ಗಾಂಧಿ ಸ್ಮಾರಕ ಭವನ ಅಭಿವೃದ್ಧಿಗೊಳಿಸಿ

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೊಠಡಿ ಅಭಿವೃದ್ಧಿ ಪಡಿಸುವಕನಸು ಇನ್ನೂ ನನಸಾಗಿಲ್ಲ

Team Udayavani, Oct 2, 2020, 2:37 PM IST

ಗಾಂಧಿ ಸ್ಮಾರಕ ಭವನ ಅಭಿವೃದ್ಧಿಗೊಳಿಸಿ

ಭಾರತವನ್ನು 200 ವರ್ಷಗಳ ಕಾಲಆಳ್ವಿಕೆ ನಡೆಸಿದಬ್ರಿಟಿಷರ ದಾಸ್ಯ ಸಂಕೋಲೆಯಿಂದ ಮುಕ್ತಗೊಳಿಸಲು ಹೋರಾಟನಡೆಸಿದ ಮಹಾತ್ಮಗಾಂಧೀಜಿ ಇಡೀ ರಾಷ್ಟ್ರದ ದೇಶಭಕ್ತರನ್ನು ಸಂಘಟಿಸಲು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ತುಮಕೂರಿಗೆ ಬಂದು ಎರಡು ದಿನ ತಂಗಿದ್ದ ಸರ್ಕಾರಿ ಕಾಲೇಜು ಕಟ್ಟಡ ಅಭಿವೃದ್ಧಿ ಪಡಿಸಿ ಸ್ಮಾರಕವನ್ನಾಗಿಸಬೇಕೆಂದು ಹಲವು ವರ್ಷಗಳಿಂದ ಒತ್ತಾಯವಿದ್ದು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಪಡಿಸುವ ಕನಸ್ಸು ಇನ್ನು ನನಸಾಗಿಲ್ಲ.

ತುಮಕೂರು: ತುಮಕೂರು ಜಿಲ್ಲೆ ಹಲವು ಸ್ವಾತಂತ್ರ್ಯ ಯೋಧರನ್ನು ನೀಡಿದ ಜಿಲ್ಲೆಯಾಗಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನೂರಾರು ಜನರು ಭಾಗವಹಿಸಿ ಪ್ರಾಣತ್ಯಾಗವನ್ನೂ ಮಾಡಿದ್ದಾರೆ. ಇಂಥ ಗಂಡು ಮೆಟ್ಟಿದ ಕಲ್ಪತರು ನಾಡು ತುಮಕೂರಿಗೆ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿಸಾರ್ವಜನಿಕ ಸಮಾರಂಭ ನಡೆಸಿ ಸರ್ಕಾರಿ ಜೂನಿಯರ್‌ ಕಾಲೇಜಿನ ಕೊಠಡಿಯಲ್ಲಿ ತಂಗಿದ್ದರು. ಅಂದಿನಿಂದಲೂ ಈಕೊಠಡಿಯನ್ನು ಸ್ಮಾರಕವಾಗಿ ಮಾಡಬೇಕೆನ್ನುವ ಕೂಗು ಇದ್ದರೂ ಇಂದಿಗೂ ಅದುಕಾರ್ಯಗತವಾಗಲೇ ಇಲ್ಲ.

ಜಿಲ್ಲೆಯಲ್ಲಿ ಹೋರಾಟಕ್ಕೆ ಕಹಳೆ: ಗಾಂಧೀಜಿಯವರು ಈ ರಾಷ್ಟ್ರವನ್ನು ಬ್ರಿಟಿಷ್‌ ದಾಸ್ಯ ಸಂಕೋಲೆಯಿಂದ ಮುಕ್ತಗೊಳಿಸಲು ಇಡೀ ದೇಶದಲ್ಲಿ ಸಂಚಾರ ಮಾಡಿ ಜನಜಾಗೃತಿ ಉಂಟು ಮಾಡಿ ಹೋರಾಟಕ್ಕೆ ಉರಿದುಂಬಿಸಲು ಬಂದಿದ್ದ ಸಂದರ್ಭದಲ್ಲಿ ತುಮಕೂರಿನಲ್ಲೂ ಎರಡು ದಿನ ತಂಗಿ ಜನಜಾಗೃತಿಉಂಟುಮಾಡಿ ತುಮಕೂರು ಜಿಲ್ಲೆಯಲ್ಲೂ ಸ್ವಾತಂತ್ರ್ಯ ಹೋರಾಟದ ಕಹಳೆಮೊಳಗಲು ಕಾರಣರಾದರು. ಅವರು ತಂಗಿದ್ದ ಸರ್ಕಾರಿ ಕಾಲೇಜುಕಟ್ಟಡ ಇಂದು ಸ್ಮಾರಕವಾಗಿದೆ. ಆದರೆ ಅದರ ಅಭಿವೃದ್ಧಿ ಆಗದೇ ಇರುವುದು ವಿಪರ್ಯಾಸವಾಗಿದೆ.

ಬಾಡಿಗೆ ಹಣದಲ್ಲಿ ಅಭಿವೃದ್ಧಿ: ಅಲ್ಲದೆ 2005-06ನೇ ಸಾಲಿನಲ್ಲಿ ನಡೆದ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಮೈದಾನದಲ್ಲಿ ಹಾಕಲಾಗಿದ್ದ ಅಮ್ಯೂಸ್‌ಮೆಂಟ್‌ ಪಾರ್ಕ್‌ ವತಿಯಿಂದ ಬಂದ ಬಾಡಿಗೆ ಹಣದಲ್ಲಿ ಗಾಂಧಿ ಸ್ಮಾರಕ ಭವನ ಮತ್ತು ಇಡೀ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನವನ್ನು ಅಭಿವೃದ್ಧಿ ಪಡಿಸುವುದಾಗಿ ಅಂದಿನ ಜಿಲ್ಲಾಧಿಕಾರಿ ಎಸ್‌.ಆರ್‌. ಉಮಾಶಂಕರ್‌ ತಿಳಿಸಿದ್ದರು.

ದಾಸ್ತಾನಾಗಿ ಬಳಕೆ: ಆದರೆ ಅವರ ಹೇಳಿಕೆಗಳು ಕೇವಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದನ್ನು ಬಿಟ್ಟರೆ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯ ವಾಗಿರಲಿಲ್ಲ. ಸ್ಮಾರಕ ಭವನದ ಮೇಲ್ಚಾವಣಿಯ ಹೆಂಚುಗಳು ಹಾಳಾಗಿ ಭವನವನ್ನು ಹಳೆಯ ವಸ್ತುಗಳ ದಾಸ್ತಾನು ಕೇಂದ್ರವಾಗಿ ಬಳಕೆ ಮಾಡಲಾಗಿತ್ತು. ನಂತರ ಸ್ಮಾರಕವನ್ನು ದುರಸ್ತಿಗೊಳಿಸಿದರು.

ಸ್ವಾರಕ ಅಭಿವೃದ್ಧಿಗೆ ತೀರ್ಮಾನ: ಸ್ಮಾರ್ಟ್‌ಸಿಟಿ ಯೋಜನೆ ಹಣದಲ್ಲಿ 4.75 ಕೋಟಿ ಹಣ ಖರ್ಚು ಮಾಡಿ ಮೂಲ ಸ್ಮಾರಕ ಇರುವ ಜಾಗ ಬಿಟ್ಟು ಬೇರೆ ಕಡೆ ಗಾಂಧಿ ಸ್ಮಾರಕ ನಿರ್ಮಿಸಲು ಮುಂದಾಗಿದ್ದರು. ಆದರೆ ನಾಗರಿಕರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಅದು ಸ್ಥಗಿತವಾಗಿದೆ. ಶಾಸಕ ಜಿ.ಬಿ. ಜ್ಯೋತಿ ಗಣೇಶ್‌ ನೇತೃತ್ವದಲ್ಲಿ ಕಾಲೇಜಿನ ಪ್ರಾಂಶುಪಾಲರು ಉಪ ನ್ಯಾಸಕರು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಭೆ ನಡೆಸಿ ಇರುವ ಸ್ಮಾರಕದ ಸ್ಥಳದಲ್ಲಿಯೇ ಅಭಿವೃದ್ಧಿ ಪಡಿಸಲು ತೀರ್ಮಾನ ಕೈಗೊಂಡಿದ್ದಾರೆ.

ಈ ಹಿಂದೆ ಶಾಸಕರಾಗಿದ್ದ ಡಾ.ಎಸ್‌. ರಫೀಕ್‌ ಅಹಮದ್‌ ಕೂಡಾ ಭೇಟಿ ನೀಡಿ ಸಣ್ಣ ಪುಟ್ಟ ದುರಸ್ತಿ ಕಾಮಗಾರಿಗಳನ್ನು ಕೈಗೊಂಡಿದ್ದರು. ಈ ವೇಳೆ ಇಲ್ಲಿ ಗಾಂಧಿ ಪುತ್ಥಳಿ ಅನಾವರಣಗೊಳಿಸುವ ಭರವಸೆನೀಡಿದ್ದರು ಅದು ಈಡೇರಿಲ್ಲ. ಈಗ ಸ್ಮಾರ್ಟ್‌ಸಿಟಿ ಯಿಂದ ಅಭಿವೃದ್ಧಿ ಪಡಿಸಲು ಮುಂದಾಗಿದ್ದು ಶೀಘ್ರವಾಗಿ ಅಭಿವೃದ್ಧಿಯಾಗಲೆಂದು ಜನರ ಹಾಗೂವಿದ್ಯಾರ್ಥಿಗಳ ಆಯಶವಾಗಿದೆ.

ಒಂದು ದಿನ ವಿಶ್ರಾಂತಿ : 1932ರಲ್ಲಿ ಮಹಾತ್ಮಗಾಂಧಿಯವರು ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸದರಿ ಜಾಗದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ ಒಂದು ದಿನ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಈ ಕಟ್ಟಡವನ್ನು ಮಹಾತ್ಮಗಾಂಧಿ ಸ್ಮಾರಕಕಟ್ಟಡವಾಗಿ ಮಾಡಲಾಗಿತ್ತು. ಆದರೆಇದರ ನಿರ್ವಹಣೆ ಅಭಿವೃದ್ಧಿ ಪಡಿಸದೆ ಇಡೀಕಟ್ಟಡ ಹಾಳಾಗಿ ಹೋಗುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ಸರ್ಕಾರಿ ಜೂನಿಯರ್‌ಕಾಲೇಜಿನ ವತಿಯಿಂದ ಸುಣ್ಣ ಬಣ್ಣ ಬಳಿದುಕಟ್ಟಡ ಹಾನಿಯಾಗದಂತೆ ನೋಡಿಕೊಂಡು ಬಂದಿದೆ.

ತುಂಬೆ ಹಾಗೂ ಟುಮುಕಿಯ ಊರು ತುಮಕೂರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಂದು ತಂಗಿ ಇಲ್ಲಿ ಸ್ವಾತಂತ್ರ್ಯಹೋರಾಟಗಾರರಿಗೆ ಸ್ಫೂರ್ತಿ ನೀಡಿದ್ದರು. ಅವರು ತಂಗಿದ್ದ ಸರ್ಕಾರಿ ಜೂನಿಯರ್‌ಕಾಲೇಜಿನ ಕೊಠಡಿಯನ್ನು ಸ್ಮಾರಕವಾಗಿ ಅಂದಿನಿಂದಲೂ ಉಳಿಸಿಕೊಂಡು ಬಂದಿದ್ದಾರೆ. ಮೂಲ ಕಟ್ಟಡಕ್ಕೆಯಾವುದೇ ತೊಂದರೆ ಆಗದಂತೆ ಆ ಜಾಗವನ್ನು ಅಭಿವೃದ್ಧಿ ಪಡಿಸಿ ಗ್ರಂಥಾಲಯ ಸೇರಿದಂತೆ ಗಾಂಧೀಜಿಯವರ ವಿಚಾರಧಾರೆಗಳು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೊರಕುವಂತೆ ಮಾಡಲು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿಕಾಮಗಾರಿ ಕೈಗೊಳ್ಳಲು ತೀರ್ಮಾನಕೈಗೊಂಡಿದ್ದೇವೆ. ಜಿ.ಬಿ.ಜ್ಯೋತಿಗಣೇಶ್‌, ಶಾಸಕ

 

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

7-ptr

Puttur: ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆ ಸೇತುವೆ ಬಳಿ ಪತ್ತೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

china

Chinese Influencer; ನೇರಪ್ರಸಾರ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ತಿಂದು ಪ್ರಾಣಬಿಟ್ಟ ಯುವತಿ

Nayakanahatti

Nayakanahatti; ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಳ್ಳರ ಗ್ಯಾಂಗ್

IPL 2025; Rishabh Pant will not leave Delhi; Rahul may come back to RCB

IPL 2025; ಡೆಲ್ಲಿ ಬಿಟ್ಟು ಹೋಗಲ್ವಂತೆ ರಿಷಭ್ ಪಂತ್..!; ರಾಹುಲ್ ಬಗ್ಗೆಯೂ ಸಿಕ್ತು ಅಪ್ಡೇಟ್

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು

“ದರ್ಶನ್‌ ಫ್ಯಾನ್ಸ್‌ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ..” ದಿವ್ಯಾ ತಾಯಿ ಕಣ್ಣೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shobha-Kharandlaje

Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್‌ ಸರ್ಕಾರ: ಕೇಂದ್ರ ಸಚಿವೆ ಶೋಭಾ 

5-tumkur

Tumkur ZP CEO ಕೊರಟಗೆರೆ ರೌಂಡ್ಸ್; ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಇಓ ಪ್ರಭು.ಜಿ

4-koratagere

Koratagere: ಮಜ್ಜಿಗೆ ಫ್ಯಾಕ್ಟರಿಯ ಬಾಯ್ಲರ್ ಸ್ಪೋಟ; ಕಾರ್ಮಿಕನಿಗೆ ಗಂಭೀರ ಗಾಯ

1-ewewqe

Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

BCCI: ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲು ಅಜಿತ್ ಅಗರ್ಕರ್ ಕಾರಣ!

8-chikodi

Chikkodi ಕ್ಷೇತ್ರಕ್ಕೆ 60 ಕೋಟಿ ರೂ. ವಿಶೇಷ ಅನುದಾನ ನೀಡಲು ಸಿಎಂಗೆ ಸಂಸದೆ ಪ್ರಿಯಂಕಾ ಮನವಿ

7-ptr

Puttur: ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆ ಸೇತುವೆ ಬಳಿ ಪತ್ತೆ

ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ ; ಸಾವಿರಾರು ಭಕ್ತರು ಭಾಗಿ

Vijayapura: ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ; ಸಾವಿರಾರು ಭಕ್ತರು ಭಾಗಿ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

ರೀಲ್ಸ್‌ ಮಾಡಲು DSLR ಕ್ಯಾಮೆರಾ ಬೇಕೆಂದು ಕೆಲಸಕ್ಕಿದ್ದ ಮನೆಯಿಂದ ಚಿನ್ನಾಭರಣ ಲೂಟಿಗೈದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.