ಹೆಬ್ಟಾಕ ಕೆರೆಗೆ ಹರಿದು ಬಂದ ಹೇಮೆ ನೀರು
Team Udayavani, Sep 19, 2020, 6:48 PM IST
ತುಮಕೂರು: ನಗರದ ಜನರಿಗೆ ಕುಡಿಯಲು ನೀರು ಒದಗಿಸುವ ಬುಗುಡನಹಳ್ಳಿ ಕೆರಯಿಂದ ಹೆಬ್ಟಾಕ ಕೆರೆಗೆ ಹೇಮಾವತಿ ನೀರನ್ನು ಶುಕ್ರವಾರ ಹರಿಸಲಾಯಿತು. ಪೈಪ್‌ಲೈನ್ ಮೂಲಕ ತಾಲೂಕಿನ ಬುಗುಡನಹಳ್ಳಿ ಕರೆಯಿಂದ ಹೆಬ್ಟಾಕ ಕೆರೆಗೆ ಹೇಮಾವತಿ ನೀರನ್ನು ಬಿಡುತ್ತಲೇ ಅಲ್ಲಿದ್ದ ಗ್ರಾಮಸ್ಥರು ಹೇಮಾವತಿ ನೀರು ಕೆರೆಗೆ ಹರಿದು ಬಂದಿದ್ದನ್ನು ನೋಡಿ ಸಂತಸ ಪಟ್ಟರು.
ಗಂಗಾ ಪೂಜೆ: ಈ ವೇಳೆ ಪೈಪ್ ಲೈನ್ ಮೂಲಕ ಹೇಮಾವತಿ ನೀರು ಹರಿದು ಬಂದು ಕೆರೆಗೆ ಬೀಳುತ್ತಿದ್ದ ವೇಳೆಯಲ್ಲಿ ಕೆಲವರು ಗಂಗಾ ಪೂಜೆ ಮಾಡಿ ನಮ್ಮ ಊರಿನ ಕೆರೆಬೇಗ ತುಂಬಲಿ ಎಂದು ಬೇಡಿಕೊಂಡರು. ಈ ಕೆರೆ ತುಂಬುವುದರಿಂದಈಭಾಗದಲ್ಲಿ ಅಂತರ್ ಜಲ ಹೆಚ್ಚಲಿದ್ದು ಇದು ಇಲ್ಲಿಯ ರೈತರಿಗೆ ಸಂತಸವಾಗಲಿದೆ ಕೆರೆಗೆ ಹೇಮಾವತಿ ನೀರು ಹರಿಸಬೇಕು ಎನ್ನುವುದು ಈ ಬಾಗದ ರೈತರ ಒತ್ತಾಯ ವಾಗಿತ್ತು.
ಶಾಸಕ ಭೇಟಿ, ಪರಿಶೀಲನೆ: ಹಬ್ಟಾಕ ಕೆರೆಗೆ ನೀರು ಹರಿಯುತ್ತಲೇ ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ, ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಗೆಸೂಚನೆ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಲ್ಲಿದ್ದ ಅಧಿಕಾರಿಗಳಿಂದ ನಗರಕ್ಕೆ ನೀರು ಹರಿದಿರುವ ಬಗ್ಗೆ ಮಾಹಿತಿ ಪಡೆದು ಶೀಘ್ರವಾಗಿ ಹೆಬ್ಟಾಕ ಕೆರೆ ತುಂಬ ಬೇಕು,ಕೆರೆಗೆ ನೀರುಹರಿಯುವುದನ್ನು ನಿಲ್ಲಿಸಕೂಡದು, ಇಲ್ಲಿ ನೀರು ಸಂಗ್ರಹ ವಾದರೆ ನಗರಕ್ಕೆ ಕುಡಿಯಲು ನೀರು ಬಳಸ ಬಹುದು ಎಂದು ಹೇಳಿದರು.
ಮರಳೂರು ಕೆರೆಗೂ ಶೀಘ್ರಹೇಮೆ: ನಗರದ ಜನತೆ ಇದುವರೆಗೂ ಬುಗುಡನಹಳ್ಳಿ ಜಲಾಸಂಗ್ರಹಾಗಾರದ ನೀರಿನ ಮೇಲೆಯೇ ಅವಲಂಭಿತರಾಗಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಗಂಗಸಂದ್ರ, ಮರಳೂರು ಕೆರೆಗೂ ಹೇಮಾವತಿ ನೀರು ಹರಿಸುವ ಯೋಜನೆ ಸಿದ್ದವಾಗಿದ್ದು ಶೀಘ್ರವಾಗಿಆಕೆರೆಗಳಿಗೂ ಹೇಮಾವತಿ ನೀರು ಹರಿಯಲಿದೆ ಎಂದರು.
ನಗರದ ಗಂಗಸಂದ್ರ ಮತ್ತು ಮರಳೂರು ಈ ಕೆರೆಗಳಲ್ಲೂ ಸಹ ಶುದ್ಧೀಕರಣ ಘಟಕ ಸ್ಥಾಪಿಸಲು ಸ್ಮಾರ್ಟ್ ಸಿಟಿಯಿಂದ 11 ಕೋಟಿ ರೂ. ಹಣ ಮಂಜೂರಾಗಿದೆ ಎಂದು ತಿಳಿಸಿದರು.
ಜನರಿಗೆ ಹೆಚ್ಚು ಅನುಕೂಲ: ಈಗಾಗಲೇ ನಗರದ ಅಮಾನಿಕೆರೆಗೆ ನೀರು ಹರಿಸಲಾಗುತ್ತಿದೆ ಕೆರೆಯಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದೆ ಕೆರೆಯಲ್ಲಿ ನೀರುನೋಡಿ ಸಂತಸವಾಗಿದೆ ಅಮಾನಿಕೆರೆಗೆ ಹೇಮಾವತಿ ನೀರನ್ನು ತೋರ್ಪಡಿಕೆಗಾಗಿ ನೀರು ಹರಿಸಿ ತುಂಬಿಸುತ್ತಲ್ಲ ಇದರಿಂದನಗರದಜನರಿಗೆಹೆಚ್ಚುಅನುಕೂಲವಾಗಲಿದೆ ಎಂದರು.
ಅಂತರ್ಜಲ ಮಟ್ಟವೂ ವೃದ್ಧಿ: ಈ ಕೆರೆಯಲ್ಲಿ ನೀರು ತುಂಬಿದರೆ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ. ಇದರಿಂದ ಈ ಭಾಗದ ಬಹುತೇಕ ಬೋರ್‌ವೆಲ್‌ಗಳು ನೀರಿನಿಂದ ಸಮೃದ್ಧಿಯಾಗಲಿವೆ ಎಂದು ಹೇಳಿದರು. ಅಮಾನಿಕೆರೆ ಹೇಮಾವತಿ ನೀರಿನಿಂದ ಭರ್ತಿಯಾದ ನಂತರ ಆ ನೀರನ್ನು ಜನವರಿ ತಿಂಗಳ ನಂತರವಷ್ಟೇ ಬಳಸಲು ತೀರ್ಮಾನಿಸಲಾಗಿದೆ, ಮುಂದಿನ ದಿನಗಳಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದಿಲ್ಲ ಎಂದು ಹೇಳಿದರು.
ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಾಕುಮಾರ್, ನಳಿನಾ ಇಂದ್ರಕುಮಾರ್, ಸೂಪರಿಂಟೆಂಡೆಂಟ್ ಎಂಜಿನಿಯರ್ ಮಹೇಶ್, ಎಇಇ ವಸಂತ್, ಸಹಾಯಕ ಎಂಜಿನಿಯರ್ ಗೀತಾ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಟಾಕ ರವಿಶಂಕರ್, ತಾಪಂ ಸದಸ್ಯ ವಿಜಯಕುಮಾರ್, ಷಣ್ಮುಖಪ್ಪ, ಎಪಿಎಂಸಿ ಶಿವಕುಮಾರ್ ಹೆಬ್ಟಾಕ ಭಾಗದ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೆ: ಸಿ.ಟಿ.ರವಿ
ಕೊಟ್ಟಿಗೆಹಾರ : ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ, ವಾಹನ ಸಂಚಾರ ಸ್ಥಗಿತ
ವಿವೋ ವೈ75 ಫೋನ್ ಬಿಡುಗಡೆ; 44ಎಂಪಿ ಸೆಲ್ಫಿ ಕ್ಯಾಮರಾವಿರುವ ಫೋನು
ಕಾಂಗ್ರೆಸ್ ಕಟ್ಟಿ ಬೆಳೆಸಿದ್ದನ್ನು ಬಿಜೆಪಿ ಮಾರುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಸೊರಬ : ಎಸ್ಸೆಸ್ಸೆಲ್ಸಿ ಯಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗಮನ ಸೆಳೆದ ಅವಳಿ ಸಹೋದರಿಯರು