ನೆಪ ಮಾತ್ರಕ್ಕೆ ಸರ್ಕಾರದಿಂದ ಮೇವು ಕೇಂದ್ರ ಸ್ಥಾಪನೆ

ಬಾಗುವಾಳದ ಕೇಂದ್ರದಲ್ಲಿ ವಾರದಿಂದ ಮೇವಿಲ್ಲದೇ ರೈತರು ಪರದಾಟ: ತಾಲೂಕು ಆಡಳಿತದ ವಿರುದ್ಧ ಆಕ್ರೋಶ

Team Udayavani, May 22, 2019, 4:39 PM IST

ತಿಪಟೂರು ತಾಲೂಕಿನ ರಂಗಾಪುರ ಪಶು ಆಸ್ಪತ್ರೆಯಲ್ಲಿ ಮೇವು ಕಾರ್ಡ್‌ಗೆ ಕಾಯುತ್ತಿರುವ ರೈತರು.

ತಿಪಟೂರು: ಸರ್ಕಾರದಿಂದ ತಾಲೂಕಿನ ಹೊನ್ನವಳ್ಳಿ ಹೋಬಳಿ ಬಾಗುವಾಳದಲ್ಲಿ ಮೇವು ಕೇಂದ್ರ ತೆರೆದಿದೆ. ಆದರೂ ವಾರದಿಂದ ಮೇವಿಲ್ಲದೇ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ತಾಲೂಕು ಆಡಳಿತ ನಮಗೂ ರೈತರಿಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಬಾಗುವಾಳದಲ್ಲಿ ತೆರೆದಿರುವ ಮೇವು ಕೇಂದ್ರದಲ್ಲಿ ಕಳೆದ ಐದಾರು ದಿನಗಳಿಂದ‌ ಮೇವಿಲ್ಲದಂತಾಗಿದೆ. ಮೇವು ಸರಬರಾಜು ಗುತ್ತಿಗೆದಾರರು ಮೇವು ಒದಗಿಸಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಮೇವು ಗುತ್ತಿಗೆದಾರರಿಗೆ ಸರಬರಾಜು ಮಾಡಿ ರುವುದಕ್ಕೆ ಸರಿಯಗಿ ಹಣ ಪಾವತಿಸುತ್ತಿಲ್ಲ. ಹಾಗಾಗಿ ಮೇವು ಸಕಾಲಕ್ಕೆ ಸರಬರಾಜಾಗುತ್ತಿಲ್ಲ ಎಂಬುದು ಹೆಸರೇಳಲಿಚ್ಚಿಸದ ಅಧಿಕಾರಿಗಳ ಅನುಭವದ ಮಾತಾಗಿದೆ.

ಸರ್ಕಾರಿ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ: ರೈತರಿಗೆ ಮೇವು ಕಾರ್ಡ್‌ ನೀಡಿದರೆ ಮಾತ್ರ ಮೇವು ಸಿಗುತ್ತಿದ್ದು, ಈಗ ಮೇವು ಕಾರ್ಡ್‌ ಮಾಡಿಸಿಕೊಂಡಿದ್ದರೂ ಮೇವು ಸಿಗ ದಂತಾಗಿದೆ. ಮೇವು ಕಾರ್ಡ್‌ ಮಾಡಿಸಿಕೊಳ್ಳಲೂ ಮತ್ತು ಕಾರ್ಡ್‌ ಮಾಡಿಸಿಕೊಂಡ ನಂತರವೂ ರೈತರು ಮೇವಿಗಾಗಿ ರಾತ್ರಿ ಹಗಲು ಅಲೆಯ ಬೇಕಾಗಿದೆ. ನಿರಂತರ ಬರಗಾಲದ ಬೇಗೆಯಲ್ಲೂ ಸರ್ಕಾರ ರೈತರಿಗಾಗಿ ಯಾವ ಯೋಜನೆಗಳನ್ನು ಜಾರಿಗೆ ತಂದರೂ ಸಮರ್ಪಕವಾಗಿ ಜಾರಿಯಾ ಗುತ್ತಿಲ್ಲ. ಅಧಿಕಾರಿಗಳು ಮಾತ್ರ ದೊಡ್ಡದಾಗಿ ತಾಲೂಕಿನ ಮೂರು ಕಡೆಗಳಲ್ಲಿ ಮೇವು ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳುತ್ತಾರೆ. ಆದರೆ, ಮೇವು ಬರುತ್ತಿದೆಯೋ ಇಲ್ಲವೋ, ಎಷ್ಟು ರೈತರಿಗೆ ಮೇವು ಸಿಗುತ್ತಿದೆ. ಮೇವು ಸರಬರಾಜು ಗುತ್ತಿಗೆದಾರ ಸರಿಯಾಗಿ ಸರಬರಾಜು ಮಾಡುತ್ತಿ ದ್ದಾರೆಯೇ? ಅಥವಾ ಇತರೆ ಮೇವು ಕೇಂದ್ರಗಳಲ್ಲಿ ಎಷ್ಟು ದಿವಸಗಳಿಗೆ ಸಾಕಾಗುವಷ್ಟು ಮೇವಿದೆ ಎಂಬಿತ್ಯಾದಿ ಬಗ್ಗೆ ದಿಢೀರ್‌ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕಿದೆ.

ಜಾನುವಾರಗಳ ಸಾಕಾಣಿಕೆ ರೈತರಿಗೆ ತಲೆನೋವು: ಇಂತಹ ಬರಗಾಲದಲ್ಲಿ ಬದುಕು ನಡೆಸುವುದೇ ಕಷ್ಟಕರವಾಗಿದೆ. ಜಾನುವಾರಗಳ ಸಾಕಾಣಿಕೆ ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಕೇಳಿದಷ್ಟು ಬೆಲೆಗೆ ಕಸಾಯಿ ಖಾನೆಗೆ ದೂಡುವಂತಾಗಿದ್ದು, ಇದಕ್ಕೆ ಸರ್ಕಾರ ಅಥವಾ ಅಧಿಕಾರಿಗಳು ಹೊಣೆ ಯಾಗುತ್ತಾರೋ ಗೊತ್ತಾಗುತ್ತಿಲ್ಲ. ಪಾಪಿರೈತ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎಂಬಂತೆ ರೈತನ ಬದುಕು ಅತಂತ್ರ ಹಾಗೂ ಸಂಕಷ್ಟದ ಸ್ಥಿತಿಯಲ್ಲಿದೆ.

ಈಗಲಾದರೂ ಸರ್ಕಾರ ತೆರೆದಿರುವ ಮೇವು ಬ್ಯಾಂಕ್‌ಗಳಿಗೆ ಅಧಿಕಾರಿಗಳು ಸಮರ್ಪಕ ಮೇವನ್ನು ಪೂರೈಕೆ ಮಾಡುವಂತೆ ತಾಲೂಕು ಆಡಳಿತಕ್ಕೆ ಹಾಗೂ ಗೊಂದಲಕ್ಕೆ ಅವಕಾಶ ನೀಡದಂತೆ ಮೇವು ವಿತರಿಸಲು ಪಶು ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿ ಕಾರಿಗಳು ಸೂಚನೆ ನೀಡಿ, ರೈತರ ಅಲೆದಾಟವನ್ನು ತಪ್ಪಿಸುತ್ತಾರೆಯೋ ಕಾಯ್ದು ನೋಡಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ತುಮಕೂರು: ನಗರ ಸ್ಮಾರ್ಟ್‌ಸಿಟಿಯಾಗುವ ಬದಲು ಧೂಳು ಸಿಟಿಯಾಗಿದೆ. ಅಧಿಕಾರಿಗಳು ಜನರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಶೀಘ್ರ...

  • ಹುಳಿಯಾರು: ಹುಳಿಯಾರಿನ ಕೇಶವಾಪುರ ಬಳಿ ಇರುವ ರಸ್ತೆ ನೋಡಿದರೆ ತಕ್ಷಣ ಕಾಡುವ ಪ್ರಶ್ನೆ ಏನೆಂದರೆ, ಇದೇನು ರಸ್ತೆಯೋ, ಕೃಷಿ ಹೊಂಡವೋ ಎಂದು ನಿತ್ಯ ಸಾವಿರಾರು ವಾಹನಗಳು...

  • ಕುಣಿಗಲ್‌: ಯಾರನ್ನೂ ಬೇಡದೆ, ಓಲೈಸದೆ ಗ್ರಾಮದ ಪ್ರಗತಿಗೆ ಪಣತೊಟ್ಟು ಅಭಿವೃದ್ಧಿಪಡಿಸುತ್ತಿರುವ ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರ ಕಾರ್ಯವೈಖರಿಗೆ ಡಿಸಿಎಂ...

  • ತುಮಕೂರು: ಶಿರಾ ತಾಲೂಕು ಪಟ್ಟನಾಯಕನ ಹಳ್ಳಿಯಲ್ಲಿ 2020ರ ಜ.16ರಿಂದ 22ರವರೆಗೆ ನಡೆಯಲಿರುವ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರೆಯಲ್ಲಿ ವಿವಿಧ ಇಲಾಖೆಗಳಿಂದ...

  • ತುಮಕೂರು: ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳದ ಕಾರಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ತಾತ್ಕಾಲಿಕ...

ಹೊಸ ಸೇರ್ಪಡೆ