ಕೋವಿಡ್ ಕೇರ್ ಸೆಂಟರ್ ಆರಂಭ
Team Udayavani, May 29, 2021, 9:08 PM IST
ಹುಳಿಯಾರು: ಹುಳಿಯಾರಿನ ಅಂಬೇಡ್ಕರ್ ಭವನದಹಿಂಭಾಗದಲ್ಲಿರುವ ಸರ್ಕಾರಿ ಸಾರ್ವಜನಿಕ ಮೆಟ್ರಿಕ್ ಪೂರ್ವಬಾಲಕರ ವಿದ್ಯಾರ್ಥಿ ನಿಲಯವು ಈಗ ಕೋವಿಡ್ ಕೇರ್‌ಸೆಂಟರ್ ಆಗಿ ಪರಿವರ್ತನೆಯಾಗಿದೆ.
ಹುಳಿಯಾರು ಪಟ್ಟಣಸೇರಿದಂತೆ ಕೆಂಕೆರೆ, ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ವಳಗೆರೆಹಳ್ಳಿಮುಂತಾದಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,ತುರ್ತಾಗಿ ಹುಳಿಯಾರಿನಲ್ಲಿ ಕೋವಿಡ್ ಕೇರ್‌ಸೆಂಟರ್ ಸ್ಥಾಪಿಸುವಂತೆ ಸಚಿವಜೆ.ಸಿ.ಮಾಧುಸ್ವಾಮಿ ಸೂಚಿಸಿದ ಹಿನ್ನೆಲೆಆರಂಭಿಸಲಾಗಿದೆ.
ಮೇ 20ರಿಂದ ಈಚೆಗೆಪಾಸಿಟಿವ್ ಬಂದಿರುವವರು, ಹೋಂಕ್ವಾರಂಟೈನ್‌ನಲ್ಲಿರುವವರನ್ನು ಈ ಕೋವಿಡ್‌ಕೇರ್ ಸೆಂಟರ್‌ಗೆ ಸ್ಥಳಾಂತರಿಸಲುನಿರ್ಧರಿಸಲಾಗಿದ್ದು, ಆಶಾ, ಅಂಗನವಾಡಿ ಮತ್ತುಪಪಂ ಸಿಬ್ಬಂದಿ ಸೋಂಕಿತರನ್ನು ಕೇರ್ ಸೆಂಟರ್‌ಗೆಕರೆ ತರಲಿದ್ದಾರೆ. ಸೋಂಕಿತರು ನಿರಾಕರಿಸಿದರೆ ಪೊಲೀಸ್‌ಸಹಕಾರ ಸಹ ಪಡೆಯುವುದಾಗಿ ಪಪಂ ಮುಖ್ಯಾಧಿಕಾರಿಮಂಜುನಾಥ್ ತಿಳಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್‌ನನೋಡಲ್ ಅಧಿಕಾರಿಯಾಗಿ ಪಪಂ ಕಿರಿಯ ಅಭಿಯಂತರಡಿ.ಮಂಜುನಾಥ್ ಉಸ್ತುವಾರಿ ವಹಿಸಲಿದ್ದು, ಪಾಸಿಟಿವ್‌ಹೊಂದಿರುವವರಿಗೆ ಆರೋಗ್ಯ ತಪಾಸಣೆ, ಊಟದವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಮತ್ತಿತರ ಮೂಲಭೂತಸೌಕರ್ಯ ಕಲ್ಪಿಸಲು ತಾಲೂಕು ಆಡಳಿತದಿಂದಸಿಬ್ಬಂದಿ ನೇಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್: ಮೈ ಎಮಿರೇಟ್ಸ್ ಟಿ 20 ತಂಡ ಘೋಷಣೆ
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್ಐಎ