ಸಕಲ ಜೀವ ಸಂಕುಲಕ್ಕೆ ಪರಿಸರ ಅಗತ್ಯ

Team Udayavani, Jun 6, 2019, 12:12 PM IST

ತುಮಕೂರು: ಪರಿಸರ ಉಳಿದರೆ ದೇಶ ಉಳಿಯುತ್ತದೆ. ಇದು ಮನುಷ್ಯನ ಬದುಕಿಗೆ ಪಾಠ ಆಗಬೇಕು. ಸಕಲ ಜೀವ ಜಂತುಗಳಿಗೂ ಪರಿಸರ ಅಗತ್ಯವಾಗಿದೆ. ಸ್ವಾರ್ಥಕ್ಕಾಗಿ ಪ್ರತಿನಿತ್ಯ ಪರಿಸರ ವನ್ನು ಹಾಳು ಮಾಡುತ್ತಿದ್ದೇವೆ. ಭೂಮಿ, ನೀರು, ಗಾಳಿ ಎಲ್ಲವೂ ಕಲುಷಿತವಾಗುತ್ತಿದೆ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ಶ್ರೀಕ್ಷೇತ್ರ ಸಿದ್ಧಗಂಗಾ ಮಠದ ವಸ್ತು ಪ್ರದರ್ಶನ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ರೀಚ್ ವಾರ್‌ ಕಾಸ್‌ ಟೆಕ್ನಾಲಜಿಸ್‌ ಪ್ರೈವೇಟ್ ಲಿಮಿಟೆಡ್‌ನಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯ =ಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಪ್ರತಿವರ್ಷ ಜೂನ್‌ ತಿಂಗಳಲ್ಲಿ ವಿಶ್ವ ಪರಿಸರ ದಿನವನ್ನು ನಾವು ಆಚರಿಸುತ್ತಿದ್ದೇವೆ. ಇದು ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿ ನಿತ್ಯದ ಆಚರಣೆ ಯಾಗಬೇಕು. ಈ ಹಿನ್ನೆಲೆಯಲ್ಲಿ ನಾವು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ಹೊಂದಿ ಸಸಿಗಳನ್ನು ನೆಟ್ಟು ಮಗುವಿನಂತೆ ಪೋಷಣೆ ಮಾಡಬೇಕು ಎಂದು ನುಡಿದರು.

ಪ್ರಚಾರಕ್ಕಾಗಿ ಗಿಡ ನೆಟ್ಟರೆ ಸಾಲದು: ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್‌ ಮಾತನಾಡಿ, ಪರಿ ಸರದ ಮೇಲೆ ಒತ್ತಡ ಹೆಚ್ಚಾಗುತ್ತಿರುವುದರಿಂದ ಅಸಮತೋಲನಕ್ಕೆ ಕಾರಣವಾಗಿದೆ. ಮನುಷ್ಯರು ಮರ, ಗಿಡ, ಮರಳು, ಗಣಿಗಾರಿಕೆ ಇತ್ಯಾದಿಗಳಿಂದ ಪರಿಸರದ ಮೇಲೆ ಒತ್ತಡ ಉಂಟು ಮಾಡುತ್ತಿದೆ. ಇದರಿಂದಾಗಿ ಅಸಮತೋಲನ ಉಂಟಾಗಿದೆ. ಪ್ರಚಾರಕ್ಕಾಗಿ ಗಿಡಗಳನ್ನು ನೆಟ್ಟರೆ ಸಾಲದು, ಅವು ಗಳ ಪೋಷಣೆ ಮಾಡಿ, ನಿಗದಿತ ಸಮಯದವರೆಗೆ ಬೆಳೆಸಬೇಕು. ಪ್ರಸ್ತುತ ಮುಂಗಾರು ಆರಂಭ ವಾಗಿರುವುದರಿಂದ ಈ ಅವಧಿಯಲ್ಲಿ ಗಿಡಗಳನ್ನು ನೆಟ್ಟರೆ ಅವು ಚೆನ್ನಾಗಿ ಬೆಳೆಯುತ್ತವೆ ಎಂದರು.

ಅರಿವಿಗಾಗಿ ಪರಿಸರ ದಿನ ಆಚರಣೆ: 1990 ರಿಂದವಿಶ್ವ ಪರಿಸರ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು, ಜನರು ಈ ಬಗ್ಗೆ ಸಾಕಷ್ಟು ಅರಿವು ಮೂಡಿಸಿಕೊಂಡಿದ್ದಾರೆ. ಆದರೂ ಸಹ ಪರಿಸರದ ಮೇಲೆ ನಿರಂತರವಾದ ದೌರ್ಜನ್ಯ ತಪ್ಪಿಲ್ಲ. ಇದ ರಿಂದಾಗಿಯೇ ಸಾಕಷ್ಟು ಪ್ರಾಕೃತಿಕ ವಿಕೋಪಗಳು ಸಂಭವಿಸಲು ಕಾರಣವಾಗಿದೆ. ಜಿಲ್ಲೆಯಲ್ಲಿ ಕುಡಿ ಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, 148 ಗ್ರಾಮ ಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಇದಕ್ಕೆ ಪರಿಸರ ಅಸಮತೋಲನ ಕಾರಣ ಎಂದು ಹೇಳಿದರು.

ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಜಿಪಂ ಸಿಇಒ ಶುಭಾ ಕಲ್ಯಾಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್‌, ಸತೀಶ್‌ ಬಾಬಾ ರೈ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಪ್ಪ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆರೆ ಕಟ್ಟೆ ರಕ್ಷಣೆಯಿಂದ ಅಂತರ್ಜಲ ವೃದ್ಧಿ:

ನಾವೆಲ್ಲರೂ ವೃಕ್ಷ ಪ್ರೇಮಿಗಳಾಗಿ ಪರಿಸರ ರಕ್ಷಿಸಬೇಕು. ಸಾಮಾಜಿಕ ಕಾಳಜಿ ಕೊರತೆಯಿಂದ ಪರಿಸರ ನಾಶವಾಗುತ್ತಿದೆ. ಕೆರೆ ಕಟ್ಟೆಗಳ ರಕ್ಷಿಣೆ ಯಿಂದ ಅಂತರ್ಜಲವೃದ್ಧಿಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ್‌.ಎಸ್‌ ತಿಳಿಸಿದರು.

ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ಶಿರಾ ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರಿಗೂ ಪ್ರಕೃತಿ ರಕ್ಷಣೆ ಬಗ್ಗೆ ಅರಿವಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಮನುಕುಲವನ್ನು ಉಳಿಸಲು ಸಾಧ್ಯ. ಭೂಮಿಯಲ್ಲಿ ಅಂತರ್ಜಲ ವೃದ್ಧಿಗಾಗಿ ಕೆರೆ ಕಟ್ಟೆಗಳನ್ನು ರಕ್ಷಿಸಬೇಕು. ಕೆರೆಯಲ್ಲಿ ಹೂಳೆತ್ತುವುದರ ಜೊತೆಗೆ ಕಾಲುವೆಗಳನ್ನು ಒತ್ತು ವರಿ ಮಾಡದೆ ನೀರು ಕೆರೆಗೆ ಹರಿಯಲು ಅನುವು ಮಾಡಿಕೊಡಬೇಕು. ಮಳೆಯ ನೀರಿನ ಪ್ರಮಾಣ ದಲ್ಲಿ ಕೇವಲ ಶೇ.20ರಷ್ಟು ಮಾತ್ರ ನೀರು ಭೂಮಿಗೆ ಸೇರಿಕೊಳ್ಳುತ್ತಿದೆ. ಇದರ ಪ್ರಮಾಣವನ್ನು ಹೆಚ್ಚಿಸಿ ದರೆ, ಅಂತರ್ಜಲ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಆಶಾ.ಕೆ.ಎಸ್‌. ಮಾತನಾಡಿದರು. ಈ ವೇಳೆ ನಗರಸಭೆ ಪ್ರಭಾರ ಆಯುಕ್ತ ಸೇತುರಾಂ ಸಿಂಗ್‌, ತಾಪಂ ಇಒ ಮೋಹನ್‌ಕುಮಾರ್‌, ಶಿರಾ ವಕೀಲರ ಸಂಘದ ಅಧ್ಯಕ್ಷ ಸಿ.ಎಚ್.ಜಗದೀಶ್‌, ಉಪಾಧ್ಯಕ್ಷ ಎಸ್‌. ಪಿ.ಮಂಜುನಾಥ್‌, ಕಾರ್ಯದರ್ಶಿ ಸಣ್ಣಕರೇ ಗೌಡ, ಹಿರಿಯ ವಕೀಲರಾದ ಕೆ.ರಂಗನಾಥ್‌, ಆರ್‌ಎಫ್ಒ ರಾಧ, ಅನುಷಾ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಸ್‌.ವೈ.ನರೇಶ್‌ ಬಾಬು, ಜಯರಾಮಯ್ಯ, ಡಾ.ವಿನಯ್‌, ಎಸ್‌.ಎಲ್.ರಂಗನಾಥ್‌, ಎಸ್‌.ವೈ.ಸುರೇಶ್‌, ಎಸ್‌.ಎನ್‌.ಅರುಣ್‌ಕುಮಾರ್‌, ರಾಷ್ಟ್ರಪತಿ ಪದಕ ವಿಜೇತ ರೇವಣ್ಣ, ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ, ಗೋವಿಂದಪ್ಪ, ಬಸವರಾಜು, ಸುಚೇತ್‌ ಹಾಗು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ