Udayavni Special

ಗೆಳೆಯರ  ಬಳಗದಿಂದ ಊಟದ ವ್ಯವಸ್ಥೆ: ಗೋವಿಂದರಾಜ್‌

Team Udayavani, Jun 2, 2021, 7:21 PM IST

Dining arrangement

ತುಮಕೂರು: ಲಾಕ್‌ಡೌನ್‌ ಹಿನ್ನೆಲೆ ದಿನಗೂಲಿ ಕಾರ್ಮಿಕರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ಚಿಂದಿ ಆಯುವವರು, ಭಿಕ್ಷುಕರಿಗೆ ಊಟದಸಮಸ್ಯೆ ಎದುರಾಗಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾಗೆಳೆಯರ ಬಳಗದ ವತಿಯಿಂದ ನಿತ್ಯವೂ ಊಟದವ್ಯವಸ್ಥೆ ಕಲ್ಪಿಸಿದೆ. ಲಾಕ್‌ಡೌನ್‌ ಮುಗಿಯುವವರೆಗೂಈ ಸೇವೆ ನಡೆಯಲಿದೆ ಎಂದು ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್‌.ಗೋವಿಂದರಾಜ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಆಹಾರದ ಪ್ಯಾಕೇಟ್‌ ವಿತರಿಸಿ ಮಾತನಾಡಿದ ಅವರು, ನಗರದ 35 ವಾರ್ಡ್‌ಗಳಲ್ಲೂ ಕಳೆದ ಒಂದು ವಾರದಿಂದ ನಿರಂತರವಾಗಿಆಹಾರ ಮತ್ತು ಕುಡಿಯುವ ನೀರನ್ನು ವಿತರಿಸುತ್ತಿದ್ದೇವೆ.ನಗರದ ಡಿ.ಎಂ. ಪಾಳ್ಯದಲ್ಲಿ ಗೆಳೆಯರ ಬಳಗದ ಸ್ವಯಂಸೇವಕರು ಆಹಾರ ಸಿದ್ಧಪಡಿಸಿ, ಸಿದ್ಧಪಡಿಸಿದ ಆಹಾರದಪ್ಯಾಕೇಟ್‌, ಕುಡಿಯುವ ನೀರು, ತಟ್ಟೆ ಒಳಗೊಂಡಆಹಾರದ ಕಿಟ್‌ ಬ್ಯಾಗ್‌ಗೆ ತುಂಬಿ ನಗರದ 35 ವಾಡ್‌ìಗಳಲ್ಲೂ ಇರುವ ದಿನಗೂಲಿ ಕಾರ್ಮಿಕರು,ಪೌರಕಾರ್ಮಿಕರು, ಭಿಕ್ಷುಕರು ಇತರೆ ಸಂಕಷ್ಟದಲ್ಲಿರುವವರಿಗೆ ಅವರಿರುವ ಸ್ಥಳಕ್ಕೆ ತೆರಳಿ ವಿತರಿಸುತ್ತಿದ್ದಾರೆ ಎಂದರು.

ಸುಸಜ್ಜಿತ ಆ್ಯಂಬುಲೆನ್ಸ್‌ ವ್ಯವಸ್ಥೆ: ನಗರದ ಎಲ್ಲ ವಾಡ್‌ìಗಳಿಗೂ ಟ್ಯಾಂಕರ್‌ ಮೂಲಕ ಉಚಿತ ಕುಡಿಯುವನೀರಿನ ಸರಬರಾಜು ಮಾಡುತ್ತಿದ್ದು, ನಿರಂತರವಾಗಿನಡೆದುಕೊಂಡು ಬರುತ್ತಿದೆ. ಇದರ ಜೊತೆಗೆಕೋವಿಡ್‌ನಿಂದ ಆಕ್ಸಿಜನ್‌ ಬೆಡ್‌ ಕೊರತೆಯಿಂದ ಅನೇಕರುಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಕಾಲಕ್ಕೆ ಆ್ಯಂಬುಲೆನ್ಸ್‌ಸಿಗದೆ ಪರದಾಡುವಂತಹ ಪರಿಸ್ಥಿತಿಯೂ ಇದೆ.ಇಂತಹ ಸಮಯದಲ್ಲಿ ಯಾರೂ ತೊಂದರೆಗೊಳಗಾಗಬಾರದು ಎಂದು ಎರಡು ಸುಸಜ್ಜಿತ ಆ್ಯಂಬುಲೆನ್ಸ್‌ವ್ಯವಸ್ಥೆ ಮಾಡಲಾಗಿದ್ದು, ನಗರದ 35 ವಾರ್ಡ್‌ನನಾಗರಿಕರು ಈ ಆ್ಯಂಬುಲೆನ್ಸ್‌ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ 800ರಿಂದ 900 ಆಹಾರದ ಕಿಟ್‌ಗಳನ್ನು ವಿತರಿಸುತ್ತಿದ್ದು, ಇದುವರೆಗೆ 6,500ಕ್ಕೂ ಹೆಚ್ಚುಊಟದ ಕಿಟ್‌ಗಳನ್ನು ವಿತರಿಸಲಾಗಿದೆ. ನಮ್ಮ ಗೆಳೆಯರ ಬಳಗದ ಅಭಿಮಾನಿಗಳು ಸ್ವಯಂಪ್ರೇರಿತರಾಗಿಬಂದು ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆ ಬೇರೆಯವರಿಗ ೆ ಮಾದರಿಯಾಗಲಿ ಎಂಬುದುನನ ° ಆಶಯ ಎಂದು ಹೇಳಿದರು.

ಸದುಪಯೋಗ ಆಗಲಿ:ಲಾಕ್‌ಡೌನ್‌ಮುಗಿಯುವವರೆಗೂ ನಿರಂತರಾಗಿ ಅನ್ನ ಕೊಡುವ ಕಾಯಕವನ್ನುಮಾಡಲಾಗುತ್ತದೆ. ಜೂ.7ರ ನಂತರವೂ ಲಾಕ್‌ಡೌನ್‌ಮುಂದುವರಿದರೆ ಲಾಕ್‌ಡೌನ್‌ ಎಲ್ಲಿಯ ತನಕವಿರುತ್ತದೋ ಅಲ್ಲಿಯವರೆಗೂ ಪ್ರತಿನಿತ್ಯ ಆಹಾರದ ಕಿಟ್‌ವಿತರಿಸಲಾಗುವುದು. ಉಚಿತ ಆ್ಯಂಬುಲೆನ್ಸ್‌ ಸೇವೆಗಾಗಿ8088046395, 9148134684, 9972245174ಇವರನ್ನು ಸಂಪರ್ಕಿಸಬಹುದು. ಉಚಿತ ಊಟದವ್ಯವಸ್ಥೆಗಾಗಿ 8884555355,7337894871 ಕುಡಿಯುವ ನೀರಿನ ವ್ಯವಸ್ಥೆಗಾಗಿ 9483130338 ಹಾಗೂಸಂಯೋಜಕ ಟಿ.ವೈ. ಹೇಮಂತ್‌ಕುಮಾರ್‌ ಮೊ.8884555355 ಇವರನ್ನು ಸಂಪರ್ಕಿಸಿ ಸದುಪಯೋಗಪಡಿಸಿಕೊಳ್ಳಬಹುದು ಎಂದರು.

ಹೇಮಂತ್‌ಕುಮಾರ್‌, ಮಾಜಿ ನಗರಸಭಾ ಉಪಾಧ್ಯಕ್ಷ ಶ್ರೀನಿವಾಸ್‌ ಪ್ರಸಾದ್‌, ಮಾಜಿ ನಗರಸಭಾ ಅಧ್ಯಕ್ಷಜಯರಾಮ್‌, ಟಿ.ಎಚ್‌. ಯೋಗಾನಂದ್‌, ಕಿಶೋರ್‌,ಮೋಹನ್‌, ನಿರಂಜನ್‌, ದೇವರಾಜ, ಶಿವಣ್ಣ, ಸತೀಶ್‌,ಕಿರಣ್‌, ಅಬೂಬಕರ್‌, ಸುಧಾಕರ್‌, ಮಲ್ಲೇಶ್‌,ರಮೇಶ್‌, ಲೋಕೇಶ್‌ ಸೇರಿದಂತೆ ಗೆಳೆಯರ ಬಳಗದಅಭಿಮಾನಿಗಳು ಇದ್ದರು

ಟಾಪ್ ನ್ಯೂಸ್

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

rdffggggf

40 ವರ್ಷಗಳ ಬಳಿಕ ಬ್ರಿಟನ್ ರಾಣಿ ಡಯಾನಾ ಮದುವೆ ಕೇಕ್‌ ತುಂಡು ಹರಾಜು!

ಕಲ್ಲುಗಣಿ  ಪ್ರದೇಶಕ್ಕೆ  ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ

fgdfgrr

ರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

dsfgsereter

ಲಾಕ್‌ಡೌನ್ ಬೇಕೇ, ಬೇಡವೇ ಎನ್ನುವುದನ್ನು ಜನರೇ ನಿರ್ಧರಿಸಲಿ : ಜಿಲ್ಲಾಧಿಕಾರಿ ಜಿ. ಜಗದೀಶ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tytrytr

ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಜೆರಾಕ್ಸ್ ಅಂಗಡಿಯ ಲತಾ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬರ ಸಂಘದ ಒತ್ತಾಯ

thumakuru news

ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಅನುದಾನ

thumakuru news

5 ಜಿಲ್ಲೆ ಕೈಮುಖಂಡರ ಸಭೆಗೆ ಸಜ್ಜು

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

ಒಬ್ಬ ಭ್ರಷ್ಟ ಮುಖ್ಯಮಂತ್ರಿ ಬದಲಾದರೆ ಮತ್ತೊಬ್ಬ ಭ್ರಷ್ಟ ಬರುತ್ತಾರೆ: ಸಿದ್ದರಾಮಯ್ಯ

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

ಸತೀಶ್‌ ಕುಮಾರ್‌ ಸ್ಪರ್ಧೆ ಅನುಮಾನ?

ಸತೀಶ್‌ ಕುಮಾರ್‌ ಸ್ಪರ್ಧೆ ಅನುಮಾನ?

ಮಂಗಗಳ ಹತ್ಯೆ: ತನಿಖೆ ಚುರುಕು

ಮಂಗಗಳ ಹತ್ಯೆ: ತನಿಖೆ ಚುರುಕು

Untitled-1

ದ.ಕ. : ಏರುತ್ತಲೇ ಇದೆ ಕೋವಿಡ್ : 365 ಮಂದಿಗೆ ಸೋಂಕು, 7 ಸಾವು

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

“ಬೇಡಿಕೆ ಈಡೇರುವವರೆಗೆ ಜಿಎಸ್‌ಟಿ ಕಟ್ಟಬೇಡಿ’ : ಪ್ರಧಾನಿ ಸಹೋದರ ಪ್ರಹ್ಲಾದ್‌ ಮೋದಿ ಆಗ್ರಹ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ ಮೂಲದ ರಶಾದ್‌ ಹುಸೇನ್‌ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.