ಪಾವಗಡದಲ್ಲಿ ಚೆಕ್‌ಪೋಸ್ಟ್‌ ಆರಂಭ


Team Udayavani, Apr 5, 2018, 5:24 PM IST

tmk.jpg

ಪಾವಗಡ: ಗಡಿ ತಾಲೂಕು ಪಾವಗಡ ಸುತ್ತಲೂ ಆಂಧ್ರ ಪ್ರದೇಶ ವಿರುವ ಕಾರಣ ತಾಲೂಕನ್ನು ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲಿ ದಿನದ 24ಗಂಟೆಗಳ ಕಾಲ 3 ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ವಿರೂಪಾಕ್ಷಪ್ಪತಿಳಿಸಿದ್ದಾರೆ.

ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಕ್ರಮಬದ್ಧವಾಗಿ ನಡೆಯಲು ಚುನಾವಣಾ ಆಯೋಗದ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಣ ಮತ್ತಿತರ ವಸ್ತುಗಳ ಸಾಗಾಣಿಕೆ ಮೇಲೆ ಹದ್ದಿನ ಕಣ್ಣಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರಮ್ಮನಹಳ್ಳಿ, ದೊಡ್ಡಹಳ್ಳಿ, ವೆಂಕಟಮ್ಮನಹಳ್ಳಿ, ಲಿಂಗದಹಳ್ಳಿ, ಅರಸೀಕೆರೆ, ಚಿಟ್ನನಡಕು, ಕೊಡಮಡಗು, ದೊಮ್ಮತ್ಮರಿ ಮತ್ತು ರಾಜವಂತಿಗಲ್ಲಿ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ಸರದಿಯಂತೆ ಕರ್ತವ್ಯ ನಿರ್ವಹಿಸಲು 24ಜನ ವಿಚಕ್ಷಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು. 

ವಿಡಿಯೋ ಚಿತ್ರೀಕರಣ: ಚುನಾವಣೆಗೆ ಸಂಬಂಧಿಸಿದ ಯಾವುದೇ ಸಂಗತಿಗಳನ್ನು ವಿಡಿಯೋ ಮಾಡಿಸಲಾಗುತಿದೆ. ವಿಡಿಯೋಗಳನ್ನು ವೀಕ್ಷಿಸಲೆಂದೇ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ರಾಜಕಾರಣಿಗಳ ಚುನಾವಣಾ ಪ್ರಚಾರದ ಸಂಪೂರ್ಣ ಚಿತ್ರೀಕರಣವನ್ನು ಗಮನಿಸಲಾಗುವುದು ಎಂದು ತಿಳಿಸಿದರು. 

21ಜನ ಸೆಕ್ಟರ್‌ ಅಧಿಕಾರಿಗಳ ನೇಮಕ: ಒಟ್ಟು 21ಜನ ಸೆಕ್ಟರ್‌ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಹೋಬಳಿಗೆ ಎರಡರಂತೆ ಫ್ಲೈಯಿಂಗ್‌ ಸ್ಕ್ವಾಡ್‌ನೇಮಿಸಲಾಗಿದ್ದು ಇದರಲ್ಲಿ 3ಜನ ಅಧಿಕಾರಿಗಳಿರುತ್ತಾರೆ. ಅಭ್ಯರ್ಥಿಗಳ ಖರ್ಚು, ವೆಚ್ಚಗಳನ್ನು ಪರಿಶೀಲಿಸಲು ದೊಡ್ಡಲಿಂಗಪ್ಪ ಜಂಟಿ ನಿರ್ದೇಶಕರು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಮೊ. 8105544179 ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಲೆಕ್ಕ ಪರಿಶೋಧನಾ ತಂಡದಲ್ಲಿ ಶಿವಣ್ಣ ಅಧೀಕ್ಷಕರು ಮತ್ತು ರಾಘವೇಂದ್ರ, ಚುನಾವಣಾ ನೀತಿ ಸಂಹಿತಿ ನಿರ್ವಹಣಾಧಿಕಾರಿಯಾಗಿ ಬಿ. ಚಂದ್ರಶೇಖರಪ್ಪಮೊ. 9886537204ಮತ್ತು ನಾಗರಾಜು ಮೊ. 9886537204 ವಾಣಿಜ್ಯ ತೆರೆಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
 
ತಾಲೂಕಿನಲ್ಲಿ ಒಟ್ಟು 246ಮತಗಟ್ಟೆಗಳಿದ್ದು 15ಅತಿಸೂಕ್ಷ್ಮ, 59ಸೂಕ್ಷ್ಮ, 160ಸಾಮಾನ್ಯ ಹಾಗೂ 12ಸೂಕ್ಷ್ಮ ಮತಕೇಂದ್ರಗಳು ಎಂದು ಗುರುತಿಸಲಾಗಿದೆ. ಚುನಾವಣಾ ಆಯೋಗ ಸುವಿಧ, ಸುಗಮ, ಸಮಾಧಾನ ಎಂಬ ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಿದ್ದು ಇವುಗಳನ್ನು ಉಪಯೋಗಿಸಿ ಕೊಳ್ಳಬಹುದು ಎಂದರು. 

ನಾಟಕ ಪ್ರದರ್ಶನ – ಕ್ರಮ: ಮಂಗಳವಾರ ರಾಮನವಮಿ ಹಬ್ಬದ ಅಂಗವಾಗಿ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕರುಕ್ಷೇತ್ರ ನಾಟಕ ಪ್ರದರ್ಶನದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂ ಸಲಾಗಿದೆ. ಅದುದರಿಂದ ನಾಟಕ ಪ್ರದರ್ಶನ ಆಯೋಜಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

 ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೂ ಧ್ವನಿವರ್ದಕ ಉಪಯೋಗಿಸುವಂತಿಲ್ಲ. ಎಂದು ತಿಳಿಸಿದರು. ಸಾರ್ವಜನಿಕರು ಚುನಾವಣಾ ನೀತಿ ಸಂಹಿತಿಯನ್ನು ಉಲ್ಲಂ ಸಿದ ಸಂಘಟನೆಗಳು ಕಂಡು ಬಂದರೆ ಕಚೇರಿಗೆ ತಿಳಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಇವಿಎಂ, ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ನೀಡಿದರು.
 
ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ತಹಶೀಲ್ದಾರ್‌ ವರದರಾಜು, ಚುನಾವಣಾಧಿಕಾರಿಗಳಾದ ಶ್ರೀನಿವಾಸ್‌, ಗಿರೀಶ್‌, ರಾಜಗೋಪಾಲ್‌ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಭಾಗವಹಿಸಿದ್ದರು. 

ಟಾಪ್ ನ್ಯೂಸ್

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢ

ವಿಜಯೇಂದ್ರಗೆ ಕೊಕ್‌: ಬಿ.ಎಸ್‌. ಯಡಿಯೂರಪ್ಪ ನಡೆ ನಿಗೂಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Untitled-1

ಪಿಎಸ್‌ಐ ನೇಮಕಾತಿ: ನ್ಯಾಯಾಂಗ ತನಿಖೆಗೆ ಆಗ್ರಹ

10road

ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ರಸ್ತೆ: ದಿನ ನಿತ್ಯ ಓಡಾಟಕ್ಕೆ ತೊಂದರೆ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಮಕ್ಕಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು

ಮಕ್ಕಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು

MUST WATCH

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

ಹೊಸ ಸೇರ್ಪಡೆ

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

ಒನ್ ಪ್ಲಸ್‍ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್‍ ಫೋನ್‍

news crime – hunasur

ಹುಣಸೂರು: ಕುಡುಕ ಮಗನಿಂದ ಹಲ್ಲೆ – ತಂದೆ ಸಾವು !

news ningajja

ಗಂಗಾವತಿ : ಆನೆಗೊಂದಿ ಬಳಿಯ ದುರ್ಗಾ ಪ್ಯಾರಡೈಸ್ ರೆಸಾರ್ಟ್ ಗೆ  ಬೆಂಕಿ

thumb 1

ಆರ್‌ಸಿಬಿಗೆ ಒಲಿದೀತೇ ಇನ್ನೊಂದು ಸುತ್ತಿನ ಲಕ್‌? ಲಕ್ನೋ ವಿರುದ್ಧ ಇಂದು ಎಲಿಮಿನೇಟರ್‌ ಪಂದ್ಯ

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

ಕರಾವಳಿಯಲ್ಲಿ 18 ಹೊಸ ಪಿಯು ಕಾಲೇಜು ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.