ವೇತನಕ್ಕಾಗಿ ಆಗ್ರಹಿಸಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಪ್ರತಿಭಟನೆ 

Team Udayavani, Mar 13, 2019, 7:50 AM IST

ತಿಪಟೂರು: ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ತಮಗೆ 3 ತಿಂಗಳಾದರೂ ಸಂಬಳ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ನಮ್ಮ ಸಮಸ್ಯೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ನಗರದ ಸಾರ್ವಜನಿಕ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಹಾಗೂ ಡಿ-ಗ್ರೂಪ್‌ನ ನೌಕರರು ಆಸ್ಪತ್ರೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. 

ಸ್ವಚ್ಛತಾ ಸಿಬ್ಬಂದಿ ಧರ್ಮಾವತಿ ಮಾತನಾಡಿ, ನಮ್ಮನ್ನು ಹೊರಗುತ್ತಿಗೆ ಆಧಾರದ ಮೇಲೆ ಬೆಂಗಳೂರಿನ ಡಿಟೆಕ್ಟ್ವಿಲ್‌ ಖಾಸಗಿ ಕಂಪನಿ ಕೆಲಸಕ್ಕೆ ಪಡೆದಿದೆ. ಆದರೆ ನಮಗೆ ಡಿಸೆಂಬರ್‌ನಿಂದ ಇದುವರೆಗೆ ಸಂಬಳ ನೀಡಿಲ್ಲ.  ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು, ದೂರದ ಊರಿನಿಂದ ಬರುವ ನಮಗೆ ಬಸ್‌ ಪ್ರಯಾಣದರವೂ ಇಲ್ಲದಂತಾಗಿದೆ. ನಾವು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದು, ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಎಂದು ಹೇಳಿದರು.

ನಾವು 12 ಗಂಟೆ ಕೆಲಸ ಮಾಡುತ್ತೇವೆ. ಹಾಜರಾತಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲ. ಮಾಸಿಕವಾಗಿ 8721ರೂ., ಹಣ ನೀಡುತ್ತಾರೆ. ಸಂಬಳ ನೀಡಿ ಎಂದು ಇಲ್ಲಿನ ಮೇಲ್ವಿಚಾರಕ ಲೋಕೇಶ್‌ ಅವರನ್ನು ಕೇಳಿದರೆ ಮೊದಲು ನಿಯಮದ ಪ್ರಕಾರ ಕೆಲಸ ಮಾಡಿ, ನಮ್ಮ ಖಾತೆಗೆ ಹಣ ಬಂದಿಲ್ಲ. ನಿಮಗೆಲ್ಲಿಂದ ಕೊಡೋಣ ಎಂದು ಸಬೂಬು ಹೇಳುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಬ್ಬಂದಿ ಮಲ್ಲಿಕಾರ್ಜುನ ಮಾತನಾಡಿ, ನಮಗೆ ಡಿಟೆಕ್ಟ್ವಿಲ್‌ ಕಂಪನಿಯಿಂದ ಗುರುತಿನ ಚೀಟಿ ನೀಡಿದ್ದಾರೆ. ಅದರಲ್ಲಿ ಪಿಎಫ್ ನಂಬರ್‌ ಕೊಟ್ಟಿದ್ದು, ಇದುವರೆಗೂ ಅದು ಚಾಲ್ತಿಯಲ್ಲಿಲ್ಲ. ನಮಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ. ನಮಗೆ ಸಂಬಳ ಕೊಡಿಸಿಕೊಡಿ ಎಂದು ಅಳಲು ತೋಡಿಕೊಂಡರು. 

ಸ್ಥಳಕ್ಕೆ ಮೇಲ್ವಿಚಾರಕ ಲೋಕೇಶ್‌ ಭೇಟಿ ನೀಡಿ, ಈಗಾಗಲೇ 2 ತಿಂಗಳ ಸಂಬಳ ಮಂಜೂರು ಮಾಡುವಂತೆ ದಾಖಲಾತಿ ಸಿದ್ಧಪಡಿಸಿ ಸಂಬಂಧಿಸಿದ ಕಚೇರಿಗೆ ಕಳುಹಿಸಲಾಗಿದೆ. 3-4ದಿನಗಳಲ್ಲಿ ಹಣ ಮಂಜೂರದ ಕೂಡಲೇ ಸಂಬಳ ಕೊಡುತ್ತೇನೆ. ಅಲ್ಲಿಯವರೆಗೂ ಕಾಯಬೇಕು ಎಂದರು. 

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರಯ್ಯ ಮಾತನಾಡಿ, ಸಿಬ್ಬಂದಿಗಳ ಸಮಸ್ಯೆ ಬಗ್ಗೆ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ನಿರ್ದೇಶಕರಿಗೆ ಸಾಕಷ್ಟು ಬಾರಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ 2 ದಿನಗಳಲ್ಲಿ ಸಂಬಳ ನೀಡುವ ದಾಖಲಾತಿ ಪರಿಶೀಲಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಾದ ನರಸಿಂಹರಾಜು, ಮಂಜುನಾಥ್‌ ಸೇರಿ 30ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ತುಮಕೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಅಪಾರ ಹಾನಿಯುಂಟಾಗಿ, ಸಾವಿರಾರು ಜನ ಮನೆ, ಮಠ ಕಳೆದುಕೊಂಡು 35,500 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದ್ದರೂ, ರಾಜ್ಯದಿಂದ...

  • ತಿಪಟೂರು: ಜನರ ನೋವಿಗೆ ಸ್ಪಂದಿಸುವುದೇ ನಿಜ ಧರ್ಮ. ಹೀಗೆ ನೊಂದವರ ಕಣ್ಣೀರೊರೆಸುವ ಕಾರ್ಯ ಮಾಡುವ ಮೂಲಕ ಧರ್ಮ ಪರಿಪಾಲಿಸಿಕೊಂಡು ಬರುತ್ತಿರುವ ಶ್ರೀ ಕಾಡಸಿದ್ಧೇಶ್ವರ...

  • ಹುಳಿಯಾರು: ಜಿಲ್ಲೆಯಲ್ಲೆ ಅತೀ ಹೆಚ್ಚು ರಾಗಿ ಬೆಳೆಯುವ ಪ್ರದೇಶವೆಂದು ಹೆಸರಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ...

  • ತುರುವೇಕೆರೆ: ರಾಜ್ಯದ ವಿವಿಧ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕೂಡಲೇ ಕಾಯಂಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು...

  • ಕೊರಟಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಬಿಕ್ಕೆಗುಟ್ಟೆ ಅಂಗನವಾಡಿ ಕಟ್ಟಡದ ಉನ್ನತೀಕರಣಕ್ಕೆ ಬಿಡುಗಡೆಯಾದ 2ಲಕ್ಷ ಅನುದಾನನವನ್ನು...

ಹೊಸ ಸೇರ್ಪಡೆ