Udayavni Special

ಸರ್ಕಲ್ ಇನ್ಸ್‌ಪೆಕ್ಟರ್‌ ಸಲೀಂ ಅಹಮದ್‌ ವರ್ಗಾವಣೆ

ಶಾಸಕ ಮಸಾಲೆ ಜಯರಾಮ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಮಣಿದ ಹಿರಿಯ ಅಧಿಕಾರಿಗಳು

Team Udayavani, Aug 6, 2019, 5:03 PM IST

tk-tdy-2

ತುರುವೇಕೆರೆ: ಸಾರ್ವಜನಿಕರಿಗೆ ವಿನಾ ಕಾರಣ ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್‌ ಸಲೀಂ ಅಹಮದ್‌ನನ್ನು ಅಮಾನತು ಮಾಡಬೇಕೆಂದು ಶಾಸಕ ಮಸಾಲೆ ಜಯರಾಮ್‌ ಆಗ್ರಹಿಸಿದರು.

ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್‌ ಕಚೇರಿ ಎದುರು ನಾಗರಿಕ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಮರಳು ದಂಧೆಗೆ ಕುಮ್ಮಕ್ಕು ನೀಡಿ ಹಣ ವಸೂಲಿ ಮಾಡುತ್ತಿದ್ದು, ಜಮೀನುಗಳಿಗೆ ಕೆಲವು ರೈತರು ಕೆರೆಯಿಂದ ಹೂಳು ತೆಗೆದರೆ ದೌರ್ಜನ್ಯವೆಸಗಿ ಜೆಸಿಬಿ ಮತ್ತು ಟ್ರ್ಯಾಕ್ಟರ್‌ ಜಪ್ತಿ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದಾರೆ. ಪೊಲೀಸ್‌ ವಸತಿ ಗೃಹದ ಪಕ್ಕ ಸಾರ್ವಜನಿಕ ರಸ್ತೆಗೆ ತಂತಿ ಬೇಲಿ ನಿರ್ಮಿಸಿ ಇಂದಿರಾ ನಗರ, ಹಾಗೂ ಮೀನಾಕ್ಷಿನಗರದ ನಡುವೆ ಸಂಪರ್ಕ ಇಲ್ಲದಂತೆ ಮಾಡಿದ್ದಾರೆ. ನಾಗರಿಕರಿಗೆ ಮತ್ತು ಶಾಲಾ ಮಕ್ಕಳಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೂ ತೊಂದರೆ ನೀಡುತ್ತಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ದೈಹಿಕ ಹಲ್ಲೆ ಮತ್ತು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದು, ಹೀಗೆ ಹತ್ತು ಹಲವು ಆರೋಪಗಳಿವೆ ಎಂದು ಹೇಳಿದರು.

ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು: ಹಿರಿಯ ಪೊಲೀಸ್‌ ಅಧಿಕಾರಿ ಸೂರ್ಯನಾರಾಯಣ್‌ ರಾವ್‌, ವೈಎಸ್‌ಪಿ ರಾಮಲಿಂಗೇಗೌಡ ಸ್ಥಳಕ್ಕೆ ಆಗಮಿಸಿ ಶಾಸಕರ ಜೊತೆ ಚರ್ಚಿಸಿದರು. ನಂತರ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡ ಲಾಯಿತು. ಇದಕ್ಕೆ ಸ್ಪಂದಿಸಿದ ಡಿಐಜಿ ಯವರು ವರ್ಗಾವಣೆ ಮಾಡಿ ಆದೇಶಿಸಿದರು.

ತಂತಿ ಬೇಲಿ ಹಾಕಿರುವ ಪೊಲೀಸ್‌ ವಸತಿ ಗೃಹದ ಜಾಗ ಪರಿಶೀಲಿಸಿದರು. ಸದ್ಯದಲ್ಲೇ ತಂತಿ ಬೇಲಿ ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ದುಂಡ ರೇಣುಕಯ್ಯ, ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್‌, ವಿ.ಬಿ. ಸುರೇಶ್‌, ದಲಿತ ಮುಖಂಡ ವಿ.ಟಿ. ವೆಂಕಟರಾಮ್‌, ಪಪಂ. ಸದಸ್ಯರಾದ ಚಿದಾನಂದ್‌, ಅಂಜನ್‌ ಕುಮಾರ್‌, ಬಡಗರಹಳ್ಳಿ ರಾಮೇಗೌಡ, ಅರಳೀಕೆರೆ ಲೋಕೇಶ್‌, ಎಪಿಎಂಸಿ ನಿರ್ದೇಶಕ ಗುಡ್ಡೇನಹಳ್ಳಿ ಕಾಂತಣ್ಣ, ಅರೇಮಲ್ಲೇನಹಳ್ಳಿ ಹೇಮಚಂದ್ರ, ಹೆಡಗೀಹಳ್ಳಿ ವಿಶ್ವನಾಥ್‌ ಸೇರಿ ನೂರಾರು ಬಿಜೆಪಿ ಕಾರ್ಯಕರ್ತರು, ರೈತ ಸಂಘಗಳು, ದಲಿತಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಾಹನ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

‘ಹಳ್ಳಿ ಹುಡ್ಗಿ’ ಮೆಬಿನಾ ರಸ್ತೆ ಅಪಘಾತಕ್ಕೆ ಬಲಿ

‘ಹಳ್ಳಿ ಹುಡ್ಗಿ’ ಮೆಬಿನಾ ರಸ್ತೆ ಅಪಘಾತಕ್ಕೆ ಬಲಿ

ಹಳೇ ವೈಷಮ್ಯಕ್ಕೆ ಮೂವರು ಬಲಿ

ಹಳೇ ವೈಷಮ್ಯಕ್ಕೆ ಮೂವರು ಬಲಿ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಯಾದಗಿರಿ ಜಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 9 ಜನ ಗುಣಮುಖ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ

speed-inter-net

ಜಗತ್ತಿನ ಅತೀ ವೇಗದ ಇಂಟರ್ ನೆಟ್ ಡೇಟಾ ದಾಖಲೆ: ಸೆಕೆಂಡ್ ನಲ್ಲಿ ಸಾವಿರ ಸಿನಿಮಾ ಡೌನ್ ಲೋಡ್ !

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಪಾಕಿಸ್ತಾನದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ಜೂನ್ 1ರಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಕ್ಕೆ ಭಕ್ತರಿಗೆ ಅವಕಾಶ: ಕೋಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tmk-sankhye

ತುಮಕೂರಲ್ಲಿ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆ

klp-hemavati

ಕಲ್ಪತರು ನಾಡಿಗೆ ಹರಿದಳು ಹೇಮೆ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

lagislat

ಸೀಲ್‌ಡೌನ್‌ ಪ್ರದೇಶಕ್ಕೆ ಶಾಸಕ ಭೇಟಿ

bidi haavali

ನಾಯಿಗಳ ಹಾವಳಿ ತಪ್ಪಿಸಲು ಆಗ್ರಹ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

miss-boot

ಮಿಸ್‌ ಬೂಟ್‌ಫುಲ್!‌

muddina-maga

ಮುದ್ದಿನ ಮಗನ ನಳಪಾಕ ಪ್ರಸಂಗ

kud gita

ಕೊಡೆಗಳು ಸಾರ್‌ ಕೊಡೆಗಳು…

ahara-sampadane

ಆಹಾರ ಸಂಪಾದನೆ ಹೇಗಿರಬೇಕು?

suri direct abhi

ಅಭಿಷೇಕ್‌ ಚಿತ್ರಕ್ಕೆ ದುನಿಯಾ ಸೂರಿ ನಿರ್ದೇಶನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.