ಮಾದಯ್ಯನ ಬದುಕೇ ಸಮಾಜಕ್ಕೆ ಸಂದೇಶ

Team Udayavani, Nov 4, 2019, 2:35 PM IST

ತಾಳಿಕೋಟೆ: ಬಸವಣ್ಣನವರ ಸಮಕಾಲಿನಲ್ಲಿ ಜನ್ಮ ತಾಳಿದ ಶರಣ ಹೂಗಾರ ಮಾದಯ್ಯನವರ ಬದುಕು, ಜೀವನ, ಕಾರ್ಯಕ್ಷಮತೆ ಸಮಾಜಕ್ಕೆ ಸಂದೇಶವಾಗಿದೆ ಎಂದು ಮುದ್ದೇಬಿಹಾಳ ಶಾಸಕ.ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

ರವಿವಾರ ತಾಲೂಕು ಹೂಗಾರ ಸಮಾಜ ಸೇವಾ ಸಂಘ ವಿಠ್ಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದದ ಶರಣ ಹೂಗಾರ ಮಾದಯ್ಯನವರ ಜಯಂತಿ ಹಾಗೂ ಹೂಗಾರ ಸಮಾಜದ ಪ್ರಥಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಸತ್ಯ ಪರಂಪರೆ ಹೊಂದಿದ ನಾಡಾಗಿದೆ. ಈ ದೇಶದಲ್ಲಿ ಅನೇಕ ಮಹಾಶರಣರು ಹುಟ್ಟಿ ಸಮಾಜಗಳಿಗೆ ಪ್ರೇರಣೆ ಕೊಟ್ಟು ಹೋಗಿದ್ದಾರೆ. ಬಸವಣ್ಣನವರ ಸಮಕಾಲಿನಲ್ಲಿ ಜನ್ಮ ತಾಳಿದ ಶರಣ
ಮಾದಯ್ಯನವರು ಕಾಯಕದ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದವರಾಗಿದ್ದಾರೆ.

ಹೂಗಾರ ಸಮಾಜ ದೇಶದಲ್ಲಿಯೇ ಅತ್ಯಂತ ಪಾವಿತ್ರ್ಯ ಪಡೆದುಕೊಂಡಂತಹ ಸಮಾಜವಾಗಿದೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಈ ಹುಟ್ಟು ಸಾವಿನ ಮಧ್ಯ ಸಮಾಜಕ್ಕಾಗಿ ನಾನು ಏನು ಮಾಡಿದೇ ಎಂಬುದೇ ಮುಖ್ಯವಾಗುತ್ತದೆ. ಇಂದಿನ ಜಾತಿ ವ್ಯವಸ್ಥೆಯಲ್ಲಿ ಬೇರೆ ಬೇರೆ ಕಾಣುತ್ತಿದ್ದರೂ ನಾವೇಲ್ಲರೂ ಒಂದೇ ಆಗಿದ್ದೇವೆ.

ನಾವುಗಳು ಹಿಂದೂಗಳು ಎಂಬ ಭಾವನೆಯೊಂದಿಗೆ ಜೊತೆಯಾಗಿ ಸಾಗಬೇಕಿದೆ. ಹೂಗಾರ ಸಮಾಜ ಅತ್ಯಂತ ಅಲ್ಪ ಸಮಾಜವಾಗಿದ್ದರೂ ಹೂವಿನಷ್ಟೇ ಮೃದುವಾದ ಸಮಾಜವಾಗಿದೆ. ಜನ್ಮ ತಾಳಿದ ತೊಟ್ಟಿಲದ ಶೃಂಗಾರದಿಂದ ಹಿಡಿದು ದೇವರ ಮುಡಿಗೇರುವ ಹೂವನ್ನು ತೊಡಿಸುವ ಸಮಾಜವಾಗಿದೆ.

ಚಿಕ್ಕ ಸಮಾಜಗಳಲ್ಲಿಯೇ ಚೊಕ್ಕ ಸಮಾಜವಾಗಿರುವ ಹೂಗಾರ ಸಮಾಜದಲ್ಲಿ ಶ್ರೀಮಂತರೂ ಇದ್ದಾರೆ. ಅಂತವರು ಸಮಾಜದಲ್ಲಿನ ದುರ್ಬಲರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದರೊಂದಿಗೆ ಮೇಲಕ್ಕೆತ್ತುವ ಕಾರ್ಯ ಮಾಡಬೇಕಿದೆ. ಸಮಾಜದಲ್ಲಿರುವ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯ ತಾಯಂದಿರರು ಮಾಡಬೇಕಿದೆ ಎಂದರು.

ಲಕ್ಷ ನುಡಿ ಮುತ್ತುಗಳು ಗ್ರಂಥ ಲೋಕಾರ್ಪಣೆ ಮಾಡಿದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಸತ್ಯ, ನಿಷ್ಠೆಯೊಂದಿಗೆ ದೈನಂದಿನ ಕಾಯಕದಲ್ಲಿರುವ ಹೂಗಾರ ಸಮಾಜ ಸಚ್ಚಾರಿತ್ರ್ಯ
ಸಮಾಜವಾಗಿದೆ. ದೇಶಕ್ಕೆ ಅವಶ್ಯವಾದಂತಹ ಈ ಸಮಾಜ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.

ಒಗ್ಗಟ್ಟಿನಲ್ಲಿ ಬಲವಿದೆ, ಛಲವಿದೆ ಎಂಬುದನ್ನು ಅಲ್ಪ ಜನರಿರುವ ಹೂಗಾರ ಸಮಾಜದವರು ಮಾದಯ್ಯನವರ ಜಯಂತಿ ಮೂಲಕ ಸಾಕ್ಷೀಕರಿಸಿದ್ದೀರಿ ಎಂದು ಹೂಗಾರ ಮಾದಯ್ಯನವರು ದೇಶಕ್ಕೆ ನೀಡಿದ ಕೊಡುಗೆಗಳ ಕುರಿತು ವಿವರಿಸಿದರು.

ಬೀದರ ನಿವೇದಿತಾ ಹೂಗಾರ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀದೇವಿ ಹೂಗಾರ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುಂಚೆ ಶರಣ ಹೂಗಾರ ಮಾದಯ್ಯನವರ ಭಾವಚಿತ್ರದ ಮೆರವಣಿಗೆಯ ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಮುಖ್ಯ ವೇದಿಕೆಗೆ ತಲುಪಿತು. ಮೆರವಣಿಗೆಗೆ ಜ್ಞಾನಭಾರತಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ವಿಠ್ಠಲಸಿಂಗ್‌ ಹಜೇರಿ ಚಾಲನೆ ನೀಡಿದರು.

ದಿವ್ಯ ಸಾನ್ನಿಧ್ಯವನ್ನು ಖಾಸ್ಗತೇಶ್ವರ ಮಠದ ಸಂಗಯ್ಯಮುತ್ಯಾ ವಿರಕ್ತಮಠ, ಕಾಗವಾಡದ ಗುರುದೇವಾಶ್ರಮದಯತೀಶ್ವ ರಾನಂದ ಮಹಾಸ್ವಾಮಿಗಳು ವಹಿಸಿದ್ದರು.

ಇದೇ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭೀಮರಾಯ ಹೂಗಾರ, ರೇಣುಕಾ ಹೂಗಾರ, ಜಗದೇವಿ ಹೂಗಾರ, ಬಸಮ್ಮಹೂಗಾರ, ಬಾಳವ್ವ ಹೂಗಾರ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ಶಿವಾನಂದ ದೇಸಾಯಿ, ಹಾಗೂ ಭೋಗಣ್ಣ ಹೂಗಾರ, ಕಾಡಪ್ಪ ಹೂಗಾರ, ಶರಣಪ್ಪ ಹೂಗಾರ, ಚಂದ್ರಶೇಖರ ಹೂಗಾರ, ಸಿದ್ದಪ್ಪ ಹೂಗಾರ, ಸುಭಾಷ್‌ ಪೂಜಾರ, ಮಹಾಂತೇಶ ಹೂಗಾರ, ಬಸವರಾಜ ಹೂಗಾರ, ಶಾಂತಾ ಪೂಜಾರಿ, ನಿಂಗಮ್ಮ ಹೂಗಾರ, ರಾಮಣ್ಣ ಪೂಜಾರಿ, ಕುಂಟಪ್ಪ ಹೂಗಾರ, ಸುಭಾಷ್‌ ಹೂಗಾರ, ಹನುಮಂತ ಹೂಗಾರ, ನಾಗಪ್ಪ ಹೂಗಾರ, ಸುಭಾಷ್‌ ಪೂಜಾರ, ಭೀಮಶಿ ಹೂಗಾರ, ಮಾನಪ್ಪ ಹೂಗಾರ, ಸಂತೋಷ ಹೂಗಾರ, ಚಂದ್ರಶೇಖರ ಹೂಗಾರ, ಸಿದ್ದರಾಮ ಹೂಗಾರ, ಅಮರೇಶ ಹೂಗಾರ, ಈಶ್ವರ ಹೂಗಾರ, ನಿಂಗಣ್ಣ ಪೂಜಾರಿ, ಅಮರಣ್ಣ ಹೂಗಾರ, ಸಂಗಣ್ಣ ಹೂಗಾರ, ಶರಣಪ್ಪ ಹೂಗಾರ, ಶಿವಾನಂದ ಹೂಗಾರ, ಬಸವರಾಜ ಹೂಗಾರ, ಹನುಮಂತ್ರಾಯ
ಹೂಗಾರ ಇದ್ದರು.

ಶಿವಾನಂದ ಹೂಗಾರ ಪ್ರಾಸ್ತಾವಿಕ ಮಾತನಾಡಿದರು. ಸಂಗನಬಸಪ್ಪ ಹೂಗಾರ ಸ್ವಾಗತಿಸಿದರು. ಮೇಘಾ ಪೂಜಾರಿ, ಶ್ರೀಕಾಂತ ಪತ್ತಾರ ನಿರೂಪಿಸಿದರು. ಮೇಘಾ ಹೂಗಾರ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ