ಅಪೂರ್ಣ ತಾಲೂಕು ಕ್ರೀಡಾಂಗಣ,ಒಳಚರಂಡಿ ದುರ್ವಾಸ‌ನೆಗೆ ಜನ ತತ್ತರ

4 (ಶಾಂತಿನಗರ), 5ನೇ (ಹಳೆಗೇಟು) ವಾರ್ಡ್‌: ದಶಕದ ಸವಾಲುಗಳು

Team Udayavani, May 19, 2019, 10:24 AM IST

ಶಾಂತಿನಗರ ಕ್ರೀಡಾಂಗಣದ ಕಟ್ಟಡಗಳು.

ಸುಳ್ಯ: ನ.ಪಂ.ನ 4 (ಶಾಂತಿನಗರ), 5ನೇ (ಹಳೆಗೇಟು) ವಾರ್ಡ್‌ಗಳು ನಗರ ಮತ್ತು ತಾಲೂಕಿಗೆ ಸಂಬಂಧಿಸಿದ ಎರಡು ಪ್ರಮುಖ ಸಮಸ್ಯೆ ಹೊತ್ತುಕೊಂಡು ದಶ ವರ್ಷಗಳೇ ಕಳೆದಿದೆ.

ಒಂದೆಡೆ ನಗರದ ಒಳಚರಂಡಿ ಘಟಕದ ದುರ್ವಾಸನೆ, ಇನ್ನೊಂದೆಡೆ ಪಾಳುಬಿದ್ದಿರುವ ತಾಲೂಕು ಕ್ರೀಡಾಂಗಣ. ಹತ್ತಾರು ವರ್ಷದಿಂದ ಇವೆರೆಡು ಸಮಸ್ಯೆ ಬಗೆಹರಿದಿಲ್ಲ. ನಗರಾಡಳಿತದ ಮೂಲಕ ಸರಕಾರದ ಹಂತದಲ್ಲಿ ಒತ್ತಡ ತಂದು ಇದಕ್ಕೂಂದು ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ವಾರ್ಡ್‌ನ ಮತದಾರರ ಬೇಡಿಕೆ. ಆ ನಿರೀಕ್ಷೆಯಲ್ಲಿ ಹಕ್ಕು ಚಲಾಯಿಸುತ್ತೇವೆ ಅನ್ನುವುದು ಸ್ಥಳೀಯರ ಅಭಿಮತ.

ಪ್ರಯೋಜನಕ್ಕಿಲ್ಲ ಒಳಚರಂಡಿ ಘಟಕ
ಹಳಗೇಟು ವಾರ್ಡ್‌-5ಕ್ಕೆ ಸೇರಿರುವ ಹೊಸಗದ್ದೆ ಪ್ರದೇಶದಲ್ಲಿ ಒಳ ಚರಂಡಿ ಘಟಕವಿದೆ. ನಗರದಿಂದ ಹರಿದು ಬರುವ ತ್ಯಾಜ್ಯ ನೀರನ್ನು ಮರು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 2.87 ಕೋಟಿ ರೂ. ಒಳಚರಂಡಿ ಘಟಕ ಕ್ರಿಯಾಯೋಜನೆಗೆ ಸರಕಾರವು 2001ರ ಜುಲೈ ತಿಂಗಳಲ್ಲಿ ಒಪ್ಪಿಗೆ ನೀಡಿತ್ತು. 2001ರ ನವೆಂಬರ್‌ನಲ್ಲಿ ತಾಂತ್ರಿಕ ಮಂಜೂರಾತಿ ದೊರೆಯಿತು. ಒಳಚರಂಡಿಯಲ್ಲಿ ಹರಿದು ಬರುವ ತ್ಯಾಜ್ಯ ನೀರಿನ ಸಂಸ್ಕರಣೆಗೆ ಹಳೆಗೇಟು ವಾರ್ಡ್‌ನ ಹೊಸಗದ್ದೆ ಬಳಿ ತ್ಯಾಜ್ಯ ಶುದ್ಧೀಕರಣ ಘಟಕ ಸಾಪಿಸುವ ವಿಚಾರಕ್ಕೆ ಸ್ಥಳೀಯ ಪರಿಸರದ 300ಕ್ಕೂ ಅಧಿಕ ಮನೆ ಮಂದಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಪ್ರತಿಭಟನೆ ಲೆಕ್ಕಿಸದೆ ಅಲ್ಲಿ ಘಟಕ ನಿರ್ಮಿಸಲಾಗಿತ್ತು.

ಬಾಗಿಲು ಮುಚ್ಚಬೇಕು
ಶುದ್ಧಿಕರಣಕ್ಕೆಂದು 6ಕ್ಕಿಂತ ಅಧಿಕ ಬೃಹತ್‌ ಹೊಂಡ ನಿರ್ಮಿಸಲಾಗಿದೆ. ಯೋಜನೆ ಪ್ರಕಾರ ನಗರದ ಎರಡು ವಲಯಗಳಿಂದ ಬರುವ ತ್ಯಾಜ್ಯ ಹೊಂಡದಲ್ಲಿ ಶೇಖರಣೆಯಾಗಿ ಬೇರೆ ಬೇರೆ ಹೊಂಡಕ್ಕೆ ಹರಿದು, ಹಂತ ಹಂತವಾಗಿ ಶುದ್ಧೀಕರಣಗೊಂಡು, ಕೃಷಿ ಚಟುವಟಿಕೆಗೆ ಮರು ಬಳಸುವ ಉದ್ದೇಶವಿತ್ತು. ಆದರೆ ಒಳಚರಂಡಿ ಸಂಪರ್ಕ ಲೋಪದ ಪರಿಣಾಮ ಯಶಸ್ಸು ಕಾಣಲಿಲ್ಲ. ಎರಡು ವಲಯದ ಪೈಕಿ ಕೆಲವೆಡೆ ಸಂಪರ್ಕ ನೀಡಲಾಗಿದೆ. ಆ ತ್ಯಾಜ್ಯದ ಬಹುಪಾಲು ನಗರದೊಳಗೆ ಸೋರಿಕೆ ಆಗುತ್ತಿದೆ.

ಅಲ್ಪ ಪ್ರಮಾಣದ ತ್ಯಾಜ್ಯ ನೀರು ಘಟಕದ ಒಂದು ಹೊಂಡಕ್ಕೆ ಬಂದು ಬೀಳುತ್ತಿದೆ. ನಿಯಮಾನುಸಾರ ಆ ತ್ಯಾಜ್ಯ ನೀರನ್ನು ಸಂಸ್ಕರಿಸಬೇಕು. ಆ ವ್ಯವಸ್ಥೆ ಇಲ್ಲದ ಕಾರಣ ದುರ್ವಾಸನೆ ಹಬ್ಬಿ ಮನೆ ಬಾಗಿಲು ಮುಚ್ಚಿಕೊಂಡೇ ದಿನ ಕಳೆಯಬೇಕು ಎನ್ನುತ್ತಾರೆ ಈ ವಾರ್ಡ್‌ ನಿವಾಸಿಗರು.

ಅಪೂರ್ಣ ತಾಲೂಕು ಕ್ರೀಡಾಂಗಣ
ಶಾಂತಿನಗರ 4ನೇ ಮತ್ತು ಹಳೆಗೇಟು 5ನೇ ವಾರ್ಡ್‌ ವ್ಯಾಪ್ತಿಯ ಶಾಂತಿನಗರದಲ್ಲಿ ಹದಿಮೂರು ವರ್ಷದ ಹಿಂದೆ 5.85 ಎಕ್ರೆ ಪ್ರದೇಶದಲ್ಲಿ 60 ಲಕ್ಷ ರೂ. ವ್ಯಯಿಸಿ ನಿರ್ಮಿಸಲು ಉದ್ದೇಶಿಸಿದ್ದ ತಾಲೂಕು ಕ್ರೀಡಾಂಗಣ ಪಾಳು ಬಿದ್ದಿದೆ. 60 ಲಕ್ಷ ರೂ. ಖರ್ಚಾದ ಅನಂತರ ಕಾಮಗಾರಿ ಮುಂದುವರಿಯಲಿಲ್ಲ. ಇದಕ್ಕೆ ಕಾರಣ, ಅನುದಾನದ ಕೊರತೆ. ಹಾಗಾಗಿ ಪ್ರಥಮ ಹಂತದ ಕಾಮಗಾರಿಯಲ್ಲಿ ಸುಸ್ತಾದ ಈ ಕ್ರೀಡಾಂಗಣ ಅಕ್ಷರಶಃ ಪಾಳು ಬಿದ್ದಿದೆ. ಪರಿಣಾಮ ಲಕ್ಷಾಂತರ ರೂ. ತೆರಿಗೆ ಹಣ ಪೋಲಾಗಿದೆ. ಎರಡು ಕಟ್ಟಡಗಳು ಪಾಳು ಬಿದ್ದಿದ್ದು, ಕಿಟಕಿ ಗಾಜು ಒಡೆದು ಹೋಗಿವೆ. ಶೌಚಾಲಯದ ಬಾಗಿಲು ಸಾಮಗ್ರಿಗಳು ಒಡೆದು ಹೋಗಿವೆ. ಸೂಕ್ತ ರಕ್ಷಣೆ ಇಲ್ಲದ ಕಾರಣ ರಾತ್ರಿ ವೇಳೆ ಇಲ್ಲಿ ಅನೈತಿಕ ವ್ಯವಹಾರಗಳು ನಡೆಯುತ್ತಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಉಳಿದಂತೆ ಈ ಎರಡು ವಾರ್ಡ್‌ಗಳಲ್ಲಿ ರಸ್ತೆ, ನೀರು, ತಂಗುದಾಣ, ತ್ಯಾಜ್ಯ ಮೊದಲಾದ ಸಮಸ್ಯೆಗಳು ಇವೆ. ಇದನ್ನು ಬಗೆಹರಿಸುವುದು ಕಷ್ಟವೇನೂ ಅಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬದುಕು ನದಿ ಇದ್ದಂತೆ ಎನ್ನುವ ಮಾತಿದೆ. ಅದಕ್ಕೆ ಇರಬೇಕು, ಮಾನವನಿಗೂ ನದಿಗೂ ಬಿಡಿಸಲಾಗದ ನಂಟು. ಗಮನಿಸಿ ನೋಡಿ ನಾಗರಿಕತೆ ಆರಂಭವಾಗಿದ್ದೇ ನದಿ ದಂಡೆಯಲ್ಲಿ. ಮಾತ್ರವಲ್ಲ...

  • ಮನುಷ್ಯನಿಗೆ ತಾಳ್ಮೆಯೆಂಬುದು ಬಂಗಾರದ ಮೌಲ್ಯವಿದ್ದಂತೆ. ತಾಳ್ಮೆಯೆಂಬುದು ನಮ್ಮೊಂದಿಗೆ ಇದ್ದರೆ ನಾವು ಎಲ್ಲವನ್ನೂ ಗೆಲ್ಲಲು ಅರ್ಹರು ಎಂಬುದು ವಿಶೇಷ. ಬದುಕಿನಲ್ಲಿ...

  • ಮಾತಿಗೆ ಒಂದು ಅರ್ಥವಾದರೆ ಮೌನಕ್ಕೆ ಅನೇಕ ಅರ್ಥಗಳು. ಮೌನ ಧನಾತ್ಮಕತೆ ಮತ್ತು ಋಣಾತ್ಮಕತೆಗಳ ಎರಡು ಅಲಗಿನ ಕತ್ತಿಯಂತೆ. ಅದನ್ನು ಚಾಕಚಕ್ಯತೆಯಿಂದ ಬಳಸುವುದು ಅವರವರಿಗೆ...

  • ದಿನಗಳು ಉರುಳುತ್ತಿದಂತೆ ಕಾಲವೂ ಕೂಡ ಬದಲಾಗುತ್ತಿದೆ. ಅದರಲ್ಲಿ ಇದು ತಂತ್ರಜ್ಞಾನದ ಯುಗ. ದಿನಕ್ಕೊಂದು ಅನ್ವೇಷಣೆಗಳು ನಡೆಯತ್ತಲೇಯಿರುತ್ತದೆ. ಅಂತಹ ಕಾಲದಲ್ಲಿ...

  • ಜೀವನದಲ್ಲಿ ನಾವು ಒಂದಿಷ್ಟು ಪ್ರೇರಕ ಮಾತುಗಳನ್ನು, ಸಕಾರಾತ್ಮಕ ಯೋಚನೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಇದು ನಮ್ಮ ಯಶಸ್ಸಿನ ಹಾದಿಗೆ ಬಹಳ ಮುಖ್ಯವಾಗಿ ಬೇಕಾಗುತ್ತದೆ....

ಹೊಸ ಸೇರ್ಪಡೆ

  • ತಿರುವನಂತಪುರ: ರೇಪ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಕೇರಳದ ಸಂಸದ ಹಿಬಿ ಎಡೆನ್‌ ಪತ್ನಿ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ಎದುರಿಸುವಂತಾಗಿದೆ....

  • ಹೊಸದಿಲ್ಲಿ: ಬ್ಯಾಂಕ್‌ಗಳ ವಿಲೀನ ಮತ್ತು ಠೇವಣಿ ಬಡ್ಡಿ ದರ ಇಳಿಕೆಯನ್ನು ವಿರೋಧಿಸಿ ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದ್ದರಿಂದ,...

  • ತಿರುವನಂತಪುರ: ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ಮಂಜು ವಾರ್ಯರ್‌ "ಒಡಿಯನ್‌' ಸಿನಿಮಾ ನಿರ್ಮಾಪಕ ಶಿವಕುಮಾರ ಮೆನನ್‌ ವಿರುದ್ಧ ಕೇಸು ದಾಖಲಿಸಿದ್ದಾರೆ. ಬೆದರಿಕೆಯೊಡ್ಡಿದ...

  • ಮುಂಬಯಿ: ಸಾಧಕ ಮಹಿಳೆಯರನ್ನು ಗುರುತಿಸುವ ಭಾರತ್‌ ಕಿ ಲಕ್ಷ್ಮೀ ಎಂಬ ಯೋಜನೆಗೆ ನಟಿ ದೀಪಿಕಾ ಪಡುಕೋಣೆ ಮತ್ತು ಶಟ್ಲರ್‌ ಪಿ.ವಿ. ಸಿಂಧು ಅವರನ್ನು ರಾಯಭಾರಿಗಳನ್ನಾಗಿ...

  • ರಾಂಚಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕಾಣಿಸಿಕೊಂಡು...