ಮಕ್ಕಳ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸಿ

ಶಾಲಾ ಪೂರ್ವ ಶಿಕ್ಷಣ ಬಲ ವರ್ಧನೆಯಲ್ಲಿ ಕಾರ್ಯಕರ್ತೆಯರ ಪಾತ್ರ ದೊಡ್ಡದು

Team Udayavani, Jan 5, 2020, 5:27 PM IST

5-January-27

ಸುರಪುರ: ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳಿಗೆ ಸಾಮಾನ್ಯ ಜ್ಞಾನ ನೀಡುವ ಮೂಲಕ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದ್ದು, ಮಕ್ಕಳ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸುವಂತೆ ಗ್ರೇಡ್‌-2 ತಹಶೀಲ್ದಾರ್‌ ಸೋಫಿಯಾಸುಲ್ತಾನ್‌ ಸಲಹೆ ನೀಡಿದರು.

ನಗರದ ಸ್ತ್ರೀಶಕ್ತಿ ಭವನದಲ್ಲಿ ಜಿಪಂ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ಕಲಿಕಾ ಟಾಟಾ ಟ್ರಸ್ಟ್‌ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಶಾಲಾ ಪೂರ್ವ ಶಿಕ್ಷಣ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಕಲಿಕಾ ಟಾಟಾ ಟ್ರಸ್ಟ್‌ ಜಿಲ್ಲಾ ವ್ಯವಸ್ಥಾಪಕಿ ಹಾಗೂ ಸಂಪನ್ಮೂಲ ವ್ಯಕ್ತಿ ಮಲ್ಲಮ್ಮ ಬಿರಾದಾರ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗಾಗಿ ಸರ್ಕಾರ ಟಾಟಾ ಟ್ರಸ್ಟ್‌ ಸಹೋಗದೊಂದಿಗೆ ಅನುಷ್ಠಾನಗೊಳಿಸಿದೆ. ಕಾರ್ಯಕರ್ತೆಯರು ಶಿಬಿರದಲ್ಲಿ ಕಲಿತ ಅಂಶಗಳನ್ನು ಮಕ್ಕಳಿಗೆ ಕಲಿಸಿಕೊಡುವ ಮೂಲಕ ಮಕ್ಕಳ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸಬೇಕು ಎಂದರು.

ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ಕಾರ್ಯಕರ್ತೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮಕ್ಕಳಲ್ಲಿ ಶಿಸ್ತಿನೊಂದಿಗೆ ಅಕ್ಷರಭ್ಯಾಸ ಮತ್ತು ಸಾಮಾನ್ಯ ಜ್ಞಾನ ತಿಳಿಸಿಕೊಡುವುದರಿಂದ ಮಕ್ಕಳ ಬೌದ್ಧಿಕತೆ ಬೆಳವಣಿಗೆಯಾಗುತ್ತದೆ. ಆದ್ದರಿಂದ ಕಾರ್ಯಕರ್ತೆಯರು ಹೆಚ್ಚಿನ ಹೊರೆ ಎಂದು ಭಾವಿಸದೇ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ-ಮೇಲ್ವಿಚಾರಕಿ ಶಶಿಕಲಾ ಗಾಳಿ ಮಾತನಾಡಿ,
ಮಕ್ಕಳ ಭಾಷಾ ಬೆಳವಣಿಗೆ, ಬೆಳಕು, ಶಬ್ದ ರೂಪ, ವಿಧಾನ, ಸಾಮಾನ್ಯ ಗಣಿತ, ವಸ್ತುವಿನ ಸ್ಥಾನ ಪಲ್ಲಟ, ಪದಬಂಧ, ಪದಗಳ ಜೋಡಣೆ, ಪದಗಳ ಮರು ಬಳಕೆ, ಪ್ರಾಣಿ-ಪಕ್ಷಿ ಸೇರಿದಂತೆ ಇತರೆ ದಿನ ಬಳಕೆ ವಸ್ತುಗಳ ಕುರಿತು ಕಾರ್ಯಕರ್ತೆಯರು ಮಕ್ಕಳಿಗೆ ತಿಳಿಸಿಕೊಡಬೇಕು. ಕಥೆ, ಹಾಡು, ನೃತ್ಯದ ಮೂಲಕ ಜ್ಞಾನದ ಅರಿವು ಮೂಡಿಸಬೇಕು ಎಂದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಮೀನಾಕ್ಷಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತ ನಾಡಿ, 17 ಕ್ಲಸ್ಟರ್‌ಗಳಲ್ಲಿ ತರಬೇತಿ ನಡೆಯುತ್ತಿದೆ. ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನ ಕುರಿತು ಕಲಿಸಿಕೊಡಲಾಗಿದೆ. ಇನ್ನು ಮುಂದೆ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ ಎಂದರು. ಮೇಲ್ವಿಚಾರಕಿ ಪದ್ಮಾ ನಾಯಕ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

1-asdadad

ಜಮ್ಮುವಿನ ಹೆದ್ದಾರಿಯಲ್ಲಿ ಸುರಂಗ ಕುಸಿತ : 9 ಮಂದಿ ಅವಶೇಷಗಳ ಅಡಿ ; ರಕ್ಷಣಾ ಕಾರ್ಯ

CM-@-2

ಬಿಬಿಎಂಪಿ ಚುನಾವಣೆ : ನಾವು ಸಿದ್ದರಿದ್ದೇವೆ ಎಂದ ಸಿಎಂ ಬೊಮ್ಮಾಯಿ

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31  ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ

cm-bommai

ಬೆಂಗಳೂರು; ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ : ಸಿಎಂ ಬೊಮ್ಮಾಯಿ

1-ddsad

ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು

cm-@-3

ಸಿಎಂ ದಾವೋಸ್ ಪ್ರವಾಸ ಮೊಟಕು?; ಇಂದು ದಿಲ್ಲಿಗೆ ಹಠಾತ್ ಭೇಟಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

bhagath

ಭಗತ್‌-ವಿವೇಕರ ಪಾಠ ಕೈಬಿಟ್ಟಿದ್ದು ಸರಿಯಲ್ಲ

rain

ಕೊಪ್ಪಳ, ಗದಗದಲ್ಲಿ ನಿರಂತರ ಮಳೆ: ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

1-ddsad

ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು

9

ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪನೆ ದಿನಾಚರಣೆ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

1-asdadad

ಜಮ್ಮುವಿನ ಹೆದ್ದಾರಿಯಲ್ಲಿ ಸುರಂಗ ಕುಸಿತ : 9 ಮಂದಿ ಅವಶೇಷಗಳ ಅಡಿ ; ರಕ್ಷಣಾ ಕಾರ್ಯ

CM-@-2

ಬಿಬಿಎಂಪಿ ಚುನಾವಣೆ : ನಾವು ಸಿದ್ದರಿದ್ದೇವೆ ಎಂದ ಸಿಎಂ ಬೊಮ್ಮಾಯಿ

1dgfdgdf

ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ

bhagath

ಭಗತ್‌-ವಿವೇಕರ ಪಾಠ ಕೈಬಿಟ್ಟಿದ್ದು ಸರಿಯಲ್ಲ

10

ಸವಾಲಿನ ಪಾತ್ರದಲ್ಲಿ ಮಯೂರಿ : ಅಂಧ ಪಾತ್ರದ ಮೇಲೆ ಚೆಂದದ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.