ಗ್ರಾಪಂ ಸ್ಥಾನ ಹರಾಜು, ನಾಲ್ವರ ವಿರುದ್ಧ ಕೇಸ್‌

Team Udayavani, Dec 19, 2020, 8:42 PM IST

ಗ್ರಾಪಂ ಸ್ಥಾನ ಹರಾಜು, ನಾಲ್ವರ ವಿರುದ್ಧ ಕೇಸ್‌

ಕುಣಿಗಲ್‌: ಗ್ರಾಪಂ ಚುನಾವಣೆಯ ಸದಾಚಾರ ನೀತಿ, ಕಾನೂನು ಉಲ್ಲಂಘನೆ ಮಾಡಿ 11.75 ಲಕ್ಷ ರೂ.ಗೆಸದಸ್ಯತ್ವ ಹರಾಜು ಪ್ರಕ್ರಿಯೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಗಡಿಪಾರುಗೆ ಶಿಫಾರಸು ಮಾಡಲಾಗಿದೆ ಎಂದು ಡಿವೈಎಸ್‌ಪಿ ಜಗದೀಶ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.22 ರಂದು ತಾಲೂಕಿನ 36 ಗ್ರಾಪಂಗೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಗ್ರಾಮಸ್ಥರಿಗೆ ಹಾಗೂ ತಮ್ಮ ಪ್ರತಿ ಸ್ಪರ್ಧಿಗಳಿಗೆ ಆಮಿಷವೊಡ್ಡಿ ಹರಾಜು ಮೂಲಕ ಆಯ್ಕೆ ಆಗಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬೆಟ್ಟಹಳ್ಳಿ, ಚೌಡನಕುಪ್ಪೆ,ಅಂಗರಹಳ್ಳಿ ಗ್ರಾಮದಲ್ಲಿ ಪರಿಶೀಲಿಸಲಾಗಿ ಇಲ್ಲಿ ಯಾವುದೇ ಹರಾಜು ಪ್ರಕ್ರಿಯೆ ನಡೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರು.

ಕಾಡಮತ್ತಿಕೆರೆಯ ಬಿಸಿಎಂ ಎ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಲಕ್ಷ್ಮಮ್ಮ ಹೆಸರಿಗೆ ಹರಾಜು ನಡೆದಿರುವ ಬಗ್ಗೆವಿಡಿಯೋ ದಾಖಲೆ ಸಿಕ್ಕಿರುವ ಕಾರಣ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ ಜಯರಾಮ್‌, (38), ರಂಗನಾಥ್‌ (45), ನಾಗರಾಜು (40),ಮಂಜುನಾಥ್‌ (42) ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು ಗಡಿಪಾರುಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ಶಾಂತಿಯುತ ಚುನಾವಣೆಗಾಗಿ ಅಗತ್ಯ ಪೋಲಿಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. 13 ಮೊಬೆ„ಲ್‌ ವಾಹನಗಳನ್ನು ನಿಗದಿತ ಮತಗಟ್ಟೆಗಳ ಸುತ್ತಲು ಸಂಚರಿಸಲಿವೆ. 4 ಮಂದಿ ಸಿಪಿಐ, ಓರ್ವ ಡಿವೈಎಸ್‌ಪಿ, 420 ಮಂದಿ ಪೇದೆಗಳು, 2 ಡಿಆರ್‌, 2ಕೆಎಸ್‌ಆರ್‌ಪಿ ವಾಹನಗಳನ್ನು ಚುನಾವಣೆಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದರು.

ಚುನಾವಣಾಧಿಕಾರಿಯಾದ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಮಾತನಾಡಿ, ತಾಲೂಕಿನಲ್ಲಿ ಒಟ್ಟು 36 ಗ್ರಾಪಂಗಳಿಂದ 496 ಗ್ರಾಪಂ ಸ್ಥಾನಗಳು ಆಯ್ಕೆಗೊಳ್ಳಬೇಕಾಗಿದೆ. ಈ ಸಂಬಂಧ ಒಟ್ಟು 1962ನಾಮಪತ್ರ ಸಲ್ಲಿಯಾಗಿದ್ದು, 754 ಮಂದಿ ನಾಮಪತ್ರ ವಾಪಸ್‌ ಪಡೆದುಕೊಂಡಿದ್ದಾರೆ. 1208 ಮಂದಿ ಕಣದಲ್ಲಿ ಇದ್ದು ಈ ಪೈಕಿ37 ಮಂದಿ ಅವಿರೋಧವಾಗಿಆಯ್ಕೆಯಾಗಿದ್ದಾರೆ. ಆದರೆ ಚುನಾವಣೆ ಆಯೋಗದ ಆದೇಶದ ಮೇರೆಗೆ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಕಾರಣ ಗ್ರಾಪಂ ಸ್ಥಾನಗಳು ಹರಾಜು ಆಗಿರುವ ಬಗ್ಗೆ ಮಾಧಮ್ಯಗಳಲ್ಲಿ ವರದಿ ಬಂದಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿರುವ ಕ್ಷೇತ್ರಗಳಲ್ಲಿ ತನಿಖಾ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.

ತನಿಖಾ ತಂಡ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಹಾಗೇನಾದರೂ ಭಯದ ವಾತಾವರಣ ನಿರ್ಮಿಮಿಸಿ ಹಾಗೂ ಹಣ ಆಮಿಷ ನೀಡಿ ಅವಿರೋಧವಾಗಿ ಆಯ್ಕೆಯಾಗಿದ್ದರೇ ತಂಡ ನೀಡಿದ ವರದಿಯನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ನಂತರವೇ ಅವಿರೋಧ ಅಯ್ಕೆಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ತಾಪಂ ಇಒ ಜೋಸೆಫ್‌ ಇತರರು ಇದ್ದರು.

ಟಾಪ್ ನ್ಯೂಸ್

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್‌ಗ‌ಳು ಸ್ವಿಚ್‌ಆಫ್!

ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್‌ಗ‌ಳು ಸ್ವಿಚ್‌ಆಫ್!

ಭಾರತೀಯ ಸೇನಾ ಶಸ್ತ್ರಾಸ್ತ್ರ ರಫ್ತು ಶೇ.334 ಏರಿಕೆ

ಭಾರತೀಯ ಸೇನಾ ಶಸ್ತ್ರಾಸ್ತ್ರ ರಫ್ತು ಶೇ.334 ಏರಿಕೆ

ದಿನಕ್ಕೆ 10 ಲಕ್ಷ ಆಯುಷ್ಮಾನ್‌ ಕಾರ್ಡ್‌ ವಿತರಿಸುವ ಗುರಿ

ದಿನಕ್ಕೆ 10 ಲಕ್ಷ ಆಯುಷ್ಮಾನ್‌ ಕಾರ್ಡ್‌ ವಿತರಿಸುವ ಗುರಿ

ತಿರುಪತಿ ತಿರುಮಲ ದೇವಸ್ಥಾನಮ್ಸ್‌ ಹೊಂದಿರುವ ಆಸ್ತಿ ಎಷ್ಟು ಗೊತ್ತೇ?

ತಿರುಪತಿ ತಿರುಮಲ ದೇವಸ್ಥಾನಮ್ಸ್‌ ಹೊಂದಿರುವ ಆಸ್ತಿ ಎಷ್ಟು ಗೊತ್ತೇ?

ಮಗಳಿಗೆ ಊಟ ಮಾಡಿಸಲು ರೊಬೋಟ್‌ ಸೃಷ್ಟಿಸಿದ ದಿನಗೂಲಿ ನೌಕರ!

ಮಗಳಿಗೆ ಊಟ ಮಾಡಿಸಲು ರೊಬೋಟ್‌ ಸೃಷ್ಟಿಸಿದ ದಿನಗೂಲಿ ನೌಕರ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsdsa

4 ತಿಂಗಳಿನಿಂದ ವೇತನವಿಲ್ಲವೆಂದು ಇಂದಿರಾ ಕ್ಯಾಂಟೀನ್ ಸಿಬಂದಿಗಳಿಂದ ಧರಣಿ

1-fsfdfs

ಪರಿವರ್ತನ ಮಾರ್ಟ್ ನಿಜಕ್ಕೂ ಮಾದರಿ : ವೀರಭದ್ರ ಶಿವಾಚಾರ್ಯ ಸ್ವಾಮೀಜಿ

tdy-14

60 ವರ್ಷ ಮೇಲ್ಪಟ್ಟ ರೈತರಿಗೂ ಸಾಲ ಸೌಲಭ್ಯ

1-sdsdsad

ಪಾವಗಡ: 3 ವರ್ಷಗಳ ಹಿಂದೆ ನಾಪತ್ತೆ; ಯುವಕ ಹತ್ಯೆಯಾಗಿರುವ ಸುಳಿವು

1-adadad

ಕಸಾಯಿಖಾನೆಗೆ ಗೋ ಸಾಗಾಟ ತಡೆದವರ ಮೇಲೆ ಹಲ್ಲೆ; ನಾಲ್ವರ ಬಂಧನ  

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಆದ್ಯತೆ; ಅ. 2ರಿಂದ ಜಲಸಾಹಸ ಕ್ರೀಡೆ ಆರಂಭ?

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್‌ಗ‌ಳು ಸ್ವಿಚ್‌ಆಫ್!

ಈ ಹಳ್ಳಿಯಲ್ಲಿ ಒಂದೂವರೆ ಗಂಟೆ ಮೊಬೈಲ್‌ಗ‌ಳು ಸ್ವಿಚ್‌ಆಫ್!

ಭಾರತೀಯ ಸೇನಾ ಶಸ್ತ್ರಾಸ್ತ್ರ ರಫ್ತು ಶೇ.334 ಏರಿಕೆ

ಭಾರತೀಯ ಸೇನಾ ಶಸ್ತ್ರಾಸ್ತ್ರ ರಫ್ತು ಶೇ.334 ಏರಿಕೆ

ದಿನಕ್ಕೆ 10 ಲಕ್ಷ ಆಯುಷ್ಮಾನ್‌ ಕಾರ್ಡ್‌ ವಿತರಿಸುವ ಗುರಿ

ದಿನಕ್ಕೆ 10 ಲಕ್ಷ ಆಯುಷ್ಮಾನ್‌ ಕಾರ್ಡ್‌ ವಿತರಿಸುವ ಗುರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.