ಜನತಾ ಕರ್ಫ್ಯೂಗೆ ಜಿಲ್ಲಾದ್ಯಂತ ಬೆಂಬಲ

Team Udayavani, Mar 23, 2020, 3:00 AM IST

ತುಮಕೂರು: ಪ್ರಧಾನಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ ಜನ ಸಂಚಾರ ಸಂಪೂರ್ಣ ಸ್ತಬ್ಧವಾಗಿ ಜಿಲ್ಲೆಯ ಎಲ್ಲಾ ವ್ಯಾಪಾರ ವಹಿವಾಟುಗಳೂ ಬಂದ್‌ ಆಗಿದ್ದವು.

ತುಮಕೂರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜನರು ಮನೆಬಿಟ್ಟು ಬೀದಿಗೆ ಬಾರಲಿಲ್ಲ. ನಗರದ ವಿವಿಧ ಬಡಾವಣೆ ಸೇರಿ ಬಿ.ಎಚ್‌.ರಸ್ತೆ, ಕುಣಿಗಲ್‌ರಸ್ತೆ, ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಮಂಡಿಪೇಟೆ, ಸಿರಾ ರಸ್ತೆ ಸೇರಿ ಎಲ್ಲಾ ಅಂಗಡಿ ಮುಂಗಟ್ಟುಗಳು ಭಾನುವಾರ ಮುಚ್ಚಲಾಗಿತ್ತು.

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಆಟೋಗಳೂ ರಸ್ತೆಗೆ ಇಳಿದಿರಲಿಲ್ಲ. ರೈಲು ಸೇವೆ ಇಲ್ಲದ ಕಾರಣ ರೈಲು ನಿಲ್ದಾಣ ಜನರಿಲ್ಲದೇ ಬಿಕೋ ಎನ್ನುತಿತ್ತು. ತುಮಕೂರಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 48 ಬಿಕೋ ಎನ್ನುತಿತ್ತು.

ಲಾರಿ, ಬಸ್‌ ಸೇರಿ ಯಾವುದೇ ವಾಹನಗಳೂ ಸಂಚರಿಸಲಿಲ್ಲ. ನಗರದ ಬಡಾವಣೆಯಲ್ಲಿ ಬೆಳಗಿನ 7 ಗಂಟೆವರೆಗೆ ಹಾಲು ಮಾರುವ ಅಂಗಡಿ, ಚಿಕ್ಕ ಅಂಗಡಿಗಳು ತೆರೆದು ಗ್ರಾಹಕರಿಗೆ ಸೇವೆ ನೀಡಿದ ಬಳಿಕ ಬೆಳಗ್ಗೆಯಿಂದಲೇ ಮುಚ್ಚಿದ್ದವು. ನಗರದ ಜನತೆ ಬೆಳಗ್ಗೆಯಿಂದಲೂ ಹೊರಗಡೆ ಬರಲಿಲ್ಲ. ತಮ್ಮ ಮನೆಯಲ್ಲಿ ಇದ್ದ ದೃಶ್ಯಕಂಡು ಬಂದಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ