ಉಜ್ಜನಿ ಚೌಡೇಶ್ವರೀ ದೇವಿ ‘ಅಗ್ನಿಕೊಂಡ ಉತ್ಸವ’ದಲ್ಲಿ ಸಜ್ಜೆ ಕುಸಿತ : ಹಲವರಿಗೆ ಗಾಯ

Team Udayavani, Apr 24, 2019, 11:33 AM IST

ತುಮಕೂರು: ಕುಣಿಗಲ್‌ ತಾಲೂಕಿನ ಉಜ್ಜನಿ ಚೌಡೇಶ್ವರೀ ದೇವಿ ಸನ್ನಧಿಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ‘ಅಗ್ನಿಕೊಂಡ’ ವೀಕ್ಷಿಸಲು ಭಕ್ತರು ಕಟ್ಟಡವೊಂದರ ಮೇಲೆ ನಿಂತಿದ್ದ ಸಂದರ್ಭದಲ್ಲಿ ಸಜ್ಜೆ ಕುಸಿದು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬುಧವಾರ ಬೆಳಿಗ್ಗೆ ಈ ದುರ್ಘ‌ಟನೆ ನಡೆದಿದೆ.

ದೇವಸ್ಥಾನದ ಅಕ್ಕಪಕ್ಕವಿರುವ ಕಟ್ಟಡಗಳನ್ನು ಏರಿನಿಂತು ಭಕ್ತರು ಚೌಡೇಶ್ವರಿ ದೇವಿಯ ಅಗ್ನಿಕೊಂಡ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಹಳೆಯ ಕಟ್ಟಡವೊಂದರ ಸಜ್ಜೆ ಕುಸಿದಿದೆ. ಜನರ ಭಾರವನ್ನು ತಾಳಲಾರದೆ ಸಜ್ಜೆ ಕುಸಿದಿರುವುದಾಗಿ ತಿಳಿದುಬಂದಿದೆ.

ಗಾಯಾಳುಗಳನ್ನು ಕುಣಿಗಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ