Udayavni Special

ರೈತರು ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಿ


Team Udayavani, Oct 14, 2020, 4:20 PM IST

tk-tdy-2

ತುರುವೇಕೆರೆ: ರೈತರ ಪಾಲಿಗೆ ಕಾಮಧೇನುಗಳಾಗಿರುವ ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು ಎಂದು ಶಾಸಕ ಮಸಾಲಾ ಜಯರಾಮ್‌ ರೈತರಿಗೆ ಸಲಹೆ ನೀಡಿದರು.ತಾಲೂಕಿನ ಲೋಕಮ್ಮನಹಳ್ಳಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ನಡೆದ ಜಾನುವಾರುಗಳ ಗುಂಪು ವಿಮಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನುವಾರುಗಳು ಈಗ ರೈತರ ಕುಟುಂಬದ ಆಧಾರ ಸ್ತಂಭವಾಗಿದೆ ಎಂದರು.

ಹೆಚ್ಚು ಹಾಲು ಶೇಖರಣೆ: ಒಂದೆರೆಡುರಾಸುಗಳನ್ನು ಸಾಕಿದಲ್ಲಿ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಕೋವಿಡ್‌ ಹೆಚ್ಚಾದ ಕಾರಣಕ್ಕೆ ಬೆಂಗಳೂರಿನಿಂದ ಹಲವು ಮಂದಿ ತಮ್ಮ ಗ್ರಾಮಗಳಿಗೆ ಹಿಂತಿರುಗಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಹೈನೋದ್ಯಮಕ್ಕೆ ಮುಂದಾಗಿದ್ದಾರೆ. ಪರಿಣಾಮವಾಗಿ ಹೆಚ್ಚು ಹಾಲು ಶೇಖರಣೆಯಾಗುತ್ತಿದೆ ಎಂದು ಹೇಳಿದರು.

ತಾಳ್ಮೆ ಅಗತ್ಯ: ಜನವರಿ ಅಂತ್ಯಕ್ಕೆ ಕೋವಿಡ್ ಆರ್ಭಟ ಅಂತ್ಯವಾಗುವ ಸಾಧ್ಯತೆ ಇದೆ. ತದ ನಂತರ ದೇಶದ ಆರ್ಥಿಕ ವ್ಯವಸ್ಥೆ ಸರಿ ಹೋಗಲಿದೆ.ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವುದು ಅಗತ್ಯ. ಅಲ್ಲಿಯ ತನಕ ಯಾವ ಅಭಿವೃದ್ಧಿ ಕೆಲಸಗಳೂ ಆಗುವುದಿಲ್ಲ ಎಂದು ತಿಳಿಸಿದರು.

ತಾಲೂಕಿನಲ್ಲಿ ಶೇ.80 ರಷ್ಟು ಕೆರೆಗಳು ಭರ್ತಿ: ತಾಲೂಕಿನಲ್ಲಿ ಮಳೆ ಉತ್ತಮವಾಗಿದೆ. ಹೇಮಾವತಿ ನಾಲಾ ನೀರು ಕಾಲುವೆ ಮೂಲಕ ಹಾದು ಹೋಗಿ  ತಾಲೂಕಿನ ‌ ಶೇ.80 ರಷ್ಟು ಕೆರೆಗಳು ಭರ್ತಿಯಾಗಿವೆ. ಸಿಎಸ್‌ ಪುರ ‌ ಮತ್ತು ಮಾಯಸಂದ್ರದ ಕೆಲವು ಕೆರೆಗಳು ಭ‌ರ್ತಿಯಾಗಬೇಕಿದೆ. ಅವುಗಳನ್ನು ಶೀಘ್ರದಲ್ಲೇ ತುಂಬಿಸುವ ‌ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

ಸಂಕಷ್ಟದಲ್ಲಿರುವ ಹಾಲು ಒಕ್ಕೂಟ: ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮಾತನಾಡಿ, ಕೋವಿಡ್ ದಿಂದ ಜಿಲ್ಲಾ ಹಾಲು ಒಕ್ಕೂಟ ಬಹಳ ನಷ್ಟದಲ್ಲಿದೆ. ಆದಾಗ್ಯೂ ಸಹ ರೈತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಉತ್ಪಾದಿಸುತ್ತಿರುವ ಎಲ್ಲಾ ಹಾಲುಗಳನ್ನು ಒಕ್ಕೂಟ ಖರೀದಿಸುತ್ತಿದೆ. ಹಾಲಿನ ಮಾರಾಟ ಬಹಳ ಕಡಿಮೆಯಾಗಿದೆ. ಹಾಲಿನ ಪೌಡರ್‌ ಮತ್ತು ಬೆಣ್ಣೆಶೇಖರಣೆಯಾಗುತ್ತಿದೆ. ಇವುಗಳ ದಾಸ್ತಾನಿನ ಮೇಲೆ ಹಾಲು ಒಕ್ಕೂಟ ಸಾಲ ಪಡೆದು ರೈತರಿಗೆ ನೀಡುತ್ತಿದೆ ಎಂದು ಹೇಳಿದರು.

ರಾಸುಗಳ ವಿಮೆಗೆ ಆದ್ಯತೆ ನೀಡಿ: ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸುವುದು ತಮ್ಮ ಮೊದಲ ಆದ್ಯತೆಯಾಗಬೇಕು. ಜೀವನ ನಿರ್ವಹಣೆಗೆ ದಾರಿಯಾಗಿರುವ ರಾಸುಗಳನ್ನು ಬಹಳ ಮುತುವರ್ಜಿಯಿಂದ ಸಾಕಬೇಕು. ಹಾಗಾಗಿ ವಿಮೆ ಮಾಡಿಸಿದಲ್ಲಿ ಕುಟುಂಬಕ್ಕೆತೊಂದರೆಯಾಗದು ಎಂದು ತಿಳಿಸಿದರು.ಲೋಕಮ್ಮನಹಳ್ಳಿ ಹಾಲು ಸಹಕಾರ ಸಂಘದ ಅಧ್ಯಕ್ಷಎಲ್‌.ಆರ್‌.ಅಶೋಕ್‌, ಉಪಾಧ್ಯಕ್ಷೆ ಲಕ್ಷ್ಮೀ ದೇವಮ್ಮ, ನಿರ್ದೇಶಕರಾದ ಎಂ.ಡಿ. ಹರೀಶ್‌, ಅಲ್ಲೇಗೌಡ, ಚಂದ್ರಶೇಖರಯ್ಯ, ಧರೇಶ್‌, ಚಿಕ್ಕಣ್ಣ, ಬೆಟ್ಟಯ್ಯ, ಕಾರ್ಯದರ್ಶಿ ಜಿ.ಕೆ. ಲೋಕೇಶ್‌, ವಿಸ್ತೀರಣಾಧಿಕಾರಿಗಳಾದ ಕಿರಣ್‌ ಕುಮಾರ್‌ ಮತ್ತು ದಿವಾಕರ್‌ ಉಪಸ್ಥಿತರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ ವಿಜಯ ಕುಮಾರ್, ದ.ಕನ್ನಡದ ವೆಲೇರಿಯನ್ ಡಿಸೋಜ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ ವಿಜಯ ಕುಮಾರ್, ದ.ಕನ್ನಡದ ವೆಲೇರಿಯನ್ ಡಿಸೋಜ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಬಿಹಾರ ಮೊದಲ ಹಂತದ ಚುನಾವಣೆ: ಬಿಜೆಪಿ ಮತಗಟ್ಟೆ ಏಜೆಂಟ್, ಮತದಾರ ಸಾವು

ಬಿಹಾರ ಮೊದಲ ಹಂತದ ಚುನಾವಣೆ: ಬಿಜೆಪಿ ಮತಗಟ್ಟೆ ಏಜೆಂಟ್, ಮತದಾರ ಸಾವು

ಕೋವಿಡ್ ಸಾಂಕ್ರಾಮಿಕದ‌ ಸಮಯದಲ್ಲಿ ಗ್ರಾಮೀಣ‌ ಪ್ರದೇಶದಲ್ಲಿ ಚುನಾವಣೆ ಸೂಕ್ತವಲ್ಲ: ಸುಧಾಕರ್

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚುನಾವಣೆ ಮುಂದೂಡುವುದು ಒಳಿತು :ಸಚಿವ ಸುಧಾಕರ್

mangalore

ಮಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ತಂದು, ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಪ್ರಯಾಣಿಕ

ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ – ಇಬ್ಬರು ಜೈಶ್ ಉಗ್ರರ ಹತ್ಯೆ

ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ – ಇಬ್ಬರು ಜೈಶ್ ಉಗ್ರರ ಹತ್ಯೆ

ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಗೆ ಮಂಗಳವಾರ ಬೆಳಿಗ್ಗೆ ೮ ರಿಂದ ಸಂಜೆ ೫ ರ ವರೆಗೆ ಮತದಾನ ಪ್ರಕ್ರೀಯೆ ನಡೆಯಲಿದೆ.

ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತದಾನ ಪ್ರಕ್ರೀಯೆ ಆರಂಭ! ಶೇ.9ರಷ್ಟು ಮತದಾನ

india-austraklia

ಭಾರತ-ಆಸೀಸ್ ಸರಣಿ: ದಿನಾಂಕ ನಿಗದಿಪಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಇಲ್ಲಿದೆ ವೇಳಾಪಟ್ಟಿ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೀಟದಿಂದ ಭತ್ತ ರಕ್ಷಿಸಲು ಕ್ವಿನಾಲ್‌ ಫಾಸ್‌ ಬಳಸಿ

ಕೀಟದಿಂದ ಭತ್ತ ರಕ್ಷಿಸಲು ಕ್ವಿನಾಲ್‌ ಫಾಸ್‌ ಬಳಸಿ

ಮಾರ್ಕೋನಹಳ್ಳಿ ಜಲಾಶಯ ಭರ್ತಿ

ಮಾರ್ಕೋನಹಳ್ಳಿ ಜಲಾಶಯ ಭರ್ತಿ

t-ktdy-1

ಶಿರಾದಲ್ಲಿ ರಂಗೇರಿದ ಜೆಡಿಎಸ್‌ ಪ್ರಚಾರ

tk-tdy-2

ಕೊಟ್ಟ ಭರವಸೆ ಈಡೇರಿಸಿದ ಸರ್ಕಾರ ನಮ್ಮದು

TK-TDY-1

ಕಾರ್ಯಕರ್ತರ ಉತ್ಸಾಹದಿಂದಲೇ ಗೆಲುವು

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

thokkottu.-main

ತೊಕ್ಕೊಟ್ಟು: ಅಪಘಾತದಲ್ಲಿ ನವದಂಪತಿ ಸಾವು ಪ್ರಕರಣ;ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತರ ಭೇಟಿ

ಉಡುಪಿ ವಿಜಯ ಕುಮಾರ್, ದ.ಕನ್ನಡದ ವೆಲೇರಿಯನ್ ಡಿಸೋಜ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ ವಿಜಯ ಕುಮಾರ್, ದ.ಕನ್ನಡದ ವೆಲೇರಿಯನ್ ಡಿಸೋಜ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಬಿಹಾರ ಮೊದಲ ಹಂತದ ಚುನಾವಣೆ: ಬಿಜೆಪಿ ಮತಗಟ್ಟೆ ಏಜೆಂಟ್, ಮತದಾರ ಸಾವು

ಬಿಹಾರ ಮೊದಲ ಹಂತದ ಚುನಾವಣೆ: ಬಿಜೆಪಿ ಮತಗಟ್ಟೆ ಏಜೆಂಟ್, ಮತದಾರ ಸಾವು

ಬಂಡೆ, ಚಪ್ಪಡಿಕಲ್ಲು ಬೇಕಿಲ್ಲ: ಅಶೋಕ್‌

ಬಂಡೆ, ಚಪ್ಪಡಿಕಲ್ಲು ಬೇಕಿಲ್ಲ: ಅಶೋಕ್‌

ಕೋವಿಡ್ ಸಾಂಕ್ರಾಮಿಕದ‌ ಸಮಯದಲ್ಲಿ ಗ್ರಾಮೀಣ‌ ಪ್ರದೇಶದಲ್ಲಿ ಚುನಾವಣೆ ಸೂಕ್ತವಲ್ಲ: ಸುಧಾಕರ್

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚುನಾವಣೆ ಮುಂದೂಡುವುದು ಒಳಿತು :ಸಚಿವ ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.