ಫ್ಯಾಷನ್ ಡಿಸೈನ್ ಸ್ಪರ್ಧೆಗೆ ಆಡಿಷನ್
Team Udayavani, Feb 26, 2021, 8:41 PM IST
ತುಮಕೂರು: ಸಿನಿ ಕಂಬೈನ್ಸ್ ಬೆಂಗಳೂರು ವತಿಯಿಂದ ಆಯೋಜಿಸಿರುವ ವಿನ್ಸ್ ಪ್ಯಾಷನ್ ಇವೆಂಟ್‌ನ ಸ್ಪರ್ಧೆಗೆ ಭಾಗವಹಿಸುವ ಅಭ್ಯರ್ಥಿಗಳಿಗೆ ಫೆ.28 ರಂದು ಬೆಳಗ್ಗೆ 11ರಿಂದ 3 ಗಂಟೆಯ ವರೆಗೆ ತುಮಕೂರಿನಲ್ಲಿ ಆಡಿಷನ್ ನಡೆಯಲಿದೆ ಎಂದು ಮಿಸ್ ಇಂಡಿಯಾ ಬಂಜಾರ್ ಪ್ರಶಸ್ತಿ ವಿಜೇತ ಅರುಂಧತಿ ಲಾಲ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫ್ಯಾಷನ್ ಡಿಸೈನ್ ಎಂಬುದು ಒಂದು ದೊಡ್ಡ ಸಾಗರ. ತುಮಕೂರಿನಿಂದ ಇಂತಹ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕಾ ದರೆ ಸಾಕಷ್ಟು ಶ್ರಮಿಸಬೇಕು. ಬೆಂಗ ಳೂರಿನಂತಹ ನಗರಗಳಲ್ಲಿದ್ದು, ಹತ್ತಾರು ಸಾವಿರ ರೂ. ಖರ್ಚು ಮಾಡಿ, ವರ್ಷಾ ನುಗಟ್ಟಲೇ ಕಾಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ತುಮಕೂರು ಯುವಕರಿಗೆ ಒಂದು ವೇದಿಕೆ ಒದಗಿಸುವ ಉದ್ದೇಶ ದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ವಿನ್ ಫ್ಯಾಷನ್-2021 ಮುಂದಿನ ಒಂದೆರಡು ತಿಂಗಳಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಸ್ಪರ್ಧೆ ಯಲ್ಲಿ ಭಾಗವಹಿಸಲಿಚ್ಚಿಸುವ ಅಭ್ಯರ್ಥಿಗಳಿಗೆ ಫೆ.28ರಂದು ಎಂ.ಜಿ.ರಸ್ತೆಯ ಗಣೇಶ್ ಮೆಮೋರಿಯಲ್ ಹಾಲ್‌ನಲ್ಲಿ ಆಡಿಷನ್ ನಡೆಯಲಿದೆ. ಆಡಿಷನ್‌ನಲ್ಲಿ ಆಯ್ಕೆಯಾದವರಿಗೆ ಸೂಕ್ತ ತರಬೇತಿ ನೀಡಿ, ಅಂತಿಮ ಸ್ಪರ್ಧೆಗೆ ಸಿದ್ದಗೊಳಿಸಲಾಗುತ್ತದೆ ಎಂದು ತಿಳಿಸಿದರು. ದೇಹದಾಡ್ಯìಕ್ಕೆ ಅವಕಾಶ: ವಿನ್ ಫ್ಯಾಷನ್ ಇವೆಂಟ್ ಸ್ಪರ್ಧೆ ನಾಲ್ಕು ಕ್ಯಾಟಗರಿ ಹೊಂದಿದ್ದು, ಪುರುಷ, ಮಹಿಳೆ, ಮಕ್ಕಳು ಹಾಗೂ ಗೃಹಿಣಿಯರು ಭಾಗವಹಿಸಬಹುದು. ಫ್ಯಾಷನ್ ಜೊತೆಗೆ, ಅರ್ಜುನ್ ಪಾಳ್ಳೇಗಾರ್ ಸಹಕಾರದಲ್ಲಿ ದೇಹದಾಡ್ಯìಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ನಮ್ಮೊಂದಿಗೆ ಖ್ಯಾತ ಫ್ಯಾಷನ್ ಡಿಸೈನರ್ ಅಮೃತಾ ಶೆಟ್ಟಿ ಕೈ ಜೊಡಿಸಲಿದ್ದಾರೆ. ವಿಜೇತರಿಗೆ ನಗದು ಬಹುಮಾನ, ಕಿರೀಟ ಹಾಗೂ ಟೈಟಲ್ ನೀಡಲಾಗುವುದು ಎಂದರು. ದೇಹ ದಾಡ್ಯ ಪಟು ಅರ್ಜುನ್ ಪಾಳ್ಳೇಗಾರ್, ಕಿರಣ್ ಮತ್ತಿತರಿದ್ದರು.