ರೈತರಿಂದ ರಾಗಿ ಖರೀದಿ: ಸಾಲುಗಟ್ಟಿ ನಿಂತ ವಾಹನಗಳು
Team Udayavani, Feb 1, 2023, 4:35 PM IST
ಮಧುಗಿರಿ: ಮಧುಗಿರಿಯ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ರಾಗಿ ಖರೀದಿ ಜೋರಾಗಿದ್ದು, ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತಿದ್ದು, ರೈತರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕಿದೆ.
ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಇದೇ ಮಾ.31 ರವರೆಗೂ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಉಪವಿಭಾಗದ ಮಧುಗಿರಿ, ಕೊರಟಗೆರೆ ಹಾಗೂ ಪಾವಗಡದ ರೈತರಿಂದ ರಾಗಿ ಖರೀದಿ ನಡೆಯುತ್ತಿದೆ. ಈಗಾಗಲೇ 23 ಸಾವಿರ ಕ್ವಿಂಟಲ್ ರಾಗಿ ಖರೀದಿಯು ನಡೆದಿದ್ದು, ಪ್ರತಿ ದಿನ 45 ರೈತರಿಗೆ ಟೋಕನ್ ನೀಡಿದ್ದು, ನಿಯಮಾನುಸಾರ ಖರೀದಿ ನಡೆಯಲಿದೆ ಎಂದು ಗೋದಾಮುವ್ಯವಸ್ಥಾಪಕ ಮುನಿರಾಜು ತಿಳಿಸಿದ್ದಾರೆ.
ರೈತರಿಗೆ ಅಗತ್ಯ ಸೌಲಭ್ಯಕ್ಕೆ ಆಗ್ರಹ: ಪ್ರತಿ ದಿನ 45 ರೈತರಿಂದ ರಾಗಿ ಖರೀದಿ ನಡೆಯಲಿದ್ದು, ರಾತ್ರಿಯಾದರೂ ಈ ಪ್ರಕ್ರಿಯೆ ಮುಗಿಯುತ್ತಿಲ್ಲ. ಮತ್ತೆ ಬೆಳಗ್ಗೆ ಹಿಂದಿನ ದಿನದಲ್ಲಿ ಬಾಕಿ ಉಳಿದ ರೈತರಿಂದ ರಾಗಿ ಪಡೆಯುತ್ತಿದ್ದು, ಬೆಳಗ್ಗೆ ಬಂದಂತಹ ರೈತರುಕಾಯಬೇಕಾಗಿದೆ. ನಿಯಮಾನುಸಾರ ರೈತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕಿದ್ದು, ಅಲ್ಲಿಕುಡಿಯುವ ನೀರಿನ ಸೌಲಭ್ಯವಿಲ್ಲ. ರಾತ್ರಿ ಬಂದ ರೈತರು ತಮ್ಮ ರಾಗಿ ತಂದ ಟ್ರ್ಯಾಕ್ಟರ್ ಮೇಲೆ ಹಾಗೂ ಕೆಳಗಡೆ ಮಲಗುತ್ತಿದ್ದಾರೆ. ಇಂತಹ ಮೈ ಕೊರೆವ ಚಳಿಯಲ್ಲಿ ತಮ್ಮ ಫಸಲನ್ನು ಕಾಯಲು ರೈತರು ಸರತಿಯಂತೆ ನಿದ್ದೆಗೆ ಜಾರುತ್ತಾರೆ. ಇಂತಹ ಸಮಯದಲ್ಲಿ ತಾಲೂಕು ಆಡಳಿತ ರೈತರ ನೆರವಿಗೆ ಬರಬೇಕಿದ್ದು, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಆರ್ಥಿಕ ಹೊರೆ: ನಾವು ಕಳೆದ ರಾತ್ರಿಯೇ ಬಂದಿದ್ದು, ವಾಹನವನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದೇವೆ. ವಾಹನ ನಿಂತು ಟೈರ್‌ಗಳು ಹಾಳಾಗುತ್ತಿದ್ದು ಇದರಿಂದ ನಮಗೆ ಹೆಚ್ಚಿನ ಆರ್ಥಿಕ ಹೊರೆಬೀಳುತ್ತದೆ. ಬೇಗ ಅಧಿಕಾರಿಗಳು ರಾಗಿ ಖರೀದಿಪ್ರಕ್ರಿಯೆ ಮುಗಿಸಿದರೆ ಮನೆಗೆ ಹೋಗಲು ಸಹಕಾರಿಯಾಗುತ್ತದೆ ಎಂದು ನೀಲಗೊಂಡನಹಳ್ಳಿ ರೈತ ಲೋಕೇಶ್ ತಿಳಿಸಿದರು.
ರೈತರಿಂದ ಈಗಾಗಲೇ 23 ಸಾವಿರ ಕ್ವಿಂಟಲ್ ರಾಗಿ ಖರೀದಿಸಿದ್ದು,ಶೇಖರಣೆಗೆ ಅಗತ್ಯ ಸ್ಥಳವಿದೆ. ರೈತರಲ್ಲಿಯಾವುದೇ ಗೊಂದಲವಿಲ್ಲದೆ ಖರೀದಿಪ್ರಕ್ರಿಯೆ ನಡೆದಿದ್ದು, ಟೋಕನ್ ಪಡೆದರೈತರು ಸರತಿಯಲ್ಲಿ ಬಂದರೆ ಬೇಗಖರೀದಿಸಲಾಗುವುದು.– ಮುನಿರಾಜ್, ಗೋದಾಮು ವ್ಯವಸ್ಥಾಪಕ
ರೈತರಿಂದ ರಾಗಿ ಪಡೆಯಲು ಪ್ರೂಟ್ಸ್ ಐಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೋಕನ್ ಪಡೆದಿರುವಯಾವುದೇ ರೈತರನ್ನು ವಾಪಸ್ ಕಳಿಸುತ್ತಿಲ್ಲ. 23 ಸಾವಿರ ಕ್ವಿಂಟಲ್ ಖರೀದಿಯಿಂದ ಉಪವಿಭಾಗದ ರೈತರಿಗೆಲಾಭವಾಗಿದೆ.– ಗಣೇಶ್, ಆಹಾರ ಶಿರಸ್ತೇದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕುಣಿಗಲ್:ಬೈಕ್ ಅವಘಡದಲ್ಲಿ ಇಂಜಿನಿಯರ್ ಸೇರಿ ಇಬ್ಬರ ಮೃತ್ಯು
ಚುನಾವಣಾ ಕಾವು: ಉತ್ತರ ಪ್ರದೇಶದ ಸಿ.ಎಂ ಯೋಗಿ ಭೇಟಿಯಾದ ಕೆ.ಎಂ ಮುನಿಯಪ್ಪ
ಮೋದಿ ಕಮಾಲ್ ಮುಂದೆ ಕಾಂಗ್ರೆಸ್ ಶೂನ್ಯ: ಜೆಪಿ ನಡ್ಡಾ ವಾಗ್ಧಾಳಿ
ಕೊರಟಗೆರೆಯ ದುಡ್ಡನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿ
ಮಾದಿಗ ಸಮುದಾಯ ಡಾ.ಜಿ.ಪರಮೇಶ್ವರ್ ಜತೆಗಿದೆ:ಕಾಂಗ್ರೆಸ್ ಮುಖಂಡ ವಾಲೇಚಂದ್ರಯ್ಯ
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ