Udayavni Special

ಮಳೆಯಿಂದ ಕೆಸರುಗದ್ದೆಯಾದ ರಸ್ತೆ

ಯುಜಿಡಿ ಕಾಮಗಾರಿಯಿಂದ ಗುಂಡಿಗಳದ್ದೇ ಕಾರುಬಾರು • ಸಂಚಾರಕ್ಕೆ ಸಂಕಷ್ಟ

Team Udayavani, Jul 20, 2019, 2:47 PM IST

tk-tdy-2

ಮಳೆಗೆ ಕೆಸರು ಗದ್ದೆಯಂತಾಗಿರುವ ಹಳೇಪಾಳ್ಯ ರಸ್ತೆ.

ತಿಪಟೂರು: ನಗರದ ಹಳೇಪಾಳ್ಯ ರಸ್ತೆಯು ಮಳೆಯಿಂದ ಕೆಸರು ಗದ್ದೆಯಾಗಿದ್ದು, ಇದರಿಂದ ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾ ಗುತ್ತಿದ್ದು, ನಗರಸಭೆ ರಸ್ತೆ ದುರಸ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಓಡಾಟ ಕಷ್ಟ: ಈ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಮಾಡಿ ತಿಂಗಳುಗಳೇ ಕಳೆದಿದ್ದರೂ ಇದು ವರೆಗೂ ರಸ್ತೆ ರಿಪೇರಿ ಮಾಡದ ಕಾರಣ ಕೆಸರುಗದ್ದೆಯಂತಾಗಿದೆ. ನೂರಾರು ವಾಹನ ಗಳು ಕೆಸರಿನಲ್ಲಿಯೆ ಓಡಾಡುವುದರಿಂದ ಗುಂಡಿಗಳು ಹೆಚ್ಚಾಗಿವೆ. ಅಲ್ಲದೆ ನಗರದ ಸಮೀಪಕ್ಕೆ ಸಂಪರ್ಕ ಹೊಂದಿರುವ ಹಳೇ ಪಾಳ್ಯ ರಸ್ತೆಯು ದೊಡ್ಡಯ್ಯನಪಾಳ್ಯ, ಆದಿ ಲಕ್ಷ್ಮೀನಗರ, ಹೊಸ ನಗರ, ಅಣ್ಣಾಪುರ, ಚಿಕ್ಕಲಕ್ಕಿಪಾಳ್ಯ, ಗಾಯತ್ರಿ ನಗರ, ಕಲ್ಕೆಳೆ, ಬಂಜಾರಹಟ್ಟಿ ಸೇರಿದಂತೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ, ಆರ್‌ಟಿಒ ಕಚೇರಿ, ಶಾಲಾ ಕಾಲೇಜುಗಳಿಗೆ ಸೇರಿದಂತೆ ಇನ್ನೂ ಹಲವು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ.

ಹಳೇಪಾಳ್ಯದಲ್ಲಿ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರು ಹೆಚ್ಚಾ ಗಿರುವ ಕಾರಣ ದಿನಕ್ಕೆ ಸಾವಿರಾರು ಜನ ಕೆಲಸಗಾ ರರು, ಸಾರ್ವಜನಿಕರು, ವಿದ್ಯಾರ್ಥಿ ಗಳು ಓಡಾಡುತ್ತಾರೆ. ಆದರೆ ಸಣ್ಣ ಸೋನೆ ಮಳೆ ಬಂದರೂ ಈ ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.

ನಗರಸಭೆಗೆ ಹಿಡಿಶಾಪ: ನಗರದಲ್ಲಿ ಹಲವಾರು ತಿಂಗಳ ಹಿಂದೆಯೇ ಯುಜಿಡಿ ಕಾಮಗಾರಿ ಮಾಡಲು ರಸ್ತೆ ಅಗೆಯಲಾಗಿತ್ತು. ಅಲ್ಲದೇ ಜೋಡಿ ಕೇಬಲ ಲೈನ್‌ ವ್ಯವಸ್ಥೆ ಮಾಡಲು ರಸ್ತೆ ಅಗೆದು ಹಾಳು ಮಾಡಿರು ವುದು ಇಲ್ಲಿನ ನಿವಾಸಿಗಳಿಗೆ ದಿನನಿತ್ಯ ಕಿರಿಕಿರಿ ಯಾಗುತ್ತಿದೆ. ಶಾಲಾ ವಾಹನಗಳು, ಆಟೋ ಗಳು, ಬೈಕ್‌ಗಳು ಕೆಸರಿನಲ್ಲಿಯೇ ಓಡಾಡು ವುದರಿಂದ ರಸ್ತೆಯಲ್ಲಿಯೇ ದೊಡ್ಡ ಕೆಸರು ಗುಂಡಿಗಳಾಗಿವೆ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.

ವಾಹನಗಳು ಗುಂಡಿಗಳಲ್ಲೇ ಸರ್ಕಸ್‌ ಮಾಡಿಕೊಂಡು ಹರಸಾಹಸದಿಂದ ಸಂಚರಿ ಸುವ ದುಸ್ಥಿತಿ ಉಂಟಾಗಿದ್ದು, ಸವಾರರಂತು ಭಯಭೀತ ರಾಗಿದ್ದಾರೆ. ಇದರಿಂದ ಪ್ರತಿನಿತ್ಯ ಒಂದ ಲ್ಲೊಂದು ಅವಘಡಗಳು ಸಂಭ ವಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ. ಅಲ್ಲದೆ ಈ ರಸ್ತೆ ಡಾಂಬರೀ ಕರಣ ಕಂಡು ಎಷ್ಟು ವರ್ಷಗಳಾಗಿದೆಯೋ ಗೊತ್ತಿಲ್ಲ. ಸಾರ್ವಜನಿಕರು ಹಾಗೂ ಸವಾರರಂತೂ ಹಿಡಿಶಾಪ ಹಾಕಿಕೊಂಡೆ ಓಡಾಡುತ್ತಿದ್ದಾರೆ.

ರಸ್ತೆ ಮೇಲೆಯೇ ಚರಂಡಿ ನೀರು: ಚೆನ್ನಾಗಿದ್ದ ರಸ್ತೆಯನ್ನು ನಗರಸಭೆಯವರು ಯುಜಿಡಿ ಕಾಮಗಾರಿಗೆ ರಸ್ತೆ ಮಧ್ಯಭಾಗದಲ್ಲಿಯೇ ದೊಡ್ಡ ಚರಂಡಿ ಅಗೆದು ಸಂಚಾರಕ್ಕೆ ತೊಂದರೆ ಮಾಡಿದ್ದಾರೆ. ಈ ರಸ್ತೆಯು ತುಂಬಾ ಕಿರಿದಾಗಿರುವುದರಿಂದಲೂ ವಾಹನ ಗಳು ಸುಗಮವಾಗಿ ಓಡಾಡಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ ಈ ಬಡಾವಣೆಗಳಲ್ಲಿ ಅಲ್ಲಲ್ಲಿ ಚರಂಡಿ ಕಟ್ಟಿಕೊಂಡಿರು ವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರಲ್ಲೇ ವಾಹನಗಳು ಓಡಾಡುವಂತಾಗಿದೆ. ಹಳೇಪಾಳ್ಯ ಸೇರಿದಂತೆ ಈ ಎಲ್ಲಾ ಬಡ ಾಣೆ ಗಳಲ್ಲಿಯೂ ಇದೇ ಗೋಳಾಗಿದ್ದು, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಈ ಭಾಗದ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈಗ ಲಾದರೂ ನಗರಸಭೆ ಇತ್ತ ಗಮನಹರಿಸಿ ರಸ್ತೆ ದುರಸ್ತಿ ಗೊಳಿಸುವ ಮೂಲಕ ಮೂಲ ಸೌಕರ್ಯ ಒದಗಿಸಬೇಕು ಎಂದು ನಿವಾಸಿ ಗಳು ಮನವಿ ಮಾಡಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಮಾವನ ಆಸ್ತಿ ಕಬಳಿಸಲು ಹೊಂಚು ಹಾಕಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

ಮಾವನ ಆಸ್ತಿ ಕಬಳಿಸಲು ಸಂಚು ಮಾಡಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

ಸೂಪರ್ ಉತ್ಸಾಹದಲ್ಲಿರುವ ಪಂಜಾಬ್‌ ತಂಡದ ಮುಂದಿದೆ ಡೆಲ್ಲಿ ಸವಾಲು

ಸೂಪರ್ ಉತ್ಸಾಹದಲ್ಲಿರುವ ಪಂಜಾಬ್‌ ತಂಡದ ಮುಂದಿದೆ ಡೆಲ್ಲಿ ಸವಾಲು

ಕೃಷಿ ಮಸೂದೆಯ ವಿರುದ್ಧ ನಿರ್ಣಯ ಮಂಡಿಸಿದ ಪಂಜಾಬ್ ನ ಅಮರಿಂದರ್ ಸಿಂಗ್ ಸರ್ಕಾರ

ಕೃಷಿ ಮಸೂದೆಯ ವಿರುದ್ಧ ನಿರ್ಣಯ ಮಂಡಿಸಿದ ಪಂಜಾಬ್ ನ ಅಮರಿಂದರ್ ಸಿಂಗ್ ಸರ್ಕಾರ

ಆಂಧ್ರ ಪ್ರದೇಶದ ಮಹಿಳೆಯ ಕೊಲೆ ಪ್ರಕರಣ : ಪೊಲೀಸರಿಂದ ಆರೋಪಿಯ ಬಂಧನ

ಆಂಧ್ರ ಪ್ರದೇಶದ ಮಹಿಳೆಯ ಕೊಲೆ ಪ್ರಕರಣ : ಪೊಲೀಸರಿಂದ ಆರೋಪಿಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾವನ ಆಸ್ತಿ ಕಬಳಿಸಲು ಹೊಂಚು ಹಾಕಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

ಮಾವನ ಆಸ್ತಿ ಕಬಳಿಸಲು ಸಂಚು ಮಾಡಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

tk-tdy-1

ಅಲೆಮಾರಿ, ಬುಡಕಟ್ಟು ಸಮುದಾಯ ಸಬಲವಾಗಲಿ

ನ್ಯಾಯಾಧೀಶರಿಗೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್: ತುಮಕೂರಿನಲ್ಲಿ ಇಬ್ಬರ ಬಂಧನ

ನ್ಯಾಯಾಧೀಶರಿಗೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್: ತುಮಕೂರಿನಲ್ಲಿ ಇಬ್ಬರ ಬಂಧನ

ಖಾಸಗಿ ಶಾಲೆಗಳಿಂದ 747 ಮಕ್ಕಳು ಸರ್ಕಾರಿ ಶಾಲೆಗೆ

ಖಾಸಗಿ ಶಾಲೆಗಳಿಂದ 747 ಮಕ್ಕಳು ಸರ್ಕಾರಿ ಶಾಲೆಗೆ

ಮೃತ ವಾರಿಯರ್ಸ್ ಕುಟುಂಬಕ್ಕೆ ಸಿಗದ ಪರಿಹಾರ

ಮೃತ ವಾರಿಯರ್ಸ್ ಕುಟುಂಬಕ್ಕೆ ಸಿಗದ ಪರಿಹಾರ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಗಡಿ ಕ್ಯಾತೆ: ಕೆಲವು ದಿನಗಳ ಬಳಿಕ ಬಂಧಿತ ಚೀನಾ ಸೈನಿಕನ ಬಿಡುಗಡೆ ಸಾಧ್ಯತೆ: ವರದಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಕರ್ನಾಟಕದ ಸಿನ್ನರ್‌ ಪ್ರವೀಣ್‌ ದುಬೆ

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್

bidara-tdy-1

ಪ್ರಜಾಪ್ರಭುತ್ವ ಉಳಿವಿಗೆ ಕಾಂಗ್ರೆಸ್‌ ಬೆಂಬಲಿಸಿ

ಮಾವನ ಆಸ್ತಿ ಕಬಳಿಸಲು ಹೊಂಚು ಹಾಕಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

ಮಾವನ ಆಸ್ತಿ ಕಬಳಿಸಲು ಸಂಚು ಮಾಡಿದ್ದ ರಾಜಶೇಖರ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ಯಾಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.