Udayavni Special

ವಾರದಲ್ಲೇ ಹೇಮಾವತಿ ಜಲಾಶಯ ಭರ್ತಿ


Team Udayavani, Aug 9, 2020, 11:59 AM IST

ವಾರದಲ್ಲೇ ಹೇಮಾವತಿ ಜಲಾಶಯ ಭರ್ತಿ

ಹಾಸನ: ಈ ವರ್ಷ ಹೇಮಾವತಿ ಜಲಾಶಯ ಒಂದೇ ವಾರದಲ್ಲಿ ಭರ್ತಿಯಾಗಿದೆ. ಕಳೆದ ವರ್ಷ ಆಗಸ್ಟ್‌ 2ನೇ ವಾರದಲ್ಲಿ ಭರ್ತಿಯಾಗಿದ್ದ ಜಲಾಶಯ ಈ ವರ್ಷ ಆಗಸ್ಟ್‌ ಮೊದಲ ವಾರದಲ್ಲಿಯೇ 37.10 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿ ಯಾಗಿರುವುದು ದಾಖಲೆ.

ಕಳೆದ ಭಾನುವಾರ ( ಆ.2) ರವರೆಗೂ ಮಳೆಯ ಕೊರತೆಯಿಂದ ರೈತರು ಪರದಾಡು ತ್ತಿದ್ದರು. ಮಲೆನಾಡು ಪ್ರದೇಶದಲ್ಲಿಯೂ ತುಂತುರು ಮಳೆಯಾಗುತ್ತಿದ್ದು, ಜಲಾಶಯಕ್ಕೆಕೇವಲ 1780 ಕ್ಯೂಸೆಕ್‌ ಒಳಹರಿವಿತ್ತು. ಜಲಾಶಯ ಭರ್ತಿಯಾಗದ ಆತಂಕವಿತ್ತು. ಆದರೆ ಸೋಮವಾರ (ಆ.3 ರಿಂದ) ಆರಂಭವಾದ ಮಳೆ ದಿನೆ. ದಿನೇ ರೌದ್ರಾವತಾರ ತಾಳುತ್ತಾ ಸಾಗಿತು. ಬುಧವಾರ 24,185 ಕ್ಯೂಸೆಕ್‌, ಗುರುವಾರ 36,849 ಕ್ಯೂಸೆಗೆ ಒಳ ಹರಿವು ಏರಿಕೆಯಾಗಿ ಜಲಾಶಯ ಭರ್ತಿಯಾಗುವ ಆಶಯ ಮೂಡಿತು.

ಜಲಾಶಯ ಭರ್ತಿ: ಶುಕ್ರವಾರ (ಆ.7) 47,320 ಕ್ಯೂಸೆಕ್‌ಗೆ ಏರಿದ ಒಳ ಹರಿವು ಶನಿವಾರದ ವೇಳೆಗೆ ಜಲಾಶಯಕ್ಕೆ 50,036 ಕ್ಯೂಸೆಕ್‌ ಒಳ ಹರಿವು ದಾಖಲಾಗಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ನದಿಗೆ 20 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಗರಿಷ್ಠ 37.10 ಟಿಎಂಸಿ ಸಂಗ್ರಹ ಸಾಮರ್ಥಯದ ಜಲಾಶಯದಲ್ಲಿ ಶನಿವಾರದ ವರೆಗೆ 34 ಟಿಎಂಸಿ ನೀರು ಸಂಗ್ರಹವಾಗಿದೆ.

ಪ್ರವಾಹ ನಿಯಂತ್ರಿಸಲು ಹಾಗೂ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಭಾನುವಾರದಿಂದ ಒಳಹರಿವಿನಷ್ಟೇ ನೀರನ್ನು ನದಿಗೆ ಬಿಟ್ಟು ಜಲಾಶಯದ ಸುರಕ್ಷತೆ ಕಾಪಾಡಿ ಕೊಳ್ಳಬೇಕಾಗಿದೆ. ನೀರು ಬಿಡಲಾಗಿದೆ: ನದಿಗೆ ನೀರು ಬಿಡುವುದರೊಂದಿಗೆ ಅಚ್ಚುಕಟ್ಟು ಪ್ರದೇಶಕ್ಕೂ ನಾಲೆಗಳ ಮೂಕ ನೀರು ಹರಿಸಲಾಗುತ್ತಿದೆ. ಹಾಸನ, ತುಮಕೂರು, ಮಂಡ್ಯ ಜಿಲ್ಲೆಯ ಅಚ್ಚುಕಟ್ಟು ಹೊಂದಿರುವ ಹೇಮಾವತಿ ಎಡದಂಡೆ ನಾಲೆಗೆ ಶುಕ್ರವಾರದಿಂದಲೇ ನೀರು ಹರಿಸಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳ ಹಿಂದೆಯೇ ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ. ಆದರೆ ಬಲದಂಡೆ ನಾಲೆಗೆ ಇನ್ನೂ ನೀರು ಬಿಡುತ್ತಿಲ್ಲ.

ನಾಲೆಗಳಿಗೆ ನೀರು ಬಿಡದೆ ಪಶ್ಚಾತ್ತಾಪ: ಜಲಾಶಯದಲ್ಲಿ ಜುಲೈ ಮೊದಲ ವಾರದಲ್ಲಿಯೇ 12 ಟಿಎಂಸಿ ನೀರಿತ್ತು. ನಾಲೆಗಳಲ್ಲಿ ಅಚ್ಚಕಟ್ಟು ಪ್ರದೇಶಕ್ಕೆ ನೀರು ಹರಿಸಿ ಮುಂಗಾರು ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಸಹ ಕರಿಸಬೇಕು ಎಂದು ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಶಾಸಕರು ಒತ್ತಾಯ ಮಾಡ ಲಾರಂಭಿಸಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಕೊಡಲೇ ಇಲ್ಲ. ಹಿಂದಿನ ವರ್ಷಗಳಲ್ಲಿ ಯಾವ್ಯಾವ ದಿನಾಂಕಗಳಂದು ನೀರು ಬಿಡಲಾಗಿದೆ ಎಂಬ ದಾಖಲೆಗಳನ್ನು ಪರಿಶೀಲಿಸಿ ಆನಂತರ ನಾಲೆಗಳಲ್ಲಿ ನೀರು ಬಿಡುವ ತೀರ್ಮಾನ ಮಾಡಲಾಗುವುದು ಎಂದು ಒಂದು ತಿಂಗಳು ಕಾಲ ತಳ್ಳುತ್ತಾ ಬಂದರು.

ಈಗ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ಪ್ರವಾಹವಾಗಿ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಜುಲೈ ತಿಂಗಳಿನಲ್ಲಿಯೇನಾಲೆಗಳಲ್ಲಿ ವಿಶೇಷವಾಗಿ ಎಡದಂಡೆ ನಾಲೆಯಲ್ಲಿ ನೀರು ಬಿಟ್ಟಿದ್ದರೆ ತುಮಕೂರು, ಮಂಡ್ಯ, ಹಾಸನ ಜಿಲ್ಲೆಯ ಕೆರೆಗಳನ್ನು ಈ ವೇಳೆಗಾಗಲೇ ತುಂಬಿಸಬಹುದಿತ್ತು. ಮುಖ್ಯವಾಗಿ ತುಮ ಕೂರು ಜಿಲ್ಲೆಯ ಜನರು ನೀರಿಗೆ ಹಾಹಾಕಾರಪಡುವುದನ್ನು ಒಂದು ತಿಂಗಳಲ್ಲಿ ತಪ್ಪಿಸಬಹುದಾಗಿತ್ತು. ಆದರೆ ಈಗ ಹೆಚ್ಚುವರಿ ನೀರು ನದಿಗೆ ಹರಿಯುವುದನ್ನು ನೋಡಿ ಒಂದು ತಿಂಗಳು ಮೊದಲು ನಾಲೆಗಳಿಗೆ ನೀರು ಬಿಡದಿದ್ದಕ್ಕೆ ಪಶ್ಚಾತ್ತಾಪ ಪಡುವಂತಾಗಿದೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಮುಕ್ತ ಪಾವಗಡಗೆ ಸಹಕರಿಸಿ

ಕೋವಿಡ್ ಮುಕ್ತ ಪಾವಗಡಗೆ ಸಹಕರಿಸಿ

ವಿಡಿಯೋ ಕಾನ್ಫರೆನ್ಸ್‌ ಸಭೆ ರದ್ದುಗೊಳಿಸಿ

ವಿಡಿಯೋ ಕಾನ್ಫರೆನ್ಸ್‌ ಸಭೆ ರದ್ದುಗೊಳಿಸಿ

ಸಮರ್ಥ ಯೋಜನೆಯಿಂದ ರಾಷ್ಟ್ರ ಅಭಿವೃದ್ಧಿ

ಸಮರ್ಥ ಯೋಜನೆಯಿಂದ ರಾಷ್ಟ್ರ ಅಭಿವೃದ್ಧಿ

ಹೆಬ್ಟಾಕ ‌ಕೆರೆಗೆ ಹರಿದು ಬಂದ ಹೇಮೆ ನೀರು

ಹೆಬ್ಟಾಕ ‌ಕೆರೆಗೆ ಹರಿದು ಬಂದ ಹೇಮೆ ನೀರು

A street merchant

ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆಗೆ ಕೆಲಸ ಮಾಡಿ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.