ವಿವಾದಾತ್ಮಕ ಹೇಳಿಕೆ : ಮಾಜಿ ಪ್ರಧಾನಿ ದೇವೇಗೌಡರ ಕ್ಷಮೆ ಯಾಚಿಸಿದ ಕೆ.ಎನ್.ರಾಜಣ್ಣ
Team Udayavani, Jul 1, 2022, 5:23 PM IST
ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಶುಕ್ರವಾರ ಕ್ಷಮೆ ಯಾಚಿಸಿದ್ದಾರೆ.
ದೇವೇಗೌಡರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ, ದೇವೇಗೌಡರ ಕೊಡುಗೆಗಳನ್ನು ನಾನು ಸ್ಮರಿಸುತ್ತೇನೆ, ಆ ನಿಯತ್ತು ನನಗೆ ಇದೆ. ಇಂದು ಅಥವಾ ನಾಳೆ ಅವರನ್ನು ಭೇಟಿಯಾಗುವೆ. ಅವರ ಸಾವನ್ನು ಬಯಸುವ ವ್ಯಕ್ತಿ ನಾನಲ್ಲ, ಜೆಡಿಎಸ್ ಪ್ರತಿಭಟನೆ ನಡೆಸಿದರೆ ಅಡ್ಡಿಯಿಲ್ಲ. ಗೆಲ್ಲಲಿ, ಬಿಡಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ.
ರಾಜಣ್ಣ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯಲ್ಲಿ ಖಂಡಿಸಿದ್ದು, ರಾಜಣ್ಣ ಹೇಳಿಕೆ ಪಕ್ಷ ಒಪ್ಪುವುದಿಲ್ಲ.ಅವರು ಕ್ಷಮೆ ಕೇಳಲೇ ಬೇಕು. ದೇವೇಗೌಡರಿಗೆ ದೇವರು ಇನ್ನಷ್ಟು ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
”ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈಗ ಇಬ್ಬರ ಮೇಲೆ ಕೈಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ” ಎಂಬ ರಾಜಣ್ಣ ಹೇಳಿಕೆಗೆ ಜೆಡಿಎಸ್ ನಾಯಕರು, ಕಾರ್ಯಕರ್ತರು ಮತ್ತು ಹೆಚ್ ಡಿಡಿ ಅವರ ಅಭಿಮಾನಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ
ದಂಪತಿ ಕಲಹ : ಪತಿ ಹೊಡೆದ ಗುಂಡೇಟಿಗೆ ಪತ್ನಿ ಸಾವು : ಚೇರಳ ಶ್ರೀಮಂಗಲದಲ್ಲಿ ಘಟನೆ
ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ: ಆರಗ ಜ್ಞಾನೇಂದ್ರ
ಆಗ ಇಂದಿರಾಗಾಂಧಿಗೆ ಧಿಕ್ಕಾರ, ಈಗ ಸಿಎಂ ಆಗಲು ಜೈಕಾರ: ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ
ಕೇಂದ್ರ ಸಚಿವ ಅಮಿತ್ ಶಾ, ಬಿಎಸ್ ವೈ ಭೇಟಿ ವೇಳೆ ಸಿಎಂ ಬೊಮ್ಮಾಯಿ ಬಗ್ಗೆ ಚರ್ಚೆಯಾಗಿದ್ದೇನು?
MUST WATCH
ಹೊಸ ಸೇರ್ಪಡೆ
ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ದಂಪತಿ ಕಲಹ : ಪತಿ ಹೊಡೆದ ಗುಂಡೇಟಿಗೆ ಪತ್ನಿ ಸಾವು : ಚೇರಳ ಶ್ರೀಮಂಗಲದಲ್ಲಿ ಘಟನೆ
ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ: ಆರಗ ಜ್ಞಾನೇಂದ್ರ
ಮೆಂತ್ಯೆ ಸೊಪ್ಪು ತಿನ್ನಿ…ರಕ್ತದ ಕೊಲೆಸ್ಟ್ರಾಲ್, ಡಯೆಟ್ಗೆ ಸಹಕಾರಿ