲಿ ಕರ್ನಾಟಕ ನಂ.5

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!

ಪೆಟ್ರೋಲ್‌ ಹಾಕಿಸಲೂ ಬಂತು ಗಿಫ್ಟ್ ವೋಚರ್‌!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಬೊಮ್ಮಾಯಿ ರಾಜೀನಾಮೆ ಖಚಿತ: ಡಿಕೆಶಿ

ಬೊಮ್ಮಾಯಿ ರಾಜೀನಾಮೆ ಖಚಿತ: ಡಿಕೆಶಿ

ಲಾರಿ-ಆಟೋರಿಕ್ಷಾ ಢಿಕ್ಕಿ: ಬಾಲಕ ಸಾವು

ಲಾರಿ-ಆಟೋರಿಕ್ಷಾ ಢಿಕ್ಕಿ: ಬಾಲಕ ಸಾವು

ಆಟೋ ಚಾಲಕನ ಪುತ್ರಿಗೆ 6 ಚಿನ್ನದ ಪದಕ

ಆಟೋ ಚಾಲಕನ ಪುತ್ರಿಗೆ 6 ಚಿನ್ನದ ಪದಕ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

rwytju11111111111

ಮಂಗಳವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಗಾಬರಿ ಬೇಡ; ಎಚ್ಚರವಿರಲಿ; ಒಮಿಕ್ರಾನ್‌ ಬಗ್ಗೆ ರಾಜ್ಯ ಸರಕಾರ ಅಭಯ

ಗಾಬರಿ ಬೇಡ; ಎಚ್ಚರವಿರಲಿ; ಒಮಿಕ್ರಾನ್‌ ಬಗ್ಗೆ ರಾಜ್ಯ ಸರಕಾರ ಅಭಯ

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ಮೈದಾನದ ಸಿಬಂದಿಗೆ ದ್ರಾವಿಡ್‌ ಇನಾಮು

ನೇತ್ರದಾನ ಬಹಳ ಸುಲಭ; ಬರೇ ಇಪ್ಪತ್ತು ನಿಮಿಷ ಸಾಕು…

ನೇತ್ರದಾನ ಬಹಳ ಸುಲಭ; ಬರೇ ಇಪ್ಪತ್ತು ನಿಮಿಷ ಸಾಕು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.