ಖಾಲಿ ನಿವೇಶನದಲ್ಲಿ ಬೆಳೆದಿದೆ ಗಿಡಗಂಟಿ

ವಿಷಪೂರಿತ ಹಾವುಗಳಿಂದ ನಾಗರಿಕರಿಗೆ ಸಂಕಷ್ಟ| ಖಾಲಿ ನಿವೇಶನಗಳ ಬಗ್ಗೆ ಕ್ರಮ ಕೈಗೊಳ್ಳಲು ಪಾಲಿಕೆಗೆ ಆಗ್ರಹ

Team Udayavani, Mar 1, 2021, 3:05 PM IST

Untitled-1

ತುಮಕೂರು: ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಾ, ರಾಜ್ಯದ ಗಮನ ಸೆಳೆಯುತ್ತಿರುವ, ರಾಜಧಾನಿ ಬೆಂಗಳೂರಿಗೆ ಹೆಬ್ಟಾಗಿಲಾಗಿರುವ, ನಗರ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಈಗ ಮೊದಲನೇ ಸ್ಥಾನದ ಪ್ರಯತ್ನದಲ್ಲಿರುವ ಕಲ್ಪತರು ನಗರಿ ತುಂಬಾ ಕಸ, ಕಡ್ಡಿ, ಗಿಡ, ಗಂಟಿ ಬೆಳೆದಿದೆ. ಖಾಲಿ ನಿವೇಶನಗಳಿಂದ ನಿತ್ಯವೂ ಜನ ಸಾಮಾನ್ಯರಿಗೆ ಕಿರಿ ಕಿರಿಯಾಗುತ್ತಿದೆ.

ಹೌದು, ನಗರದ ಹೊರವಲಯದಲ್ಲಿರುವ ಜನವಸತಿ ಪ್ರದೇಶದಲ್ಲಿರುವ ಜನರು ನಿತ್ಯವೂ, ಅನುಭವಿಸುತ್ತಿರುವ ತೊಂದರೆ ಇದಾಗಿದೆ. ತ್ಯಾಜ್ಯ ಸುಟ್ಟ ಕೆಟ್ಟ ವಾಸನೆ, ಮನೆಗೆ ಬೇಡವಾಗಿರುವ ವಸ್ತುಗಳನ್ನು ತಂದು ಬಿಸಾಡುವ ಜಾಗ, ಗಿಡ ಗಂಟಿ ಬೆಳೆದು ವಿಷ ಜಂತುಗಳು ವಾಸಿಸುವ ತಾಣ. ಹೀಗೆ ನಗರದ ತುಂಬಾ ಇರುವ ಸಾವಿರಾರು ಖಾಸಗಿ ಖಾಲಿ ನಿವೇಶನದಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ಒಂದು ಎರಡಲ್ಲ. ಹತ್ತಾರು ಸಮಸ್ಯೆ ಜನರನ್ನು ನಿತ್ಯ ಕಾಡುತ್ತಲೇ ಇದೆ.

ಶ್ರೀಮಂತರು ತಮ್ಮ ಹಣವನ್ನು ದ್ವಿಗುಣಗೊಳಿಸಲು ನಗರದ ವಿವಿಧ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ್ದಾರೆ. ಇನ್ನು ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ ವಾಸಿಗಳು ನಗರದಲ್ಲಿ ನಿವೇಶನ ಖರೀದಿಸಿರೆ. ನಿವೇಶನ ಖರೀದಿಸುವಾಗ ಬಂದವರು ಇನ್ನೂ ಆ ನಿವೇಶನಗಳತ್ತ ಬರದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗುತ್ತಿದೆ. ಜನವಸತಿ ಪ್ರದೇಶದಲ್ಲಿರುವ ಈ ನಿವೇಶನಗಳ ಕಡೆ ಮಾಲೀಕರು ಗಮನಹರಿಸುತ್ತಿಲ್ಲ. ಮನೆಗಳ ಪಕ್ಕದಲ್ಲಿರುವ ಈ ನಿವೇಶನಗಳು, ಸ್ಥಳೀಯ ನಿವಾಸಿಗಳಿಗೆ ಕಂಟಕವಾಗಿವೆ. ಇತ್ತ ಮನೆ ನಿರ್ಮಾಣ ಮಾಡದೇ ಇರುವ ಕಾರಣ, ಆ ಜಾಗದಲ್ಲಿ ಗಿಡ ಗಂಟಿಗಳು ಬೆಳೆದು ಪೊದೆಗಳು ನಿರ್ಮಾಣವಾಗಿವೆ. ಈ ಪೊದೆಗಳಿಂದ ವಿಷಜಂತುಗಳು ಹಾವಳಿ ಹೆಚ್ಚಾಗುತ್ತಿದೆ.

ಸ್ಪಂದಿಸದ ಪಾಲಿಕೆ ಅಧಿಕಾರಿಗಳು :  ಖಾಸಗಿ ನಿವೇಶನಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ, ತ್ಯಾಜ್ಯವನ್ನು ಖಾಲಿ ನಿವೇಶನದಲ್ಲಿ ತಂದು ಸುರಿಯುತ್ತಿದ್ದಾರೆ. ಜನರುವಾಸಿಸುವ ಸ್ಥಳಗಳಲ್ಲಿ ರಾತ್ರಿ ವೇಳೆಯಲ್ಲಿ ಸತ್ತ ಜನಗಳ ಹಾಸಿಗೆ ತಂದು ಸುಡುತ್ತಾರೆ.ರಬ್ಬರ್‌, ಟೈರ್‌, ಪ್ಲಾಸ್ಟಿಕ್‌, ಹಳೆ ಬಟ್ಟೆ ಸುಡುತ್ತಿದ್ದಾರೆ. ಈ ಬಗ್ಗೆ ನಾವು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ, ಏನೂ ಪ್ರಯೋಜನವಾಗುತ್ತಿಲ್ಲ. ಈ ಕೆಟ್ಟ ವಾಸನೆಯಿಂದ ಬಡಾವಣೆ ನಾಗರಿಕರು ಕ್ಯಾನ್ಸರ್‌ನಿಂದ ಸಾಯಬೇಕಾಗುತ್ತದೆ ಎಂದುಸರಸ್ಪತಿಪುರಂ ಎರಡನೇ ಹಂತದ ನಿವಾಸಿ ಜಿ. ಹನುಮಂತಪ್ಪ ಬೇಸರಿಸಿದ್ದಾರೆ.

ಎಲ್ಲೆಲ್ಲಿ ತೊಂದರೆ? :

ನಗರದ ಸರಸ್ಪತಿ ಪುರಂ 2ನೇ ಹಂತದ ನೀಲಗಿರಿ ತೋಪಿನ ಪ್ರದೇಶ, ವಿದ್ಯಾನಿಕೇತನ ಶಾಲೆ ಸಮೀಪ, ಸಪ್ತಗಿರಿ ಬಡಾವಣೆ, ಜಯನಗರ, ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಶ್ರೀನಗರ,ಬಂಡೇಪಾಳ್ಯ, ಶಿರಾ ಗೇಟ್‌, ಅರಳಿಮರದ ಪಾಳ್ಯ, ಭೀಮಸಂದ್ರ, ಗಂಗಸಂದ್ರ,ರಾಜೀವ್‌ ಗಾಂಧಿನಗರ, ಕುರಿಪಾಳ್ಯ, ಸದಾಶಿವನಗರ, ಇಸ್ಮಾಯಲ್‌ನಗರ,ಮರಳೂರು ದಿಣ್ಣೆ, ಶೆಟ್ಟಿಹಳ್ಳಿ ಸೇರಿದಂತೆ ನಗರದ ಪ್ರಮುಖ ಬಡಾವಣೆಯಲ್ಲಿಯೇ ನಿವೇಶನಗಳು ಖಾಲಿಯಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ನಗರದಲ್ಲಿ ಸಾವಿರಾರು ಖಾಲಿ ನಿವೇಶನಗಳಿವೆ.ಈ ನಿವೇಶನದಲ್ಲಿ ಗಿಡ ಗಂಟಿ ಬೆಳೆದು ಸ್ಥಳೀಯ ನಿವಾಸಿಗಳಿಗೆ ತೊಂದರೆ ಯಾಗುತ್ತಿದೆ ಎನ್ನುವುದುಪಾಲಿಕೆ ಗಮನಕ್ಕೆ ಬಂದಿದೆ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ. ಮೈಸೂರುಮಾದರಿಯಂತೆ ಇಲ್ಲಿಯೂ ಕ್ರಮ ಕೈಗೊಳ್ಳುತ್ತೇವೆ.  -ರೇಣುಕಾ, ಆಯುಕ್ತೆ, ಮಹಾನಗರ ಪಾಲಿಕೆ

35 ವಾರ್ಡ್‌ಗಳಲ್ಲಿಯೂ ಖಾಲಿ ನಿವೇಶನಗಳಿಂದ ಜನರಿಗೆತೊಂದರೆಯಾಗುತ್ತಿರು ವುದು ನನ್ನ ಗಮನದಲ್ಲಿದೆ. ಈ ಬಗ್ಗೆ ಚರ್ಚೆ ಆಗಿತ್ತು. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮೇಯರ್‌

ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನಗಳಿಂದ ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ. ನಿವೇಶನಗಳ ಮಾಲೀಕರಿಗೆ ಪಾಲಿಕೆಯಿಂದ ಜಾಗೃತಿ ಉಂಟು ಮಾಡಿ, ಸ್ವಚ್ಛತೆ ಕಾಪಾಡುವಂತೆ ಸೂಚಿಸಬೇಕು. ಪಾಲಿಕೆ ಪೌರ ಕಾರ್ಮಿಕರು ಖಾಲಿ ನಿವೇಶನ ಸ್ವತ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಪಾಲಿಕೆಯಿಂದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ . –ಜೆ.ಕುಮಾರ್‌, ಪಾಲಿಕೆ ಸದಸ್ಯ

 

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ

ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ

Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!

Pray for Rain: ಮಳೆಗಾಗಿ ಮಕ್ಕಳ ಮದುವೆ, ಊರಿಗೆಲ್ಲಾ ಊಟ!

Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು

Kunigal; ಮನೆ ಮಾಲೀಕನ ಮೇಲೆ ಗುಂಡು ಹಾರಿಸಿ ಹಣ ದೋಚಿ ಪರಾರಿಯಾದ ದರೋಡೆಕೋರರು

ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್‌ ಹೆಗಡೆಗೆ ಟಿಕೆಟ್‌ ತಪ್ಪಿದೆ: ಸೋಮಣ್ಣ

ಸಂವಿಧಾನ ವಿರೋಧಿ ಹೇಳಿಕೆಯಿಂದ ಅನಂತ್‌ ಹೆಗಡೆಗೆ ಟಿಕೆಟ್‌ ತಪ್ಪಿದೆ: ಸೋಮಣ್ಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.