ಜಿಲ್ಲೆಯಲ್ಲಿ ರಂಗೇರಿದ 2ನೇ ಹಂತದ ಹಳ್ಳಿಫೈಟ್
Team Udayavani, Dec 24, 2020, 2:53 PM IST
ತುಮಕೂರು: ಕಳೆದ ಹದಿನೈದು ದಿನಗಳಿಂದ ಗ್ರಾಪಂ ಗದ್ದುಗೆ ಹಿಡಿಯಲು ಹಳ್ಳಿ ಹಳ್ಳಿಗಳ ವಾರ್ಡ್‌ಗಳಲ್ಲಿ ಧೂಳೆಬ್ಬಿಸಿ ಪ್ರಚಾರದ ಯುದ್ಧ ಮಾಡಿ ಗೆಲುವಿಗಾಗಿಇನ್ನಿಲ್ಲದ ಶ್ರಮ ತೊಟ್ಟಿದ್ದ ಅಭ್ಯರ್ಥಿಗಳ ನಡುವಿನ ರಣಾಂಗಣದಲ್ಲಿ ಗೆದ್ದಿರುವವರು ಯಾರು ಎನ್ನುವುದು ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಆ ಮತ ಪೆಟ್ಟಿಗೆಗೆ ಜಿಲ್ಲಾಡಳಿತ ಎಲ್ಲಾ ಕಡೆ ಭಾರೀ ಭದ್ರತೆ ಒದಗಿಸಿದ್ದರೆ. ಡಿ.27 ರಂದು ನಡೆಯುವ ಎರಡನೇ ಹಂತದ ಹಳ್ಳಿ ಯುದ್ಧಕ್ಕೆರಣಾಂಗಣ ಸಿದ್ಧವಾಗಿದ್ದು ಗೆಲುವಿಗಾಗಿಅಭ್ಯರ್ಥಿಗಳು ಮತದಾರರ ಓಲೈಕೆಯುದ್ಧ ಆರಂಭಿಸಿದ್ದಾರೆ. ಈಗ ನಡೆದಿರುವ ಮೊದಲ ಹಂತದ ಗ್ರಾಪಂ ಚುನಾವಣೆಯ ಮತ ಪೆಟ್ಟಿಗೆಯನ್ನುಆಯಾ ತಾಲೂಕು ಕೇಂದ್ರದ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ.
ತುಮಕೂರು ತಾಲೂಕಿನ ಮತಪೆಟ್ಟಿಗೆಗಳನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿರುವ ಸ್ಟ್ರಾಂಗ್ ಕೊಠಡಿಯಲ್ಲಿಟ್ಟು ಬಿಗಿ ಭದ್ರತೆ ಒದಗಿಸಲಾಗಿದೆ. ಜಿಲ್ಲೆಯ ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲೂಕಿನಲ್ಲಿ ಮೊದಲ ಹಂತದ 168 ಗ್ರಾಪಂಗಳ 2594 ಸದಸ್ಯ ಸ್ಥಾನಗಳಿಗೆಸ್ಪರ್ಧಿಸಿದ್ದ 7142 ಅಭ್ಯರ್ಥಿಗಳ ಹಣೆ ಬರಹ ವನ್ನುಮತದಾರ ಪ್ರಭು ಅಭ್ಯರ್ಥಿಯ ಗುರುತಿನ ಮುಂದೆ ಮುದ್ರೆ ಹೊತ್ತುವ ಮೂಲಕ ಬರೆದು ಬಿಟ್ಟಿದ್ದಾನೆ.
ರಂಗೇರುತ್ತಿದೆ ಎರಡನೇ ಹಂತದ ಕದನ: ಜಿಲ್ಲೆಯ ಐದು ತಾಲೂಕುಗಳಲ್ಲಿ ನಡೆದ ಮೊದಲ ಹಂತದ ಗ್ರಾಪಂ ಚುನಾವಣೆ ಶಾಂತಿಯುತವಾಗಿ ನಡದಿದ್ದು ಡಿ.27 ರಂದುಜಿಲ್ಲೆಯ ಐದು ತಾಲೂಕುಗಳಲ್ಲಿ ನಡೆಯಲಿರುವ ಹಳ್ಳಿ ಕದನ ತೀವ್ರವಾಗಿ ರಂಗೇರುತ್ತಿದೆ. ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಶಿರಾ, ಮಧುಗಿರಿ ತಾಲೂಕಿನ 161 ಗ್ರಾಪಂಗಳ 2543 ಸ್ಥಾನಗಳಿಗೆ ನಡೆಯುವ ಚುನಾವಚಣೆಯಲ್ಲಿ 8781 ಅಭ್ಯರ್ಥಿಗಳು ಕಣದಲ್ಲಿ ಇದ್ದು ಅಭ್ಯರ್ಥಿಗಳು ಮತದಾರರ ಓಲೈಕೆಯಲ್ಲಿ ತಲೀನ ರಾಗಿದ್ದು ರಾಜಕೀಯ ರಂಗು ಪಡೆದಿದೆ.
ಮೊದಲ ಹಂತದಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಎಲ್ಲಾಕಡೆ ಬಿಜೆಪಿ ಬೆಂಬಲಿಗರಿಗೆ ಉತ್ತಮ ವಾತಾವರಣ ಕಂಡು ಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದ ಬೆಂಬಲಿಗರು ಗೆಲ್ಲುವುದು ಖಚಿತ, ಎರಡನೇ ಹಂತದ ಚುನಾವಣೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ನಮ್ಮಕಾರ್ಯಕರ್ತರು ಮುಖಂಡರು ಶ್ರಮಿಸುತ್ತಿದ್ದಾರೆ.– ಬಿ.ಸುರೇಶ್ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ
ಮೊದಲ ಹಂತದ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಬೆಂಬಲಿತಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಈಗ ಡಿ.27 ರಂದು ನಡೆಯುವ ಚುನಾವಣೆ ಪ್ರಚಾರವನ್ನು ಕಾರ್ಯಕರ್ತರು, ಮುಖಂಡರು ಮಾಡುತ್ತಿದ್ದು ಅದರಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದಕಾರ್ಯಕರ್ತರು ಗೆಲ್ಲುತ್ತಾರೆ. – ಆರ್.ಸಿ.ಆಂಜನಪ್ಪ, ಜಿಲ್ಲಾಧ್ಯಕ್ಷ, ಜೆಡಿಎಸ್
ಜಿಲ್ಲೆಯಲ್ಲಿ ಮೊದಲಿನಿಂದಲೂ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿಗರು ಹೆಚ್ಚು ಸಂಖ್ಯೆಯಲ್ಲಿ ಗೆಲ್ಲುತ್ತಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಲು ಎಲ್ಲರೂಒಟ್ಟಾಗಿ ಕೆಲಸ ಮಾಡಿದ್ದೇವೆ. ತುಮಕೂರು, ಚಿಕ್ಕನಾಯಕನಹಳ್ಳಿ ಸೇರಿದಂತೆ ಎಲ್ಲಾಕಡೆ ಸಭೆ ನಡೆಸಿ ಕಾರ್ಯಕರ್ತರ ಗೆಲುವಿಗೆ ಸ್ಫೂರ್ತಿ ನೀಡಿದ್ದೇವೆ. – ಎಸ್.ಪಿ.ಮುದ್ದಹನುಮೇಗೌಡ,ಮಾಜಿ ಸಂಸದ
ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಪಂ ಚುನಾವಣೆ ಶಾಂತಿಯುತವಾಗಿ ನಡೆದಿದೆ. ತುಮಕೂರು,ಕುಣಿಗಲ್, ಗುಬ್ಬಿ,ಕೊರಟಗೆರೆ ಹಾಗೂ ಪಾವಗಡ ತಾಲೂಕಿನಲ್ಲಿ ಮೊದಲ ಹಂತದ 168 ಗ್ರಾಪಂಗಳ ಚುನಾವಣೆಯಲ್ಲಿ ಶೇ.88.50ರಷ್ಟು ಮತದಾನವಾಗಿದೆ. ಎಲ್ಲಾ ಮತಪೆಟ್ಟಿಗೆಗಳನ್ನು ಆಯಾ ತಾಲೂಕಿನ ಭದ್ರತಾಕೊಠಡಿಯಲ್ಲಿ ಇಟ್ಟು ಭದ್ರತೆ ಒದಗಿಸಲಾಗಿದೆ. ಇನ್ನು ಡಿ.27 ರಂದು ನಡೆಯುವ ಎರಡನೇ ಹಂತದ ಚುನಾವಣೆಗೆ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. –ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ.
– ಚಿ.ನಿ.ಪುರುಷೋತ್ತಮ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444