Udayavni Special

ಬಸ್‌ ಸೌಕರ್ಯ ವಂಚಿತ ಗಡಿಗ್ರಾಮ ಬೊಮ್ಮೇನಹಳ್ಳಿ ತಾಂಡಾ

Team Udayavani, Nov 16, 2019, 4:25 PM IST

TK-TDY-4

ತಿಪಟೂರು: ಕೆಲ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದರೆ ಇನ್ನೂ ಕೆಲ ಭಾಗಗಳಲ್ಲಿ ಬಸ್‌ ವ್ಯವಸ್ಥೆಯೂ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಹೊನ್ನವಳ್ಳಿ ಹೋಬಳಿ ಬಳುವ ನೇರಲು ಗ್ರಾಪಂ ವ್ಯಾಪ್ತಿಯ ಗಡಿ ಭಾಗದ ಗ್ರಾಮ ಕಾಳಮ್ಮನಬೆಟ್ಟ ಮಜುರೆ ಬೊಮ್ಮೇನಹಳ್ಳಿ ತಾಂಡಾ ದಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ. ತಮ್ಮ ಕೆಲಸ ಕಾರ್ಯಗಳಿಗೋ ಅಥವಾ ನೆಂಟರಿಷ್ಟರ ಮನೆಗಳಿಗೆ ಹೋಗಬೇಕೆಂದರೆ 7 ಕಿ.ಮೀ ದೂರದ ಬಳುವನೇರಲು ಗೇಟ್‌ಗೆ ಬರಬೇಕಿದೆ. ಬೆಳಗ್ಗೆ 7ಕ್ಕೆ ಖಾಸಗಿ ಬಸ್‌ ಬರುವುದು ಬಿಟ್ಟರೆ ಅದೇ ಬಸ್‌ ಪುನಃ ಸಂಜೆ 7ಕ್ಕೆ ವಾಪಸ್‌ ಬರುತ್ತದೆ. ಒಂದು ಬಸ್‌ ಬಿಟ್ಟರೆ ಮತ್ಯಾವ ಬಸ್‌ ತಲೆ ಹಾಕುವುದಿಲ್ಲ.

ಯಾವುದಾದರೂ ತುರ್ತು ಕೆಲಸ ವಿದ್ದರೆ ಸ್ವಂತ ವಾಹನ ಮಾಡಿಕೊಂಡು ಹೋಗಬೇಕಾದ ಸ್ಥಿತಿಯಿದೆ. ಗ್ರಾಮದಲ್ಲಿ ಸುಮಾರು 40-50 ಲಂಬಾಣಿ ಕುಟುಂಬಗಳಿದ್ದು ಬಂಡೆ ಕೆಲಸ, ಗಾರೆ ಕೆಲಸ, ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಕೂಲಿ ಮಾಡಿದ ಹಣದಿಂದ ಜೀವನ ನಡೆಸುವುದೇ ಕಷ್ಟವಾಗಿದ್ದು ಆಟೋಗಳಲ್ಲಿ ಓಡಾಡಲು ಹಣಎಲ್ಲಿಂದ ತರಲಿ ಎನ್ನುತ್ತಾರೆ ಇಲ್ಲಿನ ಲಂಬಾಣಿ ಜನ.

ಮಕ್ಕಳ ವಿದ್ಯಾಭ್ಯಾಸ ಮೊಟಕು: ಈ ಗ್ರಾಮದಲ್ಲಿ 1ರಿಂದ 5ರವರೆಗೆ ಮಾತ್ರ ಸರ್ಕಾರಿ ಶಾಲೆಯಿದೆ. ಇನ್ನೂ 6ರಿಂದ 7ನೇ ತರಗತಿ ಓದಬೇಕೆಂದರೆ 5.ಕಿ.ಮೀ ದೂರದ ದಾಸನಕಟ್ಟೆಗೆ ಹೋಗಬೇಕು. ಇಷ್ಟು ದೂರ ನಿತ್ಯ ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತುಂಟಾಗುತ್ತಿದೆ. ಬಸ್‌ ವ್ಯವಸ್ಥೆ ಇಲ್ಲದ್ದರಿಂದ ಪೋಷಕರು ಮಕ್ಕಳನ್ನು ಕೂಲಿಗೆ ಕರೆದುಕೊಂಡು ಹೋಗುತ್ತಿ ದ್ದಾರೆಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಸ್ವತ್ಛತೆ ಮರೀಚಿಕೆ: ಲಂಬಾಣಿ ತಾಂಡಾದಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ಚರಂಡಿ ಇಲ್ಲವೇ ಇಲ್ಲ. ಮನೆಗಳಲ್ಲಿ ಬಳಸಿದ ತ್ಯಾಜ್ಯ ನೀರು ರಸ್ತೆಗಳಲ್ಲಿಯೇಹರಿಯುತ್ತಿದ್ದು ಎಲ್ಲಿ ನೋಡಿದರೂ ಕಸದ ರಾಶಿ ಎದ್ದು ಕಾಣುತ್ತಿದೆ. ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಸ್ವತ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.

ಪ್ರವಾಸಿ ಕ್ಷೇತ್ರಗಳಿದ್ದರೂ ಬಸ್‌ ಇಲ್ಲ: ಬೊಮ್ಮೇ ನಹಳ್ಳಿ ತಾಂಡಾ ಸುತ್ತಮುತ್ತ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳಾದ ಶ್ರೀಕಾಳಮ್ಮನ ಗುಡ್ಡ, ಶ್ರೀಅಡವೀಶ್ವರ ಸ್ವಾಮಿ, ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಬೆಟ್ಟಗಳಿದ್ದು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಬಸ್‌ ವ್ಯವಸ್ಥೆಯೇಇಲ್ಲ.

ತಿಪಟೂರು ಕೆಎಸ್‌ಆರ್‌ಟಿಸಿ ಡಿಪೋಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಬಸ್‌ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನೆರಡು ವಾರಗಳಲ್ಲಿ ಕಲ್ಪಿಸದಿದ್ದರೆ ಡಿಪೋ ಬಳಿ ಪ್ರತಿಭಟನೆ ನಡೆಸಲಾಗುವುದು. ಬಿ.ಟಿ.ಕುಮಾರ್‌, ಸೇವಾಲಾಲ್‌ ಲಂಬಾಣಿ ಸಮಾಜ ತಾಲೂಕು ಅಧ್ಯಕ್ಷರು

-ಬಿ.ರಂಗಸ್ವಾಮಿ, ತಿಪಟೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ATM-730

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

Gold loan

ಚಿನ್ನದ ಮೌಲ್ಯದ ಶೇ. 90ರಷ್ಟು ಸಾಲ ನೀಡಲು ಆರ್‌ಬಿಐ ಅವಕಾಶ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಗೆ ಎರಡು ಬಲಿ; ಸಾವಿನ ಸಂಖ್ಯೆ 65 ಕ್ಕೆ ಏರಿಕೆ; ಸೋಂಕಿತರ ಸಂಖ್ಯೆ 2,209ಕ್ಕೆ ಏರಿಕೆ

ಕೋವಿಡ್ ಗೆ ಎರಡು ಬಲಿ; ಸಾವಿನ ಸಂಖ್ಯೆ 65 ಕ್ಕೆ ಏರಿಕೆ; ಸೋಂಕಿತರ ಸಂಖ್ಯೆ 2,209ಕ್ಕೆ ಏರಿಕೆ

ಸೇತುವೆ, ರಸ್ತೆ  ಕಾಮಗಾರಿಗೆ ಚಾಲನೆ

ಸೇತುವೆ, ರಸ್ತೆ ಕಾಮಗಾರಿಗೆ ಚಾಲನೆ

ಶಿರಾ ಶಾಸಕ ಬಿ. ಸತ್ಯನಾರಾಯಣ ನಿಧನ

ಶಿರಾ ಶಾಸಕ ಬಿ. ಸತ್ಯನಾರಾಯಣ ನಿಧನ

ಜಿಲ್ಲೆಯಲ್ಲಿ ಸೋಂಕಿತರಸಂಖ್ಯೆ 1,988ಕ್ಕೆ  ಏರಿಕೆ

ಜಿಲ್ಲೆಯಲ್ಲಿ ಸೋಂಕಿತರಸಂಖ್ಯೆ 1,988ಕ್ಕೆ ಏರಿಕೆ

ಆರೋಗ್ಯವಾಗಿರುವವನೇ ನಿಜವಾದ ಶ್ರೀಮಂತ

ಆರೋಗ್ಯವಾಗಿರುವವನೇ ನಿಜವಾದ ಶ್ರೀಮಂತ

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾಮಳೆಗೆ ಎರಡನೇ ಬಲಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾಮಳೆಗೆ ಎರಡನೇ ಬಲಿ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.