Udayavni Special

ಕಾರ್ಯನಿರ್ವಹಿಸದ ಸಾಂತ್ವನ ಕೇಂದ್ರಗಳ ರದ್ದುಗೊಳಿಸಿ


Team Udayavani, Sep 18, 2019, 1:56 PM IST

tk-tdy-1

ತುಮಕೂರು: ಜಿಲ್ಲೆಯಲ್ಲಿ ಅಗತ್ಯ ಸಿಬ್ಬಂದಿಯಿಲ್ಲದೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಾಂತ್ವನ ಕೇಂದ್ರಗಳನ್ನು ರದ್ದುಪಡಿಸಿ ನಿಯಮಾನುಸಾರ ಹೊಸ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಪಂ ಸಿಇಒ ಶುಭಾ ಕಲ್ಯಾಣ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಯೋಜನೆ, ಸ್ತ್ರೀಶಕ್ತಿ ಯೋಜನೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ತ್ತೈಮಾಸಿಕ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಮಾಲೋಚನೆಗೆ ಮಹಿಳಾ ಸಿಬ್ಬಂದಿ ಇರಲಿ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರಗಳಲ್ಲಿ ಕಡ್ಡಾಯವಾಗಿ ಒಬ್ಬ ಸಮಾ ಲೋಚಕರು, ಮೂರು ಮಂದಿ ಸಮಾಜ ಸೇವಾ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕು.

ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರಕ್ಕೆ ಬರುವ ದೌರ್ಜ ನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ದೊರೆಯ ಬೇಕೇ ಹೊರತು ನಿರಾಶರಾಗಿ ಹೋಗುವಂತಿರ ಬಾರದು. ಶೋಷಣೆಗೊಳಗಾದ ಮಹಿಳೆಯರ ಸಮಾ ಲೋಚನೆ ನಡೆಸಲು ಕೆಲ್ಲಿ ಪ್ರತ್ಯೇಕ ಕೊಠಡಿ ಇರಬೇಕು. ಸಮಾ ಲೋಚನೆಗಾಗಿ ಮಹಿಳಾ ಸಿಬ್ಬಂದಿಯನ್ನೆ ನಿಯೋ ಜಿಸಬೇಕು ಎಂದು ಹೇಳಿದರು.

ಸಾಂತ್ವನ ಕೇಂದ್ರಗಳ ರದ್ದತಿಗೆ ಕ್ರಮ: ಅಗತ್ಯ ಸೌಲಭ್ಯ ಹಾಗೂ ಸಿಬ್ಬಂದಿಯಿಲ್ಲದ ಸಾಂತ್ವನ ಕೇಂದ್ರ ರದ್ದು ಪಡಿಸಲು ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಸಾಂತ್ವನ ಕೇಂದ್ರಗಳನ್ನು ನಡೆಸುವ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.

ಕುಣಿಗಲ್, ಮಧುಗಿರಿ ಹಾಗೂ ತುರುವೇಕೆರೆ ಸಾಂತ್ವನ ಕೇಂದ್ರಗಳಲ್ಲಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಕೇಳಿ ಬಂದಿವೆ. ಇದರಂತೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು.

ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿದಾಗ ಮಾಹಿತಿ ಒದಗಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶನ ಎಸ್‌. ನಟರಾಜ್‌, ಕೇಂದ್ರಗಳಿಗೆ ಪೊಲೀಸ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದ್ದಾರೆ.

ವರದಿಯನುಸಾರ ಕುಣಿಗಲ್, ಮಧುಗಿರಿ ಹಾಗೂ ತುರುವೇಕೆರೆ ಸಾಂತ್ವನ ಕೇಂದ್ರಗಳಲ್ಲಿ ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ ಕೇಂದ್ರದಲ್ಲಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರತ್ಯೇಕ ದಾಖಲೆ, ಕಡತ, ವಹಿವಾಟುಗಳನ್ನು ನಿರ್ವಹಿಸಿರುವುದಿಲ್ಲ.

ಸಿಬ್ಬಂದಿಯೂ ನಿಗದಿತ ವೇಳೆಯಲ್ಲಿ ಸಮರ್ಪಕ ವಾಗಿ ಕಾರ್ಯನಿರ್ವಹಿಸುತ್ತಿ ಲ್ಲದಿರುವುದು ಕಂಡು ಬಂದಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಅರಿವು ಮೂಡಿಸಿ: ನಂತರ ಮಾತನಾಡಿದ ಸಿಇಒ ಶುಭಾ ಕಲ್ಯಾಣ್‌ ಸಾಂತ್ವನ ಕೇಂದ್ರದ ಕಾರ್ಯಚಟುವಟಿಕೆ ಬಗ್ಗೆ ಎಲ್ಲ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಸಿಕ ತಾಯಂದಿರ ಸಭೆ, ಅಂಗನವಾಡಿ ಕಾರ್ಯಕರ್ತೆಯರ ಸಭೆ, ಗ್ರಾಮ ಸಭೆಗಳನ್ನು ನಡೆಸಿ ಮಹಿಳೆಯರಿಗೆ ಅರಿವು ಮೂಡಿಸಬೇಕೆಂದರು.

ಮಹಿಳಾ ಸಹಾಯ ವಾಣಿ ಸಂಖ್ಯೆ 1091 ಮೂಲಕ ಸ್ವೀಕರಿಸಿದ ಕರೆಗಳ ತಾಲೂಕುವಾರು ಮಾಹಿತಿ ಪಡೆದರು. ಮಹಿಳೆಯರು ಎಚ್ಚೆತ್ತುಕೊಳ್ಳುವಂತೆ ಮಹಿಳೆಯರ ಮತ್ತು ಮಕ್ಕಳ ಅನೈತಿಕವಾಗಿ ಸಾಗಾಣಿಕೆ ತಡೆ ಕಾಯ್ದೆ ಕುರಿತು ಜಿಲ್ಲೆ ಯಲ್ಲಿರುವ ಎಲ್ಲ ಲಂಬಾಣಿ ತಾಂಡ, ಗಾರ್ಮೆಂಟ್ಸ್‌ ಹಾಗೂ ಮಹಿಳೆಯರು ಕಾರ್ಯನಿರ್ವಹಿಸುವ ಮತ್ತಿತರ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸ ಬೇಕೆಂದು ನಿರ್ದೇಶನ ನೀಡಿದರು.

ನಂತರ ಮಾತನಾಡಿದ ನಟರಾಜ್‌ ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ, ಬಹುಪತ್ನಿತ್ವ, ಅತಾ ಚಾರ, ಬಾಲ್ಯವಿವಾಹ, ಲೈಂಗಿಕ ಶೋಷಣೆ, ವಿಚ್ಛೇದನೆ, ಮತ್ತಿತರ ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳಾ ಸಹಾಯ ವಾಣಿ 1091 ಮೂಲಕ ಸ್ವೀಕರಿಸುವ ಕರೆಗಳು ನೇರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯುಕ್ತರ ಕಚೇರಿ ಗಮನಕ್ಕೆ ಹೋಗುತ್ತಿ ರುವುದರಿಂದ ಜಿಲ್ಲೆ ಯಿಂದ ಸ್ವೀಕರಿಸಿದ ಕರೆಗಳ ಮಾಹಿತಿ ನಮಗೆ ದೊರೆ ಯುತ್ತಿಲ್ಲ.

ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಕರಣಗಳಿಗೆ ಮಾತ್ರ ಸೀಮಿತಗೊಳಿಸಿ ಹೊಸ ಮಹಿಳಾ ಸಹಾಯ ವಾಣಿ ಸಂಖ್ಯೆ 181ನ್ನು ಸ್ಥಾಪಿಸಲಾಗಿದ್ದು, ಶೋಷಣೆ ಗೊಳಗಾದ ಮಹಿಳೆಯರು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ದೂರನ್ನು ದಾಖಲಿಸಬಹು ದಾಗಿದೆ ಎಂದು ತಿಳಿಸಿದರು. ವಿವಿಧ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಸಾಂತ್ವನ ಕೇಂದ್ರದ ಸಿಬ್ಬಂದಿ ಗಳು, ಮತ್ತಿತರರು ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಚಾರಣೆಗೆ ಕರೆತಂದ ಆರೋಪಿಗೆ ಕೋವಿಡ್ ಪಾಸಿಟಿವ್: 4 ಜನ ಪೋಲಿಸರು ಕ್ವಾರಂಟೈನ್ ಗೆ!

ವಿಚಾರಣೆಗೆ ಕರೆತಂದ ಆರೋಪಿಗೆ ಕೋವಿಡ್ ಪಾಸಿಟಿವ್: 4 ಜನ ಪೋಲಿಸರು ಕ್ವಾರಂಟೈನ್ ಗೆ!

ಮಣೂರು ವಾಸುದೇವ ಮಯ್ಯ ಪ್ರಕರಣ ಸಿಐಡಿಗೆ ವರ್ಗಾವಣೆ: 11 ಜನರ ವಿರುದ್ಧ ದೂರು ನೀಡಿದ ಪುತ್ರಿ

ಮಣೂರು ವಾಸುದೇವ ಮಯ್ಯ ಪ್ರಕರಣ ಸಿಐಡಿಗೆ ವರ್ಗಾವಣೆ: 11 ಜನರ ವಿರುದ್ಧ ದೂರು ನೀಡಿದ ಪುತ್ರಿ

ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ: ಪ್ರತಾಪ್‌ ಸಿಂಹ

ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ: ಪ್ರತಾಪ್‌ ಸಿಂಹ

ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ 10ನೇ ಬಲಿ

ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ 10ನೇ ಬಲಿ

ಕೋವಿಡ್ ಸಮಸ್ಯೆ ಮಧ್ಯೆ ಬೌರಿಂಗ್ ಆಸ್ಪತ್ರೆ ನಿರ್ದೇಶಕರ ಬದಲಾವಣೆ ಯಾಕೆ? ಖಂಡ್ರೆ ಪ್ರಶ್ನೆ

ಕೋವಿಡ್ ಸಮಸ್ಯೆ ಮಧ್ಯೆ ಬೌರಿಂಗ್ ಆಸ್ಪತ್ರೆ ನಿರ್ದೇಶಕರ ಬದಲಾವಣೆ ಯಾಕೆ? ಖಂಡ್ರೆ ಪ್ರಶ್ನೆ

* ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ

ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬ್ಯಾಂಕ್ ನಲ್ಲಿ ಅಗ್ನಿ ಆಕಸ್ಮಿಕ, ಕಡತಗಳಿಗೆ ಹಾನಿ

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

halli-mukha

ಹಳ್ಳಿಗಳತ್ತ ಮುಖ ಮಾಡಿದೆ ಕೋವಿಡ್‌ 19

tmk hasige

ಕೋವಿಡ್‌ 19 ಸೋಂಕಿತರಿಗಾಗಿ 100 ಹಾಸಿಗೆ ಸಿದ್ಧ

durvartane

ಶಾಸಕ ನಾಗೇಶ್‌ ವರ್ತನೆಗೆ ಆಕ್ರೋಶ

antya-kriye

ಅಂತ್ಯಕ್ರಿಯೆಗೆ ಸ್ಥಳ ಪರಿಶೀಲನೆ: ವಿರೋಧ

titi gambira

ಎಂಟು ಕೋವಿಡ್‌ ರೋಗಿಗಳ ಸ್ಥಿತಿ ಗಂಭೀರ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

9-July-15

ವಿಮ್ಸ್‌ ಶುಶ್ರೂಷಕರ ವೇತನ ಬಿಡುಗಡೆಗೆ ಒತ್ತಾಯ

ವಿಚಾರಣೆಗೆ ಕರೆತಂದ ಆರೋಪಿಗೆ ಕೋವಿಡ್ ಪಾಸಿಟಿವ್: 4 ಜನ ಪೋಲಿಸರು ಕ್ವಾರಂಟೈನ್ ಗೆ!

ವಿಚಾರಣೆಗೆ ಕರೆತಂದ ಆರೋಪಿಗೆ ಕೋವಿಡ್ ಪಾಸಿಟಿವ್: 4 ಜನ ಪೋಲಿಸರು ಕ್ವಾರಂಟೈನ್ ಗೆ!

9-July-14

ದಿನಗೂಲಿ ಕೆಲಸಕ್ಕಿಳಿದ ಖಾಸಗಿ ಬಸ್‌ ಚಾಲಕರು

9-July-13

ಕೋವಿಡ್‌ ಆಸ್ಪತ್ರೆಯಿಂದ 11 ಮಂದಿ ಡಿಸ್ಚಾರ್ಜ್‌

ಮಣೂರು ವಾಸುದೇವ ಮಯ್ಯ ಪ್ರಕರಣ ಸಿಐಡಿಗೆ ವರ್ಗಾವಣೆ: 11 ಜನರ ವಿರುದ್ಧ ದೂರು ನೀಡಿದ ಪುತ್ರಿ

ಮಣೂರು ವಾಸುದೇವ ಮಯ್ಯ ಪ್ರಕರಣ ಸಿಐಡಿಗೆ ವರ್ಗಾವಣೆ: 11 ಜನರ ವಿರುದ್ಧ ದೂರು ನೀಡಿದ ಪುತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.