Udayavni Special

ಜಾಗೃತ ಮನಸ್ಸಿನಿಂದ ಉತ್ತಮ ಸಮಾಜ


Team Udayavani, Feb 17, 2020, 3:00 AM IST

jagruti-mana

ತುಮಕೂರು: ಸರಿ ತಪ್ಪುಗಳ ವಿವೇಚನೆಯಿಂದ ಜಾಗೃತ ಮನಸ್ಸಿನಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ನಗರದ ಬಾಲಭವನ ಸಭಾಂಗಣದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ನೆಹರು ಯುವಕೇಂದ್ರದ ಸಹಯೋಗದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವಂತ ವ್ಯಕ್ತಿ ದೇಶದ ಸಂಪತ್ತಾಗಬೇಕು. ಬಲಹೀನ ದೌರ್ಬಲ್ಯಗಳಿಂದ ಕೂಡಿದ ವ್ಯಕ್ತಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪವಿತ್ರ ಜೀವನ ನೆಮ್ಮದಿಯ ಬದುಕಿಗೆ ಮುಖ್ಯ. ಧೂಮಪಾನ, ಮದ್ಯಪಾನ ಹಾಗೂ ಡ್ರಗ್ಸ್‌ನಂತಹ ದುಶ್ಚಟಗಳಿಂದ ದೂರವಿದ್ದು, ಯುವಶಕ್ತಿ ನೈತಿಕತೆಯ ಬದುಕು ಆಯ್ದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಆರೋಗ್ಯಯುತ ಬದುಕಿಗೆ ಯೋಗ, ಧ್ಯಾನ ಮತ್ತು ನಿರ್ಮಲ ಪರಿಸರ ಮುಖ್ಯ. ಪ್ರೀತಿಯ ಮಾತುಗಳಿಂದ ತಪ್ಪು ಮಾಡಿದವರಿಗೆ ಅರಿವು ಮೂಡಿಸಿದಾಗ ಒಳ್ಳೆಯವರಾಗಲು ಸಾಧ್ಯ. ಸ್ವಾಮಿ ವಿವೇಕಾನಂದ “ಲವ್‌ ಇಸ್‌ ಲಾ’ ನಾಣ್ಣುಡಿಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ ಎಂದರು.

ಮಹಾನಗರ ಪಾಲಿಕೆ ಮೇಯರ್‌ ಫ‌ರಿದಾ ಬೇಗಂ ಮಾತನಾಡಿ, ಒಂದು ಕುಟುಂಬ ನಿರ್ವಹಿಸುವಲ್ಲಿ ಸ್ತ್ರೀ-ಪುರುಷರ ಪಾತ್ರ ಬಹಳ ಮಹತ್ವದ್ದು, ಕುಟುಂಬದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಇಬ್ಬರೂ ಸಂಸ್ಕಾರಯುತ ಜೀವನ ಸಾಗಿಸಿ, ಆತ್ಮಾವಲೋಕನದ ಮೂಲಕ ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ತಿಳಿಸಿದರು.

ಭಾರತ ವಿಭಿನ್ನ ಸಂಸ್ಕೃತಿ, ಸಂಪ್ರದಾಯಗಳ ದೇಶ. ಪಾಶ್ಚಾತ್ಯ ದೇಶದ ಅನುಕರಣೆಯಿಂದ ಧೂಮಪಾನ, ಮದ್ಯಪಾನದಂತಹ ದುಶ್ಚಟಗಳ ದಾಸರಾಗಿದ್ದೇವೆ. ಸಂತೋಷ ಮತ್ತು ದುಃಖಗಳ ಸಂದರ್ಭಗಳಲ್ಲೂ ಮದ್ಯಪಾನ ಮಾಡಿ ಸಂಭ್ರಮಿಸುವುದು ಪಾಶ್ಚತ್ಯ ದೇಶದ ಸಂಸ್ಕೃತಿಯಾಗಿದೆ.

ಈ ಸಂಸ್ಕೃತಿ ನಮ್ಮದಲ್ಲ. ಇದನ್ನು ಯುವ ಶಕ್ತಿ ಅರಿತು ನೈತಿಕ ಬದುಕಿನ ದಾರಿ ಕಂಡುಕೊಳ್ಳಬೇಕು ಎಂದು ಹೇಳಿದರು. ಮದ್ಯಪಾನ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ ಕ್ರಾಂತಿಕಾರಿ ಬದಲಾವಣೆ ಮೂಲಕ ಶುದ್ಧ ಜೀವನದ ಹಾದಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಲತಾ ಮಾತನಾಡಿದರು. ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅಚರ್ಡ್‌ ಸಂಸ್ಥೆಯ ಡಾ.ಎಚ್‌.ಜಿ.ಸದಾಶಿವಯ್ಯ ಉಪನ್ಯಾಸ ನೀಡಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ.ರೋಹಿಣಿ, ಆಶಾ ಕಾರ್ಯಕರ್ತೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ದುಡಿದಿದ್ದನ್ನು ಕುಡಿತಕ್ಕೆ ಹಾಕಿ ದೇಹ, ಮನಸ್ಸು ಮತ್ತು ಮನೆ ಹಾಳು ಮಾಡಿಕೊಂಡು ಬೀದಿಪಾಲಾಗಿರುವ ಎಷ್ಟೋ ಕುಟುಂಬಗಳಿವೆ. ಇದು ಗೊತ್ತಿದ್ದರೂ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಮೂರ್ಖತನದ ಪರಮಾವಧಿ. ಇದನ್ನು ಅರಿತು ಪ್ರತಿಯೊಬ್ಬರೂ ಜೀವನ ಸುಂದರವಾಗಿಸಿಕೊಳ್ಳುವುದು ಅಥವಾ ವಿಕೃತಗೊಳಿಸಿಕೊಳ್ಳುವುದು ಅವರವರ ಕೈಯಲ್ಲಿದೆ ಎಂದು
-ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಒಂದೇದಿನ 704 ಪ್ರಕರಣ, 30 ಸಾವು; 4 ಸಾವಿರಕ್ಕೂ ಅಧಿಕ ಸೋಂಕಿತರು; ಈ ಪೈಕಿ 1,445 ತಬ್ಲಿಘಿಗಳು

ಒಂದೇದಿನ 704 ಪ್ರಕರಣ, 30 ಸಾವು; 4 ಸಾವಿರಕ್ಕೂ ಅಧಿಕ ಸೋಂಕಿತರು; ಈ ಪೈಕಿ 1,445 ತಬ್ಲಿಘಿಗಳು

ಸಂಸದರ ವೇತನಕ್ಕೆ ಕೋವಿಡ್ 19 ಕತ್ತರಿ

ಸಂಸದರ ವೇತನಕ್ಕೆ ಕೋವಿಡ್ 19 ಕತ್ತರಿ

ಲಾಕ್ ಡೌನ್ ಎಫೆಕ್ಟ್ : ಪೆಟ್ರೋಲ್‌, ಡೀಸೆಲ್‌ ಮಾರಾಟ ಕುಸಿತ

ಲಾಕ್ ಡೌನ್ ಎಫೆಕ್ಟ್ : ಪೆಟ್ರೋಲ್‌, ಡೀಸೆಲ್‌ ಮಾರಾಟ ಕುಸಿತ

ಪ್ರಾಣಿಗಳ ಮೇಲೂ ಕೋವಿಡ್ 19 ನಿಗಾ

ಪ್ರಾಣಿಗಳ ಮೇಲೂ ಕೋವಿಡ್ 19 ನಿಗಾ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್‌ ಮನನ ತರಗತಿ

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್‌ ಮನನ ತರಗತಿ

ಎ. 14ರ ಬಳಿಕ ಮುಂದೇನು ಎಂಬುದೇ ಪ್ರಶ್ನೆ

ಎ. 14ರ ಬಳಿಕ ಮುಂದೇನು ಎಂಬುದೇ ಪ್ರಶ್ನೆ

ಜುಲೈವರೆಗಿನ ಬ್ಯಾಡ್ಮಿಂಟನ್‌ ಕೂಟ ರದ್ದು

ಜುಲೈವರೆಗಿನ ಬ್ಯಾಡ್ಮಿಂಟನ್‌ ಕೂಟ ರದ್ದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tk–tdy-1

ಮಹಿಳಾ ಸಂಘದಿಂದ ಮಾಸ್ಕ್ ತಯಾರಿ

ಮಾಸ್ಕ್ ವಿತರಣೆಗೆ ಚಾಲನೆ

ಮಾಸ್ಕ್ ವಿತರಣೆಗೆ ಚಾಲನೆ

ರೈತರ ನೆರವಿಗೆ ಬಂದ ಜಿಲ್ಲಾಡಳಿತ

ರೈತರ ನೆರವಿಗೆ ಬಂದ ಜಿಲ್ಲಾಡಳಿತ

ಜಿಲ್ಲಾದ್ಯಂತ ಕುಡಿವ ನೀರಿಗೆ ಹಾಹಾಕಾರ

ಜಿಲ್ಲಾದ್ಯಂತ ಕುಡಿವ ನೀರಿಗೆ ಹಾಹಾಕಾರ

ವರ್ತಕರಿಂದ ಅಗತ್ಯ ವಸ್ತು ಸಂಗ್ರಹ

ವರ್ತಕರಿಂದ ಅಗತ್ಯ ವಸ್ತು ಸಂಗ್ರಹ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಒಂದೇದಿನ 704 ಪ್ರಕರಣ, 30 ಸಾವು; 4 ಸಾವಿರಕ್ಕೂ ಅಧಿಕ ಸೋಂಕಿತರು; ಈ ಪೈಕಿ 1,445 ತಬ್ಲಿಘಿಗಳು

ಒಂದೇದಿನ 704 ಪ್ರಕರಣ, 30 ಸಾವು; 4 ಸಾವಿರಕ್ಕೂ ಅಧಿಕ ಸೋಂಕಿತರು; ಈ ಪೈಕಿ 1,445 ತಬ್ಲಿಘಿಗಳು

ಸಂಸದರ ವೇತನಕ್ಕೆ ಕೋವಿಡ್ 19 ಕತ್ತರಿ

ಸಂಸದರ ವೇತನಕ್ಕೆ ಕೋವಿಡ್ 19 ಕತ್ತರಿ

ಲಾಕ್ ಡೌನ್ ಎಫೆಕ್ಟ್ : ಪೆಟ್ರೋಲ್‌, ಡೀಸೆಲ್‌ ಮಾರಾಟ ಕುಸಿತ

ಲಾಕ್ ಡೌನ್ ಎಫೆಕ್ಟ್ : ಪೆಟ್ರೋಲ್‌, ಡೀಸೆಲ್‌ ಮಾರಾಟ ಕುಸಿತ

ಇಂದು, ನಾಳೆ ಸೂಪರ್‌ ಮೂನ್‌

ಇಂದು, ನಾಳೆ ಸೂಪರ್‌ ಮೂನ್‌

ಪ್ರಾಣಿಗಳ ಮೇಲೂ ಕೋವಿಡ್ 19 ನಿಗಾ

ಪ್ರಾಣಿಗಳ ಮೇಲೂ ಕೋವಿಡ್ 19 ನಿಗಾ