ಅಂತರ್ಜಲ ಕುಸಿತದಿಂದ ತೋಟಗಾರಿಕೆ ಬೆಳೆ ನಾಶ

Horticulture cultivation destroyed by groundwater collapse

Team Udayavani, Jun 1, 2019, 11:18 AM IST

tumkur-tdy-1..

ವಡ್ಡಗೆರೆ ಗ್ರಾಮದ ತೋಟಗಾರಿಕೆ ಕ್ಷೇತ್ರದಲ್ಲಿ ನೀರಿನ ಕೊರತೆಯಿಂದ ಮರಗಿಡಗಳು ಒಣಗಿದೆ.

ಕೊರಟಗೆರೆ: ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ 1973-74ರಲ್ಲಿ ಜಿಪಂ ಅನುದಾನದಿಂದ ಸ್ಥಾಪನೆ ಯಾದ ವಡ್ಡಗೆರೆ ತೋಟಗಾರಿಕೆ ಕ್ಷೇತ್ರದಲ್ಲಿನ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿತದಿಂದ ಎರಡು ಕೊಳವೆ ಬಾವಿ ಬತ್ತಿ ಹೋಗಿವೆ. 45 ವರ್ಷದಿಂದ ಬೆಳೆದು ನಿಂತಿದ್ದ ಹಣ್ಣಿನ ಮರಗಳು ಒಂದೊಂದಾಗಿ ಒಣಗಿ ಹೋಗುತ್ತೀವೆ. ಅಲ್ಲದೆ, ಕಚೇರಿಯ ಕಟ್ಟಡವು ಶಿಥಿಲವಾಗಿ ಕ್ಷೇತ್ರಕ್ಕೆ ರಕ್ಷಣೆ ಮತ್ತು ರಕ್ಷಕರು ಇಲ್ಲದಂತಾಗಿದೆ.

ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವಡ್ಡಗೆರೆ ಗ್ರಾಮದ ಸರ್ವೇ ನಂ.87ರಲ್ಲಿ 4 ಎಕರೆ 31 ಗುಂಟೆ ವಿಸ್ತೀರ್ಣವಾದ ಪ್ರದೇಶದಲ್ಲಿ ಐದು ಜಾತಿಯ ವಿವಿಧ ರೀತಿಯ ಹಣ್ಣಿನ ಮರಗಳಿವೆ. ಅದರಲ್ಲಿ ಸಪೋಟ- 80, ತೆಂಗು- 80, ಮಾವು- 19 ಮತ್ತು ಹಲಸು- 13 ಸೇರಿ ಒಟ್ಟು 182 ಮರಗಳಿವೆ. ಕಳೆದ 45 ವರ್ಷದ ಸಮೃದ್ಧವಾಗಿ ಬೆಳೆದು ನಿಂತಿದ್ದ ಹಣ್ಣಿನ ಮರ ಗಳಿಗೆ ಕಳೆದ ನಾಲ್ಕು ತಿಂಗಳಿಂದ ನೀರಿನ ಕೊರತೆಯಿಂದ ತೋಟ ಗಾರಿಕೆ ಕ್ಷೇತ್ರದ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ. ವಡ್ಡಗೆರೆ ತೋಟ ಗಾರಿಕೆ ಕ್ಷೇತ್ರದ ಹಣ್ಣಿನ ಮರಗಳ ರಕ್ಷಣೆಗಾಗಿ ಕಳೆದ ಹತ್ತಾರು ವರ್ಷದ ಹಿಂದೆ ಮೂರು ಕೊಳವೆ ಬಾವಿ ಕೊರೆಸಲಾಗಿತ್ತು.

ಪಂಪು ಮೋಟಾರ್‌ ಮಾಯ: ಮೂರು ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದ್ದು, ನಿರಂತರ ಜ್ಯೋತಿಯು ಸಹ ಮರೀಚಿಕೆಯಾಗಿದೆ. ಕಾವಲುಗಾರನ ಕೊರತೆಯಿಂದ ಮೂರು ಕೊಳವೆ ಬಾವಿಯ ಪಂಪು, ಕೇಬಲ್ ಮತ್ತು ಸ್ಟಾರ್ಟರ್‌ ಕಾಣೆಯಾಗಿವೆ. ಗಿಡಮರಗಳು ಒಣಗಿರುವ ಪರಿಣಾಮ ಅಕ್ಕಪಕ್ಕದ ರೈತರು ತಮ್ಮ ಜಾನುವಾರು ಗಳಿಗೆ ಮೇವಿಗಾಗಿ ಕ್ಷೇತ್ರದೊಳಗೆ ಬಿಟ್ಟು ಗಿಡಗಳನ್ನು ನಾಶ ಮಾಡುತ್ತಿದ್ದಾರೆ.

ವರ್ಷಕ್ಕೆ 40 ಸಾವಿರ ಮಾತ್ರ ಅನುದಾನ: ತೋಟಗಾರಿಕೆ ಇಲಾಖೆಯಿಂದ ವಡ್ಡಗೆರೆ ಕ್ಷೇತ್ರದ ಅಭಿವೃದ್ಧಿಗೆ ವರ್ಷಕ್ಕೆ ಕೇವಲ 40 ಸಾವಿರ ಅನುದಾನ ಮಾತ್ರ ಬರುತ್ತದೆ. ಇಲಾಖೆ ಅಧಿಕಾರಿಗಳು ಕ್ಷೇತ್ರದ ಉಳುಮೆಗಾಗಿ ಬಳಸುತ್ತಾರೆ. ಉಳಿದಂತೆ ಕ್ಷೇತ್ರದ ಸುತ್ತ ಮುತ್ತಲು ಕಾಂಪೌಂಡ್‌ ನಿರ್ಮಾಣ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಸರ್ಕಾರದಿಂದ ಒಂದು ಪೈಸೆಯು ಅನುದಾನ ಬರುವುದಿಲ್ಲ. ಇನ್ನೂ ವಾಸಕ್ಕೆ ಯೋಗ್ಯವಲ್ಲದ ಕಟ್ಟಡದಲ್ಲಿ ಕಾವಲುಗಾರರು ಸಹ ಕಾವಲು ಕಾಯಲು ಹಿಂದೇಟು ಹಾಕು ತ್ತಿದ್ದು, ಕ್ಷೇತ್ರವು ಸಾರ್ವ ಜನಿಕರ ಪಾಲಾಗಿದೆ.

ಕಳೆದ 40 ವರ್ಷದ ಹಿಂದೆ ವಡ್ಡ ಗೆರೆ ಕ್ಷೇತ್ರದಲ್ಲಿ ತೋಟಗಾರಿಕೆ ಸಹಾಯಕ-1, ತೋಟ ಗಾರರು-2 ಸೇರಿ ಪ್ರತಿದಿನ ಐದಾರು ಜನ ಕೂಲಿ ಕಾರ್ಮಿಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆ ಪ್ರತಿವರ್ಷ 10 ಸಾವಿರಕ್ಕೂ ಹೆಚ್ಚು ರೂ.ಗಳಿಗೆ ಕ್ಷೇತ್ರದಲ್ಲಿನ ಹಣ್ಣುಗಳಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಈಗ ಕ್ಷೇತ್ರದಲ್ಲಿ ಮೂಲಸೌಕರ್ಯ ಇಲ್ಲದ ಪರಿಣಾಮ ಗಿಡಮರಗಳು ಒಣಗಿ ಹೋಗಿದೆ. ಕ್ಷೇತ್ರವು ಮುಚ್ಚುವಂತಹ ದುಸ್ಥಿತಿಗೆ ತಲುಪಿದ್ದು, ಜಿಲ್ಲಾ ಡಳಿತ ತಕ್ಷಣ ವಿಶೇಷ ಅನುದಾನ ಬಳಸಿಕೊಂಡು ವಡ್ಡ ಗೆರೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ.

ಉದ್ಯೋಗಖಾತ್ರಿ ಯೋಜನೆ ಕಾಮಗಾರಿ: ವಡ್ಡಗೆರೆ ಗ್ರಾಪಂಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಕ್ಷೇತ್ರದಲ್ಲಿ 68 ಸಾವಿರ ವೆಚ್ಚದಲ್ಲಿ ಕೊಳವೆ ಬಾವಿ ಮರುಪುನಃ ನಿರ್ಮಾಣ ಘಟಕದ ಕಾಮಗಾರಿ ನಡೆದಿದೆ. ಉಳಿದಂತೆ ಬದು ನಿರ್ಮಾಣ, ಕಟ್ಟೆ ಅಭಿವೃದ್ಧಿ ಸೇರಿದಂತೆ ಅಂತರ್ಜಲ ಅಭಿವೃದ್ಧಿಗೆ ಬೇಕಾದ ಕಾಮಗಾರಿಯನ್ನು ಮಾಡಬಹುದಾಗಿದೆ. ಅಧಿಕಾರಿ ವರ್ಗ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.

● ಎನ್‌.ಪದ್ಮನಾಭ್‌

ಟಾಪ್ ನ್ಯೂಸ್

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.