ರಸ್ತೆಯಲ್ಲಿ ಉಕ್ಕಿಹರಿದ ಮಲಮೂತ್ರ

ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ದುರ್ವಾಸನೆಗೆ ಮೂಗು ಮುಚ್ಚಿಕೊಂಡ ಜನರು

Team Udayavani, Nov 2, 2019, 4:43 PM IST

ಜಿ.ಟಿ. ಘೋರ್ಪಡೆ
ತಾಳಿಕೋಟೆ: ಪಟ್ಟಣದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 22 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಒಳಚರಂಡಿ ಚೇಂಬರ್‌ ನಿಂದ ಮಲಮೂತ್ರವೆಲ್ಲ ನಡು ರಸ್ತೆಯಲ್ಲಿ ಹರಿಯತೊಡಗಿದೆ.

ಪಟ್ಟಣದ ಬಸ್‌ ನಿಲ್ದಾಣದ ಮುಂದುಗಡೆಯ ಜನದಟ್ಟನೆ ಹಾಗೂ ವಾಹನ ಸಂಚಾರ ಹೆಚ್ಚಿಗೆ ಇರುವ ಜೋಡುಪಥ ಮುಖ್ಯರಸ್ತೆಯಲ್ಲಿಯೇ 2 ದಿನಗಳ ಹಿಂದೆ ಘಟನೆ ಜರುಗಿದೆ.

ದುರ್ವಾಸನೆಯಿಂದ ಅಂಗಡಿಕಾರರು ಹಾಗೂ ಜನ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಸಂಬಂಧಿಸಿದ ಅ ಧಿಕಾರಿಗಳು ಇಲ್ಲಿವರೆಗೆ ಕ್ಯಾರೇ ಎಂದಿಲ್ಲ. ಪಟ್ಟಣದ ತಿಲಕ ರಸ್ತೆಯಲ್ಲಿಯ ಬಡಾವಣೆ
ಜನರು ಹಾಗೂ ಕನ್ನಡ ಶಾಲಾ ಮೈದಾನದ ಎದುರು ನಿರ್ಮಿಸಲಾದ ಶೌಚಾಲಯದ ಸಂಪರ್ಕವನ್ನು ಈ ಒಳಚರಂಡಿ ಚೆಂಬರ್‌ಗೆ ಅಳವಡಿಸಿಸಲಾಗಿದೆ.

ಪರಿಣಾಮ ಮುಖ್ಯ ರಸ್ತೆಯಲ್ಲಿರುವ ಎಲ್ಲ ಚೇಂಬರ್‌ ಗಳಲ್ಲಿ ಮಲಮೂತ್ರ ತುಂಬಿಕೊಂಡಿದೆ. ಆದರೆ ಬಸ್‌ ನಿಲ್ದಾಣದ ಮುಂದಿನ ಮುಖ್ಯ ರಸ್ತೆಯಲ್ಲಿನ ಚೇಂಬರ್‌ ಒಂದರಿಂದ ಮಲ ಮೂತ್ರವೆಲ್ಲವೂ ಹೊರಗಡೆ ಸಿಡಿದು ಉಕ್ಕಿ ಬರುತ್ತ ನಡು ರಸ್ತೆಯಲ್ಲಿ ಹರಿಯತೊಡಗಿದೆ. ವಾಹನಗಳ ಸಂಚಾರ ವೇಳೆ ಕೆಲವರಿಗೆ ಮಲ ಮೂತ್ರ ಸಿಡಿದು ದುರ್ವಾಸನೆ ತಾಳದೇ ವಾಂತಿಯಾದ ಪ್ರಸಂಗಗಳು ಜರುಗುತ್ತಿವೆ.

ಈ ಮುಖ್ಯ ರಸ್ತೆ ಮೂಲಕವೇ ಬಸ್‌ ನಿಲ್ದಾಣಕ್ಕೆ ದಿನನಿತ್ಯ ಸಾವಿರಾರು ಪ್ರಯಾಣಿಕರು ಮಲ ಮೂತ್ರದ ನಡುವೆಯೇ ಮೂಗು ಮುಚ್ಚಿಕೊಂಡು ಸಂಚರಿಸತೊಡಗಿದ್ದಾರೆ ಈ ವ್ಯವಸ್ಥೆಯಿಂದ ಕೆಲವು ಮಹಿಳೆಯರು ಅಸಹ್ಯಪಟ್ಟುಕೊಂಡು ದಾರಿ ಬದಲಿಸಿ ನಿಲ್ದಾಣ ಪ್ರವೇಶಿಸುತ್ತಿರುವುದು ಸಾಮಾನ್ಯವಾಗಿದೆ. ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಸಂಪೂರ್ಣ ಕಳಪೆಯಾಗಿದೆ ಎಂದು ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಈ ಹಿಂದೆ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರು.

ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿ ರಾಜ್ಯದ ಗಮನವನ್ನು ಸೆಳೆದಿದ್ದರು. ಆ ವೇಳೆ ಒಳಚರಂಡಿ ಮಂಡಳಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಥರ್ಡ್‌ ಪಾರ್ಟಿಯಿಂದ ಕಾಮಗಾರಿ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖೀತ ಭರವಸೆ ನೀಡಿದ್ದರು.

ಆದರೆ ಥರ್ಡ್‌ ಪಾರ್ಟಿ ಕೆಲವೆಡೆ ಅವೈಜ್ಞಾನಿಕವಾಗಿ ಒಳ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೆಲವು ಜಾಗೆಗಳನ್ನು ಗುರುತಿಸಿಕೊಟ್ಟಿತ್ತು. ಆದರೆ ಥರ್ಡ್‌ ಪಾರ್ಟಿ ನೀಡಿದ ವರ ದಿಗೂ ಬೆಲೆ ನೀಡದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮೂಗಿಗೆ ತುಪ್ಪ ಸವರಿದಂತೆ ಸರಿಪಡಿಸುವ ಭರವಸೆ ನೀಡಿದರೂ ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆಯಲಿಲ್ಲ.

ಕಾಮಗಾರಿ ಅಪೂರ್ಣ ಹಿನ್ನೆಲೆಯಲ್ಲಿ ಇನ್ನೂ ಒಳಚರಂಡಿ ಉಸ್ತುವಾರಿಯನ್ನು ಪುರಸಭೆ ವಹಿಸಿಕೊಂಡಿಲ್ಲ. ಸುಮಾರು ಒಂದೇ ವರ್ಷದಲ್ಲಿ ಇಂತಹ ಎರಡ್ಮೂರು ಪ್ರಕರಣ ನಡೆದಿದೆ. ಆಗ ಜನತೆಗೆ ಪ್ರತಿಭಟನೆ ಹಾದಿ ಹಿಡಿಯುವ ಹೊತ್ತಿಗೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ದುರಸ್ತಿ ಮಾಡಿದ್ದರು.

ಆದರೆ ಮತ್ತೆ ಮತ್ತೂಂದು ಚೇಂಬರ್‌ದಿಂದ ಮಲ ಮೂತ್ರ ಉಕ್ಕಿ ಹರಿಯುತ್ತಿರುವದು ಒಳಚರಂಡಿ ಕಾಮಗಾರಿ ಕಳಪೆ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈ ಅವೈಜ್ಞಾನಿಕ ಕಳಪೆಮಟ್ಟದ ಒಳಚರಂಡಿ ಕಾಮಗಾರಿಯಿಂದ ಇಡಿ ತಾಳಿಕೋಟೆ ಪಟ್ಟಣದ ಜನರಿಗೆ ಮತ್ತು ಮಹಿಳೆಯರಿಗೆ ಶಾಲಾ ಮಕ್ಕಳಿಗೆ ಮಲಮೂತ್ರದ ದುರ್ವಾಸನೆ ಅಸಯ್ಯ ಹುಟ್ಟುವಂತೆ ಮಾಡಿದೆ. ಈ ಒಳಚರಂಡಿ ಕಾಮಗಾರಿ ಕೈಗೊಂಡ ಅಧಿಕಾರಿಗಳ ವಿರೂದ್ಧ ಪಟ್ಟಣದ ಜನತೆ ರೋಶಿಹೋಗಿ ಪ್ರತಿಭಟನೆ ಹಾದಿ ಹಿಡಿಯುವ ಮುಂಚೆ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಬರುವ 2020 ರ ಫೆಬ್ರುವರಿ 5ರಿಂದ ನಡೆಸಲು ನಿರ್ಧರಿಸಲಾಗಿದೆ. ಮಂಗಳವಾರ ಜಿಲ್ಲಾ ಅಧಿಕಾರಿ ಸಭಾಂಗಣದಲ್ಲಿ ನಡೆದ...

  • ತುಮಕೂರು: ನಗರ ಸ್ಮಾರ್ಟ್‌ಸಿಟಿಯಾಗುವ ಬದಲು ಧೂಳು ಸಿಟಿಯಾಗಿದೆ. ಅಧಿಕಾರಿಗಳು ಜನರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಶೀಘ್ರ...

  • ಮಾಗಡಿ: ಕೆಂಪೇಗೌಡರ ತವರೂರು ಹಾಗೂ ಕಲಾರಂಗ ಸಜ್ಜಿಕೆ ಸಾಂಸ್ಕೃತಿಕ ತೊಟ್ಟಿಲು ಎಂದೆಲ್ಲ ಕರೆಯಿಸಿಕೊಳ್ಳುವ ಮಾಗಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ...

  • ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಾಸಕ ಎಂ . ಶ್ರೀನಿವಾಸ್‌ 15.86 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ನಗರದ...

  • ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಗೆ ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಜಿಲ್ಲಾದ್ಯಂತ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌...

ಹೊಸ ಸೇರ್ಪಡೆ