Udayavni Special

ಕಾಂಗ್ರೆಸ್‌ ಶಾಸಕರ ಕ್ಷೇತ್ರಕೆ ಅನುದಾನ ತಾರತಮ್ಯ


Team Udayavani, Feb 27, 2021, 3:53 PM IST

ಕಾಂಗ್ರೆಸ್‌ ಶಾಸಕರ ಕ್ಷೇತ್ರಕೆ  ಅನುದಾನ ತಾರತಮ್ಯ

ಕುಣಿಗಲ್‌: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಆರೋಪಿಸಿದರು.

ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬೈಪಾಸ್‌ ರಸ್ತೆಯಿಂದ ತಾವರೆಮರದ ಶನೇಶ್ವರಸ್ವಾಮಿದೇವಸ್ಥಾನ ಮಾರ್ಗವಾಗಿ, ಕಂಪಲಾಪುರ ಗ್ರಾಮದವರೆಗಿನ 69 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಮಿಶ್ರ ಸರ್ಕಾರದ ಅನುದಾನ ವಾಪಸ್‌: ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಿಗೆ ಯಾವುದೇ ಅನುದಾನ ನೀಡದೇ ಅನ್ಯಾಯ ಮಾಡಿದೆ. ಅನುದಾನ ನೀಡದಿದ್ದರೂ ಪರವಾಗಿಲ್ಲ. ಆದರೆ, ಕೋವಿಡ್ ನೆಪವೊಡ್ಡಿ ಈ ಹಿಂದಿನ ಸಮಿಶ್ರ ಸರಕಾರದಲ್ಲಿ ತಾಲೂಕಿನ ಅಭಿವೃದ್ಧಿಗೆ ನೀಡಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

ಅಭಿವೃದ್ಧಿಗೆ ಹೆಚ್ಚು ಒತ್ತು: ತಾಲೂಕಿನಲ್ಲಿ ಹುಲಿಯೂರುದುರ್ಗ ಅತ್ಯಂತ ದೊಡ್ಡಹೋಬಳಿಯಾಗಿದೆ. ಈ ಸಂಬಂಧ ಹುಲಿಯೂರುದುರ್ಗ ಅಭಿವೃದ್ಧಿಗೆ ಹೆಚ್ಚು ಒತ್ತುನೀಡಲಾಗುವುದು. ಹಿಂದೆ ಡಿ.ಕೆ.ಶಿವಕುಮಾರ್‌ ಸಚಿವರಾಗಿದ್ದಾಗ ಹುಲಿಯೂರುದುರ್ಗ ಕುಂಬಿ ಬೆಟ್ಟದ ರಸ್ತೆ ಅಭಿವೃದ್ಧಿ ಸೇರಿದಂತೆ 2 ಕೋಟಿ ರೂ. ಅನುದಾನ ಮಂಜೂರು ಮಾಡಿಕೊಟ್ಟಿದ್ದಾರೆ. ಜೊತೆಗೆ, ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗಸುತ್ತಮುತ್ತ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂಹೆಚ್ಚಿನ ಅನುದಾನ ತಂದು ಮತ್ತಷ್ಟು ಅಭಿವೃದ್ಧಿಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷಮಂಜುನಾಥ್‌, ಸದಸ್ಯ ಅಲ್ಲಾಬಕಾಶ್‌, ಲೋಕೋಪಯೋಗಿ ಇಂಜಿನಿಯರ್‌ ರಾಜಣ್ಣ, ಪಿಡಿಒ ವಿನಾಯಕ್‌ ಮತ್ತಿತರಿದ್ದರು.

ಲಿಂಕ್‌ಕೆನಾಲ್‌ ಯೋಜನೆಗೆ ಒತ್ತಾಯಿಸಿ ಪದಾಯಾತ್ರೆ :  ತಾಲೂಕಿನ ಬಹು ಮಹತ್ವಾಕಾಂಕ್ಷಿ ಯೋಜನೆಯಾದ ಲಿಂಕ್‌ಕೆನಾಲ್‌ ಯೋಜನೆ ರದ್ದುಗೊಳಿಸಿ, ಇದೇ ಅನುದಾನವನ್ನು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಮಾಡಲಾಗಿದೆ. ಆದರೂ, ಕ್ರಮ ಕೈಗೊಂಡಿಲ್ಲ. ಹೀಗಾಗಿ ಲಿಂಕ್‌ ಕೆನಾಲ್‌ ಯೋಜನೆ ಜಾರಿಗೆ ಒತ್ತಾಯಿಸಿ ಕುಣಿಗಲ್‌ನಿಂದ ವಿಧಾನಸೌಧದವರೆಗೂ ಬೃಹತ್‌ ಪಾದಾಯಾತ್ರೆ ನಡೆಸಿ, ಹೋರಾಟ ಮಾಡಲು ಸಿದ್ಧತೆ ನಡೆಸಿದ್ದೇನೆ. ಯಾವುದೇ ಕಾರಣಕ್ಕೂ ಲಿಂಕ್‌ಕೆನಾಲ್‌ ಯೋಜನೆ ಜಾರಿಗೊಳಿಸದೇ ವಿರಮಿಸುವುದಿಲ್ಲ. ಎಂತಹ ಹೋರಾಟಕ್ಕೂ ಸಿದ್ಧನಿದ್ದೇನೆ ಎಂದು ಎಚ್ಚರಿಸಿದರು.

ಟಾಪ್ ನ್ಯೂಸ್

jfghdrt

ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಪರಿಹಾರವಲ್ಲ: ಸಚಿವ ಜೋಶಿ

gdfsvd

ಸಿಡಿ ಪ್ರಕರಣದಲ್ಲಿ  ಸಿಬಿಐ ತನಿಖೆ ಸದ್ಯ ಅನಗತ್ಯ: ಹೈಕೋರ್ಟ್‌

ನಹಬಗವ್ಚದಸ

ಸೆಕೆ ಕಡಿಮೆ ಮಾಡಲು ಈ ಅಜ್ಜಿ ಮಾಡಿದ ಐಡಿಯಾ ಸೂಪರ್..!

ngfgdf

ತಾಯಿಯ ಮೇಲಿನ ದ್ವೇಷಕ್ಕೆ ಹಸುಗೂಸು ಬಲಿ: ಮೂರು ತಿಂಗಳ ಕಂದನಿಗೆ ಬೆಂಕಿ ಇಟ್ಟ ಚಿಕ್ಕಮ್ಮ   

18-11

ಕೋವಿಡ್ ನಿಯಂತ್ರಣಕ್ಕೆ ‘ಟೆಸ್ಟ್, ಟ್ರ್ಯಾಕಿಂಗ್,ಟ್ರೀಟ್’ ಹೊರತಾಗಿ ಬೇರೆ ಪರ್ಯಾಯವಿಲ್ಲ: ಮೋದಿ

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

ತಾಂತ್ರಿಕ ಸಲಹಾ ಸಮಿತಿಯ ಸಲಹೆ-ನಿರ್ದೇಶನ ಪಾಲಿಸುತ್ತೇವೆ: ಕಠಿಣ ನಿಯಮದ ಸೂಚನೆ ನೀಡಿದ ಸುಧಾಕರ್

್ಗ್ಗ್ಗ್ಗ

ವಿವಾಹ ಆಮಂತ್ರಣದಲ್ಲಿ ಕೋವಿಡ್ ಜಾಗೃತಿ : ನೆಗೆಟಿವ್ ವರದಿಯೊಂದಿಗೆ ಮದುವೆಗೆ ಬರಲು ಆಹ್ವಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fire to the trees

ಸಂತೆ ಮೈದಾನದಲ್ಲಿನ ಮರಗಳಿಗೆ ಬೆಂಕಿ

road isuue at huliyara

ಹುಳಿಯಾರಿಗೆ ಬರುವ ಪ್ರತಿಯೊಬ್ಬರಿಗೂ ಧೂಳಿನ ಮಜ್ಜನ!

covid effect

ನೈಟ್‌ ಕರ್ಫ್ಯೂಗೂ ಕಮ್ಮಿ ಆಗದ ಕೋವಿಡ್

Colored cheer to the Government High School

ದೊಡ್ಡಬಾಣಗೆರೆ ಸರ್ಕಾರಿ ಪ್ರೌಢಶಾಲೆಗೆ ಬಣ್ಣದ ಮೆರಗು

covid: People who are not taken seriously

ಕೋವಿಡ್: ಗಂಭೀರವಾಗಿ ಪರಿಗಣಿಸದ ಜನ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

18-16

ಕೋವಿಡ್‌ 2ನೇ ಅಲೆ: ಕಠಿಣ ಕ್ರಮಕ್ಕೆ ಸೂಚನೆ

Fire to the trees

ಸಂತೆ ಮೈದಾನದಲ್ಲಿನ ಮರಗಳಿಗೆ ಬೆಂಕಿ

hdfgf

ಟಿಎಂಸಿ ವಿರುದ್ಧ ಜಮಖಂಡಿಯಲ್ಲಿ ಬಿಜೆಪಿ ಪ್ರತಿಭಟನೆ

fghdf

ನಿರಂತರ ವಿದ್ಯುತ್‌ ಪೂರೈಕೆಗೆ ರೈತರ ಪಟ್ಟು

18-15

ಕಾಯಕ ಮಹತ್ವ ಸಾರಿದ ದಾರ್ಶನಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.