ಸಿದ್ಧಗಂಗಾ ಶ್ರೀಗಳು ಧರ್ಮ, ಜಾತಿ ಭೇದವಿಲ್ಲದೆ ಕಾಯಕ ಮಾಡಿದವರು: ಬಿ ಎಸ್ ವೈ
Team Udayavani, Jan 21, 2021, 4:29 PM IST
ತುಮಕೂರು: ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಉದ್ಘಾಟಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ ಧರ್ಮ, ಜಾತಿ ಭೇದವಿಲ್ಲದೆ ಕಾಯಕ ಮಾಡಿದರು ಸಿದ್ಧಗಂಗಾ ಶ್ರೀಗಳು ಎಂದರು.
ತ್ರಿವಿಧ ದಾಸೋಹದ ಮೂಲಕ ಕೀರ್ತಿತಂದಿದ್ದಾರೆ. ಕಡುಬಡವ ಮಕ್ಕಳಿಗೆ ಶಿಕ್ಷಣ ಕೊಡುವ ಮೂಲಕ ಧಾರ್ಮಿಕ ಭಾವನೆ ತುಂಬಿದರು. ಉತ್ತಮ ಪ್ರಜೆಗಳನ್ನಾಗಿ ರೂಪಿಸಿದರು ಎಂದು ನುಡಿದರು.
ಶ್ರೀಗಳ ಬದುಕು, ವ್ಯಕ್ತಿತ್ವ ಸಾರುವ ಉದ್ದೇಶದಿಂದ ಹುಟ್ಟೂರು ವೀರಾಪುರದಲ್ಲಿ 111 ಅಡಿ ವಿಗ್ರಹ ಸ್ಥಾಪನೆ ಹಾಗೂ ವೀರಾಪುರ ಅಭಿವೃದ್ಧಿ ಯೋಜನೆಗೆ 80 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಈಗಾಗಲೇ ಸರಕಾರದಿಂದ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ತುಮಕೂರಿನ ಮಠದಲ್ಲಿ ವಸ್ತುಸಂಗ್ರಹಾಲಯಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು
ಪುಣ್ಯ ಸ್ಮರಣಾದಿನವನ್ನು ದಾಸೋಹದ ದಿನವನ್ನಾಗಿ ಆಚರಿಸಲು ಆಜ್ಞೆ ಮಾಡಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿವಿದ ಬೇಡಿಕೆಗೆ ಒತ್ತಾಯಿಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಕೊರಟಗೆರೆ: ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ
ಕೊರಟಗೆರೆ: ಕಾರು ಢಿಕ್ಕಿ; ಬೈಕ್ ಸವಾರರಿಗೆ ಗಂಭೀರ ಗಾಯ
ಕುಣಿಗಲ್: ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ವಿ.ಹಿಂ.ಪ. ಬಜರಂಗದಳ ಪದಾಧಿಕಾರಿಗಳ ಪ್ರತಿಭಟನೆ
ಕುಣಿಗಲ್: ಕೆಂಪೇಗೌಡರಿಗೆ ಅಪಮಾನವಾದ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ: ಕೆಂಪೇಗೌಡ ಸೇನೆ ತಿರ್ಮಾನ