30ರಂದು ಕುಣಿಗಲ್ ಬಂದ್‌ಗೆ ಕರೆ
Team Udayavani, Oct 25, 2019, 4:28 PM IST
ಕುಣಿಗಲ್: ಮಾರ್ಕೋನಹಳ್ಳಿ ಡ್ಯಾಂಗೆ ಜಾಕ್‌ವೆಲ್ ನಿರ್ಮಾಣ ವಿರೋಧಿಸಿ ಅ. 30ರಂದು ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕುಣಿಗಲ್ ಬಂದ್‌ಗೆ ಕರೆ ನೀಡಿ ಹೋರಾಡಲು ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ಕರೆದಿದ್ದ ಸಭೆಗೆ ಬಿಜೆಪಿ ಮುಖಂಡರು ಹೊರತು ಪಡಿಸಿ ಕಾಂಗ್ರೆಸ್, ಜೆಡಿಎಸ್, ರೈತ ಸಂಘದ ಪದಾಧಿಕಾರಿಗಳು, ವಕೀಲ ಸಂಘ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿ ಚರ್ಚಿಸಿದರು. 30ರಂದು ಅಮೃತೂರು, ಎಡೆಯೂರು ಹಾಗೂ ಹುಲಿಯೂರು ದುರ್ಗ ಪ್ರಮುಖ ಹೋಬಳಿ ಕೇಂದ್ರ ಗಳನ್ನೂ ಬಂದ್ ಮಾಡಲು ತೀರ್ಮಾನಿ ಸಲಾಯಿತು.
ಶಾಸಕ ಡಾ.ರಂಗನಾಥ್ ಹಾಗೂ ಮಾಜಿ ಸಚಿವ ಡಿ.ನಾಗರಾಜಯ್ಯ ಬಂದ್‌ಗೆ ಬೆಂಬಲ ಸೂಚಿಸಿರುವುದು ನೀರಾವರಿ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಹೋರಾಟದಿಂದ ಹಿಂದೆ ಸರಿದಿರುವ ತಾಲೂಕು ಬಿಜೆಪಿ ಮುಖಂಡರ ನಡೆಗೆ ಆಕ್ಷೇಪ ವ್ಯಕ್ತವಾಯಿತು. ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್. ಜಗದೀಶ್, ತಾಪಂ ಅಧ್ಯಕ್ಷ ಹರೀಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣ ಗೌಡ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಕೆ.ಎಲ್. ಹರೀಶ್, ಪುರಸಭೆ ಸದಸ್ಯ ರಂಗಸ್ವಾಮಿ, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್, ಕನ್ನಡ ಸೇನೆ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ಕೋಟೆ ನಾಗಣ್ಣ, ಮುಖಂಡರಾದ ಬೆನವಾರ ಶೇಷಣ್ಣ, ತರೀಕೆರೆ ಪ್ರಕಾಶ್, ಮೋದೂರುಸುರೇಶ್ ಇತರರಿದ್ದರು.