ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಜಾಗೃತಿ ಮೂಡಿಸಿದ ತಹಶೀಲ್ದಾರ್ ಗೋವಿಂದರಾಜು
Team Udayavani, Apr 25, 2021, 4:33 PM IST
ಕೊರಟಗೆರೆ: ಪಟ್ಟಣದಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ತಾಲೂಕು ಆಡಳಿತ, ಪಪಂ ಹಾಗೂ ಪೊಲೀಸ್ ಇಲಾಖೆ ಬೀದಿಗಿಳಿದು ದ್ವಿಚಕ್ರ ವಾಹನ, ಕಾರು, ಬಸ್ ಸೇರಿದಂತೆ ಕೋವಿಡ್ ನಿಯಮ ಉಲ್ಲಂಘಿಸಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಿ ಚುರುಕು ಮುಟ್ಟಿಸಿದರು.
ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಖಾಸಗಿ ಬಸ್, ದ್ವಿಚಕ್ರ ವಾಹನಗಳಲ್ಲಿ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರಕಾಯ್ದುಕೊಳ್ಳದೆ ಸಂಚರಿಸುತ್ತಿದ್ದವರಿಗೆ ತಹಶೀಲ್ದಾರ್ ಗೋವಿಂದರಾಜು, ಸಿಪಿಐ ಸಿದ್ದರಾಮೇಶ್ವರ್, ಪಿಎಸ್‌ಐ ಮುತ್ತ
ರಾಜ್ ಹಾಗೂ ಪಪಂ ಮುಖ್ಯಾಧಿ ಕಾರಿ ಲಕ್ಷ್ಮಣ್ ಕುಮಾರ್ ನೇತೃತ್ವದ ತಂಡ ವಾಹನಗಳನ್ನು ತಡೆದು ದಂಡ ವಿಧಿಸಿಸರ್ಕಾರದ ನಿಯಮ ಅನುಸರಿಸುವಂತೆ ಅರಿವು ಮೂಡಿಸಿದರು.
ಸೋಂಕು ನಿಯಂತ್ರಿಸಲು ಸಹಕರಿಸಿ: ತಹಶೀಲ್ದಾರ್ ಗೋವಿಂದರಾಜು ಮಾತನಾಡಿ, ಕೋವಿಡ್ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಇದನ್ನು ತಡೆ ಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆಹರಸಾಹಸ ಪಡುತ್ತಿದೆ. ತಾಲೂಕಿನಲ್ಲಿ ಪ್ರತಿದಿನ 60ಕ್ಕೂ ಹೆಚ್ಚು ಸೋಂ ಕಿತರ ಸಂಖ್ಯೆ ದಾಟುತ್ತಿದೆ. ಸೋಂ ಕು ನಿಯಂತ್ರಿಸಲು ಸಾರ್ವಜ ನಿಕರು ಕಡ್ಡಾಯ ವಾಗಿ ಮಾಸ್ಕ್ ಧರಿಸಿ ಸಾಮಾ ಜಿಕ ಅಂತರ ಕಾಪಾಡಿ ಕೊಳ್ಳವುದರ ಜೊ ತೆಗೆ ಸ್ಯಾನಿ ಟೈಸರ್‌ನ್ನು ಬಳಸಬೇಕು ಎಂದರು.
ಹಾಸಿಗೆಗಳ ಕೊರತೆ ಇಲ್ಲ: ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುತ್ತಿರುವುದು ಸೋಂಕು ಹೆಚ cಳಕ್ಕೆ ಪ್ರಮುಖ ಕಾರಣವಾಗುತ್ತಿದೆ.ಇದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿ ರುವವರ ಸಂಖ್ಯೆಯು ಹೆಚ್ಚುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮತ್ತು ಐಸಿಯು ಕೊರತೆಯಿಲ್ಲ. ಮುಂದಿನ ದಿನಗಳಲ್ಲಿ ಎಚ್ಚರ ವಹಿಸದಿದ್ದರೆ ಹಾಸಿಗೆಗಳು ಮತ್ತು ಐಸಿಯು ಕೊರತೆ ಉಂಟಾಗುತ್ತದೆ. ಆದ ªರಿಂದ ಮುಂಜಾ ಗ್ರತೆಯಿಂದ ಎಚ cರ ವಹಿಸ ಬೇಕು. 45ವರ್ಷಮೇಲ್ಪಟ್ಟವರು ಸ್ವಯಂಪ್ರೇರಿತರಾಗಿಬಂದು ಲಸಿಕೆ ಹಾಕಿಸಿ ಕೊಳ Ûಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಣಿಗಲ್ : ಸ್ನೇಹಿತನ ಅಂತ್ಯಕ್ರಿಯೆಗೆ ಬಂದವ ರಸ್ತೆ ಅಪಘಾತಕ್ಕೆ ಬಲಿ
ಗಾಯಾಳು ಸಾವಿಗೆ ವೈದ್ಯರ ನಿರ್ಲಕ್ಷ್ಯದ ಆರೋಪ: ಸರ್ಕಾರಿ ಆಸ್ಪತ್ರೆ ಎದುರು ನಾಗರೀಕರ ಪ್ರತಿಭಟನೆ
ಕುಣಿಗಲ್ : ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಸಾವು
ಕೊರಟಗೆರೆ: ಬಸ್ ಸ್ಟ್ಯಾಂಡ್ ಆಯಿತು ಮಾರುಕಟ್ಟೆ; ಸಾರ್ವಜನಿಕರಿಗೆ ದಿನನಿತ್ಯ ಕಿರಿ ಕಿರಿ
ಹೆಚ್.ಡಿಡಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೆ.ಎನ್ ರಾಜಣ್ಣ ವಿರುದ್ಧ ಭುಗಿಲೆದ್ದ ಆಕ್ರೋಶ