Udayavni Special

ವಾರದಲ್ಲಿ ಸೋಂಕಿತರು 102, ಕೋವಿಡ್‌ ಸೆಂಟರ್‌ನಲ್ಲಿ ಕೇವಲ 19 ಮಂದಿ


Team Udayavani, Jun 29, 2021, 6:02 PM IST

ವಾರದಲ್ಲಿ ಸೋಂಕಿತರು 102, ಕೋವಿಡ್‌ ಸೆಂಟರ್‌ನಲ್ಲಿ ಕೇವಲ 19 ಮಂದಿ

ಚಿಕ್ಕನಾಯಕನಹಳ್ಳಿ: ಕೋವಿಡ್ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಕಚೇರಿ ಕೆಲಸಗಳು ಕೆಲದಿನಗಳಿಂದ ಆರಂಭಗೊಂಡಿದ್ದು ಸೋಮವಾರ ಪಟ್ಟಣದ ತಾಲೂಕು ಕಚೇರಿ ಸೇರಿ ಇನ್ನಿತರ ಕಚೇರಿಗಳು ಸಾರ್ವಜನಿಕರಿಂದ ತುಂಬಿ ಹೋಗುತ್ತಿವೆ. ಇನ್ನು ಪಟ್ಟಣದಲ್ಲಿ ಸಾರ್ವಜನಿಕರು ಕೊರೊನಾ ಮರೆತು ಎಂದಿನಂತೆ ತಮ್ಮ ಕೆಲಸಗಳಲ್ಲಿ ನಿರತರಾಗುತ್ತಿದ್ದಾರೆ. ಇದರಿಂದಾಗಿ ಕೋವಿಡ್ ಸೋಂಕು ಭೀತಿ ಕಾಡುತ್ತಿದೆ.

ಭಯಬಿಟ್ಟು ಓಡಾಡುತ್ತಿರುವ ಜನ: ಸೋಮವಾರದಿಂದ ಬಹುತೇಕ ಎಲ್ಲಾ ಚಟುವಟಿಕೆ ಆರಂಭಗೊಂಡಿದ್ದು 52 ದಿನಗಳ ನಂತರ ಜನ ಓಡಾಡಲು ಶುರುಮಾಡಿದ್ದಾರೆ. ತಾಲೂಕಿನಲ್ಲಿ ಕೋವಿಡ್ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಪ್ರತಿ ದಿನ ಪಾಸಿಟಿವ್‌ ಕೇಸ್‌ ದಾಖಲಾಗುತ್ತಿದ್ದು ಜನ ಕೊರೊನಾ ಭಯಬಿಟ್ಟು ಓಡಾಡುತ್ತಿರುವುದು ಆತಂಕ ಮೂಡಿಸಿದೆ.

ನಗರದಲ್ಲಿ ಸಾಮಾಜಿಕ ಅಂತರವಿಲ್ಲ: ಸೋಮವಾರ ಪಟ್ಟಣದಲ್ಲಿ ಜಾತ್ರೆಯಂತೆ ಜನ ಬಂದಿದ್ದು, ಬಟ್ಟೆ ಅಂಗಡಿ, ದಿನಸಿ ಅಂಗಡಿ , ಬಾರ್‌, ಹಾರ್ಡ್‌ ವೇರ್‌, ಎಲೆಕ್ಟ್ರಿಕಲ್‌ ಸೇರಿದಂತೆ ಬಹುತೇಕ ಅಂಗಡಿಗಳ ಮುಂದೆ ಸಾರ್ವಜನಿಕರು ಮಾಸ್ಕ್ , ಸಾಮಾಜಿಕ ಅಂತರವಿಲ್ಲದೆ ವಸ್ತು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು. ತಾಲೂಕು ಕಚೇರಿ ತುಂಬ ಜನ: ಕಂದಾಯ ಇಲಾಖೆಯಲ್ಲಿನ ಕೆಲಸ ಆರಂಭಗೊಂಡಿದ್ದು ಹಳ್ಳಿಗಳಿಂದ ಜನ ತಾಲೂಕು ಕಚೇರಿಗೆ ತಮ್ಮ ತಮ್ಮ ಕೆಲಸಗಳ ನಿಮಿತ್ತ ಆಗಮಿಸಿದ್ದರು. ಫ‌ಹಣಿ ಕೇಂದ್ರ, ನಾಡಕಚೇರಿ ಮುಂಭಾಗ ಜನ ಸಾಮಾಜಿಕ ಅಂತರ ಮರೆತು ನೂಕುನುಗ್ಗಲಿನಲ್ಲಿ ನಿಂತುಕೊಂಡಿದ್ದರು.

ಕಡಿಮೆಯಾಗಿಲ್ಲ: ತಾಲೂಕಿನಲ್ಲಿ ಪ್ರತಿ ದಿನ ಕೊರೊನಾ ಪಾಸಿಟಿವ್‌ ಕೇಸ್‌ 10 ರಿಂದ 15ಕಿಂತ ಹೆಚ್ಚು ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ಗ್ರಾಪಂ ವ್ಯಾಪ್ತಿಯಲ್ಲಿಯೇ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದೆ. ಸೋಮವಾರ19 ಜನರಿಗೆ ಸೋಂಕು ತಗುಲಿದೆ.

ಸೋಂಕಿತರು ಇಳಿಮುಖ: ತಾಲೂಕಿನಲ್ಲಿ ಪ್ರತಿ ದಿನ ಕೋವಿಡ್‌ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಕೋವಿಡ್‌ ಸೆಂಟರ್‌ನಲ್ಲಿ ಕೇವಲ 19 ಮಂದಿ ಸೋಂಕಿತರು ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಡ್ಡಾಯವಾಗಿ ಸೋಂಕತರನ್ನು ಕೋವಿಡ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಕೊಡಬೇಕು ಎಂದು ಸಚಿವರು ಸೂಚನೆ ನೀಡಿದ್ದರೂ ಸೋಂಕಿತರುಕೋವಿಡ್‌ ಸೆಂಟರ್‌ಗೆ ಬರುತ್ತಿಲ್ಲ.

ಕೋವಿಡ್‌ ಸೆಂಟರ್‌ಗೆ ಬಾರದ ಸೋಂಕಿತರು :  ತಾಲೂಕಿನಲ್ಲಿ ಜೂ.22 ರಂದು25, ಜೂ.23 ರಂದು11, ಜೂ.24 ರಂದು12, ಜೂ.25 ರಂದು16, ಜೂ.27 ರಂದು 19, ಜೂ.28 ರಂದು19 ಒಟ್ಟು ಸುಮಾರು102 ಜನಕ್ಕೆ ಕೋವಿಡ್ ಪಾಸಿಟಿವ್‌ ದಾಖಲಾಗಿದೆ. ಆದರೆ, ತಾಲೂಕು ಕೋವಿಡ್‌ ಸೆಂಟರ್‌ನಲ್ಲಿಕೇವಲ 19 ಮಂದಿ ಸೋಂಕಿತರು ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದವರು ಸಾರ್ವಜನಿ ಕರ ಮಧ್ಯೆ ಇದ್ದುಕೊರೊನಾ ಹೆಚ್ಚಳಕ್ಕೆಕಾರಣವಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಕೋವಿಡ್ ಪ್ರಮಾಣ ಶೇ.5ಕ್ಕಿಂತ ಕಡಿಮೆ ಇದೆ. ತಾಲೂಕು ವೈದ್ಯಾಧಿಕಾರಿಗಳಿಗೆ, ತಾಪಂ ಇಒ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೋಂಕಿತರಿಗೆಕೋವಿಡ್‌ಕೇಂದ್ರದಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ತೇಜಸ್ವಿನಿ, ತಹಶೀಲ್ದಾರ್‌ ಚಿಕ್ಕನಾಯಕನಹಳ್ಳಿ

 

ಚೇತನ್‌

ಟಾಪ್ ನ್ಯೂಸ್

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumakuru news

ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಅನುದಾನ

thumakuru news

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

Agricultural activity

ನಿರಂತರ ತುಂತುರು ಮಳೆ ಕೃಷಿ ಚಟುವಟಿಕೆ ಕುಂಠಿತ

thumakuru news

ಸ್ಲಂ ಮಕ್ಕಳಿಗೆ ಬಾಲ್ಯ ವಿವಾಹ ವಿರೋಧಿಸುವ ಜಾಗೃತಿ ಅಗತ್ಯ

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.