ಶೋಷಣೆ ಮುಕ್ತರಾಗಲು ಶರಣರ ಆದರ್ಶ ಅಗತ್ಯ

ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ

Team Udayavani, Aug 15, 2019, 4:22 PM IST

ತುಮಕೂರಿನ ಟೌನ್‌ಹಾಲ್‌ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಾಮರಸ್ಯ ನಡಿಗೆಯನ್ನು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧªಲಿಂಗ ಸ್ವಾಮೀಜಿ ಮತ್ತು ವಿವಿಧ ಮಠಾಧೀಶರು ಚಾಲನೆ ನೀಡಿದರು.

ತುಮಕೂರು: ಅಜ್ಞಾನ, ಮೂಢನಂಬಿಕೆ, ಲಿಂಗ ತಾರತಮ್ಯ, ಭ್ರಷ್ಟಾಚಾರ, ಶೋಷಣೆಯಿಂದ ಮುಕ್ತ ವಾಗಲು ಶರಣರ ಆದರ್ಶ ಅಗತ್ಯವಾಗಿದೆ ಎಂದು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಸಿದ್ಧಿವಿನಾಯಕ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಕಾರ್ಯ ಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಕಲ್ಯಾಣದ ದಿನಗಳು ಅಗತ್ಯವಾಗಿದೆ. ವಚನಕಾರರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಿಸಲು ಮುಂದಾಗಿದ್ದರು. ಶರಣರ ಅರಿವಿನ ಮಾರ್ಗ ಯುವಕರಿಗೆ ತಿಳಿಸುವುದು ಮತ್ತೆ ಕಲ್ಯಾಣ ಅಭಿಯಾನದ ಮುಖ್ಯ ಉದ್ದೇಶ ಎಂದು ಹೇಳಿದರು.

ಸಾಮರಸ್ಯ ನಡಿಗೆಗೆ ಟೌನ್‌ಹಾಲ್ ಮುಂಭಾಗದಲ್ಲಿ ಚಾಲನೆ ನೀಡಿ, ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಾಮರಸ್ಯದ ನಡೆ, ಸಂವಾದ ಮತ್ತು ಚಿಂತನೆ ಬಿತ್ತುವುದರ ಮೂಲಕ ಬಸವಾದಿ ಶರಣರ ತತ್ವಗಳು ಜನಮನಸ್ಸಿಗೆ ಬಿತ್ತಬೇಕು ಎಂಬ ಉದ್ದೇಶ ಶ್ಲಾಘನೀಯ. 12ನೇ ಶತಮಾನ ವರ್ಗ, ವರ್ಣ, ಬೇಧ ಹೋಗಲಾಡಿಸಿ ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕಲು ಬೆಳಕು ಕೊಟ್ಟ ಕಾಲ ಎಂದು ಹೇಳಿದರು.

ಇಂದಿನ ಸಮಸ್ಯೆಗಳ ಪರಿಹಾರ ಶರಣರ ತತ್ವ ಗಳಿಂದ ಸಾಧ್ಯ. ಕಲ್ಯಾಣ ಎಂದರೆ ವ್ಯಕ್ತಿ ಮತ್ತು ಸಮಸ್ಯೆ ಹಿತ ಕಾಪಾಡುವಂತಹದ್ದು. ಪ್ರತಿಯೊಬ್ಬ ವ್ಯಕ್ತಿಯ ಬದುಕು ಹಸನುಗೊಳಿಸುವಂತಹದ್ದಾಗಿದೆ ಎಂದು ತಿಳಿಸಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರನ್ನೂ ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಡೆದ 12ನೇ ಶತಮಾನದ ಚಳವಳಿ ಎಲ್ಲ ಕಾಲಕ್ಕೂ ಪ್ರಸ್ತುತ. ಸಾಮಾನ್ಯ ಮನುಷ್ಯ ಮಹಾತ್ಮರಾ ಗುವುದಕ್ಕೆ ಶರಣರ ತತ್ವ, ಚಿಂತನೆ ಅಳವಡಿಸಕೊಳ್ಳ ಬೇಕಾಗಿದೆ ಎಂದು ಹೇಳಿದರು.

ಬದುಕು ನೇರ, ನಿಷ್ಠುರ, ಸರಳವಾಗಿರಬೇಕು. 12ನೇ ಶತಮಾನದಲ್ಲಿದ್ದ ಅಸಮಾನತೆ ತೊಡೆದು ಹಾಕಲು ವಚನಕಾರರು ಪ್ರಯತ್ನಿಸಿದ್ದರು. ವಚನ ಕಾರರು ಅಳವಡಿಸಿಕೊಂಡಿದ್ದ ಸೂತ್ರ ನಾವೂ ಅಳ ವಡಿಸಿಕೊಂಡರೆ ಭಗವಂತ ಒಲಿಯುತ್ತಾನೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ. ಶೇಖರ್‌, ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ, ಭೂಮಿಬಳಗ ಸೋಮಣ್ಣ, ರೆಡ್‌ಕ್ರಾಸ್‌ ಸಂಸ್ಥೆಯ ಎಸ್‌. ನಾಗಣ್ಣ, ಮೇಯರ್‌ ಲಲಿತಾ ರವೀಶ್‌, ಕದಳಿ ಬಳಗದ ಲೋಕೇಶ್ವರಿ ಪ್ರಭು ಇತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ