ಚಿತ್ತಾಕರ್ಷಕ ಹೆಮ್ಮಡಗಿ ಸರಕಾರಿ ಶಾಲೆ

ಶಾಲೆಯಲ್ಲಿ ಬಿಡಿಸಲಾಗಿರುವ ಪ್ರತಿ ಚಿತ್ರವೂ ಕಲಿಕೆಗೆ ಪೂರಕ ಶಿಕ್ಷಕರ ಶ್ರಮ ಸಾರ್ಥಕ

Team Udayavani, Sep 23, 2019, 5:15 PM IST

23-Sepctember-18

„ಸಿದ್ದಯ್ಯ ಪಾಟೀಲ

ಸುರಪುರ: ತಾಲೂಕಿನ ರುಕ್ಮಾಪುರ ಕಸ್ಟರ್‌ನ ಹೆಮ್ಮಡಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು, ಪೋಷಕರು, ದೂರದೂರಿನ ಶಿಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. 1964ರಲ್ಲಿ ಏಕೋಪಧ್ಯಾಯ ಶಿಕ್ಷಕರಿಂದ ಆರಂಭವಾದ ಶಾಲೆ ಇದುವರೆಗೂ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿಗೆ ಭಾಜನವಾಗಿದೆ. ಬದಲಾದ ಕಾಲಘಟ್ಟದಲ್ಲಿ ಯಾರಿಗೂ ಬೇಡವಾಗಿದ್ದ ಶಾಲೆ ಈಗ ತಾಲೂಕಿನ ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಹೆಮ್ಮಡಗಿಯಲ್ಲಿ ಅಕ್ಷರ ಕ್ರಾಂತಿ: ತಾಲೂಕಿನಲ್ಲಿಯೇ ಹೆಮ್ಮಡಗಿ ಅತ್ಯಂತ ಹಿಂದುಳಿದ ಗ್ರಾಮ. ಇಲ್ಲಿ ಬಡತನ, ದಾರಿದ್ರ್ಯ. ಮೂಢನಂಬಿಕೆ, ಅನಕ್ಷರತೆ ತಾಂಡವಾಡುತ್ತಿತ್ತು. ಇಲ್ಲಿ ಕೃಷಿ ಚಟುವಟಿಕೆ ಮುಖ್ಯ ಉದ್ಯೋಗವಾಗಿದೆ. ಅಕ್ಷರ ಕಲಿಕೆಯಲ್ಲಿ ಗ್ರಾಮ ಬಹಳ ದೂರ ಉಳಿದಿತ್ತು.
ಹೀಗಾಗಿ ತಾಲೂಕಿನಲ್ಲಿಯೇ ಇದೊಂದು ಕುಗ್ರಾಮವಾಗಿ ಮಾರ್ಪಟ್ಟಿತ್ತು. ಇಂತಹ ಸಂದರ್ಭದಲ್ಲಿ ಅಕ್ಷರ ಕ್ರಾಂತಿ ಮೂಡಿಸಿ ಮನೆಮನೆಗೂ ಶಿಕ್ಷಣ ತಲುಪಿಸಿದ ಹೆಗ್ಗಳಿಕೆ ಶಾಲೆ ಮುಖ್ಯ ಶಿಕ್ಷಕರಿಗೆ ಸಲ್ಲುತ್ತದೆ.

ಶಿಕ್ಷಕರ ಕಾಳಜಿ: ಕಳೆದ 17 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ ಅವರ ಶೈಕ್ಷಣಿಕ ಕಾಳಜಿಯೇ ಶಾಲೆ ಪ್ರಗತಿ ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ. ಇಬ್ಬರೇ ಶಿಕ್ಷಕರಿದ್ದು, 1ರಿಂದ 5ನೇ ತರಗತಿವರೆಗೆ ಒಟ್ಟು 103 ಮಕ್ಕಳ ದಾಖಲಾತಿಯಿದೆ. ಕಲಿಕೆ ಬಗ್ಗೆ ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕ ಅಪಾರ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಶಾಲೆ ಚಿತ್ತಾಕರ್ಷಕ: ಮಕ್ಕಳನ್ನು ಆಕರ್ಷಿಸಲು ಶಾಲೆ ಸೌಂದರೀಕರಣ ಹೆಚ್ಚಿಸಲಾಗಿದೆ. ಶಾಲೆಯೊಳಗಿನ ಮತ್ತು ಹೊರಗಿನ ಪ್ರತಿ ಗೋಡೆಗಳ ಮೇಲೆ ಚಿತ್ತಾಕರ್ಷಕವಾದ ವಿವಿಧ ಚಿತ್ರ ಬಿಡಿಸಲಾಗಿದೆ. ಇವು ನೋಡುಗರನ್ನು ತಮ್ಮತ್ತ ಸೆಳೆಯುತ್ತಿವೆ.

ಕಲಾವಿದರಾದ ಶಿಕ್ಷಕರು: ಶಾಲೆ ಅಂದಗೊಳಿಸಬೇಕು ಎಂಬ ಹಿನ್ನೆಲೆಯಲ್ಲಿ ಯೋಜನೆ ರೂಪಿಸಿ ಸ್ವಂತ ಹಣ ವಿನಿಯೋಗಿಸಿ ಎಲ್ಲ ಗೋಡೆಗಳ ಮೇಲೆ ನಲಿಕಲಿಗೆ ಸಂಬಂಧಿಸಿದ ಚಿತ್ರಗಳನ್ನು ಶಿಕ್ಷಕರೇ ಬಿಡಿಸಿದ್ದಾರೆ. ಶಿಕ್ಷಕರ ಈ ಯೋಜನೆಗೆ ಪಕ್ಕದ ಚೌಡೇಶ್ವರಿಹಾಳ ಗ್ರಾಮದ ಶಿಕ್ಷಕಿ ಶಿವಲೀಲಾ ಅವರು ಕೈಜೋಡಿಸಿ ಚಿತ್ರಗಳ ನಕ್ಷೆ ಬಿಡಿಸಿಕೊಟ್ಟರು. ಇದಕ್ಕೆ ಶಿಕ್ಷಕರು ಬಣ್ಣ ತುಂಬಿ ಜೀವ ಕಳೆ ನೀಡಿದ್ದಾರೆ.

ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕಿನ ನಕಾಶೆ, ನಲಿಕಲಿಗೆ ಸಂಬಂಧಪಟ್ಟ ಕಾಗುಣಿತಾಕ್ಷರಗಳು, ವರ್ಣಮಾಲೆ, ವ್ಯಂಜನಾಕ್ಷರಗಳು, ಸಂಖ್ಯೆಗಳ ಚಿತ್ರಪಟಗಳನ್ನು ನೇತು ಹಾಕಲಾಗಿದೆ. ಇತಿಹಾಸಕಾರರು, ಸಾಹಿತಿಗಳು, ವಿಜ್ಞಾನಿಗಳು, ದಾರ್ಶನಿಕರು, ಹೋರಾಟಗಾರರು, ಶರಣ-ಸಂತರ ಚಿತ್ರಗಳನ್ನು ಬಿಡಿಸಲಾಗಿದೆ. ಕಲಿಕೆಗೆ ಚಿತ್ರ ಪೂರಕ: ಶಾಲೆಯಲ್ಲಿ ಬಿಡಿಸಿರುವ ಪ್ರತಿ ಚಿತ್ರವೂ ಕಲಿಕೆಗೆ ಪೂರಕವಾಗಿದೆ. ಟಾಮಂಜರಿ, ಸಂಗೀತ ನುಡಿಸುವುದು. ಸಂಗೀತ ಆಲಿಸುವುದು, ಶಾಲೆಯತ್ತ ಹೆಜ್ಜೆ, ಪರಿಸರ ಜಾಗೃತಿ, ಜಲ ಸರಂಕ್ಷಣೆ, ಮಿತ ನೀರು ಬಳಕೆ, ಆರೋಗ್ಯ ರಕ್ಷಣೆ, ಶಿಕ್ಷಣದ ಮಹತ್ವ, ಶಿಸ್ತು, ಸಂಯಮ, ಸಮವಸ್ತ್ರ, ಮನೆಯೇ ಮೊದಲ ಪಾಠಶಾಲೆ, ಶುಚಿತ್ವ, ಶೌಚಾಲಯ ಮಹತ್ವ, ಇತಿಹಾಸ ಸೇರಿದಂತೆ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ. ಈ ಎಲ್ಲವುಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಕವಾಗಿದೆ.

ಶಾಲೆ ಹೆಗ್ಗಳಿಕೆ: 2008-09ರಲ್ಲಿ ಅಂದಿನ ರಾಜ್ಯ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಜಿ. ಕುಮಾರನಾಯಕ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಾಲೆ ಮಾದರಿಯಾಗಿಟ್ಟುಕೊಂಡು ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೂ ನಲಿಕಲಿ ಅಳವಡಿಸಿರುವುದು
ಇದರ ಹೆಗ್ಗಳಿಕೆ. ನಂತರ ಆಗಸ್ಟ್‌ 2009ರಂದು ಶಿಕ್ಷಣ ಯೋಜನಾ ನಿರ್ದೇಶಕ ಸೆಲ್ವಕುಮಾರ್‌ ಮತ್ತು ಅಜೀಂ ಪ್ರೇಮ್‌ಜೀ ಸಂಸ್ಥಾಪಕ ಅಜೀಂ ಪ್ರೇಮ್‌ಜೀ ಜಂಟಿಯಾಗಿ ಭೇಟಿ ನೀಡಿ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಶಾಲೆ ಅಭಿವೃದ್ಧಿ ಹಿನ್ನೋಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬೇಕಿದೆ ಮೂಲಸೌಲಭ್ಯ: ಗ್ರಾಮದ ಒಬ್ಬ ವಿದ್ಯಾರ್ಥಿಯೂ ಖಾಸಗಿ ಶಾಲೆ ಕಡೆಗೆ ಮುಖಮಾಡಿಲ್ಲ. ಗ್ರಾಮದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸುತ್ತಾರೆ. ಕಳೆದೆರಡು ವರ್ಷಗಳಿಂದ ಶಾಲೆ ವಿದ್ಯಾರ್ಥಿಗಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಲಿತ ಅನೇಕರು
ಉನ್ನತ ಹುದ್ದೆಯಲ್ಲಿದ್ದಾರೆ.

ಟಾಪ್ ನ್ಯೂಸ್

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.