ವಲಯ ಮೇಲ್ವಿಚಾರಕನಿಂದ ವಂಚನೆ

Team Udayavani, Jul 23, 2019, 2:06 PM IST

ಕೊರಟಗೆರೆ ತಾಪಂಗೆ ಮುತ್ತಿಗೆ ಹಾಕಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಪ್ರತಿಭಟನೆ ನಡೆಸಿದರು.

ಕೊರಟಗೆರೆ: ಸರ್ಕಾರದಿಂದ 1 ಲಕ್ಷ ರೂ. ಸಹಾಯಧನ ಕೂಡಿಸುವುದಾಗಿ ನಂಬಿಸಿ ತಾಲೂಕಿನ 650 ಸ್ತ್ರೀ ಶಕ್ತಿ ಸಂಘಗಳಿಂದ ಕೋಟ್ಯಾಂತರ ರೂ. ಪಡೆದು ಕೊರಟಗೆರೆ ವಲಯ ಮೇಲ್ವಿಚಾರಕ ಎ.ಜಿ.ಮಂಜುನಾಥ ವಂಚಿಸಿದ್ದಾರೆ ಎಂದು ಆರೋಪಿಸಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸೋಮವಾರ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರಕರಣ ದಾಖಲಿಸಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ ಕೊರಟಗೆರೆ ವಲಯ ಮೇಲ್ವಿಚಾರಕ ಎ.ಜಿ.ಮಂಜುನಾಥ, ತಾಲೂಕಿನ 24 ಗ್ರಾಪಂ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘಗಳಿಂದ ತಲಾ 10 ಸಾವಿರ ರೂ.ನಿಂದ 12 ಸಾವಿರ ರೂ.ವರೆಗೆ ಪಡೆದು ಮೋಸ ಮಾಡಿದ್ದಾನೆ. ಈತನನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಜಿ.ನಾಗೇನಹಳ್ಳಿ ಗ್ರಾಮದ ಸದಸ್ಯೆ ಪುಷ್ಪಾವತಿ ಮಾತನಾಡಿ, ನಮ್ಮ ಗ್ರಾಮದ4 ಸ್ತ್ರೀಶಕ್ತಿ ಸಂಘದಲ್ಲಿ 40 ಸದಸ್ಯರಿದ್ದಾರೆ. ಆಡಿಟ್, ಪುಸ್ತಕ ಮತ್ತು ಖರ್ಚಿಗೆ 40 ಸಾವಿರ ರೂ. ಪಡೆದಿದ್ದಾರೆ. ಇಲ್ಲಿಯವರೆಗೆಸಹಾಯಧನ ಬಂದಿಲ್ಲ. ಪ್ರಶ್ನಿಸಿದರೆ ಸಂಘ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದರು.

ದಾಖಲೆಗೆ ಹಣ: ಸಹಾಯಧನ ನೀಡುವ ಭರವಸೆ ನೀಡಿ 6 ತಿಂಗಳ ಹಿಂದೆ 10 ಸಾವಿರ ರೂ. ಪಡೆದಿದ್ದಾರೆ. ಪ್ರಶ್ನಿಸಿದರೆ ಮೇಲಧಿಕಾರಿ ಮತ್ತು ದಾಖಲೆಗೆ ಹಣ ಬೇಕಾಗಿದೆ. ಹಣ ನೀಡಿದರೆ ಸಾಲ ಮಂಜೂರು ಆಗಲಿದೆ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಎಲೆರಾಂಪುರ ಗ್ರಾಪಂ ಸಿಂಗ್ರಿಹಳ್ಳಿ ಗ್ರಾಮದ ಶ್ರೀಲಕ್ಷಿ ್ಮೕ ಸ್ವಸಹಾಯ ಸಂಘದ ಪ್ರತಿನಿಧಿ ಕೆಂಪಮ್ಮ ದೂರಿದರು.

ಬುಕ್ಕಾಪಟ್ಟಣ ಗ್ರಾಪಂ ಗಟ್ಲಹಳ್ಳಿ ಗ್ರಾಮದ ವರಲಕ್ಷಿ ್ಮೕ ಸ್ತ್ರೀಶಕ್ತಿ ಸ್ವಹಾಯ ಸಂಘದ ಸದಸ್ಯೆ ಕಾಂತಮ್ಮ ಮಾತನಾಡಿ, ನಮ್ಮ ಸಂಘದಿಂದ 10 ಸಾವಿರ ರೂ. ಸರ್ಕಾರದಿಂದ 75 ಸಾವಿರ ರೂ. ಸಹಾಯಧನ ಕೊಡಿಸಿದ್ದಾರೆ. ಸಹಾಯಧನ ಕೊಡಿಸುವ ಮುನ್ನ ಲಂಚ ಪಡೆಯುತ್ತಾರೆ. ಹಣ ನೀಡದಿದ್ದರೆ ಸಾಲ ನೀಡುವುದಿಲ್ಲ ಎಂದು ಹೇಳಿದರು.

ತನಿಖೆ ನಡೆಸಿ: ಬಿ.ಡಿ.ಪುರ ಜಯಲಕ್ಷಿ ್ಮೕ ಮಾತನಾಡಿ, 24 ಮುಖ್ಯ ಪುಸ್ತಕ ಬರಹಗಾರ ಮತ್ತು 72 ಸಮು ದಾಯ ಸಂಪನ್ಮೂಲ ವ್ಯಕ್ತಿಗಳ ಮೇಲೆ ವಲಯ ಮೇಲ್ವಿ ಚಾರಕನಿಂದ ದಬ್ಟಾಳಿಕೆ ನಡೆಯುತ್ತಿದೆ. 24 ಗ್ರಾಪಂನಲ್ಲಿ ಅಕ್ರಮ ನಡೆದಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ತಂಡ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದರು.

ಬಿ.ಡಿ.ಪುರ, ನೀಲಗೊಂಡನಹಳ್ಳಿ, ಬುಕ್ಕಾಪಟ್ಟಣ, ಎಲೆರಾಂಪುರ, ಹಂಚಿಹಳ್ಳಿ, ಕೋಳಾಲ, ಹೊಳವನ ಹಳ್ಳಿ, ಹಂಚಿಹಳ್ಳಿ ಸೇರಿದಂತೆ 24 ಗ್ರಾಪಂ ವ್ಯಾಪ್ತಿಯ 50ಕ್ಕೂ ಹೆಚ್ಚು ಸಂಘಗಳ ಸದಸ್ಯರು ಇಒ ಶಿವಪ್ರಕಾಶ್‌ಗೆ ದಾಖಲೆ ಸಮೇತ ದೂರು ನೀಡಿದರು.

ಮನವಿ ಸ್ವೀಕರಿಸಿದ ಇಒ, ಮೆಲಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿ ತಪ್ಪಿಸ್ಥತನ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ