ಹಣ ದುರುಪಯೋಗ ಆರೋಪ: ಜಿಪಂ ಸಮಿತಿ ಭೇಟಿ

Team Udayavani, Aug 7, 2019, 4:00 PM IST

ಹುಳಿಯಾರು ಸಮೀಪದ ಮತಿಘಟ್ಟ ಆರೋಗ್ಯ ಕೇಂದ್ರಕ್ಕೆ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರು ಭೇಟಿ ನೀಡಿದ್ದರು.

ಹುಳಿಯಾರು: ಬಯೋಮೆಟ್ರಿಕ್‌ ಹಾಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ಕೋಟ್ಯಂತರ ರೂ. ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ತಂಡ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ತಂಡ ಹಂದನಕೆರೆ ಹಾಗೂ ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ನವ್ಯಾ, ಸದಸ್ಯ ವೈ.ಸಿ.ಸಿದ್ದರಾಮಯ್ಯ, ಕೆಂಪಚೌಡಯ್ಯ, ಚನ್ನಮಲ್ಲಪ್ಪ, ಗಾಯತ್ರಿ ತಂಡದಲ್ಲಿದ್ದರು. ಹಂದನಕೆರೆ ಮತ್ತು ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಬಯೋಮೆಟ್ರಿಕ್‌, ಸಿಸಿ ಟೀವಿ ಕ್ಯಾಮೆರಾ ಪರಿಶೀಲಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಂದ್ರಕಲಾ, ಆರೋಗ್ಯ ಕೇಂದ್ರಗಳಲ್ಲಿನ ಬಯೋಮೆಟ್ರಿಕ್‌ ಅಳವಡಿಸಿ ಕೊಂಡಿದ್ದಾರೆಯೇ ಎಂದು ಪರಿಶೀಲಿಸಲಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್‌, ಅಧಿಕಾರಿಗಳು ಇದ್ದರು.

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಬಯೋಮೆಟ್ರಿಕ್‌, ಸಿಸಿ ಟೀವಿ ಕ್ಯಾಮರಾ ಅಳವಡಿಸಲು 2 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ, ಗುಬ್ಬಿ- ಚಿಕ್ಕನಾಯಕನ ಹಳ್ಳಿ ತಾಲೂಕಿನ ಕೆಲ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಳಪೆ ಸಾಮ ಗ್ರಿ ಅಳವಡಿ ಸಿದ್ದು ಯಾವುವೂ ಕೆಲಸ ನಿರ್ವಹಿ ಸುತ್ತಿಲ್ಲ. ಆದರೂ, ಜಿಪಂ ಅಧ್ಯಕ್ಷರು ಪರಿಶೀಲಿ ಸದೆ ಒತ್ತಡಕ್ಕೆ ಮಣಿದು ಹಣ ಮಂಜೂರು ಮಾಡಿ ದ್ದಾರೆ. ಹಣ ಸಂಪೂರ್ಣವಾಗಿ ದುರುಪ ಯೋಗವಾಗಿದೆ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ವೈ.ಸಿ. ಸಿದ್ದರಾಮಯ್ಯ ತಿಳಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

  • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

  • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

  • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...

  • ಉಡುಪಿ/ಕುಂದಾಪುರ: ತನ್ನದೇ ಶೈಲಿಯ ಹಾಡುಗಳಿಂದ ಜನರನ್ನು ಮನರಂಜಿಸುತಿದ್ದ ಕುಂದಾಪುರದ "ಸ್ಟ್ರೀಟ್‌ ಸಿಂಗರ್‌' ವೈಕುಂಠ (32) ಸೋಮವಾರ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ...