Udayavni Special

ಮಾಸ್ಕ್, ಸಾಮಾಜಿಕ ಅಂತರ ಇಲ್ಲದ ಮೇಕೆ ಸಂತೆ


Team Udayavani, Apr 12, 2021, 1:44 PM IST

ಮಾಸ್ಕ್, ಸಾಮಾಜಿಕ ಅಂತರ ಇಲ್ಲದ ಮೇಕೆ ಸಂತೆ

ಕೊರಟಗೆರೆ: ಯುಗಾದಿ ಹಬ್ಬದ ವರ್ಷದ ತೊಡಕಿಗೆ ಈಗಲೇ ಕುರಿ ಮೇಕೆಗಳನ್ನುಕೊಂಡುಕೊಳ್ಳಲು ಜನರು ಮುಂದಾಗಿದ್ದರಿಂದ, ಮಾರುಕಟ್ಟೆಗಳಲ್ಲಿ ಜನದಟ್ಟನೆ ಕಂಡು ಬಂತು.

ಮಂಗಳವಾರ ಯುಗಾದಿ ಹಬ್ಬ. ಹಬ್ಬದ ಮರುದಿನ ವರ್ಷದ ತೊಡಕು. ಮಂಗಳವಾರ ಹಬ್ಬ ಇರುವುದರಿಂದ ಅಂದು ಮೇಕೆ-ಕುರಿ ಮಾರುಕಟ್ಟೆಇರುವುದಿಲ್ಲ. ಹಾಗಾಗಿ ಜನರು ಮೊದಲೇ ಖರೀದಿಗೆ ಮುಂದಾದರು. ಹಬ್ಬದ ಮರುದಿನ ವರ್ಷ ತೊಡಕು ಭರ್ಜರಿಯಾಗಿ ನಡೆಯುತ್ತದೆ. ಬಾಡೂಟದ ಘಮಲು ಮೂಗು, ಮನಸನ್ನು ಸೆಳೆಯುತ್ತದೆ.

ಅಕ್ಕಿರಾಂಪುರ ಮೇಕೆ ಕುರಿತಂತೆ ರಾಜ್ಯದಲ್ಲಿಯೇ ಹೆಸರಾಗಿದ್ದು, ನಾನಾ ಮೂಲೆಗಳಿಂದ ವ್ಯಾಪಾರಿಗಳು ಬರುತ್ತಾರೆ. ಆದರೆ, ಕೋವಿಡ್ ಭೀತಿ ನಡುವೆಯೂ ಜನರು ಮಾಸ್ಕ್, ಪರಸ್ಪರ ಅಂತರಮರೆತು ಖರೀದಿಯಲ್ಲಿ ತೊಡಗಿದ್ದರು. ಇದನ್ನು ಪೊಲೀಸರು ಕಂಡರೂ ಅಸಹಾಯಕರಾಗಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯ: ಜಿಲ್ಲೆ ಸೇರಿ ರಾಜ್ಯಾದ್ಯಂತ ಹೈ ಅಲರ್ಟ್‌ ಘೋಷಿಸಿದ್ದು, ಸಂತೆ, ಸಭೆ,ಸಮಾರಂಭ ನಡೆಸದಂತೆ ಸರ್ಕಾರ ಸೂಚಿಸಿದ್ದರೂ ಜನ ಪಾಲಿಸುತ್ತಿಲ್ಲ. “ಜನ ಮರುಳ್ಳೋ, ಜಾತ್ರೆ ಮರುಳ್ಳೋ’ ಎನ್ನುವ ರೀತಿಯಲ್ಲಿ ಎಲ್ಲರೂ ಇಲ್ಲಿ ವರ್ತಿಸಿದ್ದೂ, ತಾಲೂಕಿನಲ್ಲಿ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಒಟ್ಟಾರೆ ಕೋವಿಡ್ ಹರಡಲು ಈ ಸಂತೆಯೊಂದು ಕಾರಣವಾಗಲಿದೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಹಬ್ಬದ ಸಂದರ್ಭದಲ್ಲಿ ನಾಲ್ಕು ಕಾಸುನೋಡಬಹುದು ಎಂದು ಕುರಿ-ಮೇಕೆಗಳನ್ನುಸಾಕಿದ್ದವರೂ ಕರೆ ತಂದಿದ್ದರು. ಜಿಲ್ಲೆಯಷ್ಟೇ ಅಲ್ಲದೆನೆಲಮಂಗಲ, ಮಾಗಡಿ, ದೊಡ್ಡಬಳ್ಳಾಪುರ,ಬೆಂಗಳೂರು ಸೇರಿದಂತೆ ಇತರೆಡೆಗಳಿಂದಲೂಮೇಕೆಗಳನ್ನು ಕೊಂಡು ಕೊಳ್ಳಲು ಬರುತ್ತಾರೆ. ಇಲ್ಲಿನ ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ

ಕೋವಿಡ್ ಹಿನ್ನೆಲೆ ಸಂತೆ ನಡೆಸದಂತೆ ಕರಪತ್ರ ಹಾಗೂ ಡಂಗೂರ ಮೂಲಕ ಪ್ರಚಾರ ಮಾಡಲಾಗಿದೆ. ಆದರೂ ರೈತರೂಮತ್ತು ವ್ಯಾಪಾರಸ್ಥರು ಸಂತೆ ನಡೆಸಿದ್ದಾರೆ.ಕುರಿ-ಮೇಕೆ ಸಂತೆ ಎಪಿಎಂಸಿ ವ್ಯಾಪ್ತಿಗೆ ಒಳ ಪಡುತ್ತದೆ. ಅವರು ಜವಾಬ್ದಾರಿ ವಹಿಸಬೇಕಿತ್ತು.  –ಪ್ರತಿಭಾ, ಪಿಡಿಒ, ಅಕ್ಕಿರಾಂಪುರ

ಸಂತೆ ನಡೆಯುವ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವುದೇ ಮಾಹಿತಿ ನೀಡಿಲ್ಲ. ಯಾವಸಂತೆ ಎಲ್ಲಿ ನಡೆಯುತ್ತದೆ. ಸಂತೆಯ ಸಮಸ್ಯೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.ಪಿಡಿಒ ಕಡೆಯಿಂದ ಮಾಹಿತಿ ಪಡೆಯಲಾಗುವುದು.  –ಶಿವಪ್ರಕಾಶ್‌, ತಾಪಂ ಇಒ, ಕೊರಟಗೆರೆ

ಟಾಪ್ ನ್ಯೂಸ್

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

oxygen-container-came-from-isrel-to-yadagiri-report

ಯಾದಗಿರಿಗೆ ಇಸ್ರೇಲ್‌ ನಿಂದ ಬಂತು ಆಕ್ಸಿಜನ್ ಉತ್ಪಾದಿಸುವ ಘಟಕದ ಬೃಹತ್ ಕಂಟೇನರ್

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ ಶೇ.80ರಷ್ಟು ರಕ್ಷಣೆ : ಪಬ್ಲಿಕ್‌ ಹೆಲ್ತ್‌ ವರದಿ

ಕೊವಿಶೀಲ್ಡ್‌ನ ಒಂದು ಡೋಸ್‌ನಿಂದ 80% ರಕ್ಷಣೆ : ಪಬ್ಲಿಕ್‌ ಹೆಲ್ತ್‌ ಇಂಗ್ಲೆಂಡ್‌ ವರದಿ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

ಪೊಲಿಪು : ತುರ್ತುಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಲೋಕಾರ್ಪಣೆ

Smalla Scale Industry – Jagadeesh Shettar

ಕೈಗಾರಿಕೆಗಳಿಗೆ ವಿಧಿಸುವ ಸಮ್ಮತಿ ಶುಲ್ಕದ ಪರಿಷ್ಕರಣೆಗೆ ನೂತನ ಸೂತ್ರ ಸಿದ್ಧ: ಶೆಟ್ಟರ್‌

ಕೋವಿಡ್  2ನೇ ಅಲೆ : ಅರ್ಥ ವ್ಯವಸ್ಥೆಗೆ ಹೆಚ್ಚು ಪ್ರತಿಕೂಲ ಪರಿಣಾಮವಿಲ್ಲ

ಕೋವಿಡ್ 2ನೇ ಅಲೆಯಿಂದ ಅರ್ಥ ವ್ಯವಸ್ಥೆಗೆ ಹೆಚ್ಚು ಪ್ರತಿಕೂಲ ಪರಿಣಾಮವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ!

ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ!

Perform a health check

ಆರೋಗ್ಯ ತಪಾಸಣೆ ಮಾಡಿಸಿ: ಶಾಸಕ

Take action

ಸಿಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಿ

ಕೋವಿಡ್ ನಿಯಂತ್ರಣ ‌; ಸೋಂಕಿತರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ರಾಕೇಶ್ ಸಿಂಗ್ ಸೂಚನೆ

ಕೋವಿಡ್ ನಿಯಂತ್ರಣ ‌; ಸೋಂಕಿತರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ರಾಕೇಶ್ ಸಿಂಗ್ ಸೂಚನೆ

hjkukuui

ಕೋವಿಡ್ ಮಹಾಮಾರಿಗೆ ತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ.ಮಂಜುನಾಥ್ ಬಲಿ

MUST WATCH

udayavani youtube

ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನ

udayavani youtube

ಕೋವಿಡ್‌ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್‌ ಸೇವೆ ನೀಡಲು ಮುಂದಾದ ಫಾಲ್ಕನ್‌ ಕ್ಲಬ್‌

udayavani youtube

ರಸ್ತೆ ಮಧ್ಯ ಉರುಳಿ ಬಿದ್ದ ಪಿಕ್ಅಪ್ ವಾಹನವನ್ನು ಎಳೆದು ನಿಲ್ಲಿಸಿದ ಸ್ಥಳೀಯ ಆಫ್ ರೋಡರ್ ಟೀಮ್

udayavani youtube

Vaccine ಆಗ ಯಾರಿಗೂ ಬೇಡವಾಗಿತ್ತು

udayavani youtube

ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ನೀಡಬೇಕು : ಡಿಕೆಶಿ

ಹೊಸ ಸೇರ್ಪಡೆ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

11-17

ಕೊರೊನಾ ಕರ್ಫ್ಯೂ; ಬಳ್ಳಾರಿ ಸಂಪೂರ್ಣ ಸ್ತಬ್ಧ

11-16

ಕೋವಿಡ್‌ ತಡೆಗೆ ಡಿಎಂಎಫ್‌ ಹಣ ಬಳಕೆ

11-15

ಪ್ರತಿ ತಾಲೂಕಲ್ಲೂ ಕೋವಿಡ್‌ ಕೇರ್‌ ಸೆಂಟರ್‌

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.