ಸುಸೂತ್ರವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ


Team Udayavani, Jun 26, 2020, 6:49 AM IST

susutra

ತುಮಕೂರು: ಎಲ್ಲಾ ಕಡೆ ಹೆಚ್ಚುತ್ತಿರುವ ಕೋವಿಡ್‌ 19 ಮಹಾಮಾರಿಯ ಅಟ್ಟಹಾಸದ ನಡುವೆ ಎಸ್ಸೆಸ್ಸೆಲ್ಸಿ ಮಕ್ಕಳ ಪರೀಕ್ಷೆ ಹೇಗೆ ನಡೆಸುತ್ತಾರೆ ಎನ್ನುವ ಆತಂಕ ಇತ್ತು, ಆದರೆ ಗುರುವಾರದಿಂದ ಜಿಲ್ಲೆಯಲ್ಲಿ ಆರಂಭ ಗೊಂಡಿರುವ  ಎಸ್ಸೆಸ್ಸೆಲ್ಸಿ ಪರೀಕ್ಷೆ 144 ಪರೀಕ್ಷಾ ಕೇಂದ್ರಗಳಲ್ಲಿಯೂ ಸುಸೂತ್ರವಾಗಿ ಆರಂಭಗೊಂಡಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನಾ ಎಲ್ಲಾ ಕೊಠಡಿಗಳನ್ನು ಶುದ್ಶವಾಗಿರಿಸಿ ಅಗತ್ಯ ಸೌಲಭ್ಯ ಗಳೊಂದಿಗೆ ಪರೀಕ್ಷೆ ನಡೆಸಲು ಜಿಲ್ಲಾಡಳಿತ  ಸಿದ್ಶತೆ ಮಾಡಿತ್ತು. ಬೆಳಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಪರಿಕ್ಷಾ ಕೇಂದ್ರಗಳಿಗೆ ಬರುತ್ತಿದ್ದರು, ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಆರೋಗ್ಯ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು.

ಪೋಷಕರು ನಿರಾಳ: ಹತ್ತನೇ ತರಗತಿ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂದು ಕೊಂಡಿದ್ದ ಪೋಷಕರು ಆತಂಕ ಪಡದ ರೀತಿಯಲ್ಲಿ ಜಿಲ್ಲೆಯಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ಸುರಕ್ಷತಾ ಕ್ರಮಗಳನ್ನು  ಕೈಗೊಂಡು ಗುರುವಾರ ಪರೀಕ್ಷೆ ಆರಂಭ ಮಾಡಿ ಮೊದಲ ದಿನ ಸುಸೂತ್ರವಾಗಿ ಪರೀಕ್ಷೆ ನಡೆಸಿದರು.

993 ವಿದ್ಯಾರ್ಥಿಗಳು ಗೈರು: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 21139 ವಿದ್ಯಾರ್ಥಿಗಳು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13073 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು, ಅದರಲ್ಲಿ ತುಮಕೂರು ಶೈಕ್ಷಣಿಕ  ಜಿಲ್ಲೆಯ 20,733 ವಿದ್ಯಾರ್ಥಿಗಳು ಮಧುಗಿರಿ ಶೈಕ್ಷಣಿಕ ಜಿಲ್ಲೆಯ 12486 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಒಟ್ಟು ಎರಡೂ ಜಿಲ್ಲೆಯಿಂದ 33219 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದು ತುಮಕೂರು ಶೈಕ್ಷ ಣಿಕ ಹಾಗೂ ಮಧುಗಿರಿ ಶೈಕ್ಷಣಿಕ  ಜಿಲ್ಲೆಯಿಂದ 993 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

33219 ಪರೀಕ್ಷೆ ಬರೆದ ವಿದ್ಯಾರ್ಥಿಗಳು: ತುಮಕೂರು ದಕ್ಷಿಣ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಗುರುವಾರ ನಡೆದ ಎಸ್‌ ಎಸ್‌ಎಲ್‌ಸಿ ದ್ವಿತೀಯ ಭಾಷೆ ಕನ್ನಡ, ಇಂಗ್ಲಿಷ್‌ ವಿಷಯ ಪರೀಕ್ಷೆಗೆ ನೋಂದಣಿಯಾಗಿರುವ 34212  ವಿದ್ಯಾರ್ಥಿಗಳ ಪೈಕಿ 33219 ವಿದ್ಯಾರ್ಥಿ ಗಳು ಹಾಜರಾಗಿದ್ದು, 993 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ. ಆರ್‌.ಕಾಮಾಕ್ಷಿ ತಿಳಿಸಿದರು.

20,733 ವಿದ್ಯಾರ್ಥಿಗಳು ಹಾಜರು: ದ್ವಿತೀಯ ಭಾಷೆ ಕನ್ನಡ/ಇಂಗ್ಲಿಷ್‌ ವಿಷಯ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿಯಾಗಿ ರುವ 21139 ವಿದ್ಯಾರ್ಥಿಗಳ ಪೈಕಿ 20,733 ವಿದ್ಯಾರ್ಥಿಗಳು ಹಾಜರಾಗಿದ್ದು, 406 ವಿದ್ಯಾರ್ಥಿಗಳು ಗೈರು  ಹಾಜರಾಗಿದ್ದಾರೆ. 7 ವಿದ್ಯಾರ್ಥಿಗಳು ನೆರೆ ರಾಜ್ಯಗಳಿಂದ, 32 ವಿದ್ಯಾರ್ಥಿಗಳು ಕಂಟೈನ್ಮೆಂಟ್‌ ಪ್ರದೇಶ ಗಳಿಂದ, 207 ವಲಸೆ ವಿದ್ಯಾರ್ಥಿಗಳಲ್ಲಿ 192 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 15 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ದ್ವಿತೀಯ ಭಾಷೆ ಕನ್ನಡ/ಇಂಗ್ಲೀಷ್‌ ವಿಷಯ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿಯಾಗಿರುವ 13,073 ವಿದ್ಯಾರ್ಥಿಗಳ ಪೈಕಿ 12,486 ವಿದ್ಯಾರ್ಥಿಗಳು ಹಾಜರಾಗಿದ್ದು, 587  ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 8 ವಿದ್ಯಾರ್ಥಿಗಳು ನೆರೆ ರಾಜ್ಯಗಳಿಂದ, 9 ವಿದ್ಯಾರ್ಥಿಗಳು ಕಂಟೈನ್ಮೆಂಟ್‌ ಪ್ರದೇಶ ಗಳಿಂದ, ಅನಾರೋಗ್ಯದಿಂದ ವಿಶೇಷ ಕೊಠಡಿ ಯಲ್ಲಿ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 96 ವಿದ್ಯಾರ್ಥಿಗಳು ವಸತಿ  ನಿಲಯದಿಂದ, 308 ವಲಸೆ ವಿದ್ಯಾರ್ಥಿಗಳಲ್ಲಿ 307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾ ಗಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿ ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.

ಟಾಪ್ ನ್ಯೂಸ್

1-dsadsa

ಸಿಎಂ ಆಗಲು ಪಂಚಮಸಾಲಿ ಮೂರನೇ ಪೀಠ : ನಿರಾಣಿ ವಿರುದ್ಧ ಕಾಶಪ್ಪನವರ್ ಕಿಡಿ

khasagi putagalu

ವೀಕೆಂಡ್‌ ಲಾಕ್‌ ಡೌನ್‌ ಗೆ ಮುಕ್ತಿ: ಹೊಸಬರ ಸಿನ್ಮಾ ರಿಲೀಸ್‌ ಗೆ ಇದು ಸಕಾಲ

cm-b-bommai

ಯವುದೇ ಒತ್ತಡದಿಂದ ವೀಕೆಂಡ್ ಕರ್ಫ್ಯೂ ಹಿಂದಕ್ಕೆ ಪಡೆದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

accident

ಶಿವಮೊಗ್ಗ: ಅಪರಿಚಿತ ವಾಹನ ಹರಿದು ವೃದ್ಧೆಯ ದೇಹ ಛಿದ್ರ ಛಿದ್ರ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8death

ಕುಣಿಗಲ್‌: ಕತ್ತು ಕೊಯ್ದು ಅಪರಿಚಿತ ವ್ಯಕ್ತಿ ಕೊಲೆ

8CM1

ಸಿದ್ಧಗಂಗಾ ಮಠದಲ್ಲಿ ದಾಸೋಹ ದಿನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಶೌಚಾಲಯ, ನೀರಿನ ಅವ್ಯವಸ್ಥೆ: ಅಧಿಕಾರಿಗೆ ತರಾಟೆ

ಶೌಚಾಲಯ, ನೀರಿನ ಅವ್ಯವಸ್ಥೆ: ಅಧಿಕಾರಿಗೆ ತರಾಟೆ

ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕ್ರಮ

ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕ್ರಮ

ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ: ಸಚಿವ ಬಿ.ಸಿ. ನಾಗೇಶ್‌

ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ: ಸಚಿವ ಬಿ.ಸಿ. ನಾಗೇಶ್‌

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

1-dsadsa

ಸಿಎಂ ಆಗಲು ಪಂಚಮಸಾಲಿ ಮೂರನೇ ಪೀಠ : ನಿರಾಣಿ ವಿರುದ್ಧ ಕಾಶಪ್ಪನವರ್ ಕಿಡಿ

8death

ಕುಣಿಗಲ್‌: ಕತ್ತು ಕೊಯ್ದು ಅಪರಿಚಿತ ವ್ಯಕ್ತಿ ಕೊಲೆ

ಹುಟ್ಟುಹಬ್ಬದ ದಿನವೇ ಯುವತಿ ಸಾವು

ಹುಟ್ಟುಹಬ್ಬದ ದಿನವೇ ಯುವತಿ ಸಾವು

khasagi putagalu

ವೀಕೆಂಡ್‌ ಲಾಕ್‌ ಡೌನ್‌ ಗೆ ಮುಕ್ತಿ: ಹೊಸಬರ ಸಿನ್ಮಾ ರಿಲೀಸ್‌ ಗೆ ಇದು ಸಕಾಲ

ಹೊತ್ತಿ ಉರಿದ ಬಿಎಂಟಿಸಿ ಬಸ್‌

ಹೊತ್ತಿ ಉರಿದ ಬಿಎಂಟಿಸಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.