‘ಸ್ವಚ್ಛ ನಗರ ನಿರ್ಮಾಣ ಬಿಜೆಪಿ ಸಂಕಲ್ಪ’

ನಗರ ಪಂಚಾಯತ್‌ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ

Team Udayavani, May 26, 2019, 10:41 AM IST

ನಗರದ ಅಭಿವೃದ್ಧಿಗೆ ಸಂಬಂಧಿಸಿ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಶಾಸಕ ಎಸ್‌. ಅಂಗಾರ ಅವರು ಬಿಡುಗಡೆಗೊಳಿಸಿದರು.

ಸುಳ್ಯ: ನ.ಪಂ. ಚುನಾವಣೆ ಯಲ್ಲಿ ಬಹುಮತದೊಂದಿಗೆ ಆಡಳಿತಕ್ಕೆ ಬಂದು ಸ್ವಚ್ಛ ಸುಂದರ ನಗರ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡುವುದೇ ಬಿಜೆಪಿ ಸಂಕಲ್ಪ ಎಂದು ಶಾಸಕ ಎಸ್‌. ಅಂಗಾರ ಅವರು ಹೇಳಿದರು.

ಬಿಜೆಪಿ ಚುನಾವಣ ಪ್ರಚಾರ ಕಚೇರಿ ಯಲ್ಲಿ ನ.ಪಂ. ಚುನಾವಣೆಗೆ ಸಂಬಂಧಿಸಿ ಬಿಜೆಪಿ ಪ್ರಣಾಳಿಕೆ ಬಿಡುಗ ಡೆಗೊಳಿಸಿ ಅವರು ಮಾತ ನಾಡಿದರು. ಎಲ್ಲ 20 ವಾರ್ಡ್‌ ಗಳಲ್ಲಿಯೂ ಬಿಜೆಪಿ ಅಭ್ಯ ರ್ಥಿಗಳು ಗೆಲುವು ಪಡೆ ಯುವ ವಿಶ್ವಾಸ ಇದೆ ಎಂದವರು ತಿಳಿಸಿದರು.

ಕೊರತೆಗೆ ಕಾಂಗ್ರೆಸ್‌ ಕಾರಣ
1930ರಿಂದ 1996ರ ತನಕ ನಗರ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಮೂಲ ಸೌಕರ್ಯ ಒದಗಿಸಲು ಜಮೀನು ಮೊದ ಲಾದ ಸೌಲಭ್ಯ ಕಾದಿರಿಸದ ಪರಿಣಾಮ ದಿಂದ ಅಭಿವೃದ್ಧಿ ಯೋಜನೆ ಅನುಷ್ಠಾನಗಳಿಗೆ ಅಡ್ಡಿ ಉಂಟಾಗಿದೆ. ಅನಂತರ ಬಿಜೆಪಿ ಆಡಳಿತಕ್ಕೆ ಬಂದು ಪಾರ್ಕಿಂಗ್‌ ಸೌಲಭ್ಯ, ಬಸ್‌ ನಿಲ್ದಾಣಕ್ಕೆ ಸ್ಥಳಾವಕಾಶ, ಕೆಎಸ್‌ಆರ್‌ಟಿಸಿ ಡಿಪೋ, ಅಗ್ನಿಶಾಮಕ ದಳದ ಕಚೇರಿ ಮೊದಲಾದ ಸೌಲಭ್ಯಗಳ ಅನುಷ್ಠಾನಕ್ಕೆ ಸೂಕ್ತ ಸ್ಥಳಾವಕಾಶ, ಮೂಲಸೌಕರ್ಯ ಒದಗಿಸಿತ್ತು ಎಂದು ಅಂಗಾರ ಹೇಳಿದರು.

ಶಾಶ್ವತ ಯೋಜನೆಗಳು
ಪ್ರಣಾಳಿಕೆ ಅಂಶ ಪ್ರಸ್ತಾವಿಸಿದ ಅವರು, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಗುಣಮಟ್ಟದ ವಿದ್ಯುತ್‌ ಪೂರೈಕೆ, ಘನ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ, ಒಳಚರಂಡಿ ಸುವ್ಯವಸ್ಥೆಗೊಳಿಸುವುದು, ಇ-ಆಡಳಿತ, ಆನ್‌ಲೈನ್‌ ಸೌಲಭ್ಯಕ್ಕೆ ಆದ್ಯತೆ ನೀಡಿ ಜನಸ್ನೇಹಿ ಕಚೇರಿಯನ್ನಾಗಿ ರೂಪಿಸುವುದು. ನಾಗರಿಕರಿಗೆ ತ್ವರಿತ ಸೇವೆ, ಭ್ರಷ್ಟಾಚಾರ ರಹಿತ ಆಡಳಿತ, ಸಕಾಲ ಯಶಸ್ವಿ ನಿರ್ವಹಣೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ಅಲ್ಲಲ್ಲಿ ಕಿಂಡಿ ಅಣೆಕಟ್ಟು
ಇಪ್ಪತ್ತೈದು ಜನವಸತಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಮನೆ, ಆಸ್ಪತ್ರೆ, ಹೋಟೇಲು, ವ್ಯಾಪಾರ ಕೇಂದ್ರ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ನೀರು ಶುದ್ಧೀಕರಣ ಘಟಕ ಸ್ಥಾಪಿಸುವವರಿಗೆ ಪ್ರೋತ್ಸಾಹ, ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಳಕ್ಕಾಗಿ ಪಯಸ್ವಿನಿ ನದಿಗೆ ನಾಗಪಟ್ಟಣ, ಕಾಂತಮಂಗಲ, ಓಡಬೈ ಮತ್ತು ಕಂದಡ್ಕ ಹೊಳೆಗೆ ಕೊಡಿಯಾಲಬೈಲ್, ಮೊಗರ್ಪಣೆ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಒಳಚರಂಡಿ ಯೋಜನೆಯ ಸಮಗ್ರ ಅಭಿವೃದ್ಧಿ, ಕೊಳಚೆ ನೀರು, ದ್ರವ ತ್ಯಾಜ್ಯ ಸಹಿತ ಸಂಸ್ಕರಿಸಿ ಮರುಬಳಕೆ, ಇದಕ್ಕಾಗಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಕಸ ವಿಲೇ ಘಟಕ ಇನ್ನಿತರ ಯೋಜನೆ ಅನು ಷ್ಠಾನಿಸಲಾಗುವುದು ಎಂದರು.

ತಾಲೂಕು ಪಂಚಾಯತ್‌ ಅಧ್ಯಕ್ಷ ಚನಿಯ ಕಲ್ತಡ್ಕ, ಪ್ರಮುಖರಾದ ಹರೀಶ್‌ ಕಂಜಿಪಿಲಿ, ಸುಭೋದ್‌ ಶೆಟ್ಟಿ ಮೇನಾಲ, ಪ್ರಕಾಶ್‌ ಹೆಗ್ಡೆ, ಪುಷ್ಪಾ ಮೇದಪ್ಪ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ, ಸೋಮನಾಥ ಪೂಜಾರಿ, ವಿನಯ ಕಂದಡ್ಕ, ಹರೀಶ್‌ ಬೂಡುಪನ್ನೆ, ವೇದಾವತಿ ಮಾಣಿಬೆಟ್ಟು, ಗಿರೀಶ್‌ ಕಲ್ಲಗದ್ದೆ ಪತ್ರಿಕಾಗೋಷ್ಠಿಯಲ್ಲಿದ್ದರು.

ಕಾಂಗ್ರೆಸ್‌ ಗೆದ್ದಾಗ ಏಕೆ ಅನುಮಾನ ಬರಲಿಲ್ಲ?
ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಇವಿಎಂ ಬಗ್ಗೆ ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಂಗಾರ, 45 ವರ್ಷಗಳ ಕಾಲ ನಿರಂತರವಾಗಿ ದೇಶವನ್ನಾಳಿದ ಸಂದರ್ಭ ಆಗ ನಡೆದ ಚುನಾವಣೆ, ಫಲಿತಾಂಶದ ಬಗ್ಗೆ ಪಕ್ಷಗಳು ಸಂಶಯ ವ್ಯಕ್ತಪಡಿಸದೆ ಜನರ ತೀರ್ಪುನ್ನು ಗೌರವಿಸಿದ್ದವು. ಆದರೆ ಈಗ ಬಿಜೆಪಿ ಗೆದ್ದಾಗ ಕಾಂಗ್ರೆಸ್‌ಗೆ ಇವಿಎಂ ಮೇಲೆ ಸಂಶಯ ಬಂದಿರುವುದು ಸೋಲಿನ ಹತಾಶೆಯ ಸಂಕೇತ ಎಂದವರು ಟೀಕಿಸಿದರು.

ಹಕ್ಕುಪತ್ರ: ಸಕಾರಾತ್ಮಕ ಸ್ಪಂದನ
ಮಿಲಿಟ್ರಿ ಗ್ರೌಂಡ್‌ನ‌ಲ್ಲಿ ಹಕ್ಕುಪತ್ರ ರಹಿತ ಕುಟುಂಬಗಳಿಗೆ ಹಕ್ಕುಪತ್ರ ಒದಗಿಸುವ ಬಗ್ಗೆ ನಾವು ಪ್ರಯತ್ನ ಮಾಡಿದ್ದು, ಈ ಬಗ್ಗೆ ರಕ್ಷಣ ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಸಕರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಶಾಸಕ ಎಸ್‌.ಅಂಗಾರ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ತಂದೆಯ ಚಿನ್ನದ ಅಂಗಡಿಯಲ್ಲಿದ್ದ ಕೆಲಸಗಾರ ಒಂದು ರಾತ್ರಿ ಅಂಗಡಿಯಲ್ಲಿದ್ದ ಚಿನ್ನವನ್ನೆ ಕಳ್ಳತನ ಮಾಡಿ ಓಡಿಹೋಗಿದ್ದ ಘಟನೆ, ಮಾನಸಿಕ ಆಕೆಗೆ ಆಘಾತ ಉಂಟು ಮಾಡಿತ್ತು....

  • "ನಿಮ್ಮ ಹೆಸರು...' ಅಂದೆ, ಆಕೆಯ ವಿವರ ಬರೆದುಕೊಳ್ಳುತ್ತ. 2 ನಿಮಿಷವಾದರೂ ಉತ್ತರವಿಲ್ಲ! "ಅಯ್ಯ..ಹೆಸರು ಹೇಳಲೂ ಇಷ್ಟು ಯೋಚಿಸಬೇಕೆ..?' ಆಕೆ ನನ್ನ ಕ್ಲೈಂಟ್‌. ವಿಮಾ ಸಂಸ್ಥೆಯ...

  • ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ....

  • ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ...

  • ಅದೊಂದು ದಿನ ತರಗತಿಯಲ್ಲಿ ಶಿಕ್ಷಕಿ, "ಉತ್ತಮ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ಅಂಶ ಯಾವುದು? ಒಂದು ಪದದಲ್ಲಿ ಉತ್ತರಿಸಿ' ಎಂದು ಹೇಳಿದರು. ಹಣ, ಆಸ್ತಿ, ಸಂಪತ್ತು,...

ಹೊಸ ಸೇರ್ಪಡೆ