ಗೋಡೆ ಮೇಲೆ ಜನಾಕರ್ಷಿಸುವ ಚಿತ್ತಾರ
ಶತಮಾನ ಕಂಡ ಶಾಲೆ ಗೋಡೆಯ ಮೇಲೆಕಲಾವಿದ® ಕುಂಚದಿಂದ ಅರಳಿರುವ ಚಿತ್ರಗಳು
Team Udayavani, Dec 16, 2020, 5:28 PM IST
ತುಮಕೂರು: ಚಿತ್ರಕಲೆ ಅನ್ನೋದು ಒಂದೇ ನೋಟಕ್ಕೆ ಎಂಥವರನ್ನೂ ಸೆಳೆದು ಬಿಡುತ್ತೆ, ಅದಲ್ಲೂ ಕಲಾವಿದ ಕುಂಚದಲ್ಲಿ ಅರಳುವ ಚಿತ್ರಗಳು ಸುಂದರವಾಗಿದ್ದರೆ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಶತಮಾನಕಂಡಿರುವ ಶಾಲೆಯ ಗೋಡೆಯ ಮೇಲೆ ಕಲಾವಿದನ ಕುಂಚದಿಂದ ಅರಳಿರುವ ಚಿತ್ತಾರಗಳು ಜನರನ್ನು ಆಕರ್ಷಿಸುತ್ತಿವೆ.
ನಗರದ ಎಂಪ್ರಸ್ ಶಾಲೆಯ ಗೋಡೆ ಮೇಲೆಹಾಗೂ ಶಾಲಾ ಕೊಠಡಿ ಒಳಗೆ ಅರಳಿರುವ ಚಿತ್ರಗಳನ್ನು ನೋಡಿದ್ರೆ ಸಾಕು ಎಂಥವರು ತಲೆ ದೂಗದೇ ಇರಲಾರರು. ನಗರದ ಎಂಪ್ರಸ್ ಶಾಲೆಯಲ್ಲಿಶಾಲಾ ಕೊಠಡಿ ಹಾಗೂ ಗೋಡೆಯ ಮೇಲೆ ವಿವಿಧ ರೀತಿಯ ಬಣ್ಣದಚಿತ್ತಾರ ನೋಡುಗರ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತವೆ. ಇಲ್ಲಿನ ಯುಕೆಜಿ, ಎಲ್‌ಕೆಜಿ ಮಕ್ಕಳಿಗಾಗಿ ಬಣ್ಣದ ಲೋಕವನ್ನೇ ಸೃಷ್ಟಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ರೀತಿಯ ಚಿತ್ರಗಳನ್ನೇ ಬರೆಯಲಾಗಿದ್ದು, ಇವು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲಿವೆ.
ಮಕ್ಕಳ ಕಣ್ಣಿಗೆ ಹಬ್ಬ: ಚಿತ್ರಕಲಾ ಶಿಕ್ಷಕರ ತಂಡಇಲ್ಲಿನ ಶಾಲೆ ಗೋಡೆಗಳ ಮೇಲೆ ವಿಶೇಷ ಚಿತ್ರಗಳನ್ನು ಬರೆದಿದ್ದಾರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿವೆ. ಗಣಿತದ ಆಯಾಮ ರಚನೆ, ಹಣ್ಣು, ತರಕಾರಿ ರಾರಾಜಿಸುತ್ತಿವೆ,ಪ್ರಾಣಿಪಕ್ಷಿಗಳು ಹಾರುತ್ತಿವೆಯೋನೋ ಎಂಬಂತೆ ಭಾಸವಾಗುವ ಚಿತ್ರಗಳು, ಓಡುತ್ತಿರುವ ರೈಲು,ಸೂರ್ಯನ ಉದಯ, ಪ್ರಕೃತಿ ಸೌಂದರ್ಯ, ಶಾಲಾ ಮೈದಾನ, ಹಾರುವ ಚಿಟ್ಟೆಗಳು,ಮಿಕ್ಕಿ ಮೌಸ್, ಛೋಟಾ ಭೀಮ್ ಸೇರಿದಂತೆ ವಿವಿಧಚಿತ್ರಗಳು ಶಾಲಾಗೋಡೆಗಳ ಮೇಲೆ ಅರಳಿ ನಿಂತಿವೆ.
ಮಕ್ಕಳ ಕಲಿಕೆಗೆ ಅನುಕೂಲವಾಗಲು ಸ್ಲೇಟ್‌ಗಳ ಮಾದರಿ ಚಿತ್ರ ಬರೆಯಲಾಗಿದ್ದು, ಅಲ್ಲಿಯೇ ಎಲ್‌ಕೆಜಿ,ಯುಕೆಜಿ ಮಕ್ಕಳಿಗೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಇಷ್ಟೆಲ್ಲಾ ಚಿತ್ರಗಳು ಚಿತ್ರಕಲಾ ಶಿಕ್ಷಕರಾದ ರವೀಶ್‌ಕೆ.ಎಂ., ಜಿಎಚ್‌ಎಸ್ ನೇರಳೇಕೆರೆ, ರಂಗಸ್ವಾಮ್ಯಯ್ಯ ಜಿಎಚ್‌ಎಸ್ ಚೇಳೂರು, ಇಂದ್ರಕುಮಾರ್ ಜಿಎಚ್ ಎಸ್ ಹೆಬ್ಬೂರು, ಆನಂದ್ ಜಿಎಚ್‌ಎಸ್ ಕೊಂಡ್ಲಿ,ವೇಣುಗೋಪಾಲ್ ಜಿಎಚ್‌ಎಸ್ ಶೇಷೇನಹಳ್ಳಿ ಹಾಗೂ ಹೀನಾ ಕೌಸರ್ ಜೆಜಿಜಿಸಿ ತುಮಕೂರು ಇವರ ಕೈಚಳಕದಲ್ಲಿ ಅರಳುತ್ತಿದ್ದು, ಮಕ್ಕಳ ಪಾಲಿಗೆ ಬಹು ಉಪಯುಕ್ತವಾಗಲಿದೆ.
ಮಕ್ಕಳಿಗೆ ಅನುಕೂಲ: ಕೋವಿಡ್ ಕಾರಣದಿಂದ ಎಲ್ ಕೆಜಿ, ಯುಕೆಜಿ ಶಾಲೆ ಆರಂಭವಾಗಿಲ್ಲ, ಇದರ ನಡುವೆ ಚಿತ್ರಕಲಾ ಶಿಕ್ಷಕರು ಮುಂದೆ ಶಾಲೆ ಆರಂಭವಾಗುವವ ವೇಳೆಗೆ ಉತ್ತಮ ಚಿತ್ರ ಬರೆದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ನಿರ್ಧರಿಸಿ ಚಿತ್ತಾರ ಮೂಡಿಸಿದ್ದಾರೆ. ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಎಂಪ್ರಸ್ ಕಾಲೇಜಿನ ಪ್ರಾಶುಪಾಲ ಕೆ.ಎಸ್.ಸಿದ್ದಲಿಂಗಪ್ಪ, ಉಪ ಪ್ರಾಶುಪಾಲ ಎಸ್.ಕೃಷಪ್ಪ ಹಾಗೂ ಶಿಕ್ಷಣಇಲಾಖೆ ಸಹಕಾರ ನೀಡಿದೆ.
ಶಿಕ್ಷಕ ವೃಂದವೇ ಮೆಚ್ಚುಗೆ: ಒಟ್ಟಾರೆ ತುಮಕೂರು ಜಿಲ್ಲಾ ಚಿತ್ರ ಕಲಾ ಸಂಘಹಾಗೂ ಚಿತ್ರಕಲಾ ಶಿಕ್ಷಕರ ತಂಡಇಡೀ ಶಾಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಮುದ್ದುಎನಿಸುವ ಚಿತ್ರಗಳನ್ನು ಬರೆದಿದ್ದಾರೆ, ಬಣ್ಣದಲ್ಲಿಕಂಗೊಳಿಸುತ್ತಿರುವ ಶಾಲಾ ಆವರಣವನ್ನು ನೋಡಿದರೆ ಆನಂದ, ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಇಡೀ ಶಿಕ್ಷಕ ವೃಂದವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಶಾಲಾ ಕೊಠಡಿಹಾಗೂ ಗೋಡೆ ಮೇಲೆ ಚಿತ್ರಕಲೆಬರೆದಿರುವುದರಿಂದ ಪುಟಾಣಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದಲಿದ್ದಾರೆ. ಅಲ್ಲದೆ
ಚಿತ್ರಗಳು ಮಕ್ಕಳಿಗೆಇಷ್ಟವಾಗಲಿವೆ, ಆ ಚಿತ್ರಗಳು ಯಾವು,ಅದರ ಹೆಸರೇನು ಎಂಬುದನ್ನು ಮಕ್ಕಳಿಗೆ ಟೀಚರ್‌ಗಳು ತಿಳಿಸಿಕೊಡಲು ಅನುಕೂಲವಾಗಲಿದೆ. ಸರ್ಕಾರಿ ಶಾಲೆಯಲ್ಲಿಚಿತ್ರ ಬರೆಯಲು ತುಂಬಾ ಖುಷಿಯಾಯಿತು,ಯಾವ ಖಾಸಗಿ ಶಾಲೆಗೂ ಕಮ್ಮಿಇಲ್ಲ ಎಂಬಂತೆ ಎಂಪ್ರಸ್‌ನಲ್ಲಿನ ಎಲ್‌ಕೆಜಿ,ಯುಕೆಜಿ ಶಾಲೆ ಬಣ್ಣದಿಂದ ಕಂಗೊಳಿಸುತ್ತಿದೆ, ಇದು ನಮಗೆ ಹೆಮ್ಮೆಯ ಸಂಗತಿ. -ರವೀಶ್‌ಕೆ.ಎಂ., ಚಿತ್ರಕಲಾ ಶಿಕ್ಷಕ, ಜಿಎಚ್‌ಎಸ್ ನೇರಳೇಕೆರೆ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಸ್ ನೊಳಗೆ ಯುವತಿಗೆ ಕಿರುಕುಳ: ಘಟನೆ ಬಗ್ಗೆ ಯುವತಿ ಹೇಳಿದ್ದೇನು?
ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ
PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು
Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ
ಸರ್ವಿಸ್ ಆನ್ ವೀಲ್ಸ್ : ಮನೆ ಬಾಗಿಲಿಗೆ ಸರಕಾರಿ ಸೇವೆ
ಹೊಸ ಸೇರ್ಪಡೆ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಪಿ.ವಿ. ಸಿಂಧು, ಸಮೀರ್, ಕ್ವಾರ್ಟರ್ ಫೈನಲ್ ಪ್ರವೇಶ
ಶಿವಮೊಗ್ಗದಲ್ಲಿ ಭಾರಿ ಕಂಪನ: ಭದ್ರಾ ಜಲಾಶಯದ ಸ್ಥಿತಿಗತಿ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷೆ
ಚೀನ ಗ್ರಾಮ ನಿರ್ಮಾಣದ ವಿರುದ್ಧ ಪ್ರತಿಭಟನೆ
ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೈಟ್ ಸ್ಫೋಟ 7ಕ್ಕೂ ಹೆಚ್ಚು ಕಾರ್ಮಿಕರು ಬಲಿ
ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ