ಎತ್ತಿನಹೊಳೆ ಯೋಜನೆ: ಅಂತೂ ಇಂತೂ ಕೊರಟಗೆರೆಯಲ್ಲಿ ನೆಲೆಗೊಳ್ಳುವ ಎಲ್ಲಾ ಸಾಧ್ಯತೆ


Team Udayavani, Sep 28, 2022, 5:36 PM IST

1-sdsasad

ಕೊರಟಗೆರೆ :ಬಹುನಿರೀಕ್ಷಿತ ಶಾಶ್ವತ ನೀರಾವರಿ ಯೋಜನೆ ಎತ್ತಿನಹೊಳೆ ಅಂತೂ ಇಂತೂ ಕೊರಟಗೆರೆ ತಾಲೂಕಿನಲ್ಲಿಯೇ ನೆಲೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆಯ ಗೊಂದಲದ ನಡುವೆ 5.78 ಟಿಎಂಸಿ ಯಿಂದ 2ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಂಗೆ ಪರಿಷ್ಕೃತ ಪ್ರಸ್ತಾವನೆ ರಾಜ್ಯ ಸರಕಾರ ಸಿದ್ಧಪಡಿಸಿದೆ ಎನ್ನಲಾಗಿದೆ.

ತಾಲೂಕಿನ ಬೈರಗೊಂಡ್ಲು ಬಳಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಫರ್ ಡ್ಯಾಮ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಎರಡೂ ತಾಲೂಕಿನ ಸಬ್ ರಿಜಿಸ್ಟರ್ ರೇಟ್ ವ್ಯತ್ಯಾಸದಿಂದ ಸೃಷ್ಠಿಯಾದ ಗೊಂದಲ ಕೊರಟಗೆರೆ ತಾಲೂಕಿನ ಜನತೆ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರ 5.78 ಟಿ ಎಂ ಸಿ ಸಾಮರ್ಥ್ಯವನ್ನು ಹೊಸ ಪರಿಷ್ಕೃತ 2.78 ಟಿಎಂಸಿ ನೀರು ತಗ್ಗಿಸುವ ಮುಖೇನ 2 ಟಿಎಂಸಿ ಸಾಮರ್ಥ್ಯದ ನಿರ್ಮಾಣಕ್ಕೆ ಹೊಸ ಪ್ರಸ್ತುತ ಪ್ರಸ್ತಾವನೆ ಸರಕಾರದಿಂದ ಸಿದ್ದಗೊಂಡಿದೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಡಾ ಜಿ ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಎತ್ತಿನಹೊಳೆ ಯೋಜನೆಯ ಗೊಂದಲ ನಿವಾರಣೆ ಹಾಗೂ ಸರ್ಕಾರದ ನಿಲುವಿನ ಬಗ್ಗೆ ಅಧಿವೇಶನದ ಪ್ರಶ್ನೋತ್ತರ ವೇಳೆ ಡಾ. ಜಿ ಪರಮೇಶ್ವರ್ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳಗೆ ಕೇಳಿದ ಪ್ರಶ್ನೆಯಿಂದ ದೊರೆತ ಉತ್ತರದಲ್ಲಿ ನಿಗದಿತ ಸ್ಥಳದಲ್ಲಿಯೇ 5.78 ಟಿ ಎಂ ಸಿ ಪ್ರಸ್ತಾವನೆಯಿಂದ 2 ಟಿಎಂಸಿಗೆ ನಿಲ್ಲಿಸಲಾಗಿ ಎರಡು ತಾಲೂಕಿನ ರೈತರ ಭೂಸ್ವಾಧೀನ ಪ್ರಕ್ರಿಯೆಯ ವ್ಯತ್ಯಾಸದಿಂದ 2.78 ಟಿಎಂಸಿ ನೀರಿನ್ನು ಕುಗ್ಗಿಸಿ ರಾಜ್ಯ ಸರ್ಕಾರ ಅಧಿಕೃತ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಿರುವುದರ ಬಗ್ಗೆ ಪೂರ್ಣ ಮಾಹಿತಿ ಅಧಿವೇಶನದಲ್ಲಿ ನೀಡಲಾಗಿದೆ ಎನ್ನಲಾಗಿದೆ.

ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಂತಹ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಶ್ವತ ನೀರಾವರಿ ಯೋಜನೆಯ ಕನಸೊತ್ತು ಬರಗಾಲ ಪೀಡಿತ ಪ್ರದೇಶಗಳಾದ ತುಮಕೂರು, ಚಿಕ್ಕಬಳ್ಳಾಪುರ,ಕೋಲಾರ , ಬೆಂಗಳೂರು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಕರಾವಳಿ ಪ್ರದೇಶಗಳ ವಿರೋಧದ ನಡುವೆಯೂ, ಹಲವು ಸಮಸ್ಯೆಗಳನ್ನು ಮೆಟ್ಟು ನಿಂತು ಅಂದಿನ ಸರ್ಕಾರ ಶಾಶ್ವತ ನೀರಾವರಿಗೆ ಒಂದು ಉತ್ತಮ ಯೋಜನೆಯನ್ನು ಜನರಿಗೆ ಕೊಡುಗೆಯಾಗಿ ನೀಡಿ ಅದರಲ್ಲೂ ಕೊರಟಗೆರೆ ತಾಲ್ಲೂಕಿನಲ್ಲಿ 5.78 ಟಿಎಂಸಿ ನೀರು ಶೇಖರಣೆಯ ಬಫರ್ ಡ್ಯಾಮ್ ಗೆ ಯೋಜನೆ ರೂಪಿಸಿ ಈ ಯೋಜನೆಯ ಅನುಷ್ಠಾನಕ್ಕೆ ಅಂದಿನ ಬಜೆಟ್ ನಲ್ಲಿ ನೂರಾರು ಕೋಟಿ ರೂ ಮೀಸಲಿಟ್ಟು ಅನುಷ್ಠಾನದ ತೀವ್ರತೆಯನ್ನು ಹೆಚ್ಚಿಸಿ ರೈತರ ಅಶೋತ್ತರಕ್ಕೆ ಸ್ಪಂದಿಸಿದ್ದರು.

ಎತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕೆ ಪ್ರಾರಂಭದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯ ಅಡಚಣೆಯಾಗಿ, ನಂತರ ದಿನಗಳಲ್ಲಿ ರೈತರನ್ನು ಒಲೈಸಿ ಟೆಂಡರ್ ದಾರರು ದೊಡ್ಡಮಟ್ಟದ ಟ್ರಂಚ್ ಮೂಲಕ ಪೈಪ್ ಲೈನ್ ಕಾಮಗಾರಿಯ ವೇಗ ನೋಡಿ ಇಲ್ಲಿನ ರೈತರು ಇನ್ನು 2-3 ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆ ಪೂರ್ಣಗೊಳ್ಳಲಿದೆ ಎಂಬ ಭರವಸೆ ಹುಸಿಕೊಂಡು, ರಾಜ್ಯ ಸರ್ಕಾರ ಆಯವ್ಯಯದಲ್ಲಿ ನಿರೀಕ್ಷಿತ ಹಣಕಾಸಿನ ಕೊರತೆಯಿಂದ ಎತ್ತಿನ ಹೊಳೆ ಯೋಜನೆ ಕಾಮಗಾರಿ ವೇಗ ಕುಂಠಿತಗೊಂಡು ರೈತರ ನೀರಾವರಿ ಯೋಜನೆಯ ಕನಸು ಭಗ್ನಗೊಂಡು ನಿರಾಸೆ ಮೂಡಿಸಿದನ್ನು ನೆನಪಿಸಿಕೊಳ್ಳಬಹುದು.

ಎತ್ತಿನಹೊಳೆ ಯೋಜನೆ ಕೊರಟಗೆರೆ ತಾಲೂಕಿನಲ್ಲಿ ಕಾಲಿಟ್ಟು, ಬೈರಗೊಂಡ್ಲು ಬಳಿ 5.78 ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಮ್ ನಿರ್ಮಾಣವಾಗಲಿದೆ ಇದರಿಂದ ಕೋಳಾಲ ಭಾಗದ 8-10 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಲಿವೆ ಎಂಬ ಆಘಾತಕಾರಿ ಸುದ್ದಿಯಿಂದ ಇಲ್ಲಿನ ಜನರು ತಮ್ಮ ಊರು, ನೂರಾರು ವರ್ಷಗಳು ನೆಲದೊಂದಿಗೆ ಇದ್ದಂತಹ ಸಂಬಂಧ ಇಲ್ಲಿನ ಜನ ಕಳೆದುಕೊಳ್ಳದ ಮನಸ್ಥಿತಿಯಲ್ಲಿ ಇಲ್ಲದೆ ಕಾರಣ ಭೂಸ್ವಾಧೀನ ಪ್ರಕ್ರಿಯೆಗೆ ನಮ್ಮ ಜಮೀನನ್ನು ನೀಡೋದಿಲ್ಲ ಎಂದು ಹಲವು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳು ಸಂಧಾನ ಕೈಗೊಂಡು ಜನರ ಮನಸ್ಸನ್ನು ಒಂದು ಹಂತಕ್ಕೆ ಭೂಸ್ವಾಧೀನಕ್ಕೆ ಸಂಧಾನ ಕಾರ್ಯ ನಡೆಯುತ್ತಾದರೂ ಕೊನೆಯ ಹಂತದಲ್ಲಿ ಹಣದ ವ್ಯತ್ಯಾಸಗಳಿಂದ ಸಮರ್ಪಕ ಭೂ ಸ್ವಾಧೀನ ಪ್ರಕ್ರಿಯೆಗೆ ಜನ ಸ್ಪಂದಿಸಲಿಲ್ಲ.

ಎತ್ತಿನಹೊಳೆ ಪ್ರಾರಂಭ ಹಂತದಲ್ಲಿ ರೈತರಿಗೆ ಮಾಹಿತಿ ಕೊರತೆ ಹಾಗೂ ಬಫರ್ ಡ್ಯಾಮ್ ನಿರ್ಮಾಣದ ಪ್ರದೇಶ ಎರಡು ತಾಲೂಕಿನ ಗಡಿಗಳಿಗೆ ಹೊಂದಿಕೊಂಡಂತಿದ್ದು, ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ಗಡಿಯಾದರಿಂದ ಎರಡು ವಿಭಾಗವಾಗಿ ಭೂಸ್ವಾದಿನ ಪ್ರಕ್ರಿಯೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮದವರಿಗೆ 38 ಲಕ್ಷ ಹಾಗೂ ಕೊರಟಗೆರೆ ಭಾಗದ ಜಮೀನುಗಳಿಗೆ 18 ಲಕ್ಷ ನಿಗದಿ ಪಡಿಸಿದ್ದರಿಂದ ರೈತರಲ್ಲಿ ಆಕ್ರೋಶ ಕಂಡು ಬಂದು ಒಂದೇ ಬಫರ್ ಡ್ಯಾಮಿಗೆ ಎರಡೆರಡು ತರದ ದರ ಪಟ್ಟಿ ನೀಡಿ ವ್ಯತ್ಯಾಸ ಹಣ ನೀಡಿದರೆ ನಾವು ಜಮೀನು ಬಿಟ್ಟುಕೊಳ್ಳುವುದಿಲ್ಲ, ದೊಡ್ಡಬಳ್ಳಾಪುರ ಮಾದರಿಯಲ್ಲಿಯೇ ನಮಗೂ ಹಣ ಸಂಧಾಯವಾಗಬೇಕು ಎಂದು ಪಟ್ಟು ಬಿಡದ ಕೋಳಾಲ ವ್ಯಾಪ್ತಿಯ ರೈತರು ಪಟ್ಟು ಸಡಿಲಿಸದ ಕಾರಣ ಸರ್ಕಾರ ಅನಿವಾರ್ಯವಾಗಿ ಬೇರೆಡೆಗೆ ವರ್ಗಾಯಿಸುವ ಅಥವಾ ಬಫರ್ ಡ್ಯಾಮ್ ತಗ್ಗಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.

ಕೊರಟಗೆರೆ ತಾಲೂಕಿನ ಜನತೆಗೆ ಬಫರ್ ಡ್ಯಾಮ್ ನ ಸ್ಪಷ್ಟ ಚಿತ್ರಣ ನೀಡಿ ಎಂದು ಇತ್ತೀಚಿಗೆ ಅಧಿವೇಶನದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಡಾ. ಜಿ ಪರಮೇಶ್ವರ್ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರಿಸಿ ಈ ಹಿಂದಿನ 5.78 ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಮ್ ಅನ್ನು 2.78 ಟಿಎಂಸಿ ತಗ್ಗಿಸಿ 2 ಟಿಎಂಸಿ ನೀರು ಹಿಡಿಯುವಷ್ಟು ಸಾಮರ್ಥ್ಯದ ಬಫರ್ ಡ್ಯಾಮ್ ಗೆ ಹಸಿರು ನಿಶಾನೆ ತೋರಿಸಿದ್ದು ಕೊರಟಗೆರೆ ತಾಲೂಕಿನ ಪ್ರಸಕ್ತ ಪಟ್ಟಿಯಲ್ಲಿರುವ ಎಲ್ಲಾ ಕೆರೆಗಳಿಗೂ ನೀರು ಹಾಯಿಸುವ ಭರವಸೆಯನ್ನ ನೀಡಿದ್ದಾರೆ.

ಒಟ್ಟಾರೆ ಶಾಶ್ವತ ನೀರಾವರಿ ಯೋಜನೆ ಎತ್ತಿನ ಹೊಳೆ ಕೊರಟಗೆರೆ ತಾಲೂಕಿನಲ್ಲಿ ನೆಲೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದ್ದು, ಪ್ರಸಕ್ತ ಈ ಹಿಂದೆ ಗುರುತಿಸಲಾದ ಬೈರಗೂಂಡ್ಲು ಪ್ರದೇಶದಲ್ಲಿಯೇ ಸಾಮರ್ಥ್ಯ ಕುಗ್ಗಿಸಿ ರೈತರಿಗೂ ಸಮಸ್ಯೆ ಆಗದ ರೀತಿಯಲ್ಲಿ ಬಫರ್ ಡ್ಯಾಮ್ ನಿರ್ಮಾಣಗೊಳ್ಳುವ ಜೊತೆಗೆ ತಾಲೂಕಿನ ನಿಗದಿತ ಬಹುತೇಕ ಕೆರೆಗಳಿಗೆ ನೀರು ತುಂಬಿಸುವಂತಹ ಕಾರ್ಯ ನಡೆದಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.

ಶಾಶ್ವತ ನೀರಾವರಿ ಯೋಜನೆ ವಿಚಾರದಲ್ಲಿ ನಾನು ಮೊದಲಿನಿಂದಲೂ ಆಸಕ್ತಿ ವಹಿಸುತ್ತಿದ್ದು, ರೈತರ ಪರ ನಿರ್ಧಾರಗಳ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ವಿಚಾರದಲ್ಲಿ ಬಫರ್ ಡ್ಯಾಮ್ ಇಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ರೈತರ ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಭಾಗಗಳಲ್ಲಿ ಸಬ್ ರಿಜಿಸ್ಟ್ರಾರ್ ರೇಟ್ ವ್ಯತ್ಯಾಸಗಳಿಂದ ರೈತರು ಆ ಭಾಗದ ರೈತರ ಹಣಕ್ಕಿಂತ ಕಡಿಮೆ ಹಣವನ್ನು ನಾವು ತೆಗೆದುಕೊಳ್ಳಬಾರದು ಎಂದು ಮನಸ್ಥಿತಿಯಲ್ಲಿದ್ದ ರೈತರಿಗೆ ಬಫರ್ ಡ್ಯಾಮ್ ಸಾಮರ್ಥ್ಯ ಮಟ್ಟ ಕುಗ್ಗಿಸಿ ನಿಯೋಜಿತ ಸ್ಥಳದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ .

ಡಾ. ಜಿ ಪರಮೇಶ್ವರ ಮಾಜಿ ಉಪಮುಖ್ಯಮಂತ್ರಿ, ಶಾಸಕ

ರೈತರ ಜೀವನಾಡಿಗಳಾದ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಗಳ ವಿಚಾರದಲ್ಲಿ ಸರ್ಕಾರಗಳಿಗೆ ಬದ್ಧತೆ ಇರಬೇಕು, ಇಲ್ಲಿನ ರೈತರಿಗೆ ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ಉತ್ತಮವಾಗಿ ಸ್ಪಂದಿಸಿದ್ದರೆ ರೈತರು ಯಾವುದೇ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ, ಒಂದೇ ಸ್ಥಳಕ್ಕೆ ಎರಡೆರಡು ದರ ನಿಗದಿ ಮಾಡಿದರೆ ಯಾವ ನ್ಯಾಯ? ಅನಾವಶ್ಯಕ ವೆಚ್ಚಗಳಿಗೆ ಸರ್ಕಾರ ಕಡಿವಾಣ ಹಾಕಿ ಇಂತಹ ಉತ್ತಮ ನೀರಾವರಿ ಯೋಜನೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದಿರುವುದು ದುರದೃಷ್ಟಕರ, ಆದರೂ ಕೊರಟಗೆರೆ ತಾಲೂಕಿನಲ್ಲಿ ರೈತರಲ್ಲಿ ಸ್ವಲ್ಪಮಟ್ಟಿನ ತೃಪ್ತಿ ತಂದಿದ್ದು ತಾಲೂಕಿನ ಎಲ್ಲಾ ಕೆರೆಗಳು ನೀರು ಹಾಯಿಸುವಂತ ಕೆಲಸವಾಗಬೇಕು.

ಸಿದ್ದರಾಜು..ಅಧ್ಯಕ್ಷ ತಾಲೂಕು ರೈತ ಸಂಘ ಕೊರಟಗೆರೆ

ಸಿದ್ದರಾಜು. ಕೆ.

ಟಾಪ್ ನ್ಯೂಸ್

ಇಂದ್ರಾಳಿ ಕಾಂಕ್ರೀಟ್‌ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ: ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?

ಇಂದ್ರಾಳಿ ಕಾಂಕ್ರೀಟ್‌ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ: ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?

ಸರ್ವಪಕ್ಷ ಸಭೆಯ ಮೂಲಕ ಜಿ20 ಅಧ್ಯಕ್ಷತೆಗೆ ಶುಭಾರಂಭ

ಸರ್ವಪಕ್ಷ ಸಭೆಯ ಮೂಲಕ ಜಿ20 ಅಧ್ಯಕ್ಷತೆಗೆ ಶುಭಾರಂಭ

ಮುಂದಿನ ಸಿಎಂ: ಕೂಸು ಹುಟ್ಟುವ ಮುನ್ನವೇ ಕುಲಾವಿಗೆ ಜಗಳ

ಮುಂದಿನ ಸಿಎಂ: ಕೂಸು ಹುಟ್ಟುವ ಮುನ್ನವೇ ಕುಲಾವಿಗೆ ಜಗಳ

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಮಂಗಳೂರು: ಬೊಂದೇಲ್‌ ವೃತ್ತಕ್ಕೆ “ಕವಿ ಸರ್ವಜ್ಞ’ ಹೆಸರು

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಕದ್ರಿ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣ; ಶೀಘ್ರ ಗ್ರಾಹಕರ ಸೇವೆಗೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ಪ್ರಾಥಮಿಕ ಶಿಕ್ಷಣ ಮೌಲ್ಯಯುತ: ಡಾ| ಹೆಗ್ಗಡೆ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಸುಳ್ಯ ಕ್ಷೇತ್ರದಲ್ಲಿ 22 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasdasd

ರೌಡಿಶೀಟರ್ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

1-asdadadad

ಪರಮೇಶ್ವರ್ ರನ್ನು ಅಧ್ಯಕ್ಷರಾಗಿದ್ದಾಗಲೇ ಸಿಎಂ ಮಾಡಲಿಲ್ಲ ಈಗ ಮಾಡುತ್ತಾರಾ?: ಹೆಚ್ ಡಿಕೆ

1-adadad

ಕೊರಟಗೆರೆಯಲ್ಲಿ ಸಿಎಂ ಬೊಮ್ಮಾಯಿ, ಬಿಎಸ್ ವೈ ನೇತೃತ್ವದಲ್ಲಿ ಬೃಹತ್ ಸಮಾವೇಶ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ, ಬಹುಮತದೊಂದಿಗೆ ಅಧಿಕಾರಕ್ಕೆ:ಎಚ್‌.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್‌ ಪರ ಅಲೆ, ಬಹುಮತದೊಂದಿಗೆ ಅಧಿಕಾರಕ್ಕೆ:ಎಚ್‌.ಡಿ. ಕುಮಾರಸ್ವಾಮಿ

ಕೊರಟಗೆರೆ: ಪ್ರೀತಿಗೆ ಅಡ್ಡಿಯಾದ ಗಂಡನನ್ನೇ ಮುಗಿಸಲು 20 ಸಾವಿರ ರೂ. ಸುಪಾರಿ ನೀಡಿದ ಪತ್ನಿ…

ಕೊರಟಗೆರೆ: ಪ್ರೀತಿಗೆ ಅಡ್ಡಿಯಾದ ಗಂಡನನ್ನೇ ಮುಗಿಸಲು 20 ಸಾವಿರ ರೂ. ಸುಪಾರಿ ನೀಡಿದ ಪತ್ನಿ…

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

“ಬುಲ್ಡೋಜರ್‌ ಪ್ರದರ್ಶನವಾಗಿಬಿಟ್ಟಿದೆ’: ಪಾಟ್ನಾ ಹೈಕೋರ್ಟ್‌

“ಬುಲ್ಡೋಜರ್‌ ಪ್ರದರ್ಶನವಾಗಿಬಿಟ್ಟಿದೆ’: ಪಾಟ್ನಾ ಹೈಕೋರ್ಟ್‌

1-sadasds

ಮೊದಲ ಟೆಸ್ಟ್‌ ರೋಚಕ ಹಂತಕ್ಕೆ; ಇಂಗ್ಲೆಂಡ್‌ ವಿರುದ್ದ ಗೆಲುವಿನ ನಿರೀಕ್ಷೆಯಲ್ಲಿ ಪಾಕ್

ಇಂದ್ರಾಳಿ ಕಾಂಕ್ರೀಟ್‌ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ: ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?

ಇಂದ್ರಾಳಿ ಕಾಂಕ್ರೀಟ್‌ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ: ಪರ್ಕಳ ರಸ್ತೆಗೆ ಗ್ರಹಣ ಮುಕ್ತಿ ಎಂದು?

ದತ್ತ ಪೀಠ ಆಸ್ತಿ ಕಬಳಿಸುವವರನ್ನು ಸುಮ್ಮನೆ ಬಿಡಲ್ಲ: ಸಿ.ಟಿ.ರವಿ

ದತ್ತ ಪೀಠ ಆಸ್ತಿ ಕಬಳಿಸುವವರನ್ನು ಸುಮ್ಮನೆ ಬಿಡಲ್ಲ: ಸಿ.ಟಿ.ರವಿ

ಸರ್ವಪಕ್ಷ ಸಭೆಯ ಮೂಲಕ ಜಿ20 ಅಧ್ಯಕ್ಷತೆಗೆ ಶುಭಾರಂಭ

ಸರ್ವಪಕ್ಷ ಸಭೆಯ ಮೂಲಕ ಜಿ20 ಅಧ್ಯಕ್ಷತೆಗೆ ಶುಭಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.